ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

By Nagaraja

ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಇಂಡೋನೇಷ್ಯಾದಲ್ಲಿ ಮೂರು ದಿನಗಳ ಪರ್ಯಂತ (2016 ಜುಲೈ 03ರಿಂದ 05) ಉಂಟಾಗಿರುವ ನಿರಂತರ ಟ್ರಾಫಿಕ್ ಜಾಮ್ ನಿಂದಾಗಿ ಕನಿಷ್ಠ 12 ಮಂದಿ ಮೃತಪಟ್ಟಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ರಂಜಾನ್ ಹಬ್ಬದ ಪ್ರಯುಕ್ತ ಸಾವಿರಾರು ಮಂದಿ ತಮ್ಮ ತಮ್ಮ ಊರುಗಳಿಗೆ ಹೊರಡುವ ತವಕದಲ್ಲಿದ್ದರು. ಇದರ ಬೆನ್ನಲ್ಲೇ ಬ್ರೆಕ್ಸಿಟ್ ನಲ್ಲಿ ಉಂಟಾಗಿರುವ ಭಾರಿ ವಾಹನ ದಟ್ಟಣೆಗೆ ಅನೇಕ ಬಡ ಜೀವಗಳು ಬಲಿಯಾಗಿವೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಇಂಡೋನೇಷ್ಯಾದ ಪ್ರಮುಖ ಮಾರ್ಗವಾಗಿರುವ ಬ್ರೆಕ್ಸಿಟ್ ನಲ್ಲಿ ಪದೇ ಪದೇ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿರುವ ಪ್ರಸಂಗ ಸಾಮಾನ್ಯವಾಗಿಬಿಟ್ಟಿದೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಈ ಬಾರಿ ಸರಿ ಸುಮಾರು 21 ಕೀ.ಮೀ. ಗಳಷ್ಟು ದೂರ ಮೂರು ದಿನಗಳಷ್ಟು ಕಾಲ ನಿರಂತರ ವಾಹನ ದಟ್ಟಣೆ ಸೃಷ್ಟಿಯಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಟ್ರಾಫಿಕ್ ಜಾಮ್ ನಿಂದಾಗಿ 12 ಮಂದಿ ಜೀವ ತೆತ್ತಿದ್ದಾರೆ. ಇದಕ್ಕಿರುವ ಕಾರಣವನ್ನು ಪರಿಶೀಲಿಸಿದಾಗ ಅತಿಯಾದ ದಣಿವಿನಿಂದಾಗಿ ಉಂಟಾಗಿರುವ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ವಯಸ್ಸಾದವರು ಸೇರಿದ್ದಾರೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಇಂಡೋನೇಷ್ಯಾ ಸಾರಿಗೆ ಸಚಿವಾಲಯದ ವರದಿಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ 10,000ದಷ್ಟು ವಾಹನಗಳು ಟ್ರಾಫಿಕ್ ಜಂಜಾಟಕ್ಕೆ ಸಿಕ್ಕಿ ಹಾಕಿಕೊಂಡಿದ್ದವು.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಒಟ್ಟಾರೆಯಾಗಿ ಹಬ್ಬದ ಸಂಭ್ರಮಾಚರಣೆಯ ದಿನಗಳಲ್ಲಿ ನಡೆದಿರುವ ವಿವಿಧ ಅಪಘಾತ ಪ್ರಕರಣಗಳಲ್ಲಾಗಿ 400ರಷ್ಟು ವಾಹನ ಸಂಚಾರಿಗಳು ಮೃತಪಟ್ಟಿದ್ದಾರೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಬ್ರೆಬೆಸ್, ಜಾವಾ ದ್ವೀಪದ ಪ್ರಮುಖ ನಗರವಾಗಿದ್ದು, ವರ್ಷಂಪ್ರತಿ ಲಕ್ಷಾಂತರ ಮಂದಿ ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುವ ಸಲುವಾಗಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲು ಇದೇ ಹಾದಿಯನ್ನು ಆಶ್ರಯಿಸಿಕೊಂಡಿರುತ್ತಾರೆ.

ಇಂಡೋನೇಷ್ಯಾದಲ್ಲಿ 3 ದಿನಗಳ ಟ್ರಾಫಿಕ್ ಸಂಕಟಕ್ಕೆ 12 ಮರಣ

ಒಟ್ಟಿನಲ್ಲಿ ಇಂಡೋನೇಷ್ಯಾ ವಾಹನ ದಟ್ಟಣೆ ರದ್ಧಾಂತವು ಅಧಿಕೃತರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಮುಂದೆಯಾದರೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Most Read Articles

Kannada
English summary
Traffic jam in Indonesia kills 12 lasted 21km long
Story first published: Thursday, July 14, 2016, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X