ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಚೀನಾ ದೇಶವು ಯಾವುದೇ ವಸ್ತುವಿನ ನಕಲು ಮಾಡುವುದರಲ್ಲಿ ಎತ್ತಿದ ಕೈ. ಈ ಕಾರಣಕ್ಕೆ ವಿಶ್ವದಲ್ಲಿಯೇ ಕುಖ್ಯಾತಿಯನ್ನು ಪಡೆದಿದೆ. ಚೀನಾ ದೇಶದ ಆಟೋಮೊಬೈಲ್ ಕಂಪನಿಗಳು ವಿಶ್ವದ ಯಾವುದೇ ಜನಪ್ರಿಯ ಕಾರನ್ನು ಕ್ಷಣಮಾತ್ರದಲ್ಲಿ ನಕಲು ಮಾಡುತ್ತವೆ.

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಹೀಗೆ ನಕಲು ಮಾಡಲಾದ ಕಾರುಗಳು ಅಸಲಿಯಂತೆಯೇ ಕಾಣುತ್ತವೆ. ಅಸಲಿ ಯಾವುದು,ನಕಲಿ ಯಾವುದು ಎಂದು ಗುರುತಿಸುವುದೇ ಕಷ್ಟ. ಈ ಮೊದಲು ಚೀನಾದ ಕಾರು ತಯಾರಕ ಕಂಪನಿಗಳು ತಮ್ಮ ಪಾಶ್ಚಿಮಾತ್ಯ ಸ್ಪರ್ಧಿ ಕಂಪನಿಗಳ ಹೊಸ ಕಾರುಗಳನ್ನು ನಕಲು ಮಾಡಿ ತಮ್ಮ ದೇಶದಲ್ಲಿ ಮಾರಾಟ ಮಾಡುತ್ತಿದ್ದವು. ಇತ್ತೀಚೆಗೆ ಚೀನಾ ಸರ್ಕಾರವು ಮಧ್ಯಪ್ರವೇಶಿಸಿ ಈ ರೀತಿ ನಕಲು ಮಾಡುವುದರ ಮೇಲೆ ಹಲವು ನಿರ್ಬಂಧಗಳನ್ನು ಹೇರಿತ್ತು.

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಆದರೂ ಚೀನಾದ ಕಂಪನಿಗಳು ತಮ್ಮ ಹಳೆ ಚಾಳಿಯನ್ನು ಬಿಟ್ಟಿಲ್ಲ. ಈಗ ಹೆಂಗ್ಟಿಯನ್ ಆಟೋಮೊಬೈಲ್, ಎಲ್ 4600 ಎಸ್‌ಯುವಿಯನ್ನು ಉತ್ಪಾದಿಸಿದೆ. ಈ ಎಸ್‌ಯುವಿ ವಿಶ್ವಾದ್ಯಂತ ಜನಪ್ರಿಯವಾಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್‌ನ ನಕಲಿಯಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಈ ಎಸ್‌ಯುವಿಯನ್ನು ನೋಡಿದರೆ ಇಷ್ಟು ಚೆನ್ನಾಗಿ ನಕಲಿ ಮಾಡಬಹುದಾ ಎಂದು ಆಶ್ಚರ್ಯವಾಗದೇ ಇರಲಾರದು. ಎಲ್ 4600 ಎಸ್‌ಯುವಿ ಲ್ಯಾಂಡ್ ಕ್ರೂಸರ್‌ಗಿಂತ ದೊಡ್ಡದಾಗಿದೆ. ಆದರೆ ಲ್ಯಾಂಡ್ ಕ್ರೂಸರ್ ಈ ನಕಲಿ ಕಾರಿಗಿಂತ ಹೆಚ್ಚು ಉದ್ದ ಹಾಗೂ ಅಗಲವಾಗಿದೆ. ಈ ನಕಲು ಮಾದರಿಯ ಎಸ್‌ಯುವಿ ದೊಡ್ಡದಾದ ವ್ಹೀಲ್‌ಬೇಸ್ ಅನ್ನು ಸಹ ಹೊಂದಿದೆ.

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಚೀನಾದ ಕಂಪನಿಯು ಈ ಎಲ್ 4600 ಎಸ್‌ಯುವಿಯಲ್ಲಿ ತನ್ನದೇ ಆದ ಎಂಜಿನ್ ಹಾಗೂ ಗೇರ್‌ಬಾಕ್ಸ್ ಅನ್ನು ಅಳವಡಿಸಿದೆ, ಈ ಎಸ್‌ಯುವಿಯು 4.6 ಲೀಟರ್ ವಿ8 ಎಂಜಿನ್ ಹೊಂದಿದ್ದು, ಈ ಎಂಜಿನ್ 286 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಲ್ಯಾಂಡ್ ಕ್ರೂಸರ್ ಎಸ್‌ಯುವಿಯಲ್ಲಿ 5.7 ಲೀಟರ್ ವಿ8 ಎಂಜಿನ್ ಅಳವಡಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಹೆಂಗ್ಟಿಯನ್ ಕಂಪನಿಯು ಈ ಎಸ್‌ಯುವಿಯ ಬಾಡಿಯನ್ನು ತಾನೇ ತಯಾರಿಸಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಟೊಯೊಟಾ ಲ್ಯಾಂಡ್ ಕ್ರೂಸರ್‌ನ ಕ್ರೋಮ್ ಗ್ರಿಲ್ ಅನ್ನು ನಕಲು ಮಾಡಲಾಗಿದ್ದರೂ ವಿಭಿನ್ನವಾಗಿ ಕಾಣುವಂತೆ ತಿರುಚಲಾಗಿದೆ. ಈ ಎಸ್‌ಯುವಿಯ ಇಂಟಿರಿಯರ್ ಚಿತ್ರಗಳನ್ನು ಇನ್ನೂ ಬಿಡುಗಡೆಗೊಳಿಸಿಲ್ಲ.

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ಈ ಎಸ್‌ಯುವಿಯು ನೋಡಲು ಆಕರ್ಷಕವಾಗಿರದಿದ್ದರೂ ಐಷಾರಾಮಿಯನ್ನು ಹೆಚ್ಚಿಸಲು ಹಲವಾರು ಫೀಚರ್‌ಗಳನ್ನು ನೀಡಲಾಗಿದೆ. ಎಲ್ 4600 ಎಸ್‌ಯುವಿಯಲ್ಲಿ ವುಡ್ ಟ್ರಿಮ್ ಹಾಗೂ ಡ್ಯೂಯಲ್ ಟೋನ್ ಲೆದರ್ ಅಪ್‌ಹೊಲೆಸ್ಟರಿ ನೀಡಲಾಗಿದೆ. ಇದನ್ನು ಬಿಟ್ಟು ಬೇರೆ ಬದಲಾವಣೆಗಳನ್ನು ಮಾಡಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ಹಾವಳಿಯ ನಡುವೆಯೂ ಹಳೆ ಚಾಳಿ ಬಿಡದ ಚೀನಾ..!

ನಕಲಿ ಮಾದರಿಯಾದರೂ ಈ ಎಸ್‌ಯುವಿಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಈ ಎಸ್‌ಯುವಿಯ ಬೆಲೆ. ಈ ಎಸ್‌ಯುವಿಯ ಬೆಲೆ ಸುಮಾರು ರೂ.29.24 ಲಕ್ಷಗಳಾದರೆ, ಟೊಯೊಟಾ ಲ್ಯಾಂಡ್ ಕ್ರೂಸರ್‌ನ ಬೆಲೆ ರೂ.1.47 ಕೋಟಿಗಳಾಗುತ್ತದೆ. ಟೊಯೊಟಾ ಕಂಪನಿಯು ಈ ಡೂಪ್ಲಿಕೇಟ್ ಎಸ್‌ಯುವಿಯನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Toyota Land Cruiser Chinese copycat fake model. Read in Kannada.
Story first published: Tuesday, April 21, 2020, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X