ಸೈಫ್-ಕರೀನಾ ಕಾರು ಕ್ರೇಜ್- ಫೋಟೋ ಕಲೆಕ್ಷನ್

Written By:

ಕೆಲವು ದಿನಗಳಷ್ಟೇ ಹಿಂದೆಯಷ್ಟೇ ಬಾಲಿವುಡ್ ಬೆಬೊ ಕರೀನಾ ಕಪೂರ್ ಹಾಗೂ ನಟ ಸೈಫ್ ಆಲಿ ಖಾನ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಬಾಲಿವುಡ್ ಜಗತ್ತಿನಲ್ಲಿ ಅವರಿಬ್ಬರದ್ದೇ ಸುದ್ದಿ; ನೀವು ಸಹ ಕರೀನಾ ಹಾಗೂ ಸೈಫ್ ಆಲಿ ಖಾನ್ ಅವರ ಫೀಲ್ಮಿ ಕೆರಿಯರ್ ಜತೆಗೆ ಖಾಸಗಿ ಬದುಕಿನ ಬಗ್ಗೆ ಅರಿತಿರಬಹುದು. ಆದರೆ ಈ ಸೆಲೆಬ್ರಿಟಿಗಳ ಫೇವರಿಟ್ ಕಾರುಗಳ ಬಗ್ಗೆ ನಾವೀಗ ನೋಡೋಣ ಬನ್ನಿ

ಸೈಫ್ ಹಾಗಾ ಕರೀನಾ ಏಕಕಂಠವಾಗಿ ಸೈಫೀನಾ ಎಂದು ವಿಶ್ಲೇಷಿಸಬಹುದು. ಇದೀಗ ಸೈಫೀನಾಳ ಐಷಾರಾಮಿ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೆಲವು ದಿನಗಳ ಹಿಂದೆಷ್ಟೇ ಸಂಗೀತ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕರೀನಾ ಐಷಾರಾಮಿ ಎಸ್‌ಯುವಿ ರೇಂಜ್ ರೋವ್ ಸ್ಪೋರ್ಟ್ ಕಾರಿನಲ್ಲಿ ಸಫಾರಿ ಮಾಡಿರುವುದು ಸುದ್ದಿ ಮಾಡಿತ್ತು. ಅಂದರೆ ಈ ಅತಿ ದುಬಾರಿ ಕಾರನ್ನು ಸೈಫ್ ಹೊಂದಿದ್ದಾರೆ.

ಕರೀನಾ ಫೇವರಿಟ್ ಎಸ್ ಕ್ಲಾಸ್ ಮರ್ಸಿಡೀಸ್ ಬೆಂಝ್

ಕರೀನಾ ಫೇವರಿಟ್ ಎಸ್ ಕ್ಲಾಸ್ ಮರ್ಸಿಡೀಸ್ ಬೆಂಝ್

ನಾವೀಗ ಕರೀನಾ ಕಪೂರ್ ಅವರಿಂದ ಆರಂಭಿಸೋಣ. ಬಾಲಿವುಡ್‌ನಲ್ಲಿ ತನ್ನದೇ ಆದ ನಟನೆಯಿಂದ ಬಹುತೇಕರ ಹೃದಯದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಕರೀನಾಳಿಗೆ ಲಗ್ಷುರಿ ಕಾರು ಬಗ್ಗೆ ಭಾರಿ ಆಸಕ್ತಿಯಿದೆ. ಹೌದು, ಕರೀನಾ ಬಳಿ ಜರ್ಮನಿಯ ಪ್ರಮುಖ ವಾಹನ ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್‌ನ ಮನೋಹರವಾದ ಎಸ್-ಕ್ಲಾಸ್ ಸಿಡಾನ್ ಕಾರ್ ಇದೆ.

ಸೈಫ್ ಆಲಿ ಖಾನ್‌ರ ರೇಂಜ್ ರೋವರ್

ಸೈಫ್ ಆಲಿ ಖಾನ್‌ರ ರೇಂಜ್ ರೋವರ್

ಅದೇ ಹೊತ್ತಿಗೆ ಸೈಫ್ ಆಲಿ ಖಾನ್ ಹೆಚ್ಚು ವೇಗತೆ ಹಾಗೂ ಸ್ಫೋರ್ಟಿ ಲುಕ್ ಹೊಂದಿರುವ ಕಾರಿನತ್ತ ಫೀದಾ ಆಗಿದ್ದಾರೆ. ಬಾಲಿವುಡ್‌ನಲ್ಲಿ ಎಜೆಂಟ್ ವಿನೋದ್ ಎಂದು ಅರಿಯಲ್ಪಡುವ ಸೈಫ್ ಬಳಿ ಬ್ರಿಟನ್‌ನ ವಾಹನ ತಯಾರಕ ಕಂಪನಿಯಾದ ಲ್ಯಾಂಡರ್‌ನ ಮನೋಹರವಾದ ಎಸ್‌ಯುವಿ ರೇಂಜ್ ರೋವಾರ್ ಸ್ಪೋರ್ಟ್ ಕಾರಿದೆ. ಅತ್ಯಾರ್ಷಕ ವಿನ್ಯಾಸ ಹಾಗೂ ಗರಿಷ್ಠ ಇಂಧನ ಕ್ಷಮತೆ ಹೊಂದಿರುವ ರೇಂಜ್ ರೋವಾರ್ ಎಸ್‌ಯುವಿ ಕಾರುಗಳಲ್ಲಿ ಪ್ರಮುಖವೆನಿಸಿದೆ.

ಲೆಕ್ಸಾಸ್ ಅಭಿಮಾನಿ ಬೆಬೊ

ಲೆಕ್ಸಾಸ್ ಅಭಿಮಾನಿ ಬೆಬೊ

ಸೈಫ್ ತರಹನೇ ಲಗ್ಷುರಿ ಕಾರುಗಳ ಮೇಲೆ ಕರೀನಾಳಿಗೂ ಅತಿಯಾದ ಪ್ರೀತಿ. ಕರೀನಾ ಬಳಿ ಎಸ್ ಕ್ಲಾಸ್ ಸಿಡಾನ್ ಕಾರು ಮಾತ್ರವಲ್ಲದೆ ಟೊಯೊಟಾ ಬ್ರಾಂಡ್‌ನ ಲೆಕ್ಸಾಸ್ ಎಲ್‌ಎಕ್ಸ್ 470 ಕಾರಿದೆ. ಈ ಕಾರಿನಲ್ಲಿ 4.7 ಲೀಟರ್ ಅಂದರೆ 4700 ಸಿಸಿ ಇಂಧನ ದಕ್ಷತೆಯ ಎಂಜಿನ್ ಆಳವಡಿಸಲಾಗಿದೆ.

ಲ್ಯಾಂಡ್ ಕ್ರೂಜರ್ ಅಭಿಮಾನಿ ಸೈಫ್

ಲ್ಯಾಂಡ್ ಕ್ರೂಜರ್ ಅಭಿಮಾನಿ ಸೈಫ್

ಸೈಫ್ ಸಂಪೂರ್ಣವಾಗಿಯೂ ಸ್ಪೋರ್ಟ್ ಯುಟಿಲಿಟಿ ವಿಕ್ಲಾಸ್ ಕಾರನ್ನು ಇಷ್ಟಪಡುತ್ತಾರೆ. ಬಹುಶ: ಇದೇ ಕಾರಣದಿಂದಲೇ ರೇಂಜ್ ರೋವಾರ್ ಸ್ಪೋರ್ಟ್ ಕಾರಿನ ಜತೆ ಅವರ ಬಳಿ ಟೊಯೊಟಾದ ಮನೋಹರವಾದ ಲ್ಯಾಂಡ್ ಕ್ರೂಜರ್ ಕೂಡಾ ಇದೆ.

ಬಿಎಂಡಬ್ಲ್ಯು 7 ಸಿರೀಸ್ ಹೊಂದಿರುವ ಸೈಫ್

ಬಿಎಂಡಬ್ಲ್ಯು 7 ಸಿರೀಸ್ ಹೊಂದಿರುವ ಸೈಫ್

ಸೈಫ್ ಬಳಿ ಜರ್ಮನಿಯ ಪ್ರಮುಖ ವಾಹನ ತಯಾರಕ ಕಂಪೆನಿ ಆಗಿರುವ ಬಿಎಂಡಬ್ಲ್ಯುನ ಅದ್ಭುತ ಸಿಡಾನ್ ಕಾರ್ ಬಿಎಂಡಬ್ಲ್ಯು 7 ಸಿರೀಸ್ ಕಾರು ಕೂಡಾ ಇದೆ. ಹಾಗಿದ್ದರೂ ಈ ಕಾರಿನಲ್ಲಿ ಸಂಚರಿಸುವುದು ಬಹಳ ಕಡಿಮೆಯಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಅವರು ತಮ್ಮ ಎಸ್‌ಯುವಿ ಕಾರಿನಲ್ಲೇ ತಿರುಗಾಡುತ್ತಿರುತ್ತಾರೆ.

ಸೈಫೀನಾಳ ಅದ್ಭುತ ಕಲೆಕ್ಷನ್

ಸೈಫೀನಾಳ ಅದ್ಭುತ ಕಲೆಕ್ಷನ್

ದೀರ್ಘ ಸಮಯದಿಂದ ಪ್ರೇಮ ಪಾಶದಲ್ಲಿ ಬಿದ್ದಿರುವ ಈ ಜೋಡಿ ಇದೀಗ ಹಸೆಮನೆ ಏರಿದ್ದಾರೆ. ಅಂದ ಹಾಗೆ ಸೈಫ್ ಆಲಿ ಖಾನ್‌ರದ್ದು ಇದು ಎರಡನೇ ಮದುವೆ. ಅವರು 1991ರಲ್ಲಿ ಅಮೃತಾ ಸಿಂಗ್ ಜತೆ ಮದುವೆಯಾಗಿದ್ದ ಸೈಫ್‌ಗೆ ಆ ಬಾಂಧವ್ಯದಲ್ಲಿ ಇಬ್ಬರು ಮಕ್ಕಳಿದ್ದಾರೆ. ಆದರೆ 2004ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು.

English summary
Saif Ali Khan & Kareena Kapoor has begun a new journey. Have you ever wondered what cars Saif Ali Khan & Kareena Kapoor drive on. Drivespark visits Saif Ali Khan & Kareena Kapoor's garage and breaks down their car collection.
Story first published: Monday, October 22, 2012, 9:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark