ಬದಲಾವಣೆಯ ಪರ್ವದಲ್ಲಿ ಭಾರತ; ರೈಲಲ್ಲಿ ವಿಮಾನದಂತಹ ಐಷಾರಾಮಿ ಸೌಲಭ್ಯ

By Nagaraja

ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ 'ಭಾರತೀಯ ರೈಲ್ವೆ' ಬದಲಾವಣೆಯ ಪರ್ವದಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

Also Read: ಭಾರತದ ಬುಲೆಟ್ ರೈಲು ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ರೈಲ್ವೆ ಶುಚಿತ್ವ, ಸೌಲಭ್ಯ ಮತ್ತು ಸುರಕ್ಷತೆಯ ಬಗ್ಗೆ ಪದೇ ಪದೇ ಪ್ರಯಾಣಿಕರಿಂದ ದೂರುಗಳು ಕೇಳಿಬರುತ್ತಿದೆ. ಈಗ ಪರಿಸ್ಥಿತಿ ಬದಲಾಗುತ್ತಿದ್ದು, ಭಾರತೀಯ ರೈಲ್ವೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡುಬರುತ್ತಿದೆ. ಏನಿದು ಹೊಸ ಬದಲಾವಣೆ? ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಸಾಗಿರಿ...

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಭಾರತೀಯ ಸರಕಾರದ ಮುಂದಾಳತ್ವದಲ್ಲಿ ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ದೇಶದ ಅತಿ ವೇಗದ ಸೆಮಿ ಬುಲೆಟ್ ರೈಲು 'ಗತಿಮಾನ್' ಯಶಸ್ವಿ ಪರೀಕ್ಷೆ ನಡೆಸಿತ್ತು. ಇದು ಗಂಟೆಗೆ ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇದರ ಮುಂದುವರಿದ ಭಾಗವೆಂಬಂತೆ ಭಾರತೀಯ ರೈಲ್ವೆ ಗಂಟೆಗೆ 200 ಕೀ.ಮೀ. ವೇಗದಲ್ಲಿ ಓಡಾಡುವ ಟಾಲ್ಗೊ ರೈಲು ಯೋಜನೆಗೆ ಹಸಿರು ನಿಶಾನೆ ನೀಡಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಸ್ಪೇನ್ ತಳಹದಿಯ ಟಾಲ್ಗೊ ಸಂಸ್ಥೆಯು ದೇಶದ ಹೈ ಸ್ಪೀಡ್ ರೈಲು ಕನಸನ್ನು ನನಸಾಗಿಸಲಿದ್ದು 2016 ಜೂನ್ ವೇಳೆಯಾಗುವಾಗ ಪ್ರಯೋಗಿಕ ಸಂಚಾರ ಪರೀಕ್ಷೆ ನೆರವೇರಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇದರಂತೆ ಸ್ಪೇನ್ ಟಾಲ್ಗೊ ರೈಲಿನ ಒಂಬತ್ತು ಲಗ್ಷುರಿ ರೈಲುಗಳು ಸಮುದ್ರ ಹಾದಿ ಮುಖಾಂತರ ಭಾರತದ ಮುಂಬೈ ಬಂದರನ್ನು ತಲುಪಿದೆ. ಇದು ವಿಮಾನದಂತಹ ಐಷಾರಾಮಿ ಸೌಲಭ್ಯಗಳನ್ನು ರೈಲಿನಲ್ಲೇ ಒದಗಿಸಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇಲ್ಲಿನ ಚಿತ್ರಗಳೇ ಬಿತ್ತರಿಸುವಂತೆಯೇ ಟಾಲ್ಗೊ ಐಷಾರಾಮಿ ರೈಲುಗಳು ಭಾರತೀಯ ರೈಲ್ವೆ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ. ಅಲ್ಲದೆ ವರ್ಷಾಂತ್ಯದೊಳಗೆ ಸೇವೆ ಆರಂಭಗೊಳ್ಳುವ ನಿರೀಕ್ಷೆಯಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಹೈ ಸ್ಪೀಡ್ ರೈಲುಗಳನ್ನು ಭಾರತಕ್ಕೆ ಒದಗಿಸಲು ವಿಶೇಷ ಆಸಕ್ತ ವ್ಯಕ್ತಪಡಿಸಿರುವ ಸ್ಪೇನ್, ಸಂಚಾರ ಪರೀಕ್ಷೆಯನ್ನು ಸಂಪೂರ್ಣ ಉಚಿತವಾಗಿ ಹಮ್ಮಿಕೊಳ್ಳಲಿದೆ. ಭಾರತಕ್ಕೆ ರೈಲು ಬೋಗಿಗಳನ್ನು ರಫ್ತು ಮಾಡಿರುವ ಸಂಪೂರ್ಣ ವೆಚ್ಚವನ್ನು ಸಹ ಸ್ಪೇನ್ ಭರಿಸುತ್ತಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಹೈ ಸ್ಪೀಡ್ ರೈಲು ಯೋಜನೆಯ ಮೊದಲ ಹಂತವಾಗಿ ಬರೈಲ್ಲಿ ಮತ್ತು ಮೊರದಾಬಾದ್ ನಡುವೆ 115 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗುವುದು. ಬಳಿಕ ಪಲ್ವಾಲ್ ಮತ್ತು ಮಥುರಾ ಹಾದಿಯಲ್ಲಿ ಗಂಟೆಗೆ 180 ಕೀ.ಮೀ. ವೇಗದಲ್ಲಿ ಪ್ರಯೋಗಿಕ ಸಂಚಾರ ನಡೆಸಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇದಾದ ಬಳಿಕ ದೇಶದ ಎರಡು ಮಹಾನಗರಗಳಾದ ನವದೆಹಲಿ ಮತ್ತು ಮುಂಬೈ ನಡುವೆ 200 ಕೀ.ಮೀ. ವೇಗದಲ್ಲಿ ಪ್ರಯೋಗಿಸ ಸಂಚಾರ ಪರೀಕ್ಷೆ ನಡೆಸಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ದೆಹಲಿಯಿಂದ ಮುಂಬೈಗೆ ಕೇವಲ 12 ತಾಸಿನ ಅವಧಿಯಲ್ಲಿ ತಲುಪಬಹುದಾಗಿದೆ. ಇವೆರಡು ನಗರಗಳ ಅಂತರ 1200 ಕೀ.ಮೀ. ಆಗಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇಲ್ಲಿನ ಗಮನಾರ್ಹ ಅಂಶವೆಂದರೆ ಈಗಿರುವ ರೈಲ್ವೆ ಮೂಲ ಸೌಕರ್ಯಗಳಲ್ಲಿ ಹೆಚ್ಚಿನ ಬದಲಾವಣೆಯಿಲ್ಲದೆ ಟಾಲ್ಗೊ ರೈಲುಗಳು ಗಂಟೆಗೆ 160 ಕೀ.ಮೀ. ಗಳಿಂದ 200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಈ ಎಲ್ಲ ಅಂಶಗಳು ಒಟ್ಟಾರೆ ನಿರ್ವಹಣಾ ವೆಚ್ಚ ಕಡಿತ ಮಾಡಲು ಭಾರತೀಯ ರೈಲ್ವೆಗೆ ಸಹಕಾರಿಯಾಗಲಿದೆ. ಇನ್ನೊಂದೆಡೆ ಗತಿಮಾನ್ ಎಕ್ಸ್ ಪ್ರೆಕ್ಸ್ ಗಾಗಿ ಟ್ರ್ಯಾಕ್ ಗಳನ್ನು ಆಧುನಿಕರಣಗೊಳಿಸತ್ತಲ್ಲದೆ ಸಿಗ್ನಲ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿತ್ತು.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಹಗುರ ಭಾರದ ಟಾಲ್ಗೊ ರೈಲುಗಳ ಓಡಾಟಕ್ಕೆ ಶೇಕಡಾ 30ರಷ್ಟು ಕಡಿಮೆ ವಿದ್ಯುತ್ ಸಾಕಾಗುವುದು. ಇದು ಒಟ್ಟಾರೆ ವಿದ್ಯುತ್ ಬಿಲ್ ಕಡಿತ ಮಾಡುವಲ್ಲೂ ಭಾರತೀಯ ರೈಲ್ವೆಗೆ ನೆರವಾಗಲಿದೆ.

ಟಾಲ್ಗೊ ಬಗ್ಗೆ ಒಂದಿಷ್ಟು...

ಟಾಲ್ಗೊ ಬಗ್ಗೆ ಒಂದಿಷ್ಟು...

ಸ್ಪೇನ್ ರೈಲ್ವೆ ಸಂಸ್ಥೆಯಾಗಿರುವ ಟಾಲ್ಗೊ (Tren Articulado Ligero Goicoechea Oriol - TALGO) 1941 ಇಸವಿಯಿಂದಲೇ ಅಸ್ಥಿತ್ವದಲ್ಲಿದೆ. ಇದರ ಕೇಂದ್ರ ಕಚೇರಿ ಸ್ಪೇನ್‌ನ ಮ್ಯಾಡ್ರಿಡ್ ನಲ್ಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ರಾಜಧಾನಿ ಮತ್ತು ಶತಾಬ್ದಿ ರೈಲಿನಲ್ಲಿರುವ ಲಿಂಕ್ ಹಾಫ್ಮನ್ ಬುಶ್ (Linke Hofmann Busch) ಬೋಗಿಗಳನ್ನು ನೂತನ ಐಷಾರಾಮಿ ಟಾಲ್ಗೊ ಕೋಚ್ ಗಳು ಬದಲಾಯಿಸಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಹಿರಿಯ ರೈಲ್ವೆ ಅಧಿಕಾರಿಗಳ ಪ್ರಕಾರ ಲಿಂಕ್ ಹಾಫ್ಮನ್ ಬುಶ್ ಕೋಚ್ ಗಳ ನಿರ್ಮಾಣಕ್ಕೆ ಸರಾಸರಿ 2.75 ಕೋಟಿ ರುಪಾಯಿಗಳಷ್ಟು ವ್ಯಯವಾಗುತ್ತದೆ. ಅದೇ ಹೊತ್ತಿಗೆ ನೂತನ ಟಾಲ್ಗೊ ಬೋಗಿಗಳ ನಿರ್ಮಾಣಕ್ಕೆ 1.7 ಕೋಟಿ ರುಪಾಯಿಗಳಷ್ಟೇ ತಗುಲಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಪ್ರಸ್ತುತ ಗಂಟೆಗೆ 85 ಕೀ.ಮೀ. ವೇಗದಲ್ಲಿ ಸಂಚರಿಸುವ ಶತಾಬ್ದಿ ಮತ್ತು ರಾಜಧಾನಿ ರೈಲುಗಳಿಗೆ ದೆಹಲಿಯಿಂದ ಮುಂಬೈ ತಲುಪಲು 17 ತಾಸುಗಳಷ್ಟು ಸಮಯ ಬೇಕಾಗುತ್ತದೆ. ಇದು ಟಾಲ್ಗೊ ರೈಲುಗಳು ಆಗಮನದೊಂದಿಗೆ 12 ತಾಸಿಗಳಿಗೆ ಇಳಿಕೆಯಾಗಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಪ್ರತಿಯೊಂದು ವೈಯಕ್ತಿಕ ಸೀಟುಗಳಲ್ಲೂ ಫೂಟ್ ರೆಸ್ಟ್, ರೀಡಿಂಗ್ ಲೈಟ್ಸ್, ಆಡಿಯೋ ಮತ್ತು ಮನರಂಜನೆಗಾಗಿ ವಿಡಿಯೋ ಮಾನಿಟರ್ ವ್ಯವಸ್ಥೆಗಳನ್ನು ಒದಗಿಸಲಾಗುವುದು.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಭಾರತದಂತಹ ಉಷ್ಣ ವಲಯದಲ್ಲಿ ತಾಪಮಾನ 50 ಡಿಗ್ರಿ ದಾಟಿದರೂ ಟಾಲ್ಗೊ ರೈಲಿನೊಳಗಡೆ 20 ಡಿಗ್ರಿ ತಾಪಮಾನ ಕಾಯ್ದುಕೊಳ್ಳಲು ಸಾಧ್ಯವಾಗಿರುವುದು ಇದರ ತಂತ್ರಜ್ಞಾನಕ್ಕೆ ಹಾಟ್ಸಪ್ ಹೇಳಲೇಬೇಕಾಗುತ್ತದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇನ್ನು ಬೇಕಾದಲ್ಲಿ ಸಂಚಾರ ವೇಳೆಯಲ್ಲೇ ಪ್ರಯಾಣಿಕರಿಗಾಗಿ ಸ್ನಾನ ಗೃಹ ಮತ್ತು ಇನ್ ಹೌಸ್ ರೆಸ್ಟೋರೆಂಟ್ ವ್ಯವಸ್ಥೆಗಳನ್ನು ಒದಗಿಸಲಾಗುವುದು.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಇಷ್ಟೆಲ್ಲ ಆದರೂ ಕಡಿಮೆ ವೆಚ್ಚದ ಕಾರಣಕ್ಕಾಗಿ ಭಾರತೀಯ ರೈಲ್ವೆಯನ್ನು ಆಶ್ರಿಯಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬಕ್ಕೆ ನೂತನ ಯೋಜನೆಯು ಭಾರಿ ಹೊಡೆಯನ್ನುಂಟು ಮಾಡುವ ಸಾಧ್ಯತೆಯಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಹಗುರ ಭಾರದ ರೈಲುಗಳಾಗಿರುವುದಿಂದ ಕಡಿದಾದ ತಿರುವಿನಲ್ಲೂ ಅತ್ಯುತ್ತಮ ವೇಗವನ್ನು ಕಾಪಾಡಿಕೊಳ್ಳಲು ಟಾಲ್ಗೊ ರೈಲುಗಳಿಗೆ ಸಾಧ್ಯವಾಗಲಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ಒಟ್ಟಿನಲ್ಲಿ 75ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಸೇವೆಯಲ್ಲಿದ್ದುಕೊಂಡು ಉತ್ತಮ ಹೆಸರು ಕಾಪಾಡಿಕೊಂಡಿರುವ ಸ್ಪೇನ್ ನ ಟಾಲ್ಗೊ ರೈಲುಗಳು ತಲೆಮಾರಿಂದ ತಲೆಮಾರಿಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದ್ದು, ಈಗ ಭಾರತೀಯ ರೈಲ್ವೆಯಲ್ಲೂ ಮೋಡಿ ಮಾಡುವ ಭರವಸೆಯನ್ನಿಟ್ಟುಕೊಂಡಿದೆ.

ಸ್ಪೇನ್‌ನ ಹೈ ಸ್ಪೀಡ್ ಟಾಲ್ಗೊ ರೈಲುಗಳು ಭಾರತಕ್ಕೆ

ನಿಮ್ಮ ಮಾಹಿತಿಗಾಗಿ, 2014 ರೈಲ್ವೆ ಬಜೆಟ್ ನಲ್ಲಿ ಮೈಸೂರಿನಿಂದ ಬೆಂಗಳೂರು ಹಾದಿಯಾಗಿ ಚೆನ್ನೈ ವರೆಗಿನ 495 ಕೀ.ಮೀ. ಉದ್ದದ 160 ಕೀ.ಮೀ. ವೇಗದಲ್ಲಿ ಸಂಚರಿಸುವ ಹೈ ಸ್ಪೀಡ್ ರೈಲು ಯೋಜನೆಗೂ ಅನುಮೋದನೆ ದೊರಕಿತ್ತು. ಆದರೆ ಈ ಕನಸು ಯಾವಾಗ ನನಸಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇವನ್ನೂ ಓದಿ...

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು

ಇವನ್ನೂ ಓದಿ...

'ಗತಿಮಾನ್ ಎಕ್ಸ್‌ಪ್ರೆಸ್' ಸೆಮಿ ಬುಲೆಟ್ ರೈಲಿನ ವಿಶಿಷ್ಟತೆಗಳೇನು?

Most Read Articles

Kannada
Read more on ಭಾರತ india
English summary
High Speed Train Coaches For India; Does Your City Get It?
Story first published: Wednesday, April 27, 2016, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X