ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

Written By:

ಇಡೀ ವಾಹನ ಜಗತ್ತನ್ನು ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಸರಿ ಸುಮಾರು ಮೂರು ದಶಕಗಳ ಬಳಿಕ ತಮ್ಮ ಕಳುವಾದ ಕಾರನ್ನು ಅಮೆರಿಕ ಮೂಲದ ವ್ಯಕ್ತಿಯೊಬ್ಬರು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿರುವುದು ವಾಹನ ಪ್ರೇಮಿಗಳಲ್ಲಿ ಅತೀವ ಸಂತಸಕ್ಕೆ ಕಾರಣವಾಗಿದೆ.

ಮಿಸಿಸಿಪ್ಪಿನ ಕೊಲಬಂಸ್ ಮೂಲದ ಜಾರ್ಜ್ ಟ್ಯಾಲಿ ಎಂಬವರೇ ಈ ಅದೃಷ್ಟ ವ್ಯಕ್ತಿ. ಬರೋಬ್ಬರಿ 33 ವರ್ಷಗಳ ಹಿಂದೆ ಅಂದರೆ ತಮ್ಮ 38ರ ಹರೆಯದಲ್ಲಿ ಬೆಳ್ಳಿ ಬಣ್ಣದ ಷೆವರ್ಲೆ ಕಾರ್ವೆಟ್ ಸ್ಪೋರ್ಟ್ಸ್ ಕಾರೊಂದನ್ನು ಜಾರ್ಜ್ ಖರೀದಿಸಿದ್ದರು. ರೋಚಕ ಕಥೆ ಚಿತ್ರ ಪುಟಗಳಲ್ಲಿ ಮುಂದುವರಿಯುವುದು...

To Follow DriveSpark On Facebook, Click The Like Button
ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

1979ನೇ ಇಸವಿಯ ಜುಲೈ ತಿಂಗಳಲ್ಲಿ ಖರೀದಿಸಿದ್ದ ಷೆವರ್ಲೆ ಕಾರ್ವೆಟ್ ಸ್ಪೋರ್ಟ್ಸ್ ಕಾರು ಡೆಟ್ರಾಯ್ಟ್ ಪ್ರದೇಶದಲ್ಲಿ ಕಳ್ಳತನವಾಗಿತ್ತು.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಇದರಿಂದಾಗಿ ಸಾಕಷ್ಟು ಬೇಸರಕ್ಕೀಡಾಗಿದ್ದ ಜಾರ್ಜ್, ಎಂದಿನಂತೆ ತಮ್ಮ ನಿತ್ಯ ಜೀವನದಲ್ಲಿ ತೊಡಗಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕನ್ ಮೋಟರಿಂಗ್ ಸಂಸ್ಥೆಯಿಂದ ಬಂದ ದೂರವಾಣಿ ಕರೆಯು ಅವರನ್ನು ನಿಜಕ್ಕೂ ಆಶ್ಚರ್ಯ ಚಕಿತಗೊಳಿಸಿತ್ತು.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಕಳುವಾದ ತಮ್ಮ ಕಾರು ಮರಳಿ ಪಡೆಯಲಾಗಿದೆ ಎಂಬ ಮಾತು ಕೇಳಿದ ಬಳಿಕ 71ರ ಹರೆಯದ ಜಾರ್ಜ್ ಅವರಲ್ಲಿ ಮತ್ತೆ ಮರು ಜೀವ ತುಂಬಿಕೊಂಡಿತ್ತು. ನಾನು ಕಾರ್ವೆಟ್ ಕಾರುಗಳನ್ನು ತುಂಬಾನೇ ಇಷ್ಟಪಡುತ್ತೇನೆ. ಅದು ಚೆಲುವೆಯಂತಹ ನೋಟ ಹೊಂದಿರುತ್ತದೆ ಎಂದು ತಮ್ಮ ಕಾರನ್ನು ವರ್ಣಿಸಿದ್ದಾರೆ.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

1981ನೇ ಇಸವಿಯಲ್ಲೇ ಪೊಲೀಸ್ ದೂರು ದಾಖಲಿಸಿದರೂ ಯಾವುದೇ ಫಲವುಂಟಾಗಲಿಲ್ಲ. ಆದರೆ ಶಂಕಿತ ವ್ಯಕ್ತಿಯೊಬ್ಬರು 1979ರ ಕಾರ್ವೆಟ್ ಕಾರನ್ನು ಮತ್ತೆ ಅದೇ ಗುರುತಿನ ನಂಬರ್‌ನಿಂದ ದಾಖಲಾತಿ ಮಾಡುವ ಪ್ರಯತ್ನದ ವೇಳೆ ಪೊಲೀಸ್ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇದು ಜಾರ್ಜ್ ಕಾರು ಮರಳಿ ಪಡೆಯುವಲ್ಲಿ ಸಹಕಾರಿಯಾಗಿದೆ.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಕಳ್ಳತನವಾದ ವೇಳೆ ಎರಡರ ಹರೆಯದಷ್ಟೇ ಆಗಿದ್ದ ಕಾರ್ವೆಟ್ ಕಾರೀಗ 47,000 ಮೈಲ್ ದೂರವನ್ನು ಕ್ರಮಿಸಿದೆ. ಹಾಗಿದ್ದರೂ 33 ವರ್ಷಗಳ ಬಳಿಕವೂ ಉತ್ತಮ ನಿರ್ವಹಣೆಯನ್ನು ಕಾಯ್ದುಕೊಂಡಿರುವುದು ಕಾರಿನ ಸಾಮರ್ಥ್ಯವನ್ನು ನಿರೂಪಿಸುತ್ತಿದೆ.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಕಾರ್ವೆಟ್ ಸ್ಪೋಟ್ಸ್ ಕಾರು ಕಳ್ಳತನವಾದ ಬಳಿಕ ಇದರ ಬೇಸರ ನೀಗಿಸಿಕೊಳ್ಳಲು ನಾಲ್ಕು ಇಂತಹ ಕಾರ್ವೆಟ್ ಮಾದರಿಗಳನ್ನು ಜಾರ್ಜ್ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ತಮ್ಮ ಕಳವಾದ ಕಾರಿಗೆ ವಿಮಾ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿದ್ದರು.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಸದ್ಯ ತಮ್ಮ ಮಾಜಿ ಉದ್ಯೋಗಿ ಕೂಡಾ ಆಗಿರುವ ಜಾರ್ಜ್ ಅವರಿಗೆ ಕಾರು ಹಿಂತಿರುಗಿಸುವಲ್ಲಿ ಸಾಧ್ಯವಾಗಿರುವುದಕ್ಕೆ ಜನರಲ್ ಮೋಟಾರ್ಸ್ ಸಂಸ್ಥೆಯು ಸಹ ಹರ್ಷ ವ್ಯಕ್ತಪಡಿಸಿದೆ.

ಕಳುವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ಕಾರ್ವೆಟ್ ಕಾರಿನ ಆಕರ್ಷಕ ನೋಟ

ಕಳವಾದ ಕಾರು 33 ವರ್ಷಗಳ ಬಳಿಕ ಮಾಲಿಕನ ಮಡಿಲಿಗೆ

ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ

 

English summary
A man finds his stolen Chevrolet Corvette after 33 years. Good things come to those who wait. What does he do with his 33 year old Corvette? Read the story to find out more.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark