ದೇಶದ ಶ್ರೇಷ್ಠ 10 ವಿಮಾನಯಾನ ಸಂಸ್ಥೆಗಳು

By Nagaraja

ವಿದೇಶಗಳಿಗೆ ಹೋಲಿಸಿದಾಗ ಭಾರತದ ವಿಮಾನಯಾನ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿಲ್ಲ. ಗ್ರಾಹಕ ಸೇವೆಯಲ್ಲೂ ಪದೇ ಪದೇ ಎಡವಟ್ಟು ಸಂಭವಿಸುತ್ತಿರುವುದನ್ನು ಪದೇ ಪದೇ ಸುದ್ದಿ ಮಾಧ್ಯಮಗಳಲ್ಲಿ ವಾರ್ತೆಯಾಗುತ್ತದೆ.

Also Read: ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಇದೇ ಕಾರಣಕ್ಕಾಗಿ ವಿಶ್ವದ ಅಗ್ರ 10 ವಿಮಾನಯಾನ ಸಂಸ್ಥೆಗಳಲ್ಲಿ ಭಾರತ ಮೂಲದ ಸಂಸ್ಥೆಯ ಹೆಸರು ಕಂಡುಬಂದಿಲ್ಲ. ಹಾಗಿದ್ದರೂ ಮೂಲ ಸೌಕರ್ಯಗಳ ವೃದ್ಧಿಯೊಂದಿಗೆ ಗ್ರಾಹಕರಿಗೆ ಗರಿಷ್ಠ ಸಂಚಾರ ಅನುಭವ ನೀಡುವಲ್ಲಿ ದೇಶದ ವಿಮಾನಯಾನ ಸಂಸ್ಥೆಗಳು ಸದಾ ಬದ್ಧವಾಗಿದೆ. ಪ್ರಸ್ತುತ ಲೇಖನದಲ್ಲಿ ಭಾರತದ ಅಗ್ರ 10 ವಿಮಾನಯಾನ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಾಗುವುದು.

10. ವಿಸ್ಟಾರಾ ಏರ್ ಲೈನ್ಸ್

10. ವಿಸ್ಟಾರಾ ಏರ್ ಲೈನ್ಸ್

ದೆಹಲಿ ಸಂಪರ್ಕ ಜಾಲಕೇಂದ್ರದಿಂದ ಕಾರ್ಯಾಚರಣೆ ನಡೆಸುತ್ತಿರುವ ಗುರ್ಗಾಂವ್ ತಳಹದಿಯ ವಿಸ್ಟಾರಾ ಏರ್ ಲೈನ್ಸ್ ಮಾಲಿಕತ್ವವನ್ನು ಟಾಟಾ ಸನ್ಸ್ ಹಾಗೂ ಸಿಂಗಾಪುರ ಏರ್ ಲೈನ್ಸ್ ಹೊಂದಿದೆ. 2015 ಜನವರಿ 09ರಂದು ಅಸ್ತಿತ್ವಕ್ಕೆ ಬಂದಿರುವ ವಿಸ್ಟಾರಾ ತನ್ನ ಮೊದಲ ಹಾರಾಟವನ್ನು ದೆಹಲಿ ಹಾಗೂ ಮುಂಬೈ ನಡುವೆ ಹಮ್ಮಿಕೊಂಡಿತ್ತು. ದೇಶದ 12 ಗಮ್ಯಸ್ಥಾನಗಳಿಗಾಗಿ ವಾರದಲ್ಲಿ 311 ಹಾರಾಟವನ್ನು ನಡೆಸುತ್ತಿರುವ ವಿಸ್ಟಾರಾ ದೇಶದಲ್ಲಿ ಪ್ರೀಮಿಯಂ ಎಕಾನಮಿ ಸೀಟು ಒದಗಿಸಿದ ಮೊದಲ ವಿಮಾನಯಾನ ಸಂಸ್ಥೆ ಎನಿಸಿಕೊಂಡಿದೆ.

09. ಏರ್ ಕೋಸ್ಟಾ

09. ಏರ್ ಕೋಸ್ಟಾ

ಆಂಧ್ರ ಪ್ರದೇಶ ವಿಯಜವಾಡ ತಳಹದಿಯ ಏರ್ ಕೋಸ್ಟಾ ವಿಮಾನಯಾನ ಸಂಸ್ಥೆಯು 2013 ಅಕ್ಟೋಬರ್ 15ರಂದು ಅಸ್ತಿತ್ವಕ್ಕೆ ಬಂದಿತ್ತು. ಪ್ರಮುಖವಾಗಿಯೂ ಚೆನ್ನೈಯಿಂದ ಕಾರ್ಯಾಚರಣೆ ನಡೆಸುತ್ತಿರುವ ಏರ್ ಕೋಸ್ಟಾ ವಿಮಾನಯಾನ ಸಂಸ್ಥೆಯು ದೇಶದ ಎರಡು ಹಾಗೂ ಮೂರನೇ ದರ್ಜೆಯ ನಗರಗಳಿಗೆ ಹೆಚ್ಚೆಚ್ಚು ಸಂಪರ್ಕವನ್ನು ಕಲ್ಪಿಸಿಕೊಡುವಲ್ಲಿ ಉತ್ಸುಕವಾಗಿದೆ.

08. ಏರ್ ಏಷ್ಯಾ ಇಂಡಿಯಾ

08. ಏರ್ ಏಷ್ಯಾ ಇಂಡಿಯಾ

ಇಂಡೋ-ಮಲೇಷ್ಯಾ ಜಂಟಿ ಸಹಭಾಗಿತ್ವದ ಏರ್ ಏಷ್ಯಾ ಇಂಡಿಯಾ ಕೇಂದ್ರ ಕಚೇರಿಯನ್ನು ನಮ್ಮ ಬೆಂಗಳೂರಿನಲ್ಲಿ ಹೊಂದಿದೆ. ಇದರಲ್ಲಿ ಶೇಕಡಾ 40.06ರಷ್ಟು ಶೇರನ್ನು ಟಾಟಾ ಸನ್ಸ್ ಹೊಂದಿದ್ದು, ಉಳಿದಿರುವ ಶೇಕಡಾ 49ರಷ್ಟನ್ನು ಏರ್ ಏಷ್ಯಾ ಬೆರ್ಹಾಡ್ ಹಾಗೂ ಶೇ. 10ರಷ್ಟನ್ನು ಟೆಲೆಸ್ಟ್ರಾ ಟ್ರೇಡ್ ಪ್ಲೇಸ್ ಪಡೆದುಕೊಂಡಿದೆ.

07. ಜೆಟ್ ಕನೆಕ್ಟ್

07. ಜೆಟ್ ಕನೆಕ್ಟ್

ಮುಂಬೈ ತಳಹದಿಯ ಜೆಟ್ ಏರ್ ವೇಸ್‌ನ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆ ಇದಾಗಿದೆ. 1991ರಲ್ಲಿ ಸಹಾರಾ ಏರ್ ಲೈನ್ಸ್ ಎಂಬ ಹೆಸರಿನಲ್ಲಿ ಅಸ್ಥಿತ್ವಕ್ಕೆ ಬಂದಿರುವ ಈ ವಿಮಾನಯಾನ ಸಂಸ್ಥೆಯು ಬಳಿಕ ಜೆಟ್ ಲೈಟ್ ಎಂದು ಹೆಸರಿಸಿಕೊಂಡಿತ್ತು. ಆದರೆ 2012ರಲ್ಲಿ ಜೆಟ್ ಏರ್ ವೇಸ್ ಜೊತೆಗಿನ ಮಿಲನದ ಬಳಿಕ ಜೆಟ್ ಕನೆಕ್ಟ್ ಎಂದು ಹೆಸರಿಸಿಕೊಂಡಿದೆ.

06. ಗೊ ಏರ್

06. ಗೊ ಏರ್

ಮುಂಬೈ ತಳಹದಿಯ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆಯಾಗಿರುವ ಗೊ ಏರ್ 2005ನೇ ಇಸವಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತ್ತಲ್ಲದೆ 2014ರಲ್ಲಿ ಮಾರುಕಟ್ಟೆ ಶೇರಿನ ಅಂಕಿಅಂಶದಲ್ಲಿ ದೇಶದ ಐದನೇ ಅತಿ ದೊಡ್ಡ ವಿಮಾನ ಸಂಸ್ಥೆ ಎಂದೆನಿಸಿಕೊಂಡಿತ್ತು. ವಾಡಿಯಾ ಗ್ರೂಪ್ ಭಾಗವಾಗಿರುವ ಗೊ ಏರ್ 22 ನಗರಗಳಿಗೆ ದೈನಂದಿನ 140 ಹಾಗೂ ವಾರದಲ್ಲಿ 975ರಷ್ಟು ಹಾರಾಟಗಳನ್ನು ಹಮ್ಮಿಕೊಳ್ಳುತ್ತಿದೆ.

05. ಏರ್ ಇಂಡಿಯಾ ಎಕ್ಸ್ ಪ್ರೆಸ್

05. ಏರ್ ಇಂಡಿಯಾ ಎಕ್ಸ್ ಪ್ರೆಸ್

ಏರ್ ಇಂಡಿಯಾದ ಉಪಾಂಗ ಸಂಸ್ಥೆಯಾಗಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೊಚ್ಚಿ ತಳಹದಿಯಿಂದ ಕಾರ್ಯಾಚರಣೆ ನಡೆಸುವ ಕಡಿಮೆ ಬಜೆಟ್‌ನ ವಿಮಾನಯಾನ ಸಂಸ್ಥೆಯಾಗಿದೆ. ಇದು ದಕ್ಷಿಣ ಭಾರತದಿಂದ ಪ್ರತಿ ವಾರದಲ್ಲಿ ಮಧ್ಯ ಪೂರ್ವ ಹಾಗೂ ನೈಋತ್ಯ ಏಷ್ಯಾಗೆ 100ರಷ್ಟು ಹಾರಾಟಗಳನ್ನು ನಡೆಸುತ್ತಿದೆ.

04. ಏರ್ ಇಂಡಿಯಾ

04. ಏರ್ ಇಂಡಿಯಾ

ಅತಿ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಿಚಾರದಲ್ಲಿ ದೇಶದ ಮೂರನೇ ಅತಿ ದೊಡ್ಡ ಪ್ರಯಾಣಿಕ ವಿಮಾನಯಾನ ಸಂಸ್ಥೆಯಾಗಿರುವ ಏರ್ ಇಂಡಿಯಾ, ಏರ್ ಬಸ್ ಹಾಗೂ ಬೋಯಿಂಗ್ ಗಳಂತಹ ಪ್ರಸಿದ್ಧ ವಿಮಾನಗಳ ಸೇವೆಯನ್ನು ಹೊಂದಿದೆ. ಭಾರತೀಯ ಸರಕಾರದ ಭಾಗವಾಗಿರುವ ಏರ್ ಇಂಡಿಯಾ ಲಿಮಿಟೆಡ್ ವಿದೇಶಗಳಿಗೂ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

03. ಜೆಟ್ ಏರ್ ವೇಸ್

03. ಜೆಟ್ ಏರ್ ವೇಸ್

ಮಾರುಕಟ್ಟೆ ಶೇರು ಹಾಗೂ ಪ್ರಯಾಣಿಕರನ್ನು ಸಾಗಿಸುವ ಅಂಕಿಅಂಶದಲ್ಲಿ ಮುಂಬೈ ತಳಹದಿಯ ಜೆಟ್ ಏರ್ ವೇಸ್ ದೇಶದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ. ದೈನಂದಿನ 74 ಗಮ್ಯಸ್ಥಾನಗಳಿಗೆ 300 ಹಾರಾಟಗಳನ್ನು ಜೆಟ್ ಏರ್ ವೇಸ್ ನಡೆಸುತ್ತಿದೆ.

02. ಸ್ಪೈಸ್ ಜೆಟ್

02. ಸ್ಪೈಸ್ ಜೆಟ್

ಗುರ್ಗಾಂವ್ ತಳಹದಿಯ ಮಗದೊಂದು ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಇದಾಗಿದೆ. ಪ್ರಯಾಣಿಕರು ಸಂಚರುವ ಪ್ರಮಾಣದಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆರು ವಿದೇಶ ತಾಣಗಳು ಸೇರಿದಂತೆ 40 ಪ್ರದೇಶಗಳಿಗೆ ದೈನಂದಿನ 270 ಹಾರಾಟಗಳನ್ನು ಸ್ಪೈಸ್ ಜೆಟ್ ನಡೆಸುತ್ತಿದೆ.

01. ಇಂಡಿಗೊ

01. ಇಂಡಿಗೊ

ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಪೈಕಿ ದೇಶದ ನಂ.1 ವಿಮಾನಯಾನ ಸಂಸ್ಥೆ ಎಂದೆನಿಸಿಕೊಂಡಿರುವ ಇಂಡಿಗೊ ಕಡಿಮೆ ದರದಲ್ಲಿ ಅತ್ಯುತ್ತಮ ಪಯಣವನ್ನು ಒದಗಿಸುತ್ತಿದೆ. ದೈನಂದಿನ 647ರಷ್ಟು ಹಾರಾಟವನ್ನು ನಡೆಸುತ್ತಿರುವ ಇಂಡಿಗೊ 5 ಅಂತರಾಷ್ಟ್ರೀಯ ತಾಣಗಳು ಸೇರಿದಂತೆ 39 ಪ್ರದೇಶಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಸಮಯಕ್ಕೆ ಸರಿಯಾಗಿ ಗುರಿ ಮುಟ್ಟುವಲ್ಲಿ ಸದಾ ತನ್ನ ಬದ್ಧತೆಯನ್ನು ಹೊಂದಿರುವ ಇಂಡಿಗೊ ದೇಶದಲ್ಲಿ ಅತಿ ಹೆಚ್ಚು ಗ್ರಾಹಕ ಸಂತೃಪ್ತಿಯನ್ನು ಪಡೆದುಕೊಂಡಿದೆ.

ಇವನ್ನೂ ಓದಿ...

01. ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ ?

02. ಹೋಂಡಾಜೆಟ್ ವಿಮಾನದ ವಿಶಿಷ್ಟತೆಗಳೇನು?

03. ವಿಶ್ವದ 10 ಅತಿ ಅಪಾಯಕಾರಿ ಪ್ರಯಾಣಿಕ ವಿಮಾನಗಳು

Most Read Articles

Kannada
English summary
Top 10 Best Airlines in India
Story first published: Tuesday, January 19, 2016, 10:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X