ಜಗತ್ತಿನ ಅತಿ ವೇಗವರ್ಧನೆಯ ಅಗ್ರ 10 ಕಾರುಗಳು

By Nagaraja

ವೇಗವನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಸ್ವಲ್ಪನೂ ಎಡವಟ್ಟಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ರೇಸ್ ಟ್ರ್ಯಾಕ್‌ಗಳಲ್ಲೂ ಅಪಘಾತ ಸಾಮಾನ್ಯ. ಇವುಗಳನ್ನು ಲೆಕ್ಕಿಸಲು ರೇಸ್ ಚಾಲಕರು ಶರವೇಗದಲ್ಲಿ ರುಯಿಂ ರುಯಿಂ ಎಂಬ ಶಬ್ದದೊಂದಿಗೆ ಗುರಿ ಮುಟ್ಟಿಸುವ ಪ್ರಯತ್ನದಲ್ಲಿರುತ್ತವೆ.

ಇವನ್ನೂ ಓದಿ: ಜಗತ್ತಿನ ಅತಿದೊಡ್ಡ 10 ವಾಹನ ತಯಾರಕ ಸಂಸ್ಥೆಗಳು

ಆಧುನಿಕ ಜಗತ್ತಿನಲ್ಲಿ ದುಬಾರಿ ಕಾರು ತಯಾರಕ ಸಂಸ್ಥೆಗಳು ಕಾರಿನಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಎಷ್ಟು ಮಹತ್ವ ಕೊಡುತ್ತಾರೋ ಅಷ್ಟೇ ಮಹತ್ವವನ್ನು ಕಾರಿನ ವೇಗವರ್ಧನೆಗೂ ಕೊಡುತ್ತಾರೆ. ಇಂತಹ ಗರಿಷ್ಠ ನಿರ್ವಹಣೆಯ ಕಾರುಗಳ ಅಗ್ರ 10 ಪಟ್ಟಿಯನ್ನು ಕೊಡಲಾಗಿದೆ.

ಜಗತ್ತಿನ ಅತಿ ವೇಗವರ್ಧನೆಯ ಅಗ್ರ 10 ಕಾರುಗಳ ಪಟ್ಟಿಯಲ್ಲಿ ಬುಗಾಟಿ, ಮೆಕ್‌ಲ್ಯಾರೆನ್, ಪೋರ್ಷೆ ಹಾಗೂ ಲಂಬೋರ್ಗಿನಿಗಳಂತಹ ದುಬಾರಿ ಕಾರುಗಳು ಕಾಣಿಸಿಕೊಂಡಿದೆ. ಸಂಪೂರ್ಣ ಪಟ್ಟಿಗಾಗಿ ಮುಂದಿನ ಪುಟದತ್ತ ಮುಂದುವರಿಯಿರಿ.

10. ಎಸ್‌ಎಸ್‌ಸಿ ಅಲ್ಟಿಮೇಟ್ ಏರೋ ಟಿಟಿ

10. ಎಸ್‌ಎಸ್‌ಸಿ ಅಲ್ಟಿಮೇಟ್ ಏರೋ ಟಿಟಿ

ಜಗತ್ತಿನ ಅಗ್ರ 10 ವೇಗವರ್ಧಿಸುವ ಕಾರುಗಳ ಪಟ್ಟಿಯ ಅಂತಿಮ ಸ್ಥಾನದಲ್ಲಿ ಉತ್ತರ ಅಮೆರಿಕದ ಎಸ್‌ಎಸ್‌ಸಿ (ಶೆಲ್ಬಿ ಸೂಪರ್ ಕಾರು) ಅಲ್ಟಿಮೇಟ್ ಏರೋ ಟಿಟಿ ಕಾಣಿಸಿಕೊಂಡಿದೆ.

ವೇಗವರ್ಧನೆ: 2.9 ಸೆಕೆಂಡುಗಳಲ್ಲೇ 0-100 ಕೀ.ಮೀ./ಗಂಟೆಗೆ

9. ಲಂಬೋರ್ಗಿನಿ ಮರ್ಸಿಲ್ಯಾಗೊ ಎಲ್‌ಪಿ 670-4 ಸೂಪರ್ ವೆಲೋಸ್

9. ಲಂಬೋರ್ಗಿನಿ ಮರ್ಸಿಲ್ಯಾಗೊ ಎಲ್‌ಪಿ 670-4 ಸೂಪರ್ ವೆಲೋಸ್

ಜಗತ್ತಿನ ಅಗ್ರ 10 ವೇಗವರ್ಧಿಸುವ ಕಾರುಗಳ ಪಟ್ಟಿಯಲ್ಲಿ ಲಂಬೋರ್ಗಿನಿ ಮರ್ಸಿಲ್ಯಾಗೊ ಕಾಣಿಸಿಕೊಳ್ಳದಿದ್ದರೆ ಅಚ್ಚರಿಯಾದಿತು. 2009ರಲ್ಲಿ ಪರಿಚಯವಾಗಿದ್ದ ಈ ಕಾರು 6.5 ಲೀಟರ್ ವಿ12 ಮೋಟಾರು ಹೊಂದಿದ್ದು, 661 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ವೇಗವರ್ಧನೆ: 2.8 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

8. ಲಂಬೋರ್ಗಿನಿ ಅವೆಂಟಡೊರ್

8. ಲಂಬೋರ್ಗಿನಿ ಅವೆಂಟಡೊರ್

ಇಟಲಿ ಮೂಲದ ಲಂಬೋರ್ಗಿನಿಯ ಮಗದೊಂದು ಸೂಪರ್ ಕಾರಾಗಿರುವ ಅವೆಂಟಡೊರ್, ಮರ್ಸಿಲ್ಯಾಗೊಗಿಂತಲೂ ವೇಗವನ್ನು ಪಡೆದುಕೊಂಡಿದೆ.

ವೇಗವರ್ಧನೆ: 2.7 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

7. ಪೋರ್ಷೆ 911 ಟರ್ಬೊ ಎಸ್

7. ಪೋರ್ಷೆ 911 ಟರ್ಬೊ ಎಸ್

ಪೋರ್ಷೆ 911 ಟರ್ಬೊ ಎಸ್ ಎಡಿಷನ್ ಅತ್ಯಂತ ವೇಗವರ್ಧನೆ ಪಡೆದುಕೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಇದರ ಎಂಜಿನ್ 553 ಅಶ್ವಶಕ್ತಿ (553 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಪೋರ್ಷೆ ಡೈನಾಮಿಕ್ ಚಾಸೀ ಕಂಟ್ರೋಲ್ (ಪಿಡಿಸಿಸಿ) ಮತ್ತು ಪಿಡಿಕೆ ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ.

ವೇಗವರ್ಧನೆ: 2.6 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

6. ಮೆಕ್‌ಲ್ಯಾರೆನ್ ಪಿ1

6. ಮೆಕ್‌ಲ್ಯಾರೆನ್ ಪಿ1

ವಿಶ್ವದ ಹೆಸರಾಂತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿರುವ ಮೆಕ್‌ಲ್ಯಾರೆನ್ ಪಿ1 ಅಗ್ರ 10 ವೇಗವರ್ಧನೆಯ ಕಾರುಗಳ ಪಟ್ಟಿಲ್ಲಿ ಆರನೇ ಸ್ಥಾನದಲ್ಲಿದೆ. ಇದು ಮೆಕ್‌ಲ್ಯಾರೆನ್ ಎಫ್1 ಉತ್ತರಾಧಿಕಾರಿಯಾಗಿದೆ.

ವೇಗವರ್ಧನೆ: 2.6 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

5. ಕ್ಯಾಪರೊ ಟಿ1

5. ಕ್ಯಾಪರೊ ಟಿ1

ಭರ್ಜರಿ 575 ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯವುಳ್ಳ ಕ್ಯಾಪರೊ ಟಿ1, ಸಂಪೂರ್ಣ ಎಫ್1 ತಂತ್ರಗಾರಿಕೆಯನ್ನು ಹೊಂದಿದೆ. ಇದುವರೆಗೆ ಬ್ರಿಟನ್‌ನಲ್ಲಿ 12 ಇಂತಹ ಯುನಿಟ್‌ಗಳನ್ನು ಹಸ್ತಾಂತರಿಸಲಾಗಿದೆ.

ವೇಗವರ್ಧನೆ: 2.5 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

4. ಬುಗಾಟಿ ವೇರೊನ್ ಸೂಪರ್ ಸ್ಪೋರ್ಟ್

4. ಬುಗಾಟಿ ವೇರೊನ್ ಸೂಪರ್ ಸ್ಪೋರ್ಟ್

ಬುಗಾಟಿ ಪ್ರೇಮಿಗಳು ಅತಿ ಹೆಚ್ಚು ಇಷ್ಟಪಡುವ ವೇರೊನ್ ಸೂಪರ್ ಸ್ಪೋರ್ಟ್ ನಾಲ್ಕನೇ ಸ್ಥಾನದಲ್ಲಿದೆ. ಇದು ಗರಿಷ್ಠ ಗಂಟೆಗೆ 415 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ವೇಗವರ್ಧನೆ: 2.46 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

3. ನಿಸ್ಸಾನ್ ಜಿಟಿ-ಆರ್ ನಿಸ್ಮೊ

3. ನಿಸ್ಸಾನ್ ಜಿಟಿ-ಆರ್ ನಿಸ್ಮೊ

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್ ಜಿಟಿ-ಆರ್ ನಿಸ್ಮೊ, ಅತಿ ವೇಗದ ಪ್ರಮಾಣದಲ್ಲಿ ಉತ್ಪನ್ನವಾದ ಕಾರಾಗಿದೆ.

ವೇಗವರ್ಧನೆ: 2.4 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

2. ಪೋರ್ಷೆ 918 ಸ್ಪೈಡರ್

2. ಪೋರ್ಷೆ 918 ಸ್ಪೈಡರ್

ಗ್ಯಾಸೋಲೇನ್ ಎಂಜಿನ್ ಹೊಂದಿರುವ ಪೋರ್ಷೆ 918 ಸ್ಪೈಡರ್ ಬರೋಬ್ಬರಿ 608 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದಲ್ಲದೆ ವೇಗವರ್ಧನೆಯಲ್ಲೂ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ. ಅಲ್ಲದೆ 279 ಅಶ್ವಶಕ್ತಿ ಉತ್ಪಾದಿಸಬಲ್ಲ ಎರಡು ಎಲೆಕ್ಟ್ರಿಕ್ ಮೋಟಾರ್‌ನಿಂದಲೂ ನಿಯಂತ್ರಿಸಲ್ಪಟ್ಟಿದೆ.

ವೇಗವರ್ಧನೆ: 2.4 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

1. ಏರಿಯಲ್ ಆಟೋಮ್ 500 ವಿ8

1. ಏರಿಯಲ್ ಆಟೋಮ್ 500 ವಿ8

ಜಗತ್ತಿನ ಅತ್ಯಂತ ವೇಗವರ್ಧಿಸುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಏರಿಯಲ್ ಆಟೋಮ್ 500 ವಿ8 ಪಡೆದುಕೊಂಡಿದೆ. ಅಷ್ಟಕ್ಕೂ ಇದು ಎಷ್ಟು ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ ಗೊತ್ತೇ? ಇಲ್ಲಿದೆ ನೋಡಿ.

ವೇಗವರ್ಧನೆ: 2.3 ಸೆಕೆಂಡುಗಳಲ್ಲಿ 0-100 ಕೀ.ಮೀ./ಗಂಟೆಗೆ

Most Read Articles

Kannada
English summary
We bring to you an elite list of the fastest accelerating production cars from across the world.
Story first published: Monday, August 25, 2014, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X