1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

Written By:

ಒಂದನೇ ಲೋಕ ಮಹಾಯುದ್ಧದಲ್ಲಿ ಸಂಭವಿಸಿದ ಸಾವು-ನೋವುಗಳ ಸಂಖ್ಯೆಗೆ ನಿಖರ ಲೆಕ್ಕಾಚಾರಗಳಿಲ್ಲ. ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ಅಮೂಲ್ಯ ಯುದ್ಧ ಹಡಗುಗಳನ್ನು ಕಳೆದುಕೊಂಡಿದ್ದವು. ಹೀಗೆ ಜ್ಯುಟ್ಲಾಂಡ್ ಯುದ್ಧದಲ್ಲಿ ನಷ್ಟ ಸಂಭವಿಸಿದ ಬ್ರಿಟನ್ ಹಡಗಿಗೆ ಡಿಜಿಟಲ್ ತಂತ್ರಗಾರಿಕೆಯ ಮೂಲಕ ಮರುಜೀವ ತುಂಬಲಾಗಿದೆ.

1916ನೇ ಇಸವಿಯಲ್ಲಿ ನಡೆದ ಜ್ಯುಟ್ಲಾಂಡ್ ಸಮರದಲ್ಲಿ ಬ್ರಿಟಿಷ್ ಹಡಗು ಸಂಪೂರ್ಣವಾಗಿ ಭಗ್ನಗೊಂಡಿತ್ತು. ಈಗ ಒಂದು ಶತಮಾನದ ಬಳಿಕ ಸ್ಮರಣಾರ್ಥವಾಗಿ ಹಡಗಿಗೆ ಡಿಟಿಜಲ್ ಟಚ್ ನೀಡಲಾಗಿದೆ.

To Follow DriveSpark On Facebook, Click The Like Button
1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

1916ರ ಒಂದನೇ ಮಹಾಯುದ್ಧ ಕಾಲಘಟ್ಟದಲ್ಲಿ ಪೂರ್ವ ಯಾರ್ಕ್ ಶೈರ್ ನಲ್ಲಿ ಮೇ 31ರಿಂದ 1ರ ವರೆಗೆ ನಡೆದ ನಾವಿಕ ಸಮರದಲ್ಲಿ ಸೋಲನ್ನು ಒಪ್ಪಿಕೊಂಡ ಎಚ್ ಎಂಎಶ್ ಫಾಲ್ ಮೌತ್ ಹಡಗು ಬಳಿಕ ಆಗಸ್ಟ್ 20ರಂದು ಸಂಪೂರ್ಣವಾಗಿ ಮುಳುಗಡೆಗೊಂಡಿತ್ತು.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಈಗ ಭರ್ತಿ 100 ವರ್ಷಗಳ ಬಳಿಕ ಇಂಗ್ಲೆಂಡ್ ನ ಸರ್ಕಾರಿ ಪರಂಪರೆಯ ಕಾರ್ಯಭಾರವು ತ್ರಿಡಿ ತಂತ್ರಜ್ಞಾನದ ನೆರವಿನೊಂದಿಗೆ ನಷ್ಟವಾದ ಹಡಗಿಗೆ ಮರುಜೀವ ತುಂಬಿದೆ.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಸಂಪೂರ್ಣವಾಗಿ ಭಗ್ನಾವಶೇಷಗೊಂಡಿರುವ ಹಡಗನ್ನು ಕೂಲಂಕುಷವಾಗಿ ಅಧ್ಯಯನ ಮಾಡುವ ಮೂಲಕ ಬಹಳ ಸೂಕ್ಷ್ಮವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಒಂದನೇ ಲೋಕ ಮಹಾಯುದ್ಧದಲ್ಲಿ ಜರ್ಮನಿಯ ಯು ಬೋಟ್ ಗಳಿಗೆ ಶರಣಾಗಿರುವ ಎಚ್ ಎಂಎಸ್ ಫಾಲ್ ಮೌತ್ ಹಡಗನ್ನು ಇಂಪಿರಿಯಲ್ ವಾರ್ ಮ್ಯೂಸಿಯಂನಲ್ಲಿ ಡಿಜಿಟಲ್ ತ್ರಿಡಿ ಚಿತ್ರಗಳ ಸಹಾಯದೊಂದಿಗೆ ಮರು ರಚಿಸಲಾಗಿದೆ.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಚರಿತ್ರೆಯ ಪ್ರಾಮುಖ್ಯತೆ ಬಗ್ಗೆ ಹೆಚ್ಚಿನ ಗಮನ ಹರಿಸಿರುವ ಇಂಗ್ಲೆಂಡ್, ಅಧಿಕೃತ ದಾಖಲೆ, ಚಿತ್ರಗಳನ್ನು ಮರು ಕಲೆ ಹಾಕಲು ಹೆಚ್ಚು ಉತ್ಸಾಹವನ್ನು ತೋರಿದೆ.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಜ್ಯುಟ್ಲಾಂಡ್ ನಾವಿಕ ಸಮರದಲ್ಲಿ ಬ್ರಿಟನ್ ನ 6,094 ಹಾಗೂ ಜರ್ಮನಿಯ 2551 ನಾವಿಕರು ಸಾವನ್ನಪ್ಪಿದ್ದರು. ಇತಿಹಾಸ ಪುಟಗಳಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿ ಇದನ್ನು ಪರಿಗಣಿಸಲಾಗಿದೆ.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಬ್ಯಾಟಲ್ ಆಫ್ ಜ್ಯೂಟ್ಲಾಂಡ್ ನಲ್ಲಿ 250ರಷ್ಟು ಯುದ್ಧ ಹಡಗುಗಳು ಭಾಗಿಯಾಗಿದ್ದವು. ಇದರಲ್ಲಿ ಬ್ರಿಟನ್ ನ ಎಚ್ ಎಂಎಸ್ ಫಾಲ್ ಮೌತ್ ಸಹ ಒಂದಾಗಿತ್ತು.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಅಧಿಕೃತ ದಾಖಲೆಗಳ ಪ್ರಕಾರ ಎಚ್ ಎಂಎಸ್ ಫಾಲ್ ಮೌತ್ ಸೇರಿದಂತೆ 25ರಷ್ಟು ಹಡಗುಗಳು ಜ್ಯೂಟ್ಲಾಂಡ್ ನಾವಿಕ ಸಮರದಲ್ಲಿ ಸಮುದ್ರದಲ್ಲಿ ಮುಳಗು ಹೋಗಿದ್ದವು.

1ನೇ ಲೋಕ ಮಹಾಯುದ್ಧದ ಐತಿಹಾಸಿಕ ಹಡಗಿಗೆ ಮರುಜೀವ

ಡಿಜಿಟಲ್ ತ್ರಿಡಿ ಮಾದರಿ ಮತ್ತು ಕಂಪ್ಯೂಟರ್ ದೃಶ್ಯೀಕರಣ ಮರೆತು ಹೋದ ಐತಿಹಾಸಿಕ ಹಡಗಿನ ಸ್ಮರಣೆಯ ಜೊತೆಗೆ ತಿಳುವಳಿಕೆ ಮೂಡಿಸಲಿದೆ.

English summary
Sunken ship HMS Falmouth gets virtual restoration
Story first published: Thursday, August 25, 2016, 11:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark