ರಿಲಾಕ್ಸ್‌‌ಗಾಗಿ ಕಾರು ವಾಶ್ ಮಾಡುವ ಸಚಿನ್

ಇಲ್ಲೊಂದು ಕುತೂಹಲಕಾರಿ ಸುದ್ದಿ ವರದಿಯಾಗಿದೆ. ನೀವೆಲ್ಲ ರಿಲಾಕ್ಸ್ ಮಾಡಲು ಏನು ಮಾಡುತ್ತೀರಾ? ಟಿ.ವಿ ನೋಡಬಹುದು, ಆಟವಾಡಬಹುದು ಅಥವಾ ಇನ್ನಿತರ ಕುತೂಹಲಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.

ಆದರೆ ಭಾರತೀಯ ಕ್ರಿಕೆಟ್‌ನ ಆರಾಧ್ಯ ದೈವ, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಮಾತ್ರ ರಿಲಾಕ್ಸ್ ಮಾಡಿಕೊಳ್ಳಲು ಕಾರು ವಾಶ್ ಮಾಡಿಕೊಳ್ಳುತ್ತಾರಂತೆ!

ಬಿಡುವಿಲ್ಲದ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿರುವ ಸಚಿನ್ ಇತ್ತೀಚೆಗಷ್ಟೇ ತಮ್ಮ ಏಕದಿನ ಕೆರಿಯರ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ತಮ್ಮ 23 ವರ್ಷಗಳ ಸುದೀರ್ಘ ಕ್ರೀಡಾ ಜೀವನದಲ್ಲಿ ಹಲವು ರೀತಿಯ ಒತ್ತಡದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಸಚಿನ್ ಕಳೆದ ಕೆಲವು ವರ್ಷಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ.

ಅಂತೆಯೇ ಕ್ರಿಕೆಟ್‌‍ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಕಾರು ತೊಳೆಯುವುದನ್ನು ಹವ್ಯಾಸ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಂದ ಹಾಗೆ ಸಚಿನ್ ಇತ್ತೀಚೆಗಿನ ದಿನಗಳಿಂದ ಕಾರು ವಾಶ್ ಮಾಡಲು ಆರಂಭಿಸಿರಲಿಲ್ಲ. ಬದಲಾಗಿ ಬಹಳ ಹಿಂದಿನಿಂದಲೇ ಇದನ್ನು ರೂಢಿಸಿಕೊಂಡಿದ್ದಾರೆ. ಸ್ವತ: ಸಚಿನ್ ಹೇಳುವ ಪ್ರಕಾರ ಕಾರು ವಾಶ್ ಮಾಡಲು ಶಾಂಪೂ ಹಾಗೂ ವ್ಯಾಕ್ಸ್ ಬಳಸುತ್ತಾರೆ. ಈ ಮೂಲಕ ಕಾರು ಕೇರ್ ಮಾಡುವುದರ ಜತೆಗೆ ರಿಲಾಕ್ಸ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಬ್ಲೂಮ್‌ಬರ್ಗ್ ಟಿವಿ ಆಟೋಕಾರು ಇಂಡಿಯಾ 2013 ಪ್ರಶಸ್ತಿ ಸಮಾರಂಭದಲ್ಲಿ ಸಚಿನ್ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ನನ್ನ ಇತರ ಸ್ನೇಹಿತರ ರೀತಿಯಲ್ಲಿಯೇ ನನಗೂ ಕಾರು ಕ್ರೇಜ್ ತುಂಬಾನೇ ಇದೆ. ಇದು ರಿಲಾಕ್ಸ್ ಮಾಡಲು ನೆರವಾಗುತ್ತದೆ. ಕೆಲವು ಸ್ನೇಹಿತರಂತೂ ಕಾರಿನ ಬಗ್ಗೆ ಸಲಹೆಯನ್ನು ಕೇಳುತ್ತಾರೆ ಎಂದಿದ್ದಾರೆ.

ಚಿಕ್ಕವನಿರುವಾಗ ಕಾರಿನ ಹೆಮ್ಮೆಯ ಮಾಲಿಕನಾಗುವುದು ತನ್ನ ಕನಸಾಗಿತ್ತು ಎಂದು ಸಚಿನ್ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. 8ರ ಹರೆಯನಾಗಿದ್ದಾಗಲೇ ನನ್ನಲ್ಲಿ ಕಾರು ಕ್ರೇಜ್ ಹುಟ್ಟಿಕೊಂಡಿತ್ತು. ಅಂದಿನ ಕಾಲದಲ್ಲಿ ತಮ್ಮ ಮನೆಯ ಪಕ್ಕದಲ್ಲಿರುವ ದೊಡ್ಡ ಮೈದಾನದಲ್ಲಿ ಫಿಯೆಟ್, ಅಂಬಾಸಿಡರ್ ಹಾಗೂ ಸ್ಟಾಂಡರ್ಡ್ 2000 ಕಾರುಗಳು ಪಾರ್ಕಿಂಗ್ ಮಾಡಲು ಆಗಮಿಸುತ್ತಿದ್ದವು. ಆವಾಗ ಕಟ್ಟಡದ ಮೇಲೆ ನಿಂತು ಕಾರನ್ನು ವೀಕ್ಷಿಸುತ್ತಿದ್ದ ನಾನು ಭವಿಷ್ಯದಲ್ಲಿ ತಾನು ಕೂಡಾ ಇದೇ ರೀತಿಯ ಕಾರನ್ನು ಖರೀದಿಸುವ ಕನಸು ಕಂಡಿರುವುದಾಗಿ ತಿಳಿಸಿದ್ದಾರೆ.

ಸಚಿನ್ ಇಂದು ಅನೇಕ ದುಬಾರಿ ಕಾರುಗಳ ಮಾಲಿಕ. ಅವರ ಗ್ಯಾರೇಜ್ ಬಳಿ ಫೆರಾರಿ, ಮರ್ಸಿಡಿಸ್, ಪೋರ್ಷೆ, ಬಿಎಂಡಬ್ಲ್ಯು ಸೇರಿದಂತೆ ಅನೇಕ ಐಷಾರಾಮಿ ಕಾರುಗಳಿದೆ. ಹಾಗೆಯೇ ಕಾರು ಖರೀದಿ ಸಂದರ್ಭದಲ್ಲಿ ಕಾರಿನ ಫೀಚರ್‌ಗಳ ಬಗ್ಗೆ ಪತ್ನಿ ಅಂಜಲಿ ಅವರಿಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಂತೆಯೇ ಎಫ್1 ಆರಂಭಕ್ಕೂ ಮುನ್ನ ನಿದ್ರೆಯೇ ಬರಲಿಲ್ಲ ಎಂದು ರೋಚಕ ದಿನಗಳನ್ನು ಹೇಳಿಕೊಂಡಿದ್ದಾರೆ.

ಅಂದ ಹಾಗೆ ಕಾರಿನಲ್ಲಿ 'ವೇಗವರ್ಧನೆ' ಸಚಿನ್ ಫೇವರಿಟ್ ಆಗಿದೆ. ಕಾರು ತಮ್ಮ ಹೃದಯದ ಜತೆ ನಂಟು ಹೊಂದಿರಬೇಕು ಎಂದು ಸಚಿನ್ ಹೇಳುತ್ತಾರೆ. ಇದರಿಂದ ಕಾರಿನ ಮೇಲಿನ ಪ್ರೀತಿ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ.

Most Read Articles

Kannada
English summary
Indian Cricket icon Sachin Tendulkar, who retired from one-day international recently, said he used to find it relaxing to wash his cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X