ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಭಾರತೀಯ ಸೇನೆಯು ಈ ಹಿಂದೆಂಗಿಂತಲೂ ತಾಂತ್ರಿಕವಾಗಿ ಸಾಕಷ್ಟು ಬಲಿಷ್ಠವಾಗುತ್ತಿದ್ದು, ಸೇನಾ ಬತ್ತಳಿಕೆಯಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಸೇನಾ ಸೌಲಭ್ಯಗಳನ್ನು ನವೀಕರಣಗೊಳಿಸಲು ಕೇಂದ್ರ ಸರ್ಕಾರವು ಭಾರೀ ಪ್ರಮಾಣದ ಹಣ ಖರ್ಚು ಮಾಡುತ್ತಿದ್ದು, ಇದರ ಪರಿಣಾಮವೇ ಸೇನಾ ಪಡೆಯು ಇಂದು ಹತ್ತು ಹಲವು ವಿಶ್ವದರ್ಜೆ ಸವಲತ್ತುಗಳನ್ನು ಅಳವಡಿಸಿಕೊಳ್ಳುತ್ತಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಭಾರತೀಯ ಸೇನೆಯಲ್ಲಿ ಈಗಾಗಲೇ ಹತ್ತಾರು ಬಗೆಯ ಸಾವಿರಾರು ಯುದ್ದ ವಾಹನಗಳು ಸೇವೆಯಲ್ಲಿದ್ದು, ಇದೀಗ ಟಾಟಾ ಮೋಟಾರ್ಸ್ ನಿರ್ಮಾಣದ ಹೊಚ್ಚ ಹೊಸ ಮಾದರಿಯ 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(MPV),ಮರ್ಲಿನ್ ಎಲ್ಎಸ್‌ವಿ ಮತ್ತು ವ್ಯಾಪ್( WhAP) 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ ( ICV) ವಾಹನಗಳು ಸೇನೆಗೆ ಮತ್ತಷ್ಟು ಬಲ ತುಂಬಲಿವೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಟಾಟಾ ಮೋಟಾರ್ಸ್ ಸಂಸ್ಥೆಯು ಕಳೆದ ವರ್ಷ ಸೆಪ್ಟೆಂಬರ್ 15 ರಂದು ಪುಣೆನಲ್ಲಿ ನಡೆದ ಎರಡು ದಿನಗಳ ಬಿಮ್ಸ್ಟೆಕ್ ಆರ್ಮಿ ಮುಖ್ಯಸ್ಥರ ಸಮಾವೇಶದಲ್ಲಿ ಸ್ವತಂತ್ರವಾಗಿ ನಿರ್ಮಿಸಲ್ಪಟ್ಟ ಹೊಸ ರಕ್ಷಣಾ ವಾಹನಗಳನ್ನು ಪ್ರದರ್ಶನ ಮಾಡಿದ್ದು, ಇದೀಗ ಹೊಸ ವಾಹನಗಳನ್ನು ಸೇನೆಗೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿವೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಇಂಡಿಯನ್ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್ಡಿಒ) ಯೊಂದಿಗೆ ಜಂಟಿಯಾಗಿ ಹೊಸ ಯುದ್ದ ವಾಹನಗಳನ್ನು ಸಿದ್ದಗೊಳಿಸುತ್ತಿರುವ ಟಾಟಾ ಸಂಸ್ಥೆಯು ಸದ್ಯದಲ್ಲೇ ಸೇನೆಗೆ ಹೊಸ ವಾಹನಗಳನ್ನು ಹಸ್ತಾಂತರ ಮಾಡಲಿದ್ದು, ಇದರಲ್ಲಿ ಮರ್ಲಿನ್ ಎಲ್ಎಸ್‌ವಿ ವಾಹನವು ಈಗಾಗಲೇ ಪೂರ್ಣಪ್ರಮಾಣದ ಸ್ಪಾಟ್ ಟೆಸ್ಟಿಂಗ್ ನಡೆಸಿ ಸೇವೆಗೆ ಸಿದ್ದಗೊಂಡಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ನೂತನ ಟಾಟಾ ಮರ್ಲಿನ್ ವಾಹನವು NATO ಪ್ರಮಾಣಿಕೃತ STANAG 4569 ಲೆವೆಲ್ 1 ಭದ್ರತೆ ನೀಡಲಿದ್ದು, ಶತ್ರುಗಳ ದಾಳಿ ಸಂದರ್ಭದಲ್ಲಿ ಗ್ರೇನೇಡ್ ದಾಳಿಗಳನ್ನು ಹಿಮ್ಮೆಟಿಸುವುದಲ್ಲದೇ ಸಣ್ಣ ಪ್ರಮಾಣದ ಬಾಂಬ್ ದಾಳಿಗಳನ್ನು ತಡೆದುಕೊಳ್ಳಬಲ್ಲ ಶಕ್ತಿಯನ್ನು ಹೊಂದಿರಲಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಹಾಗೆಯೇ ಮರ್ಲಿನ್ ಲೈಟ್ ಸರ್ಪೋಟ್ ವಾಹನದಲ್ಲಿ 7.6ಎಂಎಂ ಗನ್, 40ಎಂಎಂ ಅಟೋಮ್ಯಾಟಿಕ್ ಗ್ರೇನೇಡ್, ಆ್ಯಂಟಿ ಟ್ಯಾಂಕ್ ಮಿಸೈಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದು, 4x4 ಡ್ರೈವ್‌ ಟೆಕ್ನಾಲಿಜಿಯೊಂದಿಗೆ ರನ್ ಫ್ಲ್ಯಾಟ್ ಟೈರ್ ಸೌಲಭ್ಯವನ್ನು ಹೊಂದಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಮರ್ಲಿನ್ ಎಲ್ಎಸ್‌ವಿ ವಾಹನವು 3.3 ಲೀಟರ್ ಲಿಕ್ವಿಡ್ ಕೂಲ್ಡ್, ಡೈರೈಕ್ಟ್ ಇಂಜೆಕ್ಟ್ ಡೀಸೆಲ್ ಎಂಜಿನ್ ಜೋಡಣೆ ಪಡೆದಿದ್ದು, ಈ ಮೂಲಕ 185-ಬಿಎಚ್‌ಪಿ ಹಾಗೂ 450ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಇದಷ್ಟೇ ಅಲ್ಲದೇ ಭಾರತೀಯ ಸೇನಾಪಡೆಯಲ್ಲಿ ಜಿಪ್ಸಿ ಕಾರುಗಳ ಬದಲಾಗಿ ಟಾಟಾ ನಿರ್ಮಾಣದ ಆರ್ಮಿ ವರ್ಷನ್ 3193 ಸಫಾರಿ ಕಾರುಗಳನ್ನು ಖರೀದಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮರ್ಲಿನ್ ಎಲ್ಎಸ್‌ವಿ, 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(MPV), ವ್ಯಾಪ್( WhAP) 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ ( ICV) ವಾಹನಗಳು ಸಹ ಸೇನೆಯಲ್ಲಿ ಸದ್ದು ಮಾಡಲಿವೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ವ್ಯಾಪ್ 8x8 ಎಂಬುದು ಭಾರತದ ಮೊದಲ ಪದಾತಿ ಸೈನ್ಯದ ಯುದ್ಧ ವಾಹನವಾಗಿದ್ದು, ಇದು ಅತ್ಯುತ್ತಮ ಎಂಜಿನ್ ಸಾಮರ್ಥ್ಯದೊಂದಿಗೆ ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ನುಗ್ಗುವುದಲ್ಲದೇ ಶತ್ರುಪಡೆಗಳು ನಡೆಸುವ ಪ್ರತಿದಾಳಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವು.

MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ವ್ಯಾಪ್ 8x8 ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್‌ಗಳಲ್ಲಿ ಬ್ಲ್ಯಾಸ್ಟ್ ಪ್ರೊಟೆಕ್ಷನ್ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ ಈ ವಾಹನದಲ್ಲಿ ಚಾಲಕನ ಆಸನ ಸೇರಿ 12 ಆಸನಗಳನ್ನು ಅಳವಡಿಸಲಾಗಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಮತ್ತೊಂದು ವಿಶೇಷ ಅಂದ್ರೆ, ಸೇನಾಪಡೆಗಳ ಬೇಡಿಕೆಗೆ ಅನುಗುಣವಾಗಿ ವ್ಯಾಪ್ ವಾಹನವನ್ನು ಮಾಡಿಫೈ ಕೂಡಾ ಮಾಡಿಕೊಳ್ಳಬಹುದಾಗಿದ್ದು, 8x8 ಡ್ರೈವ್ ಟೆಕ್ನಾಲಜಿ ಹೊಂದಿರುವ ಈ ವಾಹನದಲ್ಲಿ ಪ್ರತಿ ಚಕ್ರವು ಸಹ ಪ್ರತ್ಯೇಕ ನಿಯಂತ್ರಣ ಹೊಂದಿರುತ್ತವೆ.

MOST READ: ಟಾಟಾ ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಟಾಟಾ ಸಂಸ್ಥೆಯು ವ್ಯಾಪ್ 8x8 ವಾಹನಗಳನ್ನು ಆರ್ಮ್ಡ್ ಫೈಟಿಂಗ್ ವೆಹಿಕಲ್, ಸಿಬಿಎನ್ಆರ್ ವೆಹಿಕಲ್, ರೆಸ್ಸ್ ಮತ್ತು ಸರ್ಪೋಟ್ ವೆಹಿಕಲ್, ಮೆಡಿಕಲ್ ಇವ್ಯಾಕ್ಯುವೇಶನ್ ವೆಹಿಕಲ್, ಇಂಜಿನಿಯರ್ ಸ್ಕ್ವಾಡ್ ವೆಹಿಕಲ್, ಮಾರ್ಟರ್ ಕ್ಯಾರಿಯರ್, ಕಮಾಂಡರ್ಸ್ ವೆಹಿಕಲ್ ಮತ್ತು ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ವಾಹನಗಳನ್ನು ಅಭಿವೃದ್ಧಿ ಮಾಡಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಇನ್ನು 4x4 ಮೈನ್ ಪ್ರೊಟೆಕ್ಟೆಡ್ ವೆಹಿಕಲ್(MPV)ಕೂಡಾ ವ್ಯಾಪ್ 8x8 ವಾಹನಗಳಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡುವ ವಾಹನ ಮಾದರಿಯಾಗಿದ್ದು, ಸೇನಾಪಡೆಗಳಿಗೆ ಎಸ್ಕಾರ್ಟ್ ರಕ್ಷಣಾ ವಾಹನವಾಗಲಿರಲಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ವಾಹನದ ಒಳಭಾಗವು ಟ್ರಕ್ ಮಾದರಿಯ ಸ್ಥಳ ವಿನ್ಯಾಸ ಹೊಂದಿದ್ದು, ಈ ವಾಹನವು ಸುಧಾರಿತ ತಂತ್ರಜ್ಞಾನ ಪ್ರೇರಿತ ರೂಫ್ ಟಾಪ್ ಪಡೆದುಕೊಂಡಿದೆ. ಒಂದು ವೇಳೆ ಈ ವಾಹನ ಮೇಲೆ ಶತ್ರುಗಳು ದಾಳಿ ನಡೆಸಿದ್ರು ವಾಹನದಲ್ಲಿರುವ ಗುಣಮಟ್ಟದ ಬಾಡಿ ಕವಚವು ಬಾಂಬ್ ದಾಳಿಗಳನ್ನು ಮೆಟ್ಟಿಹಾಕಲಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ಜೊತಗೆ ಯುದ್ದ ಪ್ರದೇಶಗಳಿಗೆ ಗರಿಷ್ಠ ಮಟ್ಟದ ಸರಕು ಸಾಗಾಣಿಕೆ ಸಾಗಿಸಲು ನೆರವಾಗಲಿರುವ ಈ ವಾಹನವು ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕಿಯ್ಲೆರೆನ್ಸ್ ಹೊಂದಿದ್ದು, ಭದ್ರತಾ ದೃಷ್ಠಿಯಿಂದ ಈ ವಾಹನಗಳಲ್ಲಿ ನೀಡಲಾಗಿರುವ ಮಹತ್ವದ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿ ಇಡಲಾಗಿದೆ.

ಭಾರತೀಯ ಸೇನೆಗೆ ಸೇರಲಿರುವ ಟಾಟಾ ಮರ್ಲಿನ್ ಎಲ್ಎಸ್‌ವಿ ಸ್ಪೆಷಲ್ ಏನು?

ವಿದೇಶಿಯಲ್ಲೂ ಇದೆ ಟಾಟಾ ಹವಾ.!

ಟಾಟಾ ಸಂಸ್ಥೆಯು ಭಾರತೀಯ ಸೇನೆಗೆ ಅಷ್ಟೇ ಅಲ್ಲದೇ ಮಯನ್ಮಾರ್ ಮತ್ತು ಥೈಲ್ಯಾಂಡ್ ಸೇನೆಗೂ ತನ್ನ ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಝೆನಾನ್ ಜಿಎಸ್ 800, 2.5ಟಿ ಜಿಎಸ್ ಎಲ್‌ಪಿಟಿಎ 715 4x4 ಮತ್ತು 5ಟಿ ಜಿಎಸ್ ಎಲ್‌ಪಿಟಿಎ 1628 4x4 ವಾಹನಗಳನ್ನು ರಫ್ತು ಮಾಡುತ್ತಿದೆ.

Image Courtesy: Instagram

Most Read Articles

Kannada
English summary
Upcoming Tata Merlin LSV for Indian Army. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X