ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

By Nagaraja

ಕೆಳಗಡೆ ಕೊಟ್ಟಿರುವ ಚಿತ್ರವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೊದಲ ನೋಟಕ್ಕೆ ಇದು ಜಗತ್ತಿನ ಅತ್ಯಂತ ಕೆಟ್ಟ ವಿಮಾನ ದುರಂತಗಳಲ್ಲಿ ಒಂದಾಗಿದೆ ಎಂಬುದಾಗಿ ಗೋಚರಿಸುತ್ತಿದೆಯಲ್ಲವೇ? ಹೌದು, ಮೂರು ಬೋಯಿಂಗ್ ವಿಮಾನಗಳು ಏಕಕಾಲಕ್ಕೆ ನದಿಗೆ ಬಿದ್ದಿರುವ ಘಟನೆ ನಿಮ್ಮನ್ನು ಪದೇ ಪದೇ ಕಾಡಬಹುದು.

ಆದರೆ ಅಲ್ಲಿ ನಿಜಕ್ಕೂ ನಡೆದ ಘಟನೆ ಏನಾಗಿರಬಹುದು? ಇದು ಯಾವುದೇ ವಿಮಾನ ಅಪಘಾತವಲ್ಲ. ಬದಲಾಗಿ ಬೋಯಿಂಗ್ ವಿಮಾನದ ಕವಚವನ್ನು ಹೊತ್ತೊಯ್ಯುತ್ತಿದ್ದ ರೈಲೊಂದು ಹಳಿತಪ್ಪಿದ ಪರಿಣಾಮವಾಗಿ ಬೋಯಿಂಗ್ ವಿಮಾನದ ಮೂರು ಕವಚಗಳು ನದಿಗೆ ಉರುಳಿವೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ? ಹೆಚ್ಚಿನ ವಿವರ ಹಾಗೂ ಎಕ್ಸ್‌ಕ್ಲೂಸಿವ್ ಚಿತ್ರಗಳಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ.

ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

ಪಶ್ಚಿಮ ಅಮೆರಿಕ ಪ್ರಾಂತ್ಯವಾಗಿರುವ ಮೌಂಟನದ ಕ್ಲಾರ್ಕ್ ಫೋರ್ಕ್ ನದಿಯ ಅಸುಪಾಸಿನಲ್ಲಿ ಬೋಯಿಂಗ್ 737 ವಿಮಾನದ ಮೈಕಟ್ಟನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದ ಕಾರಣ ಈ ದುರ್ಘಟನೆ ಸಂಭವಿಸಿದೆ.

ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

ರೈಲಿನ 19 ಬೋಗಿಗಳು ಹಳಿತಪ್ಪಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಇದುವರೆಗೆ ದುರಂತದ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

ಈ ಪೈಕಿ ಮೂರು ಬೋಯಿಂಗ್ 737 ವಿಮಾನದ ಕವಚಗಳು ನೇರವಾಗಿ ನದಿಗೆ ಧುಮುಕಿತ್ತು. ನದಿಯ ನೀರು ಹರಿವು ತೀವ್ರವಾಗಿದ್ದರಿಂದ ರಕ್ಷಣಾ ಸಿಬ್ಬಂದಿಗಳು ಸ್ವಲ್ಪ ಕಷ್ಟಪಡಬೇಕಾಯಿತು.

ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

ಅವಘಡಕ್ಕೀರುವ ಕಾರಣಗಳು ತಿಳಿದು ಬಂದಿಲ್ಲ ಆದರೆ ಮೌಂಟನ ರೈಲ್ ಲಿಂಕ್ ವಕ್ತಾರ ಪ್ರಕಾರ, ಈ ನಿರ್ದಿಷ್ಟ ಪ್ರದೇಶದಲ್ಲಿ ರೈಲು ಸಂಚಾರಕ್ಕೆ ಗರಿಷ್ಠ ಗಂಟೆಗೆ 35 ಮೈಲ್ ವೇಗಮಿತಿ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.

ಹಳಿತಪ್ಪಿದ ರೈಲಿನಿಂದ ನದಿಗೆ ಜಾರಿದ ಬೋಯಿಂಗ್ ವಿಮಾನ ಕವಚ

ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯ ಬಳಿಕ ರೈಲು ಜಾಲವನ್ನು ಪುನರಾರಂಭಿಸಲಾಗಿದೆ ಎಂದವರು ಸ್ಪಷ್ಟಪಡಿಸಿದರು.

Most Read Articles

Kannada
English summary
A train carrying plane fuselages derailed and crashed into the Clark Fork River west of Missoula on July 4th, 2014.
Story first published: Monday, July 7, 2014, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X