ನೀವು ಭೇಟಿ ಕೊಡಲೇ ಬೇಕಾದ ವಿಶ್ವದ ಅಗ್ರ 10 ವಿಮಾನ ನಿಲ್ದಾಣಗಳು

Written By:

ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ವಿಮಾನ ಸಂಚಾರ ಅತ್ಯಂತ ಸಾಮಾನ್ಯವಾಗಿ ಬಿಟ್ಟಿದೆ. ದೂರದ ಊರುಗಳಲ್ಲಿ ಉದ್ಯೋಗ ಹರಸಿ ತೆರಳುವವರು ಮತ್ತು ಅಲ್ಲಿ ನೆಲೆಸಿ ವರ್ಷಕ್ಕೊಮ್ಮೆ ತವರೂರಿಗೆ ಭೇಟಿ ಕೊಡುವ ಯಾತ್ರಿಕರಿಗೂ ವಿಮಾನ ನೆಚ್ಚಿನ ಆಶ್ರಯವಾಗಿದೆ.

Also Read: ಜಗತ್ತಿನ 20 ಸುರಕ್ಷಿತ ವಿಮಾನಯಾನ ಸಂಸ್ಥೆಗಳು

ಸುಖ ಪ್ರವಾಸ, ಗರಿಷ್ಠ ಭದ್ರತೆ, ಅತಿ ದೂರವನ್ನು ಕಡಿಮೆ ಸಮಯದಲ್ಲಿ ತಲುಪುವುದು ಹೀಗೆ ಒಂದೆಲ್ಲ ಎರಡಲ್ಲ ಹತ್ತು ಹಲವಾರು ಅನುಕೂಲಗಳು ವಿಮಾನ ಪ್ರವಾಸದಿಂದ ಲಭ್ಯವಾಗುತ್ತಿದೆ. ಹೀಗೆ ಗರಿಷ್ಠ ಸೌಲಭ್ಯವನ್ನು ಒದಗಿಸಲು ವಿಮಾನಯಾನದಲ್ಲೂ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಕೆಲವೊಮ್ಮೆ ಹವಾಮಾನ ವೈಪರೀತ್ಯದಿಂದ ವಿಮಾನದ ಸಮಯ ಬದಲಾಗುವುದುಂಟು. ಇಂತಹ ಸಂದರ್ಭದಲ್ಲಿ ಯಾತ್ರಿಕರಿಗೆ ಆಯಾಸವಾಗದಂತೆ ನೋಡಿಕೊಳ್ಳಲು ವಿಮಾನ ನಿಲ್ದಾಣಗಳಲ್ಲಿ ಈಜುಕೊಳ, ಶಾಂಪಿಂಗ್, ಮನರಂಜನೆ ಹೀಗೆ ಅನೇಕ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಪ್ರಸ್ತುತ ಲೇಖನದಲ್ಲಿ ಬ್ರಿಟನ್‌ನ ಪ್ರಖ್ಯಾತ ವಿಮಾನಯಾನ ಅಧ್ಯಯನ ಮತ್ತು ರಾಂಕಿಂಗ್ ಸಂಸ್ಥೆ 'ಸ್ಕೈಟ್ರಾಕ್ಸ್' ಬಿಡುಗಡೆ ಮಾಡಿರುವ 2016ನೇ ಸಾಲಿನ ವಿಶ್ವದ ಅಗ್ರ 10 ವಿಮಾನ ನಿಲ್ದಾಣಗಳ ಬಗ್ಗೆ ಚರ್ಚಿಸಲಿದ್ದೇವೆ.

10. ಹಮಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

10. ಹಮಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದೋಹದ ಖತಾರ್ ನಲ್ಲಿ ಸ್ಥಿತಗೊಂಡಿರುವ ಹಮಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಕೈಟ್ರಾಕ್ಸ್ ಬಿಡುಗಡೆ ಮಾಡಿರುವ ವಿಶ್ವದ 10 ಅತ್ಯುತ್ತಮ ವಿಮಾನಗಳ ನಿಲ್ದಾಣಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸಮುದ್ರ ಮಟ್ಟಕ್ಕಿಂತ ಕೇವಲ ನಾಲ್ಕು ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಹಮಾದ್ ವಿಮಾನ ನಿಲ್ದಾಣ 2014ನೇ ಸಾಲಿನಲ್ಲಷ್ಟೇ ಲೋಕಾರ್ಪಣೆಯಾಗಿತ್ತು. ಅಲ್ಲದೆ ಈ ಅತ್ಯಂತ ಕಡಿಮೆ ಅವಧಿಯಲ್ಲೇ ವಿಶ್ವ ಶ್ರೇಷ್ಠ ವಿಮಾನ ನಿಲ್ದಾಣಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

 09. ಕನ್ಸಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

09. ಕನ್ಸಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಒಂಬತ್ತನೇ ಸ್ಥಾನದಲ್ಲಿರುವ ಜಪಾನ್‌ನ ಕನ್ಸಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒಸಾಕಾ ಕೊಲ್ಲಿಯ ಮಧ್ಯದಲ್ಲಿರುವ ಕೃತಕ ದ್ವೀಪದಲ್ಲಿ ನಿರ್ಮಿಸಲಾಗಿದೆ. 1994ನೇ ಇಸವಿಯಲ್ಲಿ ತೆರೆದುಕೊಂಡಿರುವ ಕನ್ಸಾಯ್ ವಿಮಾನ ನಿಲ್ದಾಣ 2014ರ ವೇಳೆಯಾಗುವಾಗ ಏಷ್ಯಾದಲ್ಲೇ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದೆನಿಸಿಕೊಂಡಿತ್ತು. ಸಮುದ್ರ ಮಟ್ಟಕ್ಕಿಂತ 5 ಮೀಟರ್ ಎತ್ತರದಲ್ಲಿರುವ ಇಲ್ಲಿಗೆ ಹಡಗು, ರೈಲ್ವೇ ಮತ್ತು ರಸ್ತೆ ಸಂಪರ್ಕವನ್ನು ಹೊಂದಿದೆ.

08. ಲಂಡನ್ ಹೀಥ್ರೂ ವಿಮಾನ ನಿಲ್ದಾಣ

08. ಲಂಡನ್ ಹೀಥ್ರೂ ವಿಮಾನ ನಿಲ್ದಾಣ

ವಿಶ್ವದ ಅತ್ಯಂತ ಜನಪ್ರಿಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ಎಂಟನೇ ಸ್ಥಾನ ಪಡೆದಿದೆ. ಹೀಥ್ರೂ ವಿಮಾನ ನಿಲ್ದಾಣವು ಬ್ರಿಟನ್‌ನ ಅತ್ಯಂತ ಬಿಡುವಿನ ಮತ್ತು ವಿಶ್ವದಲ್ಲಿ ಆರನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ವಿಶ್ವ ವಿಮಾನಯಾನದಲ್ಲಿ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಇಲ್ಲಿನ ವಿಮಾನ ನಿಲ್ದಾಣ 1929ರಲ್ಲಿ ಚೊಕ್ಕದಾದ ಏರ್ ಫೀಲ್ಡ್ ರೂಪದಲ್ಲಿ ರೂಪುಗೊಂಡಿತ್ತು. ಬಳಿಕ 1966ರಲ್ಲಿ ಹೀಥ್ರೂ ಎಂದು ನಾಮಕರಣಗೊಂಡಿತ್ತು. ಇಲ್ಲಿ ಹಿಂದೂ, ಮುಸ್ಲಿಂ, ಯಹೂದಿ ಮತ್ತು ಕ್ರೈಸ್ತರಿಗೆ ಪ್ರಾರ್ಥನಾ ಕೋಣೆಗಳಿದ್ದು, ಸಮುದ್ರ ಮಟ್ಟಕ್ಕಿಂತ 25 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ.

07. ಜ್ಯೂರಿಕ್ ವಿಮಾನ ನಿಲ್ದಾಣ

07. ಜ್ಯೂರಿಕ್ ವಿಮಾನ ನಿಲ್ದಾಣ

ಸ್ವಿಜರ್ಲೆಂಡ್‌ನ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಜ್ಯೂರಿಕ್ ವಿಮಾನ ನಿಲ್ದಾಣ ಏಳನೇ ಸ್ಥಾನದ್ಲಲಿದೆ. ಸಮುದ್ರ ಮಟ್ಟಕ್ಕಿಂತ 432 ಮೀಟರ್ ಎತ್ತರದಲ್ಲಿರುವ ಇಲ್ಲಿನ ವಿಮಾನ ನಿಲ್ದಾಣವು ಲಂಡನ್, ಬರ್ಲಿನ್, ವಿಯೆನ್ನಾ, ಪ್ಯಾರಿಸ್ ಮುಂತಾದ ಪ್ರಮುಖ ಗಮ್ಯಸ್ಥಾನಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಪ್ರಸ್ತುತ ನವೀಕರಣದ ಹಂತದಲ್ಲಿರುವ ಜ್ಯೂರಿಕ್ ವಿಮಾನ ನಿಲ್ಧಾನದಲ್ಲಿ ಶೀಘ್ರದಲ್ಲೇ ವೈದ್ಯಕೀಯ ಕೇಂದ್ರ, ಕಾನ್ಪೆರನ್ಸ್ ಹಾಲ್, ಶಾಪ್, ರೆಸ್ಟೋರೆಂಟ್, ಕಚೇರಿ, ಹೋಟೆಲ್ ಮುಂತಾದ ವ್ಯವಸ್ಥೆಗಳು ತೆರೆದುಕೊಳ್ಳಲಿದೆ.

06. ಚುಬು ಸೆಂಟ್ರೈರ್ ನಗೋಯಾ

06. ಚುಬು ಸೆಂಟ್ರೈರ್ ನಗೋಯಾ

ಜಪಾನ್ ಕೇಂದ್ರ ಭಾಗದಲ್ಲಿ ಸ್ಥಿತಗೊಂಡಿರುವ ಚುಬು ಸೆಂಟ್ರೈರ್ ನಗೋಯಾ ಐಸ್ ಕೊಲ್ಲಿಯ ಕೃತಕ ದ್ವೀಪದಲ್ಲಿ ಸ್ಥಿತಗೊಂಡಿರುವ ಮಗದೊಂದು ವಿಮಾನ ನಿಲ್ದಾಣವಾಗಿದೆ. 2005ನೇ ಇಸವಿಯಲ್ಲಿ ತೆರೆದುಕೊಂಡಿರುವ ಚುಬು ವಿಮಾನ ನಿಲ್ದಾಣದ ನಾಲ್ಕನೇ ಮಳಿಗೆಯಲ್ಲಿ ಸ್ಕೈ ಟೌನ್ ಶಾಂಪಿಂಗ್ ಕೇಂದ್ರ ಸೇರಿದಂತೆ 61 ಶಾಪಿಂಗ್ ಮಳಿಗೆ ಮತ್ತು ರೆಸ್ಟೋರೆಂಟ್ ಗಳಿವೆ. ಇದು ಸಮುದ್ರ ಮಟ್ಟಕ್ಕಿಂತ ನಾಲ್ಕು ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ.

05. ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

05. ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

1998ನೇ ಇಸವಿಯಿಂದ ಕಾರ್ಯಾಚರಣೆ ಆರಂಭಿಸಿರುವ ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸಮುದ್ರ ಮಟ್ಟಕ್ಕಿಂತಲೂ ಒಂಬತ್ತು ಮೀಟರ್ ಎತ್ತರದಲ್ಲಿರುವ ಇಲ್ಲಿನ ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ದೊಡ್ಡ ಐಮ್ಯಾಕ್ಸ್ ಸಿನೆಮಾ ಮಂದಿರವಿದ್ದು, ಏಕಕಾಲಕ್ಕೆ 350ರಷ್ಟು ಮಂದಿಗೆ ಸಿನೆಮಾ ಮಜಾ ಸವಿಯಬಹುದಾಗಿದೆ. ಅಲ್ಲದೆ ಪ್ರಯಾಣಿಕರಿಗೆ ಸೇವೆಗಾಗಿ ಗಂಟೆಗೆ 63 ಕೀ.ಮೀ. ವೇಗದ ವರೆಗೆ ಸಂಚರಿಸಬಲ್ಲ ಚಾಲಕ ರಹಿತ ಯಂತ್ರ ಕೂಡಾ ಇದೆ.

04. ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

04. ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಟೋಕಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾದಲ್ಲೇ ಮೂರನೇ ಬಿಡುವಿಲ್ಲದ ಹಾಗೂ ವಿಶ್ವದಲ್ಲೇ ನಾಲ್ಕನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ಸಮುದ್ರ ಮಟ್ಟಕ್ಕಿಂತ ಆರು ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಟೋಕಿಯೋ ವಿಮಾನ ನಿಲ್ದಾಣದಲ್ಲಿ, ರೆಸ್ಟೋರೆಂಟ್, ಶಾಂಪಿಂಗ್ ಪ್ರದೇಶ, ಕಾನ್ಪೆರನ್ಸ್ ರೂಂ ಮತ್ತು ವಿಸ್ತಾರವಾದ ಮೇಲ್ಚಾವಣಿಯ ಕೆಫೆ ವ್ಯವಸ್ಥೆಯಿರುತ್ತದೆ.

03. ಮ್ಯೂನಿಚ್ ವಿಮಾನ ನಿಲ್ದಾಣ

03. ಮ್ಯೂನಿಚ್ ವಿಮಾನ ನಿಲ್ದಾಣ

ವಿಶ್ವದ ಮೂರನೇ ಅತ್ಯುತ್ತಮ ವಿಮಾನ ನಿಲ್ದಾಣವಾಗಿರುವ ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣ, ಪ್ರಯಾಣಿಕರ ಸಂಖ್ಯೆಯಲ್ಲಿ ವಿಶ್ವದ ಎರಡನೇ ಬಿಡುವಿಲ್ಲದ ವಿಮಾನ ನಿಲ್ದಾಣವಾಗಿದೆ. ಸಮುದ್ರ ಮಟ್ಟಕ್ಕಿಂತಲೂ 453 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರಿಗಾಗಿ ದೀರ್ಘಾವಧಿಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

02. ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

02. ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಸ್ಥಿತಗೊಂಡಿರುವ ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮುದ್ರ ಮಟ್ಟಕ್ಕಿಂದ ಏಳು ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ. ಇದು ದಕ್ಷಿಣ ಕೊರಿಯಾದ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದ್ದು, ಖಾಸಗಿ ನಿದ್ರಾಸನ ಕೊಠಡಿ, ಐಸ್ ಸ್ಕೇಟಿಂಗ್ ರಿಂಕ್, ಗಾಲ್ಪ್ ಕೋರ್ಸ್, ಸ್ಪಾ, ಒಳಾಂಗಣ ಗಾರ್ಡನ್, ಕ್ಯಾಸಿನೊ, ಮ್ಯೂಸಿಯಂ ಹಾಗೂ ಶಾಪಿಂಗ್ ಮಾಲ್‌ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗಿದೆ.

01. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ

01. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂಬ ಪಟ್ಟವನ್ನು ಸಿಂಗಾಪುರ ಮಗದೊಮ್ಮೆ ಕಟ್ಟಿಕೊಂಡಿದೆ. ವಿಶ್ವದ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಇದು ಸಮುದ್ರ ಮಟ್ಟಕ್ಕಿಂತಲೂ ಆರು ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ. ಇಲ್ಲಿ ದಿನದ 24 ತಾಸಿನಲ್ಲೂ ಉಚಿತ ತ್ರಿಡಿ ಸಿನೆಮಾ ಮಂದಿರ, ರೂಫ್ ಟಾಪ್ ಈಜುಕೊಳ, ಬಟರ್ ಫೈ ಗಾರ್ಡನ್, ಆರ್ಟ್ ಸ್ಟೇಷನ್, ಒಳಾಂಗಣ ಕ್ರೀಡಾಂಗಣ, ಉಚಿತ ವಿಡಿಯೋ ಗೇಮ್, ಸಂಗೀತ ಇತ್ಯಾದಿ ವ್ಯವಸ್ಥೆಗಳನ್ನು ಕೊಡಲಾಗುತ್ತಿದೆ.

ಇವನ್ನೂ ಓದಿ...

ಟಾಪ್ 10 ಬಿಡುವಿಲ್ಲದ ವಿಮಾನ ನಿಲ್ದಾಣಗಳು; ಬೆಂಗಳೂರಿಗೆ ಎಷ್ಟನೇ ಸ್ಥಾನ?

ಜಗತ್ತಿನ ಅತ್ಯುತ್ತಮ ಖಾಸಗಿ ವಿಮಾನಗಳು

Read more on ವಿಮಾನ plane
English summary
Top 10 Best Airports In The World 2016 According To Skytrax
Story first published: Monday, March 21, 2016, 10:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark