ನಮ್ಮ ರಾಜಕಾರಣಿಗಳಿಗೆ ಈ ಗಾಡಿ ಬೆಸ್ಟ್; ರಹಸ್ಯ ವಿನ್ಯಾಸ

Written By:

ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ರಾಜಕಾರಣಿಗಳು ದುಬಾರಿ ವೆಚ್ಚದ ವಾಹನಗಳನ್ನು ಬಳಕೆ ಮಾಡುತ್ತಾರೆ ಎಂಬ ಅಪವಾದವಿದೆ. ಈ ಮೂಲಕ ಆಡಂಬರದ ಜೀವನ ಶೈಲಿಯನ್ನು ಅನುಸರಿಸುತ್ತಾರೆ.

ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲೂ ಇದು ಪ್ರತಿಬಿಂಬವಾಗಿತ್ತು. ಕೆಲವು ನಾಯಕರು ಐಷಾರಾಮಿ ಕಾರುಗಳಲ್ಲಿ ಮತ ಪ್ರಚಾರ ಹಮ್ಮಿಕೊಂಡಿದ್ದರೆ ಇನ್ನು ಕೆಲವರು ಹೆಲಿಕಾಪ್ಟರ್ ಮೂಲಕ ವಾಯು ಮಾರ್ಗವನ್ನು ತಮ್ಮ ಪ್ರಚಾರಕ್ಕೆ ಚುರುಕು ಮುಟ್ಟಿಸಿದ್ದರು.

ಇರಲಿ ಬಿಡಿ ಇವೆಲ್ಲ ಹಳೆ ವಿಚಾರ. ಚುನಾವಣಾ ಪ್ರಚಾರವಂತೂ ಮುಗಿದು ನೂತನ ಸಿಎಂ ಆಯ್ಕೆ ಕೂಡಾ ಆಗಿ ಹೋಗಿದೆ. ಹಾಗಿರುವಾಗ ಮತ್ತದೇ ವಿಚಾರವನ್ನು ಯಾಕೆ ಎತ್ತಿ ಹಿಡಿಯುತ್ತಾರೆ ಎಂದು ಗಾಬರಿಯಾಗಬೇಡಿರಿ.

ಯಾಕೆಂದರೆ ನಮ್ಮ ರಾಜಕಾರಣಿಗೆ ಹೊಂದಿಕೆಯಾಗುವ ಮತ್ತೊಂದು ಕಾರನ್ನು ನಾವಿಂದು ಪರಿಚಯಿಸಲಿದ್ದೇವೆ. ಅದುವೇ ಫೋಕ್ಸ್‌ವ್ಯಾಗನ್ ಡಬಲ್ ಬ್ಯಾಕ್ ಟಿ5 ಕ್ಯಾಂಪರ್ ವ್ಯಾನ್. ಮೊದಲ ನೋಟಕ್ಕೆ ಸಾಮಾನ್ಯ ಗಾಡಿಯಂತೆ ಕಾಣಿಸುತ್ತಿರುವ ಈ ಮೋಟಾರ್ ಹೋಮ್ ರಹಸ್ಯ ವಿನ್ಯಾಸವನ್ನು ಪಡೆದುಕೊಂಡಿರುವುದು ಹೆಚ್ಚಿನ ಕುತೂಹಲ ಸೃಷ್ಟಿ ಮಾಡಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ನೂತನ ಗಾಡಿ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣವೇ...

Take A Tour Of The Practical Doubleback VW Camper

ಸಾಮಾನ್ಯ ಗಾಡಿಯಂತೆ ಕಾಣಿಸಿದರೂ ಇದರಲ್ಲಿ ಥಂಡರ್ ಬರ್ಡ್ ಶೈಲಿಯ ತಂತ್ರಜ್ಞಾನವನ್ನು ಎಂಜಿನಿಯರ್‌ಗಳು ಆಳವಡಿಸಿದ್ದು, ಇದರಿಂದ ಕಾರಿನ ಸ್ಥಳಾವಕಾಶ ಇಮ್ಮಡಿಯಾಗುತ್ತದೆ.

Take A Tour Of The Practical Doubleback VW Camper

ಈ ಮೋಟಾರ್ ಹೋಮ್ ಒಳಭಾಗದಲ್ಲಿ ಐಷಾರಾಮಿ ಸೌಲಭ್ಯಗಳಿದ್ದು, ಐದು ಜನರಿಗೆ ಆರಾಮದಾಯಕವಾಗಿ ಚಲಿಸಬಹುದು. ಇನ್ನು ಇದರಲ್ಲಿ ಮಡಚಬಹುದಾದ ಟೇಬಲ್ ಆಳವಡಿಸಾಗಿದೆ. ಇದರಲ್ಲಿ ಉದ್ದವಾದ ಬೆಡ್ ಸೌಲಭ್ಯವಿದೆ.

Take A Tour Of The Practical Doubleback VW Camper

ಪ್ರಾಯೋಗಿಕವಾಗಿಯೂ ವಿನೋದ ಸಂಚಾರ, ಫ್ಯಾಮಿಲಿ ಪ್ರವಾಸಕ್ಕೆ ಯೋಗ್ಯವಾದ ವ್ಯಾನ್ ಇದಾಗಿದೆ. ಒಂದು ಸ್ವಿಚ್ ಒತ್ತಿದರೆ ಇದರ ಒಳಭಾಗದಲ್ಲಿ ಜೋಡಣೆ ಮಾಡಲಾದ ಭಾಗವು ಸ್ವಯಂಚಾಲಿತವಾಗಿ ಹೊರಗಡೆ ತೆರೆದುಕೊಳ್ಳಲಿದೆ. ಇದಕ್ಕೆ ಸ್ಟಾಂಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಕಾರಣಕ್ಕಾಗಿ ಡಬಲ್ ಬ್ಯಾಕ್ ಎಂದು ಹೆಸರಿಸಲಾಗಿದೆ.

Take A Tour Of The Practical Doubleback VW Camper

ಇನ್ನು ಈ ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಟಿ5 ಕ್ಯಾಂಪರ್ ಮೋಟಾರ್ ಹೋಮ್‌ನಲ್ಲಿ ಮೈಕ್ರೋ ಓವೆನ್, ಸ್ಟೋವ್, ಪ್ರಿಡ್ಜ್ ಸೇರಿದಂತೆ ಅಗತ್ಯ ಸಾಮಾನ್ಯ ಪರಿಕರಗಳನ್ನು ಇಡುವ ವಿಶಾಲವಾದ ಸ್ಥಳಾವಕಾಶವಿದೆ. ಹಾಗೆಯೇ ಬೈಕ್, ಸೈಕಲ್ ಇತ್ಯಾದಿ ವಾಹನಗಳನ್ನು ವಿನೋದ ಸ್ಥಳಕ್ಕೆ ಹೊತ್ತೊಯ್ಯಬಹುದಾಗಿದೆ.

Take A Tour Of The Practical Doubleback VW Camper

ಒಟ್ಟಿನಲ್ಲಿ ಈ ಫೋಕ್ಸ್‌ವ್ಯಾಗನ್ ಕ್ಯಾಂಪರ್ ಐಷಾರಾಮಿ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಿದ್ದರೂ ಭಾರತ ಪ್ರವೇಶ ಯಾವಾಗ ಪಡೆಯಲಿದೆ ಹಾಗೂ ದರದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ದೊರಕಿಲ್ಲ.

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

ಡಬಲ್ ಬ್ಯಾಕ್ ಫೋಕ್ಸ್‌ವ್ಯಾಗನ್ ಕ್ಯಾಂಪರ್

English summary
Take A Tour Of The Practical Doubleback VW Camper. its interior hides a very impressive and secretive design which can double its living space at the touch of a button.
Story first published: Wednesday, May 15, 2013, 16:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark