ಜಗತ್ತಿನ 20 ಹದೆಗೆಟ್ಟ ಟ್ರಾಫಿಕ್ ನಗರಗಳತ್ತ ಚಿಕ್ಕ ರೌಂಡಪ್!

By Nagaraja

ಅಬ್ಬಾ ಎಲ್ಲೂ ನೋಡಿದರೂ ಟ್ರಾಫಿಕ್ ಜಾಮ್ ಟ್ರಾಫಿಕ್ ಜಾಮ್! ಈ ಜೀವನ ಸಾಕಾಗಿ ಹೋಗಿದೆಯಪ್ಪ ಎಂದು ಗೊಣಗುಟ್ಟುವವರೇ ಜಾಸ್ತಿ. ದಿನವೂ ಇದೇ ಪರಿಸ್ಥಿತಿ. ಇದಕ್ಕೊಂದು ಮುಕ್ತಿ ಇಲ್ಲವೇ?

ಹೌದು, ದೈನಂದಿನ ಟ್ರಾಫಿಕ್ ಉಪಟಳದಿಂದ ನೀವು ಬೇಸತ್ತು ಹೋಗಿರುವೀರಿ. ಈಗ ಜಗತ್ತಿನ 20 ಹದೆಗೆಟ್ಟ ಟ್ರಾಫಿಕ್ ಪರಿಸ್ಥಿತಿಯತ್ತ ಒಂದು ಚಿಕ್ಕ ರೌಂಡಪ್ ಹಾಕಿ ಬರೋಣವೇ..ಇನ್ಯಾಕೆ ತಡ ಈಗಲೇ ಗಾಡಿ ಸ್ಟ್ಯಾರ್ಟ್ ಮಾಡಿ. ಅಲ್ಲಲ್ಲ ಮೊದಲು ಗ್ರೀನ್ ಸಿಗ್ನಲ್ ಬಿತ್ತೇ ನೋಡಿ...

ಜಗತ್ತಿನ 20 ಅತಿ ಕೆಟ್ಟ ಟ್ರಾಫಿಕ್ ನಗರಗಳ ರೋಚಕ ಪಟ್ಟಿಗಾಗಿ ಮುಂದುವರಿಯಿರಿ...

20. ಸಿಯೋಲ್, ದಕ್ಷಿಣ ಕೊರಿಯಾ

20. ಸಿಯೋಲ್, ದಕ್ಷಿಣ ಕೊರಿಯಾ

ಟ್ರಾಫಿಕ್ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇದರ ಸಮಸ್ಯೆಯಿಂದ ನ್ಯೂಯಾರ್ಕ್, ಲಂಡನ್ ಹಾಗೂ ಬೀಂಜಿಗ್‌ಗಳಂತಹ ವಿಶ್ವ ವಿಖ್ಯಾತ ನಗರಗಳೇ ಮುಕ್ತವಾಗಿಲ್ಲ. ಹಾಗಿರುವಾಗ ದಕ್ಷಿಣ ಕೊರಿಯಾದ ಸಿಯೋಲ್ ಯಾವ ಲೆಕ್ಕ ಅಲ್ಲವೇ?

19. ಉಗಾಂಡಾ

19. ಉಗಾಂಡಾ

ಉಗಾಂಡಾದ ಅತಿ ಭಯಂಕರ ಟ್ರಾಫಿಕ್ ಜಾಮ್ ಎಂದೇ ವಿಶ್ಲೇಷಿಸಬಹುದಾದ ಕಂಪಾಲಾದಲ್ಲಿ ದಿನನಿತ್ಯವೂ ಗಂಟೆಗಳಷ್ಟು ಕಾಲ ಟ್ರಾಫಿಕ್ ಜಾಮ್ ಕಂಡುಬರುತ್ತದೆ.

18. ಢಾಕಾ

18. ಢಾಕಾ

ವಿಶ್ವದ ಅತಿ ಕೆಟ್ಟ ಟ್ರಾಫಿಕ್ ಪಟ್ಟಿಯಲ್ಲಿ ನಮ್ಮ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶವೂ ಸ್ಥಾನಗಿಟ್ಟಿಸಿಕೊಂಡಿದೆ. ಅತಿ ಹೆಚ್ಚು ಜನ ಸಾಂದ್ರತೆಯನ್ನು ಹೊಂದಿರುವ ಬಾಂಗ್ಲಾದಲ್ಲಿ ಮೂರು ಚಕ್ರಗಳ ಸೈಕಲ್ ಬಂಡಿ ಕೆಟ್ಟ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.

17. ಬ್ರೂಸೆಲ್ಸ್

17. ಬ್ರೂಸೆಲ್ಸ್

ಬೆಲ್ಜಿಯಂನ ರಾಜಧಾನಿ ಹಾಗೂ ಅತಿ ದೊಡ್ಡ ನಗರಾಗಿರುವ ಬ್ರೂಸೆಲ್ಸ್ ಯುರೋಪ್ ನ ಅತ್ಯಂತ ಇಕ್ಕಟ್ಟಾದ 59 ನಗರಗಳ ಪೈಕಿ ಒಂದಾಗಿದೆ. ಕಾರುಗಳ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯೇ ಇದಕ್ಕಿರುವ ಪ್ರಮುಖ ಕಾರಣವಾಗಿದೆ.

16. ಕೈರೊ

16. ಕೈರೊ

ಈಜಿಪ್ಟ್ ರಾಜಧಾನಿ, ಮಧ್ಯ ಪೂರ್ವ ಅತಿ ದೊಡ್ಡ ಹಾಗೂ ಆಫ್ರಿಕಾದ ಎರಡನೇ ಅತಿ ದೊಡ್ಡ ನಗರವಾಗಿರುವ ಕೈರೊ ರಸ್ತೆಯಲ್ಲಿ 20 ಮಿಲಿಯನ್ ಜನರ ಜೊತೆಗೆ ಒಂಟೆ, ಹಸು ಹಾಗೂ ಬಂಡಿಗಳ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

15. ಚಿಕಾಗೊ

15. ಚಿಕಾಗೊ

ಅಮೆರಿಕದ ಮೂರನೇ ಅತಿದೊಡ್ಡ ಜನನಿಬಿಡ ನಗರವಾಗಿರುವ ಚಿಕಾಗೊದಲ್ಲಿ ಹಿಮಪಾತದ ನಡುವೆ ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.

14. ಜರ್ಮನಿ

14. ಜರ್ಮನಿ

ಐಷಾರಾಮಿ ಕಾರುಗಳ ಬಹುಶ: ಆಟೋಮೊಬೈಲ್ ಕಾರ್ಯಕಲಾಪಗಳ ಕೇಂದ್ರ ಬಿಂದು ಎಂದೇ ವರ್ಣಿಸಬಹುದಾದ ಜರ್ಮನಿಯಲ್ಲೂ ಅತಿ ಕೆಟ್ಟ ಟ್ರಾಫಿಕ್ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 1980 ಹಾಗೂ 90ರ ದಶಕದಲ್ಲಿ ಜರ್ಮನಿಯ ಹಂಬರ್ಗ್ ನಲ್ಲಿ ಹದೆಗೆಟ್ಟ ಟ್ರಾಫಿಕ್ ಪರಿಸ್ಥಿತಿ ನಿರ್ಮಾಣವಾಗಿತ್ತು.

13. ಜಕಾರ್ತ

13. ಜಕಾರ್ತ

ಇಂಡೋನೇಷ್ಯಾದ ರಾಜಧಾನಿ ಹಾಗೂ ಅತಿ ದೊಡ್ಡ ನಗರವಾಗಿರುವ ಜಕಾರ್ತ ರಸ್ತೆಯಲ್ಲಿ 6.5 ಮಿಲಿಯನ್ ಮೋಟಾರು ಬೈಕ್ ಹಾಗೂ ಎರಡು ಮಿಲಿಯನ್ ಗಳಷ್ಟು ಕಾರುಗಳು ಓಡಾಡುತ್ತಿದೆ.

12. ಜೋಹಾನ್ಸ್ ಬರ್ಗ್

12. ಜೋಹಾನ್ಸ್ ಬರ್ಗ್

ದಕ್ಷಿಣ ಆಫ್ರಿಕಾದ ಅತಿ ದೊಡ್ಡ ನಗರವಾಗಿರುವ ಜೋಹಾನ್ಸ್ ಬರ್ಗ್ ವಾಹನ ದಟ್ಟಣೆಯಲ್ಲಿ ಗಾಡಿ ಸ್ಟ್ಯಾರ್ಟ್ ಆಫ್ ಮಾಡಿ ಮಾಡಿಯೇ ಜನರು ಸುಸ್ತಾಗಿ ಬಿಟ್ಟಿದ್ದಾರೆ.

11. ಲಂಡನ್

11. ಲಂಡನ್

ಜಗತ್ತಿನ ಕೇಂದ್ರ ಬಿಂದು ನಗರಗಳಲ್ಲಿ ಒಂದಾಗಿರುವ ಲಂಡನ್ ಜನಸಂದಣಿಯಷ್ಟೇ ಅಲ್ಲದೆ ವಾಹನ ದಟ್ಟಣೆಯಲ್ಲೂ ಹೆಸರು ಮಾಡಿದೆ.

 10. ಲಾಸ್ ಏಂಜಲೀಸ್

10. ಲಾಸ್ ಏಂಜಲೀಸ್

ಅಧ್ಯಯನ ವರದಿಯೊಂದರ ಪ್ರಕಾರ ದಕ್ಷಿಣ ಕ್ಯಾಲಿಫೋರ್ನಿಯಾದ ಅತಿ ದೊಡ್ಡ ನಗರವಾಗಿರುವ ಲಾಸ್ ಏಂಜಲೀಸ್ ನಲ್ಲಿ ವರ್ಷಂಪ್ರತಿ 485 ಮಿಲಿಯನ್ ತಾಸು ಹಾಗೂ 367 ಮಿಲಿಯನ್ ಗ್ಯಾಲನ್ ಇಂಧನ ವ್ಯರ್ಥವಾಗುತ್ತಿದೆ.

09. ಪ್ಯಾರಿಸ್

09. ಪ್ಯಾರಿಸ್

ಲೈಯನ್ ಟು ಪ್ಯಾರಿಸ್ ಟ್ರಾಫಿಕ್ ಈಗಾಗಲೇ ಗಿನ್ನೆಸ್ ಪುಟವನ್ನು ಸೇರಿಕೊಂಡಿದೆ. ಕಳಪೆ ಹವಮಾನ ಪರಿಸ್ಥಿತಿಯಲ್ಲಂತೂ ಇಲ್ಲಿನ ಸ್ಥಿತಿ ಅತ್ಯಂತ ಹದೆಗೆಡುತ್ತದೆ.

08. ಮೆಕ್ಸಿಕೊ ಸಿಟಿ

08. ಮೆಕ್ಸಿಕೊ ಸಿಟಿ

ಜಗತ್ತಿನಲ್ಲೇ ಅತ್ಯಂತ ಪ್ರಯಾಸದಾಯಕ ಪ್ರಯಾಣಗಳ ನಗರಗಳಲ್ಲಿ ಗುರುತಿಸಿಕೊಂಡಿರುವ ಮೆಕ್ಸಿಕೊದಲ್ಲೂ ಟ್ರಾಫಿಕ್ ಅತ್ಯಂತ ಕೆಟ್ಟದಾಗಿರುತ್ತದೆ.

07. ಮೊಸ್ಕೋ

07. ಮೊಸ್ಕೋ

ರಷ್ಯಾದ ಅತಿ ದೊಡ್ಡ ಹಾಗೂ ಜನಸಾಂದ್ರತೆಯ ನಗರವಾಗಿರುವ ಮೊಸ್ಕೋ ನಗರ ಸಹ ಚಾಲಕರ ಪಾಲಿಗೆ ನರಕಯಾತನೆ ನೀಡುತ್ತಿದೆ.

06. ನವದಹೆಲಿ

06. ನವದಹೆಲಿ

ಪ್ರಸ್ತುತ ಪಟ್ಟಿನಲ್ಲಿ ನಮ್ಮ ನವದೆಹಲಿ ಸಹ ಕಾಣಿಸಿಕೊಂಡಿದೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ರಾಷ್ಟ್ರ ರಾಜಧಾನಿಯನ್ನು ಹರಸಿಕೊಂಡು ಬರುವವರ ಸಂಖ್ಯೆಯಲ್ಲೂ ಗಣನೀಯ ವರ್ಧನೆಯುಂಟಾಗಿದ್ದು, ಟ್ರಾಫಿಕ್ ಸಹ ಸಂಪೂರ್ಣ ಹದೆಗೆಟ್ಟಿದೆ.

05. ನ್ಯೂಯಾರ್ಕ್

05. ನ್ಯೂಯಾರ್ಕ್

ಅಮೆರಿಕ ಹೆಸರಾಂತ ನಗರಗಳಲ್ಲಿ ಒಂದಾಗಿರುವ ನ್ಯೂಯಾರ್ಕ್ ನಲ್ಲಿ ಪ್ರಾತ:ಕಾಲ ನಾಲ್ಕು ಗಂಟೆಯಿಂದಲೇ ಟ್ರಾಫಿಕ್ ಪರಿಸ್ಥಿತಿ ಆರಂಭವಾಗುತ್ತದೆ.

04. ಸಾವೋಪಾಲೋ

04. ಸಾವೋಪಾಲೋ

ದಕ್ಷಿಣ ಪೂರ್ವ ಬ್ರೆಜಿಲ್ ನಲ್ಲಿ ಸ್ಥಿತಗೊಂಡಿರುವ ಸಾವೋಪಾಲೋದಲ್ಲಿ 2009ರಲ್ಲಿ ಇತಿಹಾಸದಲ್ಲೇ ಅತಿ ಕೆಟ್ಟ ಟ್ರಾಫಿಕ್ ಪರಿಸ್ಥಿತಿ ನಿರ್ಮಾಣವಾಗಿತ್ತು.

03. ವಾರ್ಸೊ

03. ವಾರ್ಸೊ

ಪೊಲೆಂಡ್ ನ ರಾಜಧಾನಿ ಹಾಗೂ ಅತಿ ದೊಡ್ಡ ನಗರವಾಗಿರುವ ವಾರ್ಸೊ, ಯುರೋಪ್ ನ ಎರಡನೇ ಅತ್ಯಂತ ಕಿಕ್ಕಿರಿದ ನಗರವಾಗಿದೆ.

02. ಬ್ಯಾಂಕಾಕ್

02. ಬ್ಯಾಂಕಾಕ್

ಥಾಯ್ಲೆಂಡ್ ನ ರಾಜಧಾನಿ ಹಾಗೂ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿರುವ ಬ್ಯಾಂಕಾಕ್ ನಲ್ಲಿ ದಿನದ ಯಾವುದೇ ಹೊತ್ತಿನಲ್ಲು ಬೇಕಾದರೂ ಟ್ರಾಫಿಕ್ ಪರಿಸ್ಥಿತಿ ಉಂಟಾಗಬಹುದು. ಸಾಮಾನ್ಯವಾಗಿ ಇಲ್ಲಿ ಶಾಲಾ ಬಿಡುವ ಹೊತ್ತಿಗೆ ಹೆಚ್ಚಿನ ವಾಹನ ದಟ್ಟಣೆ ಸೃಷ್ಟಿಯಾಗುತ್ತದೆ.

01. ಚೀನಾ

01. ಚೀನಾ

ಚೀನಾದ ಪರಿಸ್ಥಿತಿ ಹೇಳದಿರುವುದೇ ಒಳಿತು. ಯಾಕಂದರೆ 2010 ಆಗಸ್ಟ್ ತಿಂಗಳಲ್ಲಿ ಚೀನಾದ ರಾಷ್ಟ್ರೀಯ ಹೆದ್ದಾರಿ 110ರಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ನಿಜಕ್ಕೂ ಮೈ ಜುಮ್ ಎನಿಸುವಂತಿತ್ತು. ಅಂದು 10 ದಿನಕ್ಕೂ ಹೆಚ್ಚು ಕಾಲ ಮುಂದುವರಿದ ಈ ವಾಹನ ದಟ್ಟಣೆ ಪರಿಸ್ಥಿತಿ 100 ಕೀ.ಮೀ. ಉದ್ದಕ್ಕೂ ಹರಡಿತ್ತು.

ಜಗತ್ತಿನ 20 ಹದೆಗೆಟ್ಟ ಟ್ರಾಫಿಕ್ ನಗರಗಳತ್ತ ಚಿಕ್ಕ ರೌಂಡಪ್!

ಈಗ ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ..

Most Read Articles

Kannada
English summary
Top 20 Worst Traffic Jams cities around the World
Story first published: Thursday, April 2, 2015, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X