ಪುನರ್ಜನ್ಮ ಪಡೆಯಲಿರುವ 'ಟೈಟಾನಿಕ್' ಹಡಗು

Written By:

'ಮುಳುಗಲಾರದ ಹಡಗು' ಎಂದೇ ಖ್ಯಾತಿ ಪಡೆದಿದ್ದ ಟೈಟಾನಿಕ್, 1912ನೇ ಇಸವಿಯಲ್ಲಿ ತನ್ನ ಮೊದಲ ಯಾನದಲ್ಲೇ ಮುಳುಗಿಹೋದ ಬೃಹತ್ ಹಡಗು ದುರಂತದಲ್ಲಿ 1500ರಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದರು. ಜಗತ್ತಿನ ಅತ್ಯಂತ ದೊಡ್ಡ ಹಾಗೂ ವೈಭವೋಪೂರಿತ ಹಡುಗುಗಳಲ್ಲಿ ಅಗ್ರಸ್ಥಾನ ಪಡೆದಿದ್ದ ಟೈಟಾನಿಕ್ ಮಗದೊಮ್ಮೆ ಸಾಗರ ನಿರ್ಗಲ್ಲಿನ ಅಂಚಿಗೆ ತೇಲಾಡಲಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ಈಗಾಗಲೇ ಸಾಗರದಡಿಯನ್ನು ತಲುಪಿರುವ ಟೈಟಾನಿಕ್ ಪುರ್ನಜ್ಮನ ಪಡೆಯುತ್ತಿದೆ ಅಂದರೆ ತಪ್ಪಾಗಲಾರದು.

ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು!

ಇದು ನೈಜ ಟೈಟಾನಿಕ್ ಹಡಗಲ್ಲ. ಬದಲಾಗಿ ಎಲ್ಲ ಅರ್ಥದಲ್ಲೂ ಟೈಟಾನಿಕ್ ಸಾದೃಶವನ್ನು ಪಡೆದುಕೊಳ್ಳಲಿರುವ ನೂತನ ಹಡಗಾಗಿರಲಿದೆ. ಅಂದರೆ ಇದು 'ಟೈಟಾನಿಕ್ II' ಎಂದು ಹೆಸರಿಸಿಕೊಳ್ಳಲಿದೆ. ಪ್ರಸ್ತುತ ಟೈಟಾನಿಕ್ ಹಡಗು ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿ ಹೋಗಿ 101 ವರುಷಗಳೇ ಸಂದಿವೆ. ಆದರೆ ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಚಿತ್ರದ ಮೂಲಕ ಈ ದುರಂತ ಚಿತ್ರಗಳು ನಮ್ಮ ಹೃದಯದಲ್ಲಿ ಮಾಸದೇ ಹಾಗೆಯೇ ಉಳಿದಿದೆ.

To Follow DriveSpark On Facebook, Click The Like Button
ಟೈಟಾನಿಕ್ ಎಕ್ಸ್‌ಟೀರಿಯರ್

ಟೈಟಾನಿಕ್ ಎಕ್ಸ್‌ಟೀರಿಯರ್

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಟೈಟಾನಿಕ್ II 2016ನೇ ಇಸವಿಯಲ್ಲಿ ತನ್ನ ಮೊದಲ ಪಯಣ ಆರಂಭಿಸಲಿದೆ. ಈ ಅತಿದೊಡ್ಡ ಹಡಗು ಇನ್ನಷ್ಟೇ ನಿರ್ಮಾಣ ಹಂತ ತಲುಪಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಕೂಡಾ ಬಿಡುಗಡೆ ಮಾಡಲಾಗಿದೆ.

ಟರ್ಕಿಶ್ ಸ್ನಾನಗೃಹ

ಟರ್ಕಿಶ್ ಸ್ನಾನಗೃಹ

ಅಷ್ಟಕ್ಕೂ ಟೈಟಾನಿಕ್ II ಯಾರು ನಿರ್ಮಿಸುತ್ತಾರೆ ಅಂತೀರಾ? ಹೌದು, ಆಸ್ಟ್ರೇಲಿಯಾದ ಗಣಿಗಾರಿಕೆ ಬಿಲಿಯನೇರ್ ಕ್ಲೈವ್ ಪಾಲ್ಮರ್ (Clive Palmer) ನೇತೃತ್ವದಲ್ಲಿ ಅವರ ಸಂಸ್ಥೆ ಬ್ಲೂ ಸ್ಟಾರ್ ಲೈನ್ ಈ ಅತಿದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿದೆ.

3ನೇ ದರ್ಜೆಯ ಭೋಜನ ಕೊಠಡಿ

3ನೇ ದರ್ಜೆಯ ಭೋಜನ ಕೊಠಡಿ

ವರದಿಗಳ ಪ್ರಕಾರ 2016ರಲ್ಲಿ ಇಂಗ್ಲೆಂಡ್‌ನಿಂದ ನ್ಯೂಯಾರ್ಕ್‌ಗೆ ಪಯಣ ಬೆಳೆಸಲಿರುವ ಈ ಹಡಗಿನಲ್ಲಿ 2,600 ಪ್ರಯಾಣಿಕರು ಹಾಗೂ 9,00ರಷ್ಟು ಸಿಬ್ಬಂದಿಗಳಿರಲಿದ್ದಾರೆ.

3ನೇ ದರ್ಜೆಯ ಕ್ಯಾಬಿನ್

3ನೇ ದರ್ಜೆಯ ಕ್ಯಾಬಿನ್

ಇದು ಎಲ್ಲ ಅರ್ಥದಲ್ಲಿಯೂ ಮುಳುಗಿ ಹೋದ ಟೈಟಾನಿಕ್ ಹಡಗಿಗೆ ಸಾಮತ್ಯೆ ಪಡೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಚರಿತ್ರೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ದುರಂತ ಟೈಟಾನಿಕ್ ಹಡಗಿಗಿಂತ ಭಿನ್ನವಾಗಿ ಬೇಕಾದಷ್ಟು ಜೀವರಕ್ಷಕ ಬೋಟ್‌ಗಳ ಜತೆ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರಲಿದೆ.

ಸ್ಕ್ವಾಷ್ ಅಂಗಣ

ಸ್ಕ್ವಾಷ್ ಅಂಗಣ

ಇಲ್ಲೊಂದು ಗಮನಾರ್ಹ ಅಂಶವೆಂದರೆ ಯಾತ್ರಿಕರು 1920ರ ಕಾಲಘಟ್ಟದ ವೇಷಭೂಷಣ ಧರಿಸಲಿದ್ದಾರೆ. ಅಂದರೆ ಟೈಟಾನಿಕ್ ಹಡಗಿನ ಸ್ಮರಣೆಯನ್ನು ನಾವಿಲ್ಲಿ ನೋಡಬಹುದಾಗಿದೆ.

ಧೂಮಪಾನ ಕೊಠಡಿ

ಧೂಮಪಾನ ಕೊಠಡಿ

ಇನ್ನುಳಿದಂತೆ ಆಧುನಿಕತೆಯ ಭಾಗವಾಗಿ ಅಂತರ್ಜಾಲ ಸೌಲಭ್ಯ, ಟಿವಿ, ಎಸಿ ಹಾಗೂ ಎಲ್ಲ ರೀತಿಯ ಆಡಂಬರದ ವೈಶಿಷ್ಟ್ಯಗಳು ಇದರಲ್ಲಿ ಅಡಗಿರಲಿದೆ ಎಂದು ಪಾಲ್ಮರ್ ತಿಳಿಸುತ್ತಾರೆ.

ರೆಡಿಯೋ ಕೋಣೆ

ರೆಡಿಯೋ ಕೋಣೆ

ಅಂದ ಹಾಗೆ ಟಿಕೆಟ್ ದರ ಎಷ್ಟು ಎಂಬುದು ಇನ್ನಷ್ಟೇ ಪ್ರಕಟವಾಗಬೇಕಾಗಿದೆ. ವರದಿಗಳ ಪ್ರಕಾರ ಒಂದು ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿರಲಿದೆ ಎಂಬುದು ತಿಳಿದು ಬಂದಿದೆ. ಒಟ್ಟಿನಲ್ಲಿ ತಮ್ಮ ರಜಾ ಸವಿಯಲು ಬಯಸುವುವರಿಗೆ ಇಂದೊಂದು ಅತ್ಯುತ್ತಮ ಅವಕಾಶವಾಗಿರಲಿದೆ.

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಈಜುಕೊಳ

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಲಿಫ್ಟ್

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಲಿಫ್ಟ್ 2

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಜಿಮ್

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಗ್ರಾಂಡ್ ಸ್ಟೈರ್‌ಕೇಸ್ (ಮೆಟ್ಟಿಲು)

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಗ್ರಾಂಡ್ ಸ್ಟೈರ್‌ಕೇಸ್ ಡೋಮ್ (ಮಹಲು)

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಪ್ರಥಮ ದರ್ಜೆಯ ಭೋಜನ ಕೊಠಡಿ

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಪ್ರಥಮ ದರ್ಜೆ ಕ್ಯಾಬಿನ್

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಕೆಫೆ ಪರಿಸಿಯೆನ್

ಪುನರ್ಜನ್ಮ ಪಡೆಯಲಿದೆ ಮುಳುಗಲಾರದ 'ಟೈಟಾನಿಕ್' ಹಡಗು

ಬ್ರಿಡ್ಜ್ ವೀಲ್ ಹೌಸ್

English summary
Australian billionaire and tycoon Clive Palmer has formed a second Blue Star Line, which will feature an RMS Titanic replica as its possible flagship.[10]Palmer claims Titanic II will be the safest cruise ship in the world when it sets sail in 2016 from Southampton, England, bound for New York, following the ill-fated Titanic's original planned route.
Story first published: Tuesday, April 1, 2014, 16:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark