ಪಾರ್ಕಿಂಗ್ ಕೌಶಲ್ಯ ವೃದ್ಧಿಗೆ ಅತ್ಯಮೂಲ್ಯ ಸಲಹೆಗಳು

By Nagaraja

ವಾಹನ ನಿಲುಗಡೆ ಮಾಡುವುದು ತುಂಬಾನೇ ಸರಳವಲ್ಲವೇ? ಇದನ್ನಿಲ್ಲಿ ಚರ್ಚಿಸಬೇಕಾದ ಅಗತ್ಯವಾದರೂ ಏನಿದೆ? ಎಂಬ ವಿಷಯ ನಿಮ್ಮ ಮನದಲ್ಲಿ ಮೂಡುತ್ತಿದ್ದರೆ ನೇರವಾಗಿ ನಗರ ಪ್ರದೇಶದ ನಿವಾಸಿಯೊಬ್ಬರಲ್ಲಿ ಇದೇ ಪ್ರಶ್ನೆಯನ್ನು ಕೇಳಿ ನೋಡಿ?

ಇವನ್ನೂ ಓದಿ: ಸಮಾನಾಂತರ ವಾಹನ ನಿಲುಗಡೆ ಹೇಗೆ ?

ಬಹುಶ: ವಾಹನ ನಿಲುಗಡೆಗಿಂತ ಕೆಟ್ಟ ವಿಷಯ ಬೇರೋಂದಿಲ್ಲ ಎಂಬ ಉತ್ತರ ನಿಮಗೆ ನೇರವಾಗಿ ಸಿಗಬಹುದು. ಹೌದು, ಕಿಕ್ಕಿರಿದು ತುಂಬಿನ ಜನ ಜಂಗುಳಿಯಲ್ಲಿ ನಗರ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುವುದೇ ದೊಡ್ಡ ತಲೆನೋವಿನ ವಿಷಯ. ಈ ನಿಟ್ಟಿನಲ್ಲಿ ಪಾರ್ಕಿಂಗ್ ವೇಳೆಯಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವೊಂದು ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ಪಾರ್ಕಿಂಗ್ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಭರವಸೆ ನಮ್ಮದ್ದು.

ನೊ ಪಾರ್ಕಿಂಗ್ ಝೋನ್

ನೊ ಪಾರ್ಕಿಂಗ್ ಝೋನ್

ನೀವು ಹೊಸ ಕಾರು ಮಾಲಿಕರಾಗಿದ್ದಲ್ಲಿ ಇಂತಹ ಎಡವಟ್ಟುಗಳನ್ನು ಮಾಡುವುದು ಸಾಮಾನ್ಯ. ಯಾವುದೇ ಕಾರಣಕ್ಕೂ ನೊ ಪಾರ್ಕಿಂಗ್ ಝೋನ್‌ನಲ್ಲಿ ವಾಹನ ನಿಲುಗಡೆ ಮಾಡುವ ದುಸ್ಸಾಹಸಕ್ಕೆ ಮುಂದಾಗದಿರಿ. ಇತರರು ಇದೇ ಪ್ರದೇಶದಲ್ಲಿ ಗಾಡಿ ನಿಲ್ಲಿಸಿದ್ದಾರೆ. ಹಾಗಾಗಿ ನಾನು ನಿಲ್ಲಿಸಿದರೆ ಯಾವುದೇ ತೊಂದರೆ ಎದುರಾಗದು ಎಂಬ ಚಿಂತನೆ ಬೇಡ.

ನೊ ಪಾರ್ಕಿಂಗ್ ಝೋನ್

ನೊ ಪಾರ್ಕಿಂಗ್ ಝೋನ್

ಸಾಮಾನ್ಯವಾಗಿ ಅಂಗಡಿ ಮುಗ್ಗಟ್ಟು, ಶಾಪಿಂಗ್ ಮಾಲ್, ಮನೆ, ಕಟ್ಟಡ, ಟ್ಯಾಕ್ಸಿ ಅಥವಾ ಆಟೋ ಸ್ಟ್ಯಾಂಡ್, ಹೊರ ಹೋಗುವ ರಸ್ತೆ ಮುಂತಾದ ಸುತ್ತು ಮುತ್ತಲಿನ ಪ್ರವೇಶದಲ್ಲಿ ನೊ ಪಾರ್ಕಿಂಗ್ ಝೋನ್ ಪ್ರದೇಶಗಳೆಂದು ನಮೂದಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಹಾಕಲಿರುವ ಸೂಚನಾ ಫಲಕಗಳನ್ನು ಸೂಕ್ಷ್ಮವಾಗಿ ಗಮನಿಟ್ಟು ನೋಡಿ.

ಪಾದಚಾರಿ ರಸ್ತೆ

ಪಾದಚಾರಿ ರಸ್ತೆ

ಇನ್ನು ಪಾದಚಾರಿಗಳು ಸಂಚರಿಸುವ ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ನಿಲ್ಲಿಸುವುದು ಬೇಡ. ಇದರಿಂದ ಸ್ವಯಂ ಅಪಾಯವನ್ನು ಆಹ್ವಾನಿಸಿದಂತೆ. ಅಂತೆಯೇ ದಂಡ ತೆರಬೇಕಾದ ದುಸ್ಥಿತಿಯನ್ನು ಎದುರಿಸಬೇಕಾಗಿತ್ತು.

ಮರದ ಕೆಳಗಡೆ ಪಾರ್ಕಿಂಗ್ ಬೇಡ

ಮರದ ಕೆಳಗಡೆ ಪಾರ್ಕಿಂಗ್ ಬೇಡ

ಕೆಲವು ನೆರಳಿನ ಪ್ರದೇಶ ನೋಡ್ಕೊಂಡು ಬಿಟ್ಟು ಮರದ ಕೆಳಗಡೆಯೇ ವಾಹನ ನಿಲುಗಡೆ ಮಾಡುತ್ತಾರೆ. ಅಂತವರಲ್ಲಿ ಒಂದು ವಿನಂತಿ. ಮೊದಲು ಮರದ ರೆಂಬೆಯನ್ನೊಮ್ಮೆ ನೋಡಿ. ಎಲ್ಲಿಯಾದರೂ ರೆಂಬೆ ಮುರಿದು ಹೋಗುವ ಸ್ಥಿತಿಯಲ್ಲಿದ್ದೆಯೇ? ಇದರಿಂದಾಗಿ ಭಾರಿ ಬೆಲೆಯನ್ನೇ ತೆರಬೇಕಾಗಿತ್ತು. ಇನ್ನು ಮರದ ಕಳಗಡೆ ಮಾರ್ಕಿಂಗ್ ಮಾಡಿದ್ದಲ್ಲಿ ಹಕ್ಕಿಗಳು ತಮ್ಮ ಕಾರ್ಯ ಸಾಧನೆ ಮಾಡುವ ಭೀತಿಯೂ ಇದೆ. ಇದರಿಂದಾಗಿ ನಿಮ್ಮ ಕಾರಿನ ಪೈಂಟ್‌ಗೂ ಕುತ್ತು ಸಂಭವಿಸಬಹುದು. ಅಂತೆಯೇ ಮಳೆಗಾಲದಲ್ಲಿ ಮರದ ಕೆಳಗಡೆ ವಾಹನ ನಿಲುಗಡೆ ಮಾಡುವುದು ತುಂಬಾನೇ ಅಪಾಯಕಾರಿ.

ಅಂತರ ಕಾಯ್ದುಕೊಳ್ಳಿ

ಅಂತರ ಕಾಯ್ದುಕೊಳ್ಳಿ

ವಾಹನ ಪಾರ್ಕಿಂಗ್ ವೇಳೆ ಅಂತರ ಕಾಯ್ದುಕೊಳ್ಳುವುದು ಅತ್ಯಂತ ನಿರ್ಣಾಯಕವೆನಿಸಿಕೊಳ್ಳುತ್ತದೆ. ನಿಮ್ಮ ಅಕ್ಕ ಪಕ್ಕದ ಗಾಡಿಗಳಿಂದ ಸರಿಯಾದ ಅಂತರ ಕಾಯ್ದುಕೊಳ್ಳಿರಿ. ಇದರಿಂದ ಪ್ರಯಾಣಿಕರಿಗೆ ಡೋರ್ ತೆಗೆದು ಒಳ ಪ್ರವೇಶಿಸುವುದು ಸುಲಭವಾಗಲಿದೆ. ಅಷ್ಟೇ ಅಲ್ಲದೆ ಜಾಗ ಬಿಟ್ಟುಕೊಡದೆ ಪಾರ್ಕಿಂಗ್ ಮಾಡಿದ್ದಲ್ಲಿ ಇತರ ಸವಾರರಿಗೂ ಅಲ್ಲಿಂದ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

ಪಾರ್ಕಿಂಗ್ ಜಾಗ

ಪಾರ್ಕಿಂಗ್ ಜಾಗ

ಸಾಮಾನ್ಯವಾಗಿ ದೊಡ್ಡ ದೊಡ್ಡ ಮಾಲ್ ಅಥವಾ ಪ್ರದರ್ಶನ ಮಳಿಗೆಗಳಲ್ಲಿ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ಲಾಟ್ ಅಥವಾ ಜಾಗವನ್ನು ಮೀಸಲಾಗಿಡಲಾಗುತ್ತದೆ. ಇಂತಹ ಸ್ಥಳಗಳಿಗೆ ತೆರಳುವಾಗ ಪಾರ್ಕಿಂಗ್ ಬಗ್ಗೆ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಹಾಗಿದ್ದರೂ ಈ ಕೆಲವು ವಿಚಾರಗಳನ್ನು ಮರೆತು ಹೋಗದಿರಿ. ಮುಂದಕ್ಕೆ ಓದಿ...

ಬೆಲೆಬಾಳುವ ವಸ್ತುಗಳು

ಬೆಲೆಬಾಳುವ ವಸ್ತುಗಳು

ಕಾರಿನಲ್ಲಿಯೇ ನಿಮ್ಮ ವೈಯಕ್ತಿಕ ವಸ್ತುಗಳನ್ನು ಬಿಟ್ಟು ಹೋಗದಿರಿ. ಉದಾಹರಣೆಗಾಗಿ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇತ್ಯಾದಿ ವಸ್ತುಗಳನ್ನು ನಿಮ್ಮ ಜೊತೆಗೆ ಸಾಗಿಸಿರಿ. ಇಲ್ಲಿ ಪಾರ್ಕಿಂಗ್ ಲಾಟ್‌ನಲ್ಲಿ ಅಲ್ಲಿನ ಸಿಬ್ಬಂದಿಗಳ ಕೈಗಳಿಗೆ ನಿಮ್ಮ ಕಾರಿನ ಕೀಲಿಯನ್ನು ಹಸ್ತಾಂತರಿಸುವ ವಿಚಾರವನ್ನು ಮರೆಯಬೇಡಿ. ಅವರು ಎಷ್ಟೇ ನಿಷ್ಠಾವಂತರಾಗಿದ್ದರೂ ಮುನ್ನಚ್ಚೆರಿಕೆ ಕಾಯ್ದುಕೊಂಡರೆ ಒಳಿತು.

ಹ್ಯಾಂಡ್ ಬ್ರೇಕ್

ಹ್ಯಾಂಡ್ ಬ್ರೇಕ್

ಕೊನೆಯದಾಗಿ ಹೇಳಲು ಇಷ್ಟಪಡುವ ವಿಚಾರವೆಂದರೆ ಹ್ಯಾಂಡ್ ಬ್ರೇಕ್ ಹಾಕಲು ಮರೆಯದಿರಿ. ಈ ಎಲ್ಲ ವಿಚಾರಗಳನ್ನು ವಾಹನ ಪಾರ್ಕಿಂಗ್ ವೇಳೆ ತಪ್ಪದೇ ನೆನಪಿನಲ್ಲಿಟ್ಟುಕೊಳ್ಳಿರಿ. ತದಾ ಬಳಿಕ ನಿಶ್ಚಿಂತತೆಯಿಂದ ಕಾರು ಬಗ್ಗೆ ಚಿಂತೆ ಮಾಡದೇ ನಿಮ್ಮ ಕಾರ್ಯ ಕಲಾಪಗಳಲ್ಲಿ ಮಗ್ನರಾಗಿರಿ. ಹ್ಯಾಪಿ ರೈಡಿಂಗ್!


Most Read Articles

Kannada
English summary
Since your car can be almost your home away from home while traveling, you will want to take some precautions to protect it and the things inside it. 
Story first published: Monday, December 1, 2014, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X