ಜಗತ್ತಿನ ಸರ್ವಕಾಲಿಕ ಟಾಪ್ 10 ಮೋಟಾರ್‌ಸೈಕಲ್

By Nagaraja

'ಬೈಕ್' ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಬೈಕ್ ಕ್ರೇಜ್ ಪಸರಿಸಿದೆ. ಇನ್ನು ಕಾಲೇಜ್ ಹುಡುಗರಗಂತೂ ಬೈಕ್‌ನಲ್ಲೇ ತಮ್ಮ ಸ್ನೇಹಿತರು ಅಥವಾ ಪ್ರೇಯಸಿಯ ಜೊತೆಗೆ ಸುತ್ತಾಡುವುದನ್ನು ಬಯಸುತ್ತಾರೆ.

ಪ್ರತಿಯೊಬ್ಬರು ಅತ್ಯಂತ ಆಕರ್ಷಕ ದುಬಾರಿ ಬೈಕ್ ತಮ್ಮದಾಗಿಸಬೇಕೆಂಬ ಕನಸು ಕಾಣುತ್ತಾರೆ. ಕೆಲವರು ಇದರಲ್ಲಿ ಯಶ ಸಾಧಿಸಿದರೆ ಇನ್ನು ಕೆಲವರು ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಜಗತ್ತಿನ ಸರ್ವಕಾಲಿಕ ಟಾಪ್ 10 ಮೋಟಾರ್‌ಸೈಕಲ್

ಇಂದಿನ ಈ ಲೇಖನದಲ್ಲಿ ಜಗತ್ತಿನ ಟಾಪ್ 10 ಸರ್ವಶ್ರೇಷ್ಠ ಮೋಟಾರುಸೈಕಲ್‌ಗಳ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇವೆ. ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...

10. ಬಿಮೊಟಾ ಟೆಸಿ 3ಡಿ (Bimota Tesi 3d)

10. ಬಿಮೊಟಾ ಟೆಸಿ 3ಡಿ (Bimota Tesi 3d)

ಜಗತ್ತಿನ ಸರ್ವಶ್ರೇಷ್ಟ ಟಾಪ್ 10 ಬೈಕ್ ಪಟ್ಟಿಯಲ್ಲಿ ಬಿಮೊಟಾ ಟೆಸಿ 3ಡಿ ಕಾಣಿಸಿಕೊಂಡಿದೆ. ಮೊದಲ ನೋಟದಲ್ಲೇ ಇದರ ನಿರ್ಮಾಣದಲ್ಲಿ ಎಷ್ಟೊಂದು ಬೆವರು ಸುರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಡುಕಾಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಮ್ಮ ಮಾಹಿತಿಗಾಗಿ ಇಟಲಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಮೊಟಾ 1973ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು.

9. ಯಮಹಾ ವೈಝಡ್‌ಎಫ್-ಆರ್7

9. ಯಮಹಾ ವೈಝಡ್‌ಎಫ್-ಆರ್7

ಪರಿಪೂರ್ಣ ರೇಸಿಂಗ್ ಮಾನದಂಡಗಳನ್ನು ಹೊಂದಿರುವ ಯಮಹಾ ವೈಝಡ್‌ಎಫ್-ಆರ್7 ನಮ್ಮ ಸರ್ವಕಾಲಿಕ ಅಗ್ರ 10 ಮೋಟಾರ್‌ಸೈಕಲ್‌ಗಳಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ. ಇದು 749 ಸಿಸಿ, ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದೆ. ಕೇವಲ ಸೀಮಿತ 500 ಯುನಿಟ್‌ಗಳಷ್ಟೇ ಇದು ಉತ್ಪನ್ನವಾಗಿದ್ದವು.

8. ಏಪ್ರಿಲಿಯಾ ಆರ್‌ಎಸ್ 250

8. ಏಪ್ರಿಲಿಯಾ ಆರ್‌ಎಸ್ 250

ಮೊಟೊ ಜಿಪಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಯಶಸ್ಸನ್ನು ಆಚರಿಸಿಕೊಳ್ಳುವ ನಿಟ್ಟಿನಲ್ಲಿ ಏಪ್ರಿಲಿಯಾ ಆರ್‌ಎಸ್250 ಬೈಕ್ ಜೋಡಣೆ ಮಾಡಲಾಗಿತ್ತು. ಇದು ಅದ್ವಿತೀಯ ಏಪ್ರಿಲಿಯಾ ರೇಸಿಂಗ್ ಅನುಭವ ನೀಡಲಿದೆ. ಇದರಲ್ಲಿರುವ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಸವಾರರಿಗೆ ಹೆಚ್ಚಿನ ಮಾಹಿತಿ ನೀಡಲಿದೆ.

7. ಹೋಂಡಾ ಆರ್‌ಸಿ30

7. ಹೋಂಡಾ ಆರ್‌ಸಿ30

ಆರ್‌ಸಿ30 ಎಂಬ ಹೆಸರಿನಿಂದಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹೋಂಡಾ ವಿಎಫ್‌ಆರ್750ಆರ್, 748 ಸಿಸಿ 16 ವಾಲ್ವ್, ವಿ4 ಎಂಜಿನ್ ಪಡೆದುಕೊಂಡಿದ್ದು, 76 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೋಂಡಾ ರೇಸಿಂಗ್ ಕಾರ್ಪೋರೇಷನ್ (ಎಚ್‌ಆರ್‌ಸಿ) ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿತ್ತು.

6. ಮೊಟೊ ಗುಝಿ ವಿ8

6. ಮೊಟೊ ಗುಝಿ ವಿ8

ಈ ಪಟ್ಟಿಯಲ್ಲಿ ಅತಿ ಪುರಾತನ ಬೈಕ್‌ಗಳಲ್ಲಿ ಒಂದಾಗಿರುವ ಮೊಟೊ ಗುಝಿ ಗ್ರ್ಯಾನ್ ಪ್ರಿ ತಂಡಕ್ಕೆ ಸೇರಿರುವ (1955-1967) ಗುಝಿ ವಿ8 ಸೇರಿಕೊಂಡಿದೆ. ಇದು 499 ಸಿಸಿ ವಿ8 ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಂಡಿದ್ದು, 78 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ ಗಂಟೆಗೆ 280 ಕೀ.ಮೀ. ವೇಗದಲ್ಲಿ ಚಲಿಸಲಿದೆ.

5. ಡುಕಾಟಿ ಡಿಸ್ಮೊಸಿಡಿಸಿ ಆರ್‌ಆರ್ (Ducati Desmosedici RR)

5. ಡುಕಾಟಿ ಡಿಸ್ಮೊಸಿಡಿಸಿ ಆರ್‌ಆರ್ (Ducati Desmosedici RR)

ಮೊಟೊಜಿಪಿ ಕಾನೂನುಬದ್ಧ ನಿರ್ಮಾಣ ಬೈಕ್‌ಗಳಲ್ಲಿ ಡುಕಾಟಿ ಡಿಸ್ಮೊಸಿಡಿಸಿ ಆರ್‌ಆರ್ ಒಂದಾಗಿದೆ. ಇದು ಸೀಮಿತ 1,500 ಯುನಿಟ್‌ಗಳಷ್ಟು ಮಾತ್ರ ಉತ್ಪನ್ನವಾಗಿದ್ದವು. ಇದು ವಿ4, ಡಬಲ್-ಎಲ್-ಟ್ವಿನ್, ಟ್ವಿನ್ ಪಲ್ಸ್ ಫೈರಿಂಗ್ ಆರ್ಡರ್, ಲಿಕ್ವಿಡ್ ಕೂಲ್ಡ್, ಡಿಒಎಚ್‌ಸಿ, ಡೆಸ್ಮೊಡ್ರೊಮಿಕ್, ಫೋರ್ ಟೈಟಾನಿಯಂ ವಾಲ್ವ್ ಪರ್ ಸಿಲಿಂಡರ್ ಮತ್ತು ಗೇರ್ ಡ್ರೈವನ್ ಕ್ಯಾಮ್‌ಶಾಫ್ಟ್ ಹೊಂದಿದೆ. ಇದು 13,800 ಆವರ್ತನಕ್ಕೆ 197 ಅಶ್ವಶಕ್ತಿ ಉತ್ಪಾದಿಸುತ್ತದೆ. ಕಾರ್ಬರ್ ಫೈಬರ್ ದೇಹ ಶೈಲಿಯು ಇದನ್ನು ಇತರ ಬೈಕ್‌ಗಳಿಂದ ವಿಭಿನ್ನವಾಗಿಸಿತ್ತಲ್ಲದೆ ಗಂಟೆಗೆ ಗರಿಷ್ಠ 307.03 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

4. ವಿನ್ಸೆಂಟ್ ಬ್ಲ್ಯಾಕ್ ಶ್ಯಾಡೋ

4. ವಿನ್ಸೆಂಟ್ ಬ್ಲ್ಯಾಕ್ ಶ್ಯಾಡೋ

ಸರ್ವಕಾಲಿಕ ಟಾಪ್ 10 ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ವಿನ್ಸೆಂಟ್ ಬ್ಲ್ಯಾಕ್ ಶ್ಯಾಡೋ ಕಾಣಿಸಿಕೊಂಡಿದೆ. ಇದರ ವಿಶೇಷವೆಂದರೆ ಸೀಮಿತ 1,700 ವಿನ್ಸೆಂಟ್ ಯುನಿಟ್‌ಗಳು ಕೈಯಿಂದಲೇ ನಿರ್ಮಿತವಾಗಿದ್ದವು. 1960ರ ದಶಕದ ಅಂತ್ಯದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿತ್ತು.

3. ಸುಜುಕಿ ಆರ್‌ಜಿ 500 'ಗ್ಯಾಮ್ಮ'

3. ಸುಜುಕಿ ಆರ್‌ಜಿ 500 'ಗ್ಯಾಮ್ಮ'

ಸರ್ವಕಾಲಿಕ ಮೋಟಾರ್‌ಸೈಕಲ್‌ಗಳ ಪೈಕಿ ಮೊದಲ ಮೂರು ಸ್ಥಾನದಲ್ಲಿ ಸುಜುಕಿ ಆರ್‌ಜಿ500 ಗ್ಯಾಮ್ಮ ಕಾಣಿಸಿಕೊಂಡಿದೆ. ಇದನ್ನು 1984 ಸುಜುಕಿ ಆರ್‌ಜಿ500 ಗಮ್ಮಾ ಗ್ರ್ಯಾನ್ ಪ್ರಿ ಮೋಟಾರ್‌ಸೈಕಲ್‌ನಿಂದ ಸ್ಪೂರ್ತಿ ಪಡೆದು 1985ರಿಂದ 1987ನೇ ಇಸವಿಯ ನಡುವೆ ನಿರ್ಮಿಸಲಾಗಿತ್ತು. ಇದರ ರೋಟರಿ ವಾಲ್ವ್, ಟ್ವಿನ್ ಕ್ರಾಂಕ್, ಸ್ಕ್ವೇರ್ ಫೋರ್ ಸಿಲಿಂಡರ್ 498 ಸಿಸಿ ಎಂಜಿನ್ 93 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದರಲ್ಲಿ ಆ್ಯಂಟಿ ಡೈವ್ ಸಿಸ್ಟಂ ಸಹ ಲಗತ್ತಿಸಲಾಗಿತ್ತು.

2. ಬಿಎಂಡಬ್ಲ್ಯು ಆರ್32

2. ಬಿಎಂಡಬ್ಲ್ಯು ಆರ್32

ಬಿಎಂಡಬ್ಲ್ಯು ಆರ್32, ಬಿಎಂಡಬ್ಲ್ಯುನಿಂದ ನಿರ್ಮಾಣವಾಗಿರುವ ಮೊದಲ ಮೋಟಾರ್‌ಸೈಕಲ್ ಆಗಿದೆ. ವಿಮಾನ ನಿರ್ಮಾಣ ನಿಲುಗಡೆಗೊಂಡ ಬಳಿಕ ಬಿಎಂಡಬ್ಲ್ಯು ಮೋಟಾರ್‌ಸೈಕಲ್ ನಿರ್ಮಾಣದಲ್ಲಿ ಗಮನ ಕೇಂದ್ರಿತವಾಗಿತ್ತು. ಆರ್32ರಲ್ಲಿ ಮೊದಲ ಬಾಕ್ಸ್ ಟ್ವಿನ್, ಶಾಫ್ಟ್ ಡ್ರೈವನ್ ಮೋಟಾರ್‌ಸೈಕಲ್ ಬಳಕೆಯಾಗಿದ್ದವು. 1994ರಲ್ಲಿ ಎಫ್650 ವರೆಗೂ ಇದೇ ಬಳಕೆಯಲ್ಲಿದ್ದವು.

1. ಹೋಂಡಾ ಎನ್‌ಆರ್

1. ಹೋಂಡಾ ಎನ್‌ಆರ್

ಫೆರಾರಿಯನ್ನು ಮೀರಿಸುವಂತಹ ಎನ್‌ಆರ್ ಮೋಟಾರ್‌ಸೈಕಲ್ ಹೊಂದಿರುವ ಹೋಂಡಾ, ಜಗತ್ತಿನ ಸರ್ವಕಾಲಿಕ ಅಗ್ರ 10 ಮೋಟಾರ್‌ಸೈಕಲ್‌ಗಳ ಪೈಕಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಫ್ಯೂಚರಿಸ್ಟಿಕ್ ವಿನ್ಯಾಸದೊಂದಿಗೆ ಸಂಪೂರ್ಣ ಕಾರ್ಬನ್ ಫೈಬರ್ ದೇಹ ಶೈಲಿಯನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಕೇವಲ ಹೊರಮೈ ಮಾತ್ರವಲ್ಲದೆ ಎಂಜಿನ್ ಮಾನದಂಡದಲ್ಲೂ ಹೋಂಡಾ ಅದ್ವಿತೀಯವೆನಿಸಿದೆ.

Most Read Articles

Kannada
English summary
To a biker, motorcycles have always been more involving than their four-wheeled counterparts. There have been millions of motorcycles created over the years, but only a few stand out to become a great motorcycle. Lets take a look at ten of the greatest motorcycles of all time.
Story first published: Wednesday, October 29, 2014, 14:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X