ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

Written By:

ವಿಮಾನ ನಿಲ್ದಾಣ ಅಥವಾ ಸೇನೆಯ ವಿಶೇಷ ಸಜ್ಜೀಕರಿಸಿದ ರನ್ವೇಗಳಲ್ಲಿ ಯುದ್ಧ ವಿಮಾನ ಇಳಿಯುವುದು ಸಾಮಾನ್ಯ. ಆದರೆ ಇದೀಗ ಹೆದ್ದಾರಿಯೊಂದರಲ್ಲಿ ಫೈಟರ್ ಜೆಟ್ ಗಳನ್ನು ಇಳಿಸುವ ಮೂಲಕ ಭಾರತೀಯ ವಾಯುಪಡೆ ಹೊಸ ದಾಖಲೆ ಮಾಡಿದೆ. ಯುದ್ಧದಂತಹ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಯುದ್ಧ ವಿಮಾನಗಳನ್ನು ಇಳಿಸುವುದು ಭಾರತೀಯ ವಾಯುಸೇನೆಯ ಯೋಜನೆಯಾಗಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಉತ್ತರ ಪ್ರದೇಶದಲ್ಲಿ ಹಾದು ಹೋಗುವ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್‌ವೇ ಹೆದ್ದಾರಿಯನ್ನು ರೋಡ್ ರನ್ವೇಯಾಗಿ ಪರಿವರ್ತಿಸಲಾಗಿದೆ. ಇದರಂತೆ ಪ್ರಾಯೋಗಿಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಭಾರತೀಯ ವಾಯುಸೇನೆಯ ಎಂಟು ಯುದ್ಧ ವಿಮಾನಗಳು ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಗ್ರಾ-ಲಕ್ನೋ ರೋಡ್ ರನ್ವೇಯಲ್ಲಿ ಕಸರತ್ತು ನಡೆಸಲಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ದೇಶದ ಅತಿ ಉದ್ದದ ಹೆದ್ದಾರಿಗಳಲ್ಲಿ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇ ಒಂದಾಗಿದೆ. 3.3 ಕೀ.ಮೀ. ಉದ್ದದ ವರೆಗೂ ಸಿದ್ಧ ಪಡಿಸಲಾದ ರೋಡ್ ರನ್ವೇಯನ್ನು ನವೆಂಬರ್ 21ರಂದು ತೆರೆದುಕೊಳ್ಳಲಾಗುವುದು.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

302 ಕೀ.ಮೀ. ಉದ್ದದ ಈ ಹಸಿರು ಎಕ್ಸ್ ಪ್ರೆಸ್ ವೇಯ ಕಾಮಗಾರಿಯನ್ನು 13,200 ಕೋಟಿ ರುಪಾಯಿ ವೆಚ್ಚದಲ್ಲಿ ಕೇವಲ 23 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿತ್ತು. ಇದು ಯಮುನಾ ಎಕ್ಸ್ ಪ್ರೆಸ್ ವೇ ನಿಂದ ಆಗ್ರಾದ ತಾಜ್ ಮಹಲ್ ನಗರಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಅತಿಯಾದ ಮಂಜು ಮತ್ತು ರಸ್ತೆ ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಆಟೋಮ್ಯಾಟಿಕ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಹಾಗೆಯೇ ಗಂಗಾ ನದಿಯ ಮೇಲ್ಗಡೆಯಾಗಿ ಎಂಟು ಲೇನ್ ಗಳ ಸೇತುವೆಯಿಂದಲೂ ಬಂಧಿಸಲಾಗಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಭಾರತೀಯ ವಾಯುಸೇನೆಯ ಪ್ರಮುಖ ಯುದ್ಧ ವಿಮಾನಗಳಾದ ಸುಖೋಯ್ ಸು-30ಎಂಕೆಐ ಮತ್ತು ಅಣ್ವಸ್ತ್ರ ಸಾಮರ್ಥ್ಯದ ದಸ್ಸಾಲ್ಟ್ ಮಿರಾಜ್ 2000 ಆಗ್ರಾ-ಲಕ್ನೋ ಹೈವೇಯಲ್ಲಿ ಇಳಿಯಲಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಸದ್ಯಕ್ಕೆ ಜರ್ಮನಿ, ಪೊಲೆಂಡ್, ಸ್ವಿಡನ್, ದಕ್ಷಿಣ ಕೊರಿಯಾ, ತೈವಾನ್, ಫಿನ್ ಲ್ಯಾಂಡ್, ಸ್ವಿಜರ್ಲೆಂಡ್, ಸಿಂಗಾಪುರ ಮತ್ತು ಪಾಕಿಸ್ತಾನದಂತಹ ರಾಷ್ಟ್ರಗಳು ರೋಡ್ ರನ್ವೇಗಳನ್ನು ಹೊಂದಿದೆ. ಇದು ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗಲು ನೆರವಾಗಲಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಫ್ರಾನ್ಸ್ ನ ದಸ್ಸಾನ್ ಎವಿಯೇಷನ್ ನಿರ್ಮಿಸಿರುವ ಮಿರಾಜ್ 2000 ಒಂದು ಸಿಂಗಲ್ ಎಂಜಿನ್ ನಿಯಂತ್ರಿತ ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಭಾರತದಲ್ಲಿ ದಸ್ಸಾಲ್ಟ್ ಎಂ2000ಎಚ್, ದಸ್ಸಾಲ್ಟ್ ಎಂ2000ಟಿಎಚ್ ಮತ್ತು ದಸ್ಸಾಲ್ಟ್ ಮಿರಾಜ್ 2000ಐ/ಟಿಐ ಆವೃತ್ತಿಗಳು ಸೇವೆ ಸಲ್ಲಿಸುತ್ತಿದೆ. ಹಿಮಾಲಯದಂತಹ ಎತಿ ಎತ್ತರ ಪರ್ವತ ಶ್ರೇಣಿಗಳಲ್ಲಿ ಮಿರಾಜ್ ಸೇವೆಯು ಅತ್ಯಂತ ನಿರ್ಣಾಯಕವೆನಿಸುತ್ತದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಫ್ರಾನ್ಸ್ ನಿರ್ಮಿತ ದಸ್ಸಾನ್ ಮಿರಾಜ್ 2000 ನಾಲ್ಕನೇ ತಲೆಮಾರಿನ ಬಹುಪಾತ್ರಧಾರಿ ಯುದ್ಧ ವಿಮಾನವಾಗಿದೆ. ಇದು ಗಂಟೆಗೆ 2336 ಕೀ.ಮೀ. ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

1980ರ ದಶಕದಲ್ಲಿ ಭಾರತೀಯ ವಾಯುಸೇನೆಯು 49ರಷ್ಟು ಮಿರಾಜ್ 2000 ಹಗುರ ಭಾರದ ಯುದ್ಧ ವಿಮಾನಗಳನ್ನು ಖರೀದಿಸಿತ್ತು. 2004ರಲ್ಲಿ ಮತ್ತಷ್ಟು 10 ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿತ್ತು.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಪರಿಷ್ಕೃತ ಆರ್ ಡಿಎಂ 7 ರಾಡಾರ್ ಗಳಿಂದ ಕೂಡಿದ ಮಿರಾಜ್ 2000 ವಿಮಾನಕ್ಕೆ ಭಾರತೀಯ ವಾಯು ಸೇನೆಯು 'ವಜ್ರ' ಎಂಬುದಾಗಿ ಹೆಸರಿಸಿತ್ತು. ಕಾರ್ಗಿಲ್ ಯುದ್ಧ ಕಾಲಘಟ್ಟದಲ್ಲಿ ಹಿಮಾಲಯದ ಎತ್ತರದ ವಾಯು ಪ್ರದೇಶದಲ್ಲಿ ವಜ್ರ ವಿಮಾನವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಸುಲಭ ನಿರ್ವಹಣೆ ಮತ್ತು ಅತಿ ಎತ್ತರದ ವಾಯು ಪ್ರದೇಶದಲ್ಲಿ ಯುದ್ಧ ನಡೆಸುವ ಸಾಮರ್ಥ್ಯವು ಭಾರತೀಯ ವಾಯುಸೇನೆಯಲ್ಲಿ ಮಿರಾಜ್ ಯಶಸ್ಸಿಗೆ ಕಾರಣವಾಗಿತ್ತು.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಅತ್ತ ವಾಯು ಮೇಲ್ಮೆಯಲ್ಲಿ ಹಿರಿಮೆಯನ್ನು ಎತ್ತಿ ಹಿಡಿದಿರುವ ಸುಖೋಯ್ ಸು-3- ಎಂಕೆಐ ಟ್ವಿನ್ ಜೆಟ್ ಯುದ್ಧ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪರವಾನಗಿಯಲ್ಲಿ ರಷ್ಯಾ ಅಭಿವೃದ್ಧಿಪಡಿಸಿತ್ತು.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಭಾರತ ವಾಯುಪಡೆಯನ್ನು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸುಖೋಯ್ 30 ಎಂಕೆಐ ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸುವಷ್ಟು ಶಕ್ತವಾಗಿದೆ. 2002ನೇ ಇಸವಿಯಿಂದಲೇ ಸೇವೆಯಲ್ಲಿರುವ ಸುಖೋಯ್ ವ್ಯೋಮಸೇನೆಯನ್ನು ಬಲಿಷ್ಠಗೊಳಿಸಿದೆ.

ಆಗ್ರಾ-ಲಕ್ನೋ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯ 8 ಯುದ್ಧ ವಿಮಾನಗಳ ಭೂಸ್ಪರ್ಶ!

ಅತ್ಯಾಧುನಿಕ ಯುದ್ಧ ತಂತ್ರಗಳೊಂದಿಗೆ ಭಾರತೀಯ ವಾಯುಸೇನೆಯನ್ನು ಬಲಿಷ್ಠವಾಗಿಸಿರುವ ಸುಖೋಯ್ 30 ಎಂಕೆಐ ಯುದ್ಧ ವಿಮಾನಗಳು ಗಂಟೆಗೆ 2100 ಕೀ.ಮೀ. ವೇಗದಲ್ಲಿ 3000 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

Read more on ಭಾರತ india
English summary
Sukhoi, Mirage fighter jet to land on Agra-Lucknow expressway
Story first published: Monday, November 21, 2016, 11:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark