ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈಗೆ ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಬೈಕ್ ಮೂಲವನ್ನೇ ಬದಲಿಸುವುದು ಇದೀಗ ಸಾಕಷ್ಟು ಟ್ರೆಂಡ್ ಆಗುತ್ತಿದೆ. ಹೀಗೆ ಇಲ್ಲೊಬ್ಬ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರ ಕೂಡಾ ತನ್ನ ಕ್ಲಾಸಿಕ್ 350 ಬೈಕ್ ಅನ್ನು ಇತರೆ ಬೈಕ್‌ಗಳಿಂತ ವಿಭಿನ್ನ ಕಾಣುವಂತೆ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾನೆ.

ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ಹೌದು, ಮಾಡಿಫೈಗಾಗಿ ಅತಿಹೆಚ್ಚು ಬಳಕೆಯಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತ ಸವಾರರಿಗೆ ಕೆಲವು ಅನುಕೂಲತೆಗಳಿದ್ದರೂ ಅದರಿಂದ ಅಪಾಯವೇ ಹೆಚ್ಚು ಎನ್ನುವುದು ಈ ಹಿಂದೆ ಹಲವು ಬಾರಿ ಸಾಬೀತಾಗಿದ್ರು ಕೂಡಾ ಕೆಲವು ಬೈಕ್ ಸವಾರರು ಮಾಡಿಫೈ ಚಕ್ರಕ್ಕೆ ಸಿಲುಕಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಇಲ್ಲೊಬ್ಬಕ್ಲಾಸಿಕ್ 350 ಬೈಕ್ ಸವಾರ ಕೂಡಾ ಅಗ್ಗದ ಬೆಲೆಯಲ್ಲಿ ಬೈಕ್ ಮಾಡಿಫೈ ಮಾಡಿಸಿದ್ದಲ್ಲದೇ ಸಾವಿನ ಮನೆಯ ಕದತಟ್ಟಿ ಬಂದಿದ್ದಾನೆ.

ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ಪ್ರಾಣಕ್ಕೆ ಮಾರಕವಾಗುತ್ತಿದೆ ಅಗ್ಗದ ಬೆಲೆಯ ಮಾಡಿಫೈ..!

ಮಾರುಕಟ್ಟೆಯಲ್ಲಿ ದಿನಕ್ಕೊಂದು ಬಗೆಯ ಮಾಡಿಫೈ ಡಿಸೈನ್‌ಗಳು ಯುವ ಬೈಕ್ ಸವಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಅಗ್ಗದ ಬೆಲೆಯಲ್ಲಿ ರಂಗು ರಂಗಾಗಿ ಮಾಡಿಕೊಡಲಾಗುವ ಮಾಡಿಫೈಗಳಿಗೆ ಹೆಚ್ಚು ಆಕರ್ಷಣೆಯಾಗುತ್ತಿದ್ದಾರೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ಆದ್ರೆ ಅದು ಶಾಶ್ವತ ಅಲ್ಲ ಅಂತ ಗೊತ್ತಿದ್ರು ಕೂಡಾ ಇತರರಿಂದ ಮೆಚ್ಚುಗೆ ಪಡೆಯುವುದಕ್ಕಾಗಿ ಬೈಕಿನ ಮೂಲವನ್ನೇ ಬದಲಿಸಿ ಮಾಡಿಫೈ ಮಾಡಿಸುವುದು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಕ್ಲಾಸಿಕ್ 350 ಬೈಕ್ ಸವಾರ ಕೂಡಾ ತನ್ನ ಬೈಕಿಗೆ ಕಂಪನಿಯಿಂದ ಹಾಕಲಾದ ಸ್ಪೋಕ್ ವೀಲ್ಹ್‌ಗಳನ್ನು ತೆಗೆದು ಅಗ್ಗದ ಬೆಲೆಯ ಅಲಾಯ್ ವೀಲ್ಹ್‌ಗಳನ್ನು ಹಾಕಿರುವುದು ಅಪಘಾತಕ್ಕಿಡಾಗುವಂತೆ ಮಾಡಿದೆ.

ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ಇದಕ್ಕೆ ಕಾರಣ, ಮಾಡಿಫೈ ವೇಳೆ ಕ್ಲಾಸಿಕ್ 350 ಬೈಕಿನಲ್ಲಿ ಕಳಪೆ ಗುಣಮಟ್ಟದ ಅಲಾಯ್ ವೀಲ್ಹ್‌ಗಳನ್ನು ಬಳಕೆ ಮಾಡಲಾಗಿದ್ದು, ಬೈಕ್ ಚಾಲನೆ ವೇಳೆ ಮುಂಭಾಗ ಅಲಾಯ್ ಚಕ್ರವು ಮುರಿದುಬಿದ್ದಿದೆ. ಬೈಕ್ ಸವಾರ ಹಾಕಿದ ಹೆಲ್ಮೆಟ್‌ ಮೌಂಟ್ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯವು ಸೆರೆಯಾಗಿದ್ದು, ಅದೃಷ್ಟವಶಾತ್ ಬೈಕ್ ನಿಧಾನಗತಿಯಲ್ಲಿ ಇದ್ದ ಕಾರಣ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಪಾಯದಿಂದ ಪಾರಾಗಿದ್ದಾನೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಅಗ್ಗದ ಬೆಲೆಯಲ್ಲಿ ಮಾಡಿಫೈ ಮಾಡಿಸಿ ಆಸ್ಪತ್ರೆ ಸೇರಿದ ಆರ್‌ಇ ಬೈಕ್ ಸವಾರ..!

ಹೀಗಾಗಿ ಹೊಸ ಬೈಕ್‌ಗಳನ್ನು ಅಥವಾ ಹಳೆಯ ಬೈಕ್‌ಗಳನ್ನು ಮಾಡಿಫೈ ಮಾಡಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕೈಗೊಳ್ಳುವ ಅವಶ್ಯಕತೆಗಳಿದ್ದು, ಸಂಚಾರಿ ನಿಯಮಗಳಿಗೆ ಅನುಗುಣವಾಗಿ ಮಾಡಿಫೈ ಮಾಡುವ ಕೆಲವು ಮಾಡಿಫೈ ತಜ್ಞರ ಬಳಿಯೇ ಉತ್ತಮ ಗುಣಮಟ್ಟದ ಮಾಡಿಫೈ ಉಪಕರಣಗಳನ್ನು ಖರೀದಿಸುವುದು ಒಳಿತು.

Source: Rushlane

Most Read Articles

Kannada
English summary
Royal Enfield biker falls- Aftermarket alloys break. Read in Kannada.
Story first published: Wednesday, March 13, 2019, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X