ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

Written By:

ಹೌದು, ಜನಜಂಗುಳಿ/ವಾಹನ ಓಡಾಟವನ್ನು ನಿಯಂತ್ರಿಸುವ ಸಲುವಾಗಿ ಆಳವಡಿಸಲಾಗಿರುವ ಮೊತ್ತ ಮೊದಲ ಟ್ರಾಫಿಕ್ ದೀಪ ಅಥವಾ ಲೈಟು ಉರಿದು ಇಂದಿಗೆ ಭರ್ತಿ 101 ವರುಷ!. ವಾಹನ ಇತಿಹಾಸದ ಈ ಮಹತ್ತರ ದಿನಾಚರಣೆಯನ್ನು ಸರ್ಚ್ ಎಂಜಿನ್ 'ಗೂಗಲ್' ಸಹ ಕೊಂಡಾಡುತ್ತಿರುವುದು ವಿಶೇಷ.

Also Read : ಜಗತ್ತಿನ 20 ಹದೆಗೆಟ್ಟ ಟ್ರಾಫಿಕ್ ನಗರಗಳತ್ತ ಚಿಕ್ಕ ರೌಂಡಪ್

ಹಾಗಾದರೆ ಸಹಜವಾಗಿಯೇ ನಮ್ಮ ನಿಮ್ಮಲ್ಲರ ಮನದಲ್ಲಿ ಟ್ರಾಫಿಕ್ ಲೈಟು ಮೊದಲ ಬಾರಿಗೆ ಬೆಳಕು ಚೆಲ್ಲಿರುವುದು ಎಲ್ಲಿ? ಯಾವಾಗ? ಎಂಬ ಕುತೂಹಲ ಮೂಡಬಹುದು. ಇವೆಲ್ಲಕ್ಕೂ ಆಸಕ್ತಿದಾಯಕ ಹಿನ್ನೆಲೆಯೊಂದಿಗೆ ನಾವು ನಿಮ್ಮ ಮುಂದೆ ಬಂದಿರುತ್ತೇವೆ.

ಹಿನ್ನೆಲೆ

ಹಿನ್ನೆಲೆ

ಇತಿಹಾಸದತ್ತ ಕಣ್ಣಾಯಿಸಿದಾಗ 19ನೇ ಶತಮಾನದಲ್ಲೇ ಲಂಡನ್ ನಲ್ಲಿ ಮೊತ್ತ ಮೊದಲ ಟ್ರಾಫಿಕ್ ಲೈಟ್ ಆಳವಡಿಸಲಾಗಿತ್ತು. ಇದನ್ನು ಬ್ರಿಟನ್ ಹೌಸ್ ಆಫ್ ಪಾರ್ಲಿಮೆಂಟ್ ನ ಹೊರಗಡೆ ಲಗತ್ತಿಸಲಾಗಿತ್ತು.

ಚಿತ್ರದಲ್ಲಿ: 1940ರಲ್ಲಿ ಸ್ಯಾನ್ ಡಿಯಾಗೊದಲ್ಲಿ ಟ್ರಾಫಿಕ್ ಸಿಗ್ನಲ್ ಆಳವಡಿಕೆ

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ವಿಶೇಷವೆಂದರೆ ಮೊದಲ ಟ್ರಾಫಿಕ್ ದೀಪ ವಿದ್ಯುನ್ಮಾನ ನಿಯಂತ್ರಿತ ಟ್ರಾಫಿಕ್ ಲೈಟ್ ಆಗಿರಲಿಲ್ಲ. ಬದಲಾಗಿ ಗ್ಯಾಸ್ ನಿಯಂತ್ರಿತ ಇದನ್ನು ಬ್ರಿಡ್ಜ್ ಸ್ಟ್ರೀಟ್, ಗ್ರೇಟ್ ಜಾರ್ಜ್ ಸ್ಟ್ರೀಟ್ ಮತ್ತು ಪಾರ್ಲಿಮೆಂಟ್ ಸ್ಟ್ರೀಟ್ ಮಾರ್ಗಗಳಲ್ಲಿ ಹಾದು ಹೋಗುವ ವಾಹನಗಳನ್ನು ಕೈಯಿಂದಲೇ ನಿಯಂತ್ರಿಸಲಾಗುತ್ತಿತ್ತು.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಆದರೆ 1869ರಲ್ಲಿ ಸಂಭವಿಸಿದ ಗ್ಯಾಸ್ ಸ್ಪೋಟದ ಬಳಿಕ ಇದನ್ನು ಹಿಂಪಡೆಯಲಾಗಿತ್ತು. ಪ್ರಸ್ತುತ ಘಟನೆಯಲ್ಲಿ ಟ್ರಾಫಿಕ್ ದೀಪ ನಿಯಂತ್ರಿಸುತ್ತಿದ್ದ ಪೊಲೀಸ್ ಅಧಿಕಾರಿ ಗಂಭೀರ ಗಾಯಗೊಂಡಿದ್ದರು. ಇನ್ನು ಕೆಲವು ವರದಿಗಳಲ್ಲಿ ಸಾವನ್ನಪ್ಪಿರುವ ಬಗ್ಗೆಯೂ ಮಾಹಿತಿಯಿದೆ.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಸರಿ ಸುಮಾರು 30 ವರ್ಷಗಳ ಬಳಿಕ 1912ರಲ್ಲಿ ಅಮೆರಿಕದ ಉತಾಹ್ (Otah) ಸಾಲ್ಟ್ ಲೇಕ್ ಸಿಟಿಯಲ್ಲಿ ಲೆಸ್ಟೆರ್ ವೈರ್ ( Lester Wire) ಎಂಬ ಪೊಲೀಸ್ ಪೇದೆ ಮೊದಲ ಎಲೆಕ್ಟ್ರಿಕ್ ಲೈಟ್ ಅಭಿವೃದ್ಧಿಪಡಿಸಿದ್ದರು.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಆದರೆ 1914 ಆಗಸ್ಟ್ 05ರಂದು ಎಲೆಕ್ಟ್ರಿಕ್ ಟ್ರಾಫಿಕ್ ಲೈಟ್ ಗಳ ಯಶಸ್ವಿ ಪರೀಕ್ಷೆ ನಡೆಸಲಾಯಿತು. ಓಹಿಯೊದ ಕ್ಲೇವ್ ಲ್ಯಾಂಡ್ ಯೂಕ್ಲಿಡ್ ಅವೆನ್ಯೂ ಮತ್ತು ಈಸ್ಟ್ 105ನೇ ಸ್ಟ್ರೀಟ್‌ನಲ್ಲಿ ಅಮೆರಿಕ ಟ್ರಾಫಿಕ್ ಸಿಗ್ನಲ್ ಸಂಸ್ಥೆಯು ಇದನ್ನು ಆಳವಡಿಸಿತ್ತು. ಇದುವೇ ಮೊತ್ತ ಮೊದಲ ಟ್ರಾಫಿಕ್ ದೀಪವಾಗಿ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಇದು ಪ್ರಮುಖವಾಗಿಯೂ ಎರಡು ಬಣ್ಣಗಳನ್ನು ಹೊಂದಿತ್ತು. ಅದುವೇ ಬಳಿಕ ವಿಶ್ವದ್ಯಾಂತ ಟ್ರಾಫಿಕ್ ನಿಯಂತ್ರಣದಲ್ಲಿ ಏಕರೂಪದಲ್ಲಿ ಜನಪ್ರಿಯಗೊಂಡಿರುವ ಕೆಂಪು ಮತ್ತು ಹಸಿರು ಬಣ್ಣಗಳು. ಅಲ್ಲದೆ ಇದಕ್ಕೆ ಜೇಮ್ಸ್ ಹೋಗ್ (James Hoge) ವಿನ್ಯಾಸಿತ ದೀಪ ಬದಲಾಯಿಸುವಾಗ ಎಚ್ಚರಿಕೆಯ ಸೂಚನೆ ನೀಡಲು ಬಝರ್ ಶಬ್ದ ಕೂಡಾ ಆಳವಡಿಸಲಾಗಿತ್ತು.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಬಳಿಕ ಇದೇ ವ್ಯವಸ್ಥೆಯನ್ನು ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ಯಂತ್ರಗಳ ಸುಗಮ ಸಾರಿಗೆಗೆ ಬಳಕೆ ಮಾಡಲಾಯಿತು.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಬರ ಬರುತ್ತಾ 1920ರಲ್ಲಿ ಮಿಚಿಗನ್‌ನ ಡಿಟ್ರಾಯ್ಟ್ ನಲ್ಲಿ ಮೊದಲ ನಾಲ್ಕು ಹಾದಿಯ, ಮೂರು ಬಣ್ಣಗಳ ಸಂಚಾರಿ ಬೆಳಕನ್ನು ಪೊಲೀಸ್ ಅಧಿಕಾರಿ ವಿಲಿಯಮ್ಸ್ ಪೊಟ್ಸ್ ( William Potts) ಅಭಿವೃದ್ಧಿಪಡಿಸಿದರು. ಅದೇ ವರ್ಷ ಲಾಸ್ ಏಂಜಲೀಸ್ ನಲ್ಲಿ ಮೊದಲ ಸ್ವಯಂಚಾಲಿತ ಟ್ರಾಫಿಕ್ ದೀಪ ಪರಿಚಯವಾಗಿತ್ತು.

ಮೊದಲ ಟ್ರಾಫಿಕ್ ದೀಪ ಉರಿದು ಇಂದಿಗೆ ಭರ್ತಿ 101 ವರುಷ!

ಹೀಗೆ ಇತಿಹಾಸದ ಜೊತೆ ಸೇರಿಕೊಂಡಿರುವ ಟ್ರಾಫಿಕ್ ದೀಪ ವರ್ಷಂಗಳಿಂದ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇಂದಿಗೂ ಜಗತ್ತಿನೆಲ್ಲೆಡೆ ಸುಗಮ ಸಂಚಾರಕ್ಕಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ.

ಮತ್ತಷ್ಟು ಸುದ್ದಿಗಳು

ವಿಶ್ವದ ಅತಿ ಕೆಟ್ಟ ಟ್ರಾಫಿಕ್ ಜಾಮ್

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ

ರಸ್ತೆಯಲ್ಲಿ ನೀವು ಪಾಲಿಸಬೇಕಾದ ಮೂಲಭೂತ ಅಂಶಗಳು

 

English summary
Traffic light's 101th anniversary: When was the first traffic light installed?

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark