ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

Written By:

ವಿಮಾನಯಾನ ಕ್ಷೇತ್ರದಲ್ಲಿ ಅಮೆರಿಕದ ಬೋಯಿಂಗ್ ಮತ್ತು ಫ್ರಾನ್ಸ್ ಮೂಲದ ಏರ್ ಬಸ್ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಈಗ ಈ ಎರಡು ವಿಶ್ವಶ್ರೇಷ್ಠ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯೊಂದನ್ನು ಕಣಕ್ಕಿಳಿಸಲು ರಷ್ಯಾ ನಿರ್ಧರಿಸಿದೆ.

ಬಹುತೇಕ ರಷ್ಯಾ ಸರಕಾರದ ಅಧೀನತೆಯಲ್ಲಿರುವ ಯುನೈಟೆಡ್ ಏರ್ ಕ್ರಾಫ್ಟ್ ಕಾರ್ಪೋರೇಷನ್ (ಯುಎಸಿ), ವಿಶ್ವದ ಅತಿ ದೊಡ್ಡ ವಿಮಾನ ಅನಾವರಣಗೊಳಿಸಿದ್ದು, ಇದು ಮುಂದಿನ ದಿನಗಳಲ್ಲಿ ಬೋಯಿಂಗ್ ಮತ್ತು ಏರ್ ಬಸ್ ವಿಮಾನಗಳಿಗೆ ಭಾರಿ ಪೈಪೋಟಿಯನ್ನು ಒಡ್ಡಲಿದೆ.

To Follow DriveSpark On Facebook, Click The Like Button
ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ವಾಣಿಜ್ಯ ವಿಮಾನಯಾದಲ್ಲಿ ಅಗಾಧ ಅವಕಾಶವನ್ನು ಮನಗಂಡಿರುವ ರಷ್ಯಾ ಸಂಸ್ಥೆಯು ಅತಿ ನೂತನ 'ಎಂಸಿ-21 300' ವಿಮಾನವನ್ನು ಅನಾವರಣಗೊಳಿಸಿದೆ. ಇದು ಬೋಯಿಂಗ್ 737ಮ್ಯಾಕ್ಸ್ ಮತ್ತು ಏರ್ ಬಸ್ ಎ320ನಿಯೋ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಯುನೈಟೆಡ್ ಏರ್ ಕ್ರಾಫ್ಟ್ ಕಾರ್ಪೇರೇಷನ್ ಸಾಧನೆಯನ್ನು ರಷ್ಯಾ ಪ್ರಧಾನ ಮಂತ್ರಿ ಡಿಮಿಟ್ರಿ ಮೆಡ್ವೆಡೆವ್ ಸಹ ಹಾಡಿ ಹೊಗಳಿದ್ದಾರೆ. ಅಲ್ಲದೆ ವಿಮಾನಯಾದಲ್ಲಿ ರಷ್ಯಾ ಎಲೈಟ್ ಗುಂಪುಗಳಿಗೆ ಸೇರಿವೆ ಎಂಬುದರ ಸಂಕೇತ ಇದಾಗಿದೆ ಎಂದಿದ್ದಾರೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ನೂತನ ವಿಮಾನದ ಸಂಪೂರ್ಣ ಪ್ರಮಾಣೀಕರಣ ಪ್ರಕ್ರಿಯೆಯು 2017ರಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ರಷ್ಯಾದಲ್ಲೇ ನಿರ್ಮಿತ ಟರ್ಬೋಫ್ಯಾನ್ ಮತ್ತು ಏವಿಯಾನಿಕ್ಸ್ ಜೋಡಣೆ ಮಾಡಲಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ನಾಗರಿಕ ವಿಮಾನಯಾನ ವಿಭಾಗದಲ್ಲಿ ರಷ್ಯಾ ನೂತನ ಮೈಲುಗಲ್ಲನ್ನಿಟ್ಟಿದ್ದು, ಮುಂದಿನ ದಿನಗಳಲ್ಲಿ ಸ್ವದೇಶಿ ಸೇರಿದಂತೆ ವಿದೇಶಿ ಯಾತ್ರಿಕರು ಇದರ ಸಂಪೂರ್ಣ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ರಷ್ಯಾ ಪ್ರಾಂತ್ಯವಾಗಿರುವ ಸೈಬೇರಿಯಾದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಈ ಮೂಲಕ ಪಶ್ಚಿಮ ರಾಷ್ಟ್ರಗಳಿಗೆ ಸೆಡ್ಡು ಹೊಡೆಯುವ ಇರಾದೆಯಲ್ಲಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಪ್ರಸ್ತುತ ವಿಮಾನ ಈಗಲೂ ಪರೀಕ್ಷೆಯ ಹಂತದಲ್ಲಿದ್ದು, ಮಧ್ಯಮ ಶ್ರೇಣಿಯ ವಿಮಾನ ಎನಿಸಿಕೊಳ್ಳಲಿದೆ. ಇದರಲ್ಲಿ ಹೊಸತಾದ ಟ್ವಿನ್ ಎಂಜಿನ್ ಸಹ ಜೋಡಣೆ ಮಾಡಲಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಇವೆಲ್ಲದರ ಹಿಂದಿರುವ ಏಕೈಕ ಉದ್ದೇಶವೇನೆಂದರೆ ವಿದೇಶಿ ಸಂಸ್ಥೆಗಳನ್ನು ಅವಲಂಬಿಸದೆ ತನ್ನದೇ ಸ್ವಯತ್ತಿನ ಸ್ವದೇಶಿ ವಿಮಾನಗಳನ್ನು ಅಭಿವೃದ್ಧಿಪಡಿಸುವುದಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ವಿಮಾನ ಎರಡು ವೆರಿಯಂಟ್ ಗಳಲ್ಲಿ ನಿರ್ಮಾಣವಾಗಲಿದೆ. ಮೊದಲನೇಯ ಎಂಸಿ21-300 ವಿಮಾನದಲ್ಲಿ 160ರಿಂದ 211 ಹಾಗೂ ಎರಡನೇಯ ಎಂಸಿ-21-200 ವಿಮಾನದಲ್ಲಿ 130ರಿಂದ 165 ಮಂದಿ ಕುಳಿತುಕೊಳ್ಳಬಹುದಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಬಲ್ಲ ಮೂಲಗಳ ಪ್ರಕಾರ ವಿತರಣೆ ಪ್ರಕ್ರಿಯೆಯು 2018ನೇ ಸಾಲಿನಲ್ಲಿ ಆರಂಭವಾಗಲಿದ್ದು, ಈ ಸಂಬಂಧ ದೇಶಿ-ವಿದೇಶಿ ಅನೇಕ ಸಂಸ್ಥೆಗಳ ಜೊತೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎನ್ನಲಾಗಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಇದರ ನಿರ್ವಹಣಾ ವೆಚ್ಚವು ಈಗಿನ ತಲೆಮಾರಿನ ವಿಮಾನಗಳ ನಿರ್ವಹಣಾ ವೆಚ್ಚಗಿಂತಲೂ ಶೇಕಡಾ 15ರಷ್ಟು ಕಡಿಮೆಯಾಗಿರಲಿದೆ. ಅಲ್ಲದೆ 6,400 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಪಡೆದಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಇದರ ನಿರ್ಮಾಣದಲ್ಲಿ ಲೋಹದ ಬದಲಾಗಿ ಸಂಯುಕ್ತ ಮಿಶ್ರ ಲೋಹಗಳನ್ನು ಬಳಕೆ ಮಾಡಲಾಗಿದೆ. ಈ ಮುಖಾಂತರ ಹಗುರ ಭಾರ ಎನಿಸಿಕೊಂಡಿದ್ದು, ಹೆಚ್ಚು ದೃಢತೆಯನ್ನು ಕಾಪಾಡಿಕೊಂಡಿದೆ.

ವಿಶ್ವಶ್ರೇಷ್ಠ ಬೋಯಿಂಗ್, ಏರ್‌ಬಸ್ ವಿಮಾನಗಳಿಗೆ ಸೆಡ್ಡು ನೀಡಲಿರುವ ರಷ್ಯಾ

ಇನ್ನುಳಿದಂತೆ ತಾಜಾ ವಿಮಾನಯಾನ ತಂತ್ರಜ್ಞಾನ, ಏರೋಡೈನಾಮಿಕ್ ವಿನ್ಯಾಸ ಮತ್ತು ಪ್ರಯಾಣಿಕರಿಗೆ ಗರಿಷ್ಠ ಅನುಕೂಲವನ್ನು ಒದಗಿಸುವತ್ತ ಗಮನ ಹರಿಸಲಾಗಿದೆ.

Read more on ವಿಮಾನ plane
English summary
Russia built new airliner as better than Boeing and Airbus
Story first published: Wednesday, June 15, 2016, 9:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark