ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

Written By:

ಹೊಸ ಜೀವನವನ್ನು ಆರಂಭಿಸುವ ನವದಂಪತಿಗಳು ತಮ್ಮ ಮೊದಲ ಪ್ರಯಾಣವನ್ನು ದುಬಾರಿ ಕಾರುಗಳಲ್ಲಿ ಆರಂಭಿಸುವುದು ಸಾಮಾನ್ಯವಾಗಿ ಕಂಡುಬರುವ ಪ್ರವೃತ್ತಿ. ಸ್ವಂತವಾಗಿ ಕಾರು ಇಲ್ಲದಿದ್ದರೂ ಬಾಡಿಗೆಗೆ ಪಡೆದಾದರೂ ವಿವಾಹ ಆಚರಣೆಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುತ್ತಾರೆ.

ಅತ್ತ ವಿದೇಶಗಳಲ್ಲಿ ಪ್ರತಿಷ್ಠೆಯ ಸಂಕೇತವಾಗಿ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಚೀನಾದಿಂದ ಬಂದಿರುವ ವರದಿಯ ಪ್ರಕಾರ ರೋಲ್ಸ್ ರಾಯ್ಸ್ ಮದುವೆ ಕಾರು ಅವಘಡಕ್ಕೀಡಾಗಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ.

To Follow DriveSpark On Facebook, Click The Like Button
ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

ಚೀನಾದ ಶಾನ್ ಡಾಂಗ್ ಪ್ರಾಂತ್ಯದಿಂದ ರೋಲ್ಸ್ ರಾಯ್ಸ್ ವಿವಾಹ ಕಾರಿನ ಅಪಘಾತ ಸುದ್ದಿಯು ವರದಿಯಾಗಿದೆ. ಈ ದುಬಾರಿ ಕಾರನ್ನು ಬಾಡಿಗೆಗೆ ಪಡೆಯಲಾಗಿತ್ತು ಎಂಬುದು ಇನ್ನು ಗಮನಾರ್ಹ ಸಂಗತಿಯಾಗಿದೆ.

ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

ಟೊಯೊಟಾ ಐಯ್ಗೊ ಸಣ್ಣ ಕಾರಿಗೆ ಐಷಾರಾಮಿ ರೋಲ್ಸ್ ರಾಯ್ಸ್ ಕಾರು ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತ ನಡೆಯುವ ವೇಳೆಯಲ್ಲಿ ನವ ದಂಪತಿಗಳು ಕಾರಿನಲ್ಲಿರಲಿಲ್ಲ.

ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಕಾರಿಗೆ ಸಣ್ಣ ಪುಟ್ಟ ಹಾನಿ ಹೊರತುಪಡಿಸಿದರೆ ಯಾರಿಗೆ ಗಾಯಗಳಾಗಿಲ್ಲ.

ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

ಹಾಗಿದ್ದರೂ ಮದುವೆ ಕಾರು ಬಾಡಿಗೆಗೆ ಪಡೆದ ವ್ಯಕ್ತಿ ಮಾತ್ರ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ರಿಪೇರಿ ಕೆಲಸಕ್ಕಾಗಿ ಲಕ್ಷಗಟ್ಟಲೆ ಖರ್ಚು ಮಾಡಬೇಕಾಗಿತು. ಕೋಟಿ ಗಟ್ಟಲೆ ಬೆಲೆ ಬಾಳುವ ಕಾರು ಆಗಿರುವುದರಿಂದ ರಿಪೇರಿಗಾಗಿ ಹೆಚ್ಚು ಖರ್ಚು ತಗುಲಲಿದೆ.

ರೋಲ್ಸ್ ರಾಯ್ಸ್ ವಿವಾಹ ಕಾರಿಗೆ ಎದುರಾಯ್ತು ವಿಘ್ನ

ಅಂತೂ ಇಂತೂ ಕೊನೆಗೂ ಮದುವೆ ಸಮಾರಂಭ ಮಾತ್ರ ಶುಭ ಅಂತ್ಯವನ್ನು ಕಂಡಿರುವುದು ಸಂತಸದಾಯಕ ವಿಚಾರವಾಗಿದೆ.

Read more on ಅಪಘಾತ accident
English summary
Rolls-Royce Ghost Wedding Car Hits Toyota Aygo
Story first published: Saturday, August 13, 2016, 10:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark