ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕ್‌ಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಅದೇ ರೀತಿ ನಟ ಶಾಹಿದ್ ಕಪೂರ್ ಅವರು ಹೆಚ್ಚು ಬೈಕ್‌ಗಳ ಕ್ರೇಜ್ ಹೊಂದಿದ್ದಾರೆ. ಈ ಬಾಲಿವುಡ್ ನಟನ ಗ್ಯಾರೇಜ್‌ನಲ್ಲಿ ಡುಕಾಟಿ ಸೇರಿದಂತೆ ಹಲವಾರು ಬ್ರಾಂಡ್‌ಗಳ ಬೈಕ್‌ಗಳಿವೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ನಟ ಶಾಹಿದ್ ಕಪೂರ್ ತಮ್ಮ ಗ್ಯಾರೇಜ್‌ಗೆ ಮತ್ತೊಂದು ಡುಕಾಟಿ ಬೈಕ್ ಅನ್ನು ಸೇರಿಸಿದ್ದಾರೆ. ಈ ನಟ ರೂ.12 ಲಕ್ಷಕ್ಕೂ ಹೆಚ್ಚು ಮೌಲ್ಯದ ಹೊಚ್ಚಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ ಅನ್ನು ಖರೀದಿಸಿದ್ದಾರೆ. ಈ ಬೈಕಿನ ಆನ್ ರೋಡ್ ಬೆಲೆಯು ರೂ.14 ಲಕ್ಷವಾಗಿದೆ. ನಟ ಶಾಹಿದ್ ಹೊಸ ಬೈಕ್ ನೊಂದಿಗೆ ಹೊಸ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಬಾಲಿವುಡ್ ನಟ ಶಾಹಿದ್ ಕಪೂರ್ ಅವರಿಗೆ ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು ಓಡಿಸುವುದೆಂದರೆ ಬಹಳ ಇಷ್ಟ. ಶಾಹಿದ್ ಕಪೂರ್ ಬಳಿ ಈಗಾಗಲೇ ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ (ಕ್ಯಾರಿಲ್-ಕಾರ್ನೆ- ಬಡೆ ಬಡ್ಡಿನ್), ಬಿಎಂಡಬ್ಲು ಜಿ310 ಆರ್ (ಸಿಎಂಡಿಜಿ 310ವಿ) ಮತ್ತು ಯಮಹಾ ಎಂಟಿ-01 ನಂತಹ ದುಬಾರಿ ಬೈಕುಗಳನ್ನು ಹೊಂದಿದ್ದಾರೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಇವುಗಳ ಜೊತೆಗೆ ಇತ್ತೀಚೆಗೆ ಶಾಹಿದ್ ಕಪೂರ್ ಮತ್ತೋಂದು ಐಷಾರಾಮಿ ಬೈಕ್ ಖರೀದಿಸಿದ್ದಾರೆ. ಇತ್ತೀಚೆಗೆ ಡುಕಾಟಿ ಸ್ಕ್ರಾಂಬ್ಲರ್ 1100 (ಸ್ಮಾರ್ಟ್ ರಮೆಡ್ 1100) ಬೈಕನ್ನು ಖರೀದಿಸಿದ್ದರು. ಇದೀಗ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಅನ್ನು ಖರೀದಿಸಿದ್ದಾರೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಹೊಸ ಡುಕಾಟಿ ಡೆಸರ್ಟ್ ಸ್ಲೆಡ್ ಗ್ಲೋಷ್ ಬ್ಲೂ ಮತ್ತು ವೈಟ್ ಬಣ್ಣದಲ್ಲಿದೆ. ಈ ಚಿತ್ರದಲ್ಲಿ ಶಾಹಿದ್ ತನ್ನ ರೈಡಿಂಗ್ ಗೇರ್‌ನೊಂದಿಗೆ ಕಾಣಿಸಿಕೊಂಡಿದ್ದು, ಬೈಕ್‌ನಲ್ಲಿ ಹೋಗಲು ಸಿದ್ಧವಾಗಿದೆ. ಈ ಮಾದರಿಯು ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಶ್ರೇಣಿಯಿಂದ ಬಂದಿದೆ, ಇದನ್ನು 2020 ರಲ್ಲಿ ಪರಿಚಯಿಸಲಾಯಿತು. ಇದು ಹೊಸ ಬಣ್ಣವಾಗಿದೆ, ಡುಕಾಟಿಯು ಹೊಸ ಮಾದರಿ ಶ್ರೇಣಿಯೊಂದಿಗೆ ಪರಿಚಯಿಸಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

1980ರ ಎಂಡ್ಯೂರೊ ಬೈಕ್‌ಗಳಿಗೆ ಗೌರವ ಸಲ್ಲಿಸಲು ಡೆಸರ್ಟ್ ಸ್ಲೆಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ವಿಭಿನ್ನವಾದ ಹೊಸ ಸೀಟ್ ಮತ್ತು ಮೆಶ್ ಹೆಡ್‌ಲೈಟ್ ಕವರ್ ಅನ್ನು ಸೇರಿಸುವುದನ್ನು ಒಳಗೊಂಡಿವೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಡಸರ್ಟ್ ಸ್ಲೆಡ್‌ನ ಫ್ರೇಮ್ ನಿಂದ ಸಹ ಮಾರ್ಪಡಿಸಲಾಗಿದೆ ಮತ್ತು ಸ್ವಿಂಗರ್ಮ್ ಬಲವರ್ಧನೆಗಳನ್ನು ಪಡೆಯುತ್ತದೆ. ಸಸ್ಪೆಕ್ಷನ್ ಹೊಂದಾಣಿಕೆಗಳನ್ನು ಮತ್ತು 200mm ಸಮಗ್ರ ಟ್ರ್ಯಾವೆಲ್ ಅನ್ನು ನೀಡುತ್ತದೆ. ಬೈಕು ಇತರ ರೂಪಾಂತರಗಳಿಗಿಂತ ಎತ್ತರದಲ್ಲಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕಿನಲ್ಲಿ 803cc, L-ಟ್ವಿನ್ ಸಿಲಿಂಡರ್ ಮತ್ತು ಏರ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 75 ಬಿಹೆಚ್‍ಪಿ ಪವರ್ ಮತ್ತು 68 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಇನ್ನು ನಟ ಶಾಹಿದ್ ಕಪೂರ್ ಕಳೆದ ಬಾರೀ ಖರೀದಿಸಿದ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕಿನಲ್ಲಿ 1100ಸಿಸಿ 'ಬಿ' ವಿನ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ 7,500 ಆರ್‌ಪಿಎಂನಲ್ಲಿ ಗರಿಷ್ಠ 83 ಬಿಎಚ್‌ಪಿ ಮತ್ತು 4,750 ಆರ್‌ಪಿಎಂನಲ್ಲಿ 88 ಎನ್‌ಎಂ ಟಾರ್ಕ್ ಶಕ್ತಿಯನ್ನು ಹೊಂದಿದೆ. ದಕ್ಷ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್‌ ಅನ್ನು ನೀಡಲಾಗಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್‌ನಲ್ಲಿ ಶಕ್ತಿಶಾಲಿ ಎಂಜಿನ್ ಆಯ್ಕೆಯ ಜೊತೆಗೆ ಸವಾರರಿಗೆ ಅಗತ್ಯವಿರುವ ವಿವಿಧ ಅತ್ಯಾಧುನಿಕ ಸೌಲಭ್ಯಗಳಿವೆ. ಅದರಂತೆ ಡುಕಾಟಿ ಸ್ಕ್ರಾಂಬ್ಲರ್ 1100ಗೆ ಡ್ಯುಯಲ್ ಚಾನೆಲ್ ಎಬಿಎಸ್, ಎಲ್‌ಸಿಡಿ ಕನ್ಸೋಲ್, ರೈಡಿಂಗ್ ಮೋಡ್‌ಗಳು ಮತ್ತು ಡ್ರಾಕ್ಸನ್ ಕಂಟ್ರೋಲ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಕೇವಲ 3.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ. ಬೈಕ್‌ನ ಟಾಪ್ ಸ್ಪೀಡ್ ಗಂಟೆಗೆ 209 ಕಿಮೀ ಇದೆ. ಡುಕಾಟಿ ಬೈಕುಗಳು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 11 ಲಕ್ಷ ರೂ.ಗಳಿಂದ 13.7 ಲಕ್ಷ ರೂ.ಗಳವರೆಗೆ ಇದೆ. ಇದು ಎಕ್ಸ್‌ ಶೋರೂಂ ಬೆಲೆಹಯಾಗಿದ್ದು, ಆನ್-ರೋಡ್ ಬೆಲೆ ಇನ್ನೂ ಹೆಚ್ಚಾಗಲಿದೆ. ಡುಕಾಟಿ ಸ್ಕ್ರಾಂಬ್ಲರ್ 1100 15 ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ತಮಿಳು ಚಿತ್ರೋದ್ಯಮದ ಪೊಲ್ಲಾಧವನ್, ಆಡುಕಾಲಂ ಮತ್ತು ಅಸುರಾನ್ ನಂತಹ ವಿವಿಧ ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕ ವೆಟ್ರಿಮಾರನ್ ಇತ್ತೀಚೆಗೆ ಈ ದುಬಾರಿ ಬೈಕ್ ಖರೀದಿಸಿದ್ದರು. ಇದೀಗ ಶಾಹಿದ್ ಕಪೂರ್ ಇದನ್ನು ಖರೀದಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ರೂ.14 ಲಕ್ಷ ಬೆಲೆಯ ಡುಕಾಟಿ ಸ್ಕ್ರ್ಯಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್ ಖರೀದಿಸಿದ ನಟ

ಬಾಲಿವುಡ್ ನಟ ಶಾಹಿದ್ ಕಪೂರ್ BMW R 1250 GS ಅನ್ನು ಸಹ ಹೊಂದಿದ್ದಾರೆ. ಇದು ಅಡ್ವೆಂಚರ್ ಬೈಕ್ ಪ್ರಿಯರ್ ಮೆಚ್ಚಿನ ಆಯ್ಕೆಯಾಗಿದೆ. ಶಾಹಿದ್ ಕಪೂರ್ ಹಾರ್ಲೆ-ಡೇವಿಡ್ಸನ್ ಫ್ಯಾಟ್‌ಬಾಯ್ ಅನ್ನು ಸಹ ಹೊಂದಿದ್ದಾರೆ. ಅವರು ಫ್ಯಾಟ್‌ಬಾಯ್‌ನೊಂದಿಗೆ ಹೆಚ್ಚು ಗುರುತಿಸಲ್ಪಡದಿದ್ದರೂ, ಅವರು ಈ ಕ್ರೂಸರ್ ಅನ್ನು ಪ್ರೀತಿಸುತ್ತಿದ್ದರು ಮತ್ತು ಕೆಲವು ಆಭ್ರಿ ನೈಟ್ ರೈಡ್'ಗೆ ಏಕಾಂಗಿಯಾಗಿ ಹೋಗುತ್ತಿದ್ದರು.

Most Read Articles

Kannada
English summary
Shahid kapoor buys new ducati scrambler desert sled details
Story first published: Monday, August 29, 2022, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X