ವಿಶ್ವದ 10 ಅತಿ ದುಬಾರಿ ಲಿಮೊಸಿನ್ ಕಾರುಗಳು

Written By:

'ಲಿಮೊ' ಎಂದೇ ಪ್ರಖ್ಯಾತಿ ಪಡೆದಿರುವ ಲಿಮೊಸಿನ್ ಗಾಡಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿರಬಹುದು. ಐಷಾರಾಮಿ ಸೆಡಾನ್ ಕಾರುಗಳ ವಿಭಾಗಕ್ಕೆ ಸೇರಿರುವ ಲಿಮೊಸಿನ್ ಕಾರುಗಳು ತನ್ನದೇ ಆದ ಅತಿ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಬಳಕೆ ಮಾಡುತ್ತಾರೆ. ಇದು ಪ್ರೀಮಿಯಂ ವಿಭಾಗದ ಕಾರುಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ.

ಇದರಲ್ಲಿ ವಿಭಜಿತ ಚಾಲಕ ಹಾಗೂ ಪ್ರಯಾಣಿಕ ವಿಭಾಗ ಹೊಂದಿರುತ್ತದೆ. ಅಲ್ಲದೆ ವಿಶೇಷ ತರಬೇತಿ ಪಡೆದ ಐಷಾರಾಮಿ ಕಾರು ಚಾಲಕರು ( chauffeur )ಇದನ್ನು ಚಾಲನೆ ಮಾಡುತ್ತಾರೆ. ಇವರನ್ನು ಕಾರು ಮಾಲಿಕರೇ ನಿಯುಕ್ತಿ ಮಾಡಿರುತ್ತಾರೆ. ಉದ್ದವಾದ ವೀಲ್‌ಬೇಸ್ ಹೊಂದಿರುವ ಲಿಮೊಸಿನ್ ಕಾರುಗಳನ್ನು ಮಾಲಿಕರು ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ಪರಿಷ್ಕೃತಗೊಳಿಸುತ್ತಾರೆ. ಇದರಲ್ಲಿ ಬುಲೆಟ್ ಪ್ರೂಫ್ ಗಾಜುಗಳಂತಹ ಗರಿಷ್ಟ ಸುರಕ್ಷತೆಯನ್ನು ನೀಡಲಾಗುತ್ತದೆ.

ವಿಶ್ವದ 10 ಅತಿ ದುಬಾರಿ ಲಿಮೊಸಿನ್ ಕಾರುಗಳು

ನಿಮ್ಮ ಮಾಹಿತಿಗಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಜಗತ್ತಿನ ಕೆಲವೇ ಕೆಲವು ಗಣ್ಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಹಾಗೂ ಅಧಿಕೃತ ಪ್ರವಾಸಕ್ಕಾಗಿ ಲಿಮೊಸಿನ್ ಕಾರುಗಳನ್ನು ಬಳಕೆ ಮಾಡುತ್ತಾರೆ. ಇಂದಿನ ಈ ಲೇಖನದಲ್ಲಿ ವಿಶ್ವದ 10 ಅತಿ ದುಬಾರಿ ಲಿಮೊಸಿನ್ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ. ಇದಕ್ಕಾಗಿ ಮುಂದಿನ ಪುಟಗಳತ್ತ ಕಣ್ಣಾಯಿಸಿರಿ...

10. ಲಂಬೋರ್ಗಿನಿ ಅವೆಂಟಡೊರ್ ಸ್ಟ್ರೆಚ್ ಲಿಮೊ - ಮೌಲ್ಯ ತಿಳಿದು ಬಂದಿಲ್ಲ

10. ಲಂಬೋರ್ಗಿನಿ ಅವೆಂಟಡೊರ್ ಸ್ಟ್ರೆಚ್ ಲಿಮೊ - ಮೌಲ್ಯ ತಿಳಿದು ಬಂದಿಲ್ಲ

2013ರಲ್ಲಿ ಇಟಲಿ ಮೂಲದ ಸೂಪರ್ ಕಾರು ತಯಾರಕ ಸಂಸ್ಥೆಯಾದ ಲಂಬೋರ್ಗಿನಿ ಸ್ಟಾರ್‌ಗಳಿಗಾಗಿ ಲಂಬೋರ್ಗಿನಿ ಅವೆಂಟಡೊರ್ ಸ್ಟ್ರೆಚ್ ಲಿಮೊ ಕಾರನ್ನು ವಿನ್ಯಾಸಗೊಳಿಸಿತ್ತು. ಇದರಲ್ಲಿ 6.5 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, ಬರೋಬ್ಬರಿ 700 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಿಂದುಗಡೆ ಏಳು ಮಂದಿಗೆ ಕುಳಿತುಕೊಳ್ಳಬಹುದಾದ ಈ ಹೈ ಎಂಡ್ ಲಿಮೊಸಿನ್ ಕಾರಿನಲ್ಲಿ ಪ್ಲಾಸ್ಮಾ ಟಿವಿ, ಐಪೊಡ್ ಹೂಕಪ್, ಶಾಂಪೇನ್ ಬಾರ್‌ಗಳಂತಹ ಸೌಲಭ್ಯಗಳಿದ್ದವು.

9. ಮರ್ಸಿಡಿಸ್ ಬೆಂಝ್ ಎಸ್-600 ಪುಲ್‌ಮ್ಯಾನ್ - 1 ಮಿಲಿಯನ್ ಅಮೆರಿಕನ್ ಡಾಲರ್

9. ಮರ್ಸಿಡಿಸ್ ಬೆಂಝ್ ಎಸ್-600 ಪುಲ್‌ಮ್ಯಾನ್ - 1 ಮಿಲಿಯನ್ ಅಮೆರಿಕನ್ ಡಾಲರ್

ಈಗಾಗಲೇ ಅನೇಕ ವಾಹನ ಪ್ರದರ್ಶನ ಮೇಳಗಳಲ್ಲಿ ಅನಾವರಣಗೊಂಡಿರುವ ಮರ್ಸಿಡಿಸ್ ಬೆಂಝ್ ಎಸ್-600, 2015ರಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ನಿಮ್ಮ ಮಾಹಿತಿಗಾಗಿ, ಬೆಂಝ್ ಮಾಲಿಕತ್ವದಲ್ಲಿರುವ ಮೇಬ್ಯಾಕ್ ಐಷಾರಾಮಿ ಲಿಮೊಸಿನ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿದೆ. ಆದರೆ ಬೆಂಟ್ಲಿ ಹಾಗೂ ರೋಲ್ಸ್ ರಾಯ್ಸ್‌ಗಳಂತಹ ಪ್ರೀಮಿಯಂ ಮಾದರಿಗಳ ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಮೇಬ್ಯಾಕ್ ಲಿಮೊಗಳನ್ನು ಹಿಂಪಡೆಯಲಾಗಿದೆ. ಇದರಂದೆ ಮೇಬ್ಯಾಕ್ 62 ಮಾದರಿಗೆ ಬದಲಿಯಾಗಿ ಬೆಂಝ್ ಎಸ್-600 ಪುಲ್‌ಮ್ಯಾನ್ ಪ್ರವೇಶವಾಗಿತ್ತು. ಈ ಆರ್ಮರ್ ಲೇಪಿತ ಬೆಂಝ್ ಕಾರು ಸಣ್ಣ ಸ್ಪೋಟಕಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ.

 8. ಮಿಲಿಯನ್ ಯುರೋ ಮಿನಿ - 1.35 ಮಿಲಿಯನ್ ಅಮೆರಿಕನ್ ಡಾಲರ್

8. ಮಿಲಿಯನ್ ಯುರೋ ಮಿನಿ - 1.35 ಮಿಲಿಯನ್ ಅಮೆರಿಕನ್ ಡಾಲರ್

ಈ ಪಿಂಕ್ ಬಣ್ಣದ ಮಿನಿ ಕೂಪರ್ ಕಾರು ಜಗತ್ತಿನ ಅತ್ಯಂತ ದುಬಾರಿ ಮಿನಿ ಕಾರಾಗಿದೆ. ಇದನ್ನು ಕಜಕಿಸ್ತಾನದ ರಾಜಕುಮಾರಿ ರೆಜಿನಾ ಅಬ್ದುರಾಝಾಕೋವಾ ಹೊಂದಿದ್ದಾರೆ. ಇದರಲ್ಲಿ 47 ಇಂಚಿನ ಟಿವಿ ಸ್ಕ್ರೀನ್, 70 ಟಿಎಫ್‌ಟಿ ಮಾನಿಟರ್, 30 ಪಾರ್ಕಿಂಗ್ ಸೆನ್ಸಾರ್ ಮತ್ತು 20 ಪಾರ್ಕಿಂಗ್ ಕ್ಯಾಮೆರಾಗಳಿವೆ. ಅಷ್ಟೇ ಇಲ್ಲದೆ ಇದರ ದೇಹವು ಒಂದು ಮಿಲಿಯನ್ ಹರಳುಗಳಿಂದ (Swarovski) ಆವರಿಸ್ಪಟ್ಟಿವೆ. ಹಾಗೆಯೇ ವಿಂಡೋ ಫಿಲ್ಮ್‌ಗಳನ್ನು 50 ಗ್ರಾಂ ಶುದ್ಧ ಚಿನ್ನದಿಂದ ನಿರ್ಮಿಸಲಾಗಿದೆ.

7. ಮೇಬ್ಯಾಕ್ ಲೌಂಡಲೆಟ್ - 1.4 ಮಿಲಿಯನ್ ಅಮೆರಿಕನ್ ಡಾಲರ್

7. ಮೇಬ್ಯಾಕ್ ಲೌಂಡಲೆಟ್ - 1.4 ಮಿಲಿಯನ್ ಅಮೆರಿಕನ್ ಡಾಲರ್

2013ರ ವರೆಗೆ ಮೇಬ್ಯಾಕ್, ಮರ್ಸಿಡಿಸ್ ಬೆಂಝ್‌ನ ಐಷಾರಾಮಿ ಲಿಮೊಸಿನ್ ಕಾರುಗಳನ್ನು ಉತ್ಪಾದಿಸುತ್ತಿದ್ದವು. ಆದರೆ ಬೆಂಟ್ಲಿ ಹಾಗೂ ರೋಲ್ಸ್ ರಾಯ್ಸ್‌ಗಳಂತಹ ಐಷಾರಾಮಿ ಕಾರುಗಳ ವಿರುದ್ಧ ಸ್ಪರ್ಧಿಸಲು ವಿಫಲವಾಗಿದ್ದರಿಂದ ನಿರ್ಮಾಣ ಸ್ಥಗಿತಗೊಳಿಸಲಾಗಿತ್ತು. ಹಾಗಿದ್ದರೂ 1.4 ಮಿಲಿಯನ್ ವೆಚ್ಚದ ಲೌಂಡಲೆಟ್ ಲಿಮೊ ಕಾರು ಮೇಬ್ಯಾಕ್‌ನ ಅತ್ಯಂತ ಆಕರ್ಷಕ ಉತ್ಪನ್ನಗಳಲ್ಲಿ ಒಂದಾಗಿದೆ. ಇದರಲ್ಲಿ 62ಎಸ್ 612 ಅಶ್ವಶಕ್ತಿ ಉತ್ಪಾದಿಸುವ ಬೈ ಟರ್ಬೊ ವಿ12 ಎಂಜಿನ್ ಆಳವಡಿಸಲಾಗಿದೆ.

6. ಮಿಡ್‌ನೈಟ್ ರೈಡರ್ - 2.5 ಮಿಲಿಯನ್ ಅಮೆರಿಕನ್ ಡಾಲರ್

6. ಮಿಡ್‌ನೈಟ್ ರೈಡರ್ - 2.5 ಮಿಲಿಯನ್ ಅಮೆರಿಕನ್ ಡಾಲರ್

ಜಗತ್ತಿನ ಅತಿ ದೊಡ್ಡ ಲಿಮೊ ಕಾರುಗಳಲ್ಲಿ ಒಂದಾಗಿರುವ ಮಿಡ್‌ನೈಟ್ ರೈಡರನ್ನು 1986ನೇ ಇಸವಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಸಾಂಪ್ರದಾಯಿಕ ಟ್ರ್ಯಾಕ್ಟರ್ ಶೈಲಿಯ ದೇಹ ವಿನ್ಯಾಸ ಹೊಂದಿರುವ ಈ ಲಿಮೊದಲ್ಲಿ 40 ಮಂದಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಇದರಲ್ಲಿ ಮೂರು ಪ್ರತ್ಯೇಕ ಕೊಠಡಿಗಳಿದ್ದು, 1,800 ವ್ಯಾಟ್ ಸೌಂಡ್ ಸಿಸ್ಟಂ ಸಹ ಆಳವಡಿಸಲಾಗಿದೆ. ಇದರಲ್ಲಿ ನೈಟ್ ಕ್ಲಬ್ ವ್ಯವಸ್ಥೆ ಕೂಡಾ ಇದೆ.

5. ದಿ ಬೀಸ್ಟ್ - 3 ಮಿಲಿಯನ್ ಅಮೆರಿಕನ್ ಡಾಲರ್

5. ದಿ ಬೀಸ್ಟ್ - 3 ಮಿಲಿಯನ್ ಅಮೆರಿಕನ್ ಡಾಲರ್

2009ರಲ್ಲಿ ಅಮೆರಿಕ ಅಧ್ಯಕ್ಷರ ಅಧಿಕೃತ ಕಾರಾಗಿ ನಿಯುಕ್ತಿಗೊಂಡಿದ್ದ ದಿ ಬೀಸ್ಟ್ ವಿಶ್ವದ ಅತಿ ಗರಿಷ್ಠ ಗುಣಮಟ್ಟತೆಯನ್ನು ಕಾಯ್ದುಕೊಂಡಿದೆ. ಈ ಪೈಕಿ ಅಧ್ಯಕ್ಷರ ಕಾರು 'ಕ್ಯಾಡಿಲಿಕ್ ಒನ್' ಎಂದೇ ಗುರುತಿಸಲ್ಪಟ್ಟಿತ್ತು. ಇದು ಮೂರು ಲಕ್ಷ ಅಮೆರಿಕನ್ ಡಾಲರುಗಳಷ್ಟು ದುಬಾರಿಯೆನಿಸಿದೆ. ಅಮೆರಿಕ ಅಧ್ಯಕ್ಷರಿಗೆ ಗರಿಷ್ಠ ಭದ್ರತೆಯನ್ನು ನೀಡುವಲ್ಲಿ ಇದು ಯಶ ಕಂಡಿತ್ತು. ಇದು ಆರ್‌ಪಿಜಿಗಳಂತಹ ಸ್ಪೋಟಕ ದಾಳಿಗಳನ್ನು ಎದುರಿವಷ್ಟು ಸಮರ್ಥವಾಗಿದೆ.

4. ರೋಲ್ಸ್ ರಾಯ್ಸ್ ಫಾಟಂ ಲಿಮೊ - 3.8 ಮಿಲಿಯನ್ ಅಮೆರಿಕನ್ ಡಾಲರ್

4. ರೋಲ್ಸ್ ರಾಯ್ಸ್ ಫಾಟಂ ಲಿಮೊ - 3.8 ಮಿಲಿಯನ್ ಅಮೆರಿಕನ್ ಡಾಲರ್

ಈ ಲಿಮೊ ಕಾರು ಅಮೆರಿಕ ಅಧ್ಯಕ್ಷರ ಕಾರಿಗಿಂತ ದುಬಾರಿಯೇ ಎಂಬ ವಿಚಾರ ನಿಮ್ಮಲ್ಲಿ ಅಚ್ಚರಿಗೆ ಕಾರಣವಾಗಬಹುದು. ಆದರೆ ನೈಜ ಸಂಗತಿಯೆಂದರೆ ಜಗತ್ತಿನ ಅತ್ಯಂತ ಪ್ರತಿಷ್ಠತ ಹಾಗೂ ಬೆಲೆ ಬಾಳುವ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಫಾಟಂ ಗುರುತಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಈ ಬುಲೆಟ್ ಪ್ರೂಫ್ ಆರ್ಮ್ ಲಿಮೊ ಕಾರು ಸಹ ತನ್ನ ಬೇಡಿಕೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ 432 ಅಶ್ವಶಕ್ತಿ ಉತ್ಪಾದಿಸುವ 6.8 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದೆ.

3. ದಿ ಅಮೆರಿಕನ್ ಡ್ರೀಮ್ - 4 ಮಿಲಿಯನ್ ಅಮೆರಿಕನ್ ಡಾಲರ್

3. ದಿ ಅಮೆರಿಕನ್ ಡ್ರೀಮ್ - 4 ಮಿಲಿಯನ್ ಅಮೆರಿಕನ್ ಡಾಲರ್

ಕಾರು ಸಂಗ್ರಹಗಾರ ಹಾಗೂ ವಿನ್ಯಾಸಗಾರನಾಗಿರುವ ಜೇ ಒಬರ್ಗ್ ಎಂಬವರು 4 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ವಿಶ್ವದ ಅತ್ಯಂತ ಉದ್ದವಾದ ಅಮೆರಿಕನ್ ಡ್ರೀಮ್ ಲಿಮೊ ಕಾರನ್ನು ಹೊಂದಿದ್ದಾರೆ. ಅಷ್ಟಕ್ಕೂ ಇದರ ಉದ್ದ ಎಷ್ಟು ಗೊತ್ತೇ? 100 ಅಡಿ ಉದ್ದವಿರುವ ಈ ಲಿಮೊ ಕಾರಿನಲ್ಲಿ 26 ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಇದು ರಾಜನಿಗೆ ಮಲಗುವಂತಹ ಹಾಸಿಗೆ, ಈಜುಕೊಳ, ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ಯಾಡ್, ಸನ್ ಡೆಸ್ಟ್ ಮುಂತಾದ ವಿಶಿಷ್ಟತೆಗಳನ್ನು ಹೊಂದಿದೆ.

2. ಬ್ಯಾಟ್‌ಮೊಬೈಲ್ ಲಿಮೊಸಿನ್ - 4.2 ಮಿಲಿಯನ್ ಅಮೆರಿಕನ್ ಡಾಲರ್

2. ಬ್ಯಾಟ್‌ಮೊಬೈಲ್ ಲಿಮೊಸಿನ್ - 4.2 ಮಿಲಿಯನ್ ಅಮೆರಿಕನ್ ಡಾಲರ್

ಬ್ಯಾಟ್‌ಮೊಬೈಲ್ ಹೆಸರು ಕೇಳಿದಾಕ್ಷಣ ನಿಮ್ಮಲ್ಲಿ ರೋಮಾಂಚನ ಹುಟ್ಟಿಸಬಹುದು. 1989ರಿಂದ 1992ರ ವರೆಗಿನ ಟಿಮ್ ಬರ್ಟನ್ ಬ್ಯಾಟ್ಮನ್ ಚಲನಚಿತ್ರ ಸರಪಣಿಯ ಬಳಿಕ ಇದನ್ನು ವಿನ್ಯಾಸಗೊಳಿಸಲಾಗಿತ್ತು. 2012ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಈ ಬ್ಯಾಟ್‌ಮೊಬೈಲ್ ಲಿಮೊ ಕಾರಿನಲ್ಲಿ ರಾಕೆಟ್ ಹಾಗೂ ಮಿಸೈಲ್ ಲಾಂಚರ್‌ಗಳಿವೆ. ಅಲ್ಲದೆ ಕಾರಿನಡಿಯಲ್ಲಿ ವಿ8 ಕರ್ವಟ್ಟೆ ಜೆಟ್ ಎಂಜಿನ್ ಸಹ ಇರಲಿದೆ.

1. ಸುಲ್ತಾನ್ ಬ್ರೂನಿಯ ಕಸ್ಟಮೈಸ್ಡ್ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ ಲಿಮೊ - 14 ಮಿಲಿಯನ್ ಅಮೆರಿಕನ್ ಡಾಲರ್

1. ಸುಲ್ತಾನ್ ಬ್ರೂನಿಯ ಕಸ್ಟಮೈಸ್ಡ್ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ ಲಿಮೊ - 14 ಮಿಲಿಯನ್ ಅಮೆರಿಕನ್ ಡಾಲರ್

ಜಗತ್ತಿನ ಅತ್ಯಂತ ದುಬಾರಿ ಲಿಮೊಸಿನ್ ಕಾರನ್ನು ಹೊಂದಿರುವ ದಾಖಲೆಯನ್ನು ಬ್ರೂನಿಯ ಸುಲ್ತಾನ ಹಸ್ಸನಾಲ್ ಬೊಲ್ಕಿಯಾ ಹೊಂದಿದ್ದಾರೆ. 24 ಕ್ಯಾರೆಟ್ ಚಿನ್ನದಿಂದ ನಿರ್ಮಿತವಾಗಿರುವ ಅತಿ ವಿಶಿಷ್ಟವಾದ ರೋಲ್ಸ್ ರಾಯ್ಸ್ ಸಿಲ್ವರ್ ಸ್ಪರ್ ಲಿಮೊಸಿನ್ ಕಾರನ್ನು ಅವರು ಹೊಂದಿದ್ದಾರೆ. ಇದು 14 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಿದೆ.

English summary
The limousine is the pinnacle of all luxury cars. It allows for the passenger to sit back and enjoy the ride while being entertained by some of the finest features to ever be put into a vehicle. When a limo drives by or pulls over to a curb, everyone looking on knows that the person or persons riding in those back seats are rolling in cash.
Story first published: Tuesday, October 21, 2014, 7:02 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more