ಸೆಲ್ಟೋಸ್‌ನ ಗೇರ್‌ಬಾಕ್ಸ್‌ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ

ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಯಶಸ್ವಿಗಳಿಸಿದ ಕಂಪನಿಯಾಗಿದೆ. ದಕ್ಷಿಣ ಕೊರಿಯಾದ ಆಟೋ ಮೇಜರ್ ಕಿಯಾ ನಾಲ್ಕು ವರ್ಷಗಳಲ್ಲಿ 6.5 ಲಕ್ಷ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಕಿಯಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಮಾದರಿ ಸೆಲ್ಟೋಸ್ ಎಸ್‍ಯುವಿಯಾಗಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಯು ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಭಾರತದ ಗ್ರಾಹಕರು ಈ ಕಿಯಾ ಸೆಲ್ಟೋಸ್ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಎಸ್‍ಯುವಿಯು ಯಶ್ವಸಿಯಾಗಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍ಯುವಿ ಜನಪ್ರಿಯವಾಗುವುದರ ಜೊತೆಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಅದರ ಜೊತೆ ಕಿಯಾ ಗ್ರಾಹಕರ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.

ಸೆಲ್ಟೋಸ್‌ನ ಗೇರ್‌ಬಾಕ್ಸ್‌ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ

ಕಿಯಾ ಇಂಡಿಯಾ ತನ್ನ ಗ್ರಾಹಕರಲ್ಲಿ ಒಬ್ಬರ ಕಷ್ಟವನ್ನು ತ್ವರಿತವಾಗಿ ಬಗೆಹರಿಸಿದ್ದಾರೆ. ಇದರ ಬಗ್ಗೆ ಜನಪ್ರಿಯ ಯೂಟ್ಯೂಬರ್ ಅರುಣ್ ಪನ್ವಾರ್ ಅವರು ವೀಡಿಯೊ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ, ಇದರಲ್ಲಿ ಕಿಯಾ ಕಂಪನಿಯು ಸೆಲ್ಟೋಸ್ ಎಸ್‍ಯುವಿಯ ದೋಷ ಕಂಡು ಬಂದ ಗೇರ್‌ಬಾಕ್ಸ್ ಯುನಿಟ್ ಅನ್ನು ಹೇಗೆ ಬದಲಾಯಿಸುವುದು ಎಂಬುವುದರ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಈ ವೀಡಿಯೊದಲ್ಲಿ ಯೂಟ್ಯೂಬರ್, ಎಂಜಿನ್ ಬೇ ಕೆಳಗಿನಿಂದ ಆಯಿಲ್ ಸೋರಿಕೆಯಾಗುವುದನ್ನು ಗಮನಿಸಿದ್ದೇನೆ ಎಂದು ಹೇಳುವ ಮೂಲಕ ಪ್ರಾರಂಭಿಸುತ್ತಾರೆ.

ಆದರೆ, ಸೋರಿಕೆಯಾಗುತ್ತಿರುವುದು ಇಂಜಿನ್ ಆಯಿಲ್ ಅಥವಾ ಇಂಜಿನ್ ಕೂಲಂಟ್ ಅಲ್ಲ ಎಂದು ಅವರಿಗೆ ಅರಿವಾಗಿದೆ. ಬಳಿಕ ಅವರು ಕಿಯಾ ಸರ್ವಿಸ್ ಸೆಂಟರ್'ಗೆ ಮಾಹಿತಿ ನೀಡಿದರು. ಕಿಯಾ ಸರ್ವಿಸ್ ಸೆಂಟರ್ ಕಾರಿನ ದೋಷವನ್ನು ಪರಿಶೀಲಿಸಲು ಗ್ರಾಹಕನ ಮನೆಗೆ ಭೇಟಿ ನೀಡಿದರು. ಸಂಪೂರ್ಣ ತಪಾಸಣೆಯ ನಂತರ, ಕಿಯಾ ಇಂಡಿಯಾದ ಸರ್ವಿಸ್ ತಂಡವು ಸೆಲ್ಟೋಸ್‌ನ ಗೇರ್ ಬಾಕ್ಸ್ ಯುನಿಟ್ ನಿಂದ ಆಯಿಲ್ ಸೋರಿಕೆಯಾಗುತ್ತಿದೆ ಎಂದು ತಿಳಿದುಕೊಂಡು. ಈ ಯುನಿಟ್ ಕೆಳಭಾಗದಲ್ಲಿ ರಂಧ್ರವಿದೆ. ಆದರೆ ಈ ರಂಧ್ರವಾಗಲು ಕಾರಣವನ್ನು ವೀಡಿಯೊದಲ್ಲಿ ವಿವರಿಸಿಲ್ಲ.

ಡ್ರೈವಿಂಗ್ ಮಾಡುವಾಗ ಶಿಫ್ಟ್ ಮಾಡುವಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಗೇರ್ ಬಾಕ್ಸ್ ಆಯಿಲ್ ಸೋರಿಕೆಯಿಂದ ಅವರಿಗೆ ಆತಂಕವಾಯ್ತು ಎಂದು ಯೂಟ್ಯೂಬರ್ ಹೇಳಿಕೊಂಡಿದೆ. ಇದು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಗಿದೆ, ಇದನ್ನು ಈ ನಿರ್ದಿಷ್ಟ ಸೆಲ್ಟೋಸ್‌ನಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್‌ಗೆ ಜೋಡಿಸಲಾಗಿದೆ. ಕಿಯಾ ಸರ್ವಿಸ್ ತಂಡವು ಈ ಗೇರ್ ಬಾಕ್ಸ್ ಅನ್ನು ಬದಲಾಯಿಸಲು 20 ದಿನಗಳ ಕಾಲವಧಿಯನ್ನು ಕೇಳಿಕೊಂಡರು. ಈ ಕಾಲವಧಿಯಲ್ಲಿ ಹಳೆಯ ದೋಷ ಯುಕ್ತ ಗೇರ್ ಬಾಕ್ಸ್ ಅನ್ನು ಬದಲಾಯಿಸಿದರು.

ಯೂಟ್ಯೂಬರ್ ಪ್ರಕಾರ, ಗೇರ್ ಬಾಕ್ಸ್ ಯುನಿಟ್'ಗೆ ಸುಮಾರು 1.5-2 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು. ಆದರೆ ಅವರ ಎಸ್‍ಯುವಿಗೆ ವಾರಂಟಿ ಇರುವುದರಿಂದ ಉಚಿತವಾಗಿ ಬದಲಾಯಿಸಲಾಯಿಸಿದರು. 20 ದಿನಗಳಲ್ಲಿ ಹೊಸ ಗೇರ್ ಬಾಕ್ಸ್ ಯುನಿಟ್ ಅನ್ನು ಅಳವಡಿಸಿ ಎಸ್‍ಯುವಿಯನ್ನು ಅವರಿಗೆ ಮರಳಿ ನೀಡಿದರು. ಇಂತಹ ದುಬಾರಿ ದೋಷಪೂರಿತ ಯುನಿಟ್ ಅನ್ನು ಉಚಿತವಾಗಿ ಬದಲಾಯಿಸಲು ಕಾರು ತಯಾರಕರು ಕೆಲವೊಮ್ಮೆ ಹಿಂಜರಿಯುತ್ತಾರೆ, ಆದರೆ ಕಿಯಾ ತ್ವರಿತವಾಗಿ ಬದಲಾಯಿಸಿ ನೀಡಿರುವುದರ ಬಗ್ಗೆ ಶ್ಲಾಘಸಿದ್ದಾರೆ.

ಈ ಕಿಯಾ ಸೆಲ್ಟೋಸ್ ಯಶಸ್ಸು ದೇಶದಲ್ಲಿ ದಕ್ಷಿಣ ಕೊರಿಯಾದ ವಾಹನ ತಯಾರಕರಾದ ಕಿಯಾಗೆ ಅಡಿಪಾಯ ಹಾಕಿತು. ಪ್ರಸ್ತುತ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ, ಇದರಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಗಳಾಗಿವೆ. ಈ ಎಸ್‍ಯುವಿ ಮಾದರಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್ ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಕೂಡ ಅಳವಡಿಸಲಾಗಿದೆ.

Most Read Articles

Kannada
English summary
Seltos suv gearbox leakage kia dealership replaces it for free details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X