ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

By Nagaraja

ಈ ಜಗತ್ತಿನಲ್ಲಿ ಯಾರಿಗೂ ಟೈಮ್ ಇಲ್ಲ. ಎಲ್ಲವೂ ವೇಗವಾಗಿ ಸಾಗುತ್ತಿದೆ. ಅಂತೆಯೇ ಈ ವೇಗದ ಪ್ರಪಂಚದಲ್ಲಿ ಹಲವಾರು ವೇಗದ ದಾಖಲೆಗಳು ದಾಖಲಾಗುತ್ತಿದೆ. ಕೇವಲ ಕಾರುಗಳು ಮಾತ್ರ ವೇಗವಾಗಿ ಚಲಿಸುತ್ತದೆ ಅಂದರೆ ತಪ್ಪಾದಿತ್ತು. ಕಾರುಗಳಿಗಿಂತ ವಿಭಿನ್ನವಾಗಿ ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲಾಗುವ ಟ್ರ್ಯಾಕ್ಟರ್ ವೊಂದು ನೂತನ ದಾಖಲೆ ಬರೆದಿದೆ.

ನಾವಿಂದು ಪರಿಚಯಿಸಲಿರುವ ವಾಹನವು ವಿಶ್ವದ ಅತಿ ವೇಗದ ಟ್ರ್ಯಾಕ್ಟರ್ ಎಂಬ ದಾಖಲೆಗಾಗಿ ಪಾತ್ರವಾಗಿದೆ. ಗಿನ್ನೆಸ್ ಪುಟ ಸೇರಿರುವ ಈ ಟ್ರ್ಯಾಕ್ಟರ್ ಹೆಸರೇನು? ಎಷ್ಟು ವೇಗದಲ್ಲಿ ಸಂಚರಿಸಿರಬಹುದು? ಇವೆಲ್ಲದಕ್ಕೂ ಫೋಟೊ ಸ್ಲೈಡ್ ನಲ್ಲಿ ಮಾಹಿತಿಯನ್ನು ಕೊಡಲಿದ್ದೇವೆ...

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಸಾಮಾನ್ಯವಾಗಿ ಟ್ರ್ಯಾಕ್ಟರ್ ಗಳು ಆಮೆ ಗತಿಯನ್ನು ವೇಗವನ್ನು ಹೊಂದಿರುತ್ತದೆ. ಆದರೆ ಗಂಟೆಗೆ 130.165 ಕೀ.ಮೀ. ವೇಗದಲ್ಲಿ ಸಂಚರಿಸಿರುವ ಈ ಟ್ರ್ಯಾಕ್ಟರ್ ನೂತನ ದಾಖಲೆ ಬರೆದಿದೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಫಿನ್ ಲ್ಯಾಂಡ್ ತಳಹದಿಯ ವಾಲ್ಟ್ರಾ ಸಂಸ್ಥೆಯು ಈ ಟ್ರ್ಯಾಕ್ಟರನ್ನು ನಿರ್ಮಿಸಿದೆ. ಪ್ರಸ್ತುತ ಸಂಸ್ಥೆಯು 1951ನೇ ಇಸವಿಯಿಂದಲೇ ಟ್ರ್ಯಾಕ್ಟರ್ ಗಳನ್ನು ನಿರ್ಮಿಸುತ್ತಿದೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ನಾಲ್ಕು ಬಾರಿ ವಿಶ್ವ ಚಾಂಪಿಯನ್ ಶಿಪ್ ವಿಜೇತ ಫಿನ್ ಲ್ಯಾಂಡ್ ರಾಲಿ ಕಾರು ಚಾಲಕ ಜುಹಾ ಕಂಕುನೆನ್ (Kankkunen) ಎಂಬವರು ವಾಲ್ಟ್ರಾ ಟಿ234 ಟ್ರ್ಯಾಕ್ಟರ್ ನಲ್ಲಿ ಗಂಟೆಗೆ 130 ಕೀ.ಮೀ. ವೇಗದಲ್ಲಿ ಚಲಿಸುವ ಮೂಲಕ ಸಾಧನೆ ಮಾಡಿದ್ದಾರೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಅಷ್ಟಕ್ಕೂ ಈ ದಾಖಲೆಯನ್ನು ಸಾಮಾನ್ಯ ರಸ್ತೆಯಾಗಲಿ ಅಥವಾ ರೇಸ್ ಟ್ರ್ಯಾಕ್ ನಲ್ಲಾಗಲಿ ಮಾಡಲಾಗಿಲ್ಲ. ಬದಲಾಗಿ ಇದಕ್ಕಾಗಿ ಅತ್ಯಂತ ಕಠಿಣ ಹಿಮದಿಂದ ಆವೃತ್ತವಾದ ಪ್ರದೇಶವನ್ನೇ ಆಯ್ಕೆ ಮಾಡಲಾಗಿತ್ತು.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಇದಕ್ಕಾಗಿ ನೋಕಿಯನ್ ಚಕ್ರಗಳನ್ನು (Nokian Hakkapeliitta TRI tyres) ಬಳಕೆ ಮಾಡಲಾಗಿದೆ. ಚಾಲಕರೇ ಹೇಳುವ ಪ್ರಕಾರ ಇದರ ಹೊರತಾಗಿ ದಾಖಲೆ ಸಾಧಿಸುವುದು ಅಸಾಧ್ಯವಾಗಿತ್ತು ಎಂದಿದ್ದಾರೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಚಕ್ರಗಳಲ್ಲಿ ವಿಶೇಷ ಥ್ರೆಡ್ ಗಳನ್ನು ಆಳವಡಿಸಲಾಗಿದ್ದು, ಅತ್ಯುತ್ತಮ ಗ್ರಿಪ್ ಹಾಗೂ ಉರುಳಿವಿಕೆಗೆ ನೆರವಾಗಿದೆ. ಇದು ವಿಂಟರ್ ಚಕ್ರಗಳೆಂದೇ ಪ್ರಸಿದ್ಧಿ ಪಡೆದಿದೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಫಿನ್ ಲ್ಯಾಂಡ್ ವಾಯುಪಡೆಯ ತುರ್ತು ನೆಲೆ Vuojärvi ನಲ್ಲಿ ಈ ದಾಖಲೆ ಬರೆಯಲಾಗಿದೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಅಂದ ಹಾಗೆ ಪ್ರಸ್ತುತ ಟ್ರ್ಯಾಕ್ಟರ್ ನಲ್ಲಿ 247 ಅಶ್ವಶಕ್ತಿ ಉತ್ಪಾದಿಸಬಲ್ಲ ಆರು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಜುಹಾ ಕಂಕುನೆನ್ ಈ ಹಿಂದೆ ಹಲವು ಕಾರುಗಳಲ್ಲಿ ಟಾಪ್ ಸ್ಪೀಡ್ ಟೆಸ್ಟಿಂಗ್ ಮಾಡಿರುತ್ತೇನೆ. ಆದರೆ ಇದೇ ಮೊದಲ ಬಾರಿಗೆ ಟ್ರ್ಯಾಕ್ಟರ್ ಪ್ರಯೋಗ ಮಾಡಲಾಗಿದ್ದು, ಮೊದಲ ಪ್ರಯತ್ನದಲ್ಲೇ ದಾಖಲೆ ಸೃಷ್ಟಿಯಾಗಿದೆ ಎಂದಿದ್ದಾರೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಚಳಿಗಾಲದ ಸವಾಲಿನ ವಾತಾವರಣ ಪರಿಸ್ಥಿತಿಯಲ್ಲೂ ಟ್ರ್ಯಾಕ್ಟರ್ ಹಾಗೂ ಚಕ್ರಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದವರು ವಿವರಿಸಿದ್ದಾರೆ.

ವೇಗದ ಪ್ರಪಂಚದಲ್ಲೊಂದು ವೇಗದೂತ ಟ್ರ್ಯಾಕ್ಟರ್

ಅಷ್ಟಕ್ಕೂ ಇದು ಮೊದಲ ಮೊದಲ ಬಾರಿಯೇನಲ್ಲ ನೊಕಿಯನ್ ಚಕ್ರಗಳಲ್ಲಿ ವಿಶ್ವ ದಾಖಲೆ ನಿರ್ಮಾಣವಾಗುತ್ತಿರುವುದು. 2013ರಲ್ಲಿ ಹಿಮದಿಂದ ಆವೃತ್ತವಾದ ಪ್ರದೇಶದಲ್ಲೇ ಕಾರಿನಲ್ಲಿ ಗಂಟೆಗೆ 335.713 ವೇಗದಲ್ಲಿ ಸಂಚರಿಸುವ ಮೂಲಕ ದಾಖಲೆ ಮಾಡಲಾಗಿತ್ತು.

ವಾಲ್ಟ್ರಾ ಶ್ರೇಣಿಯ ಟ್ರ್ಯಾಕ್ಟರ್ ಗಳು ಇಂತಿದೆ

ವಾಲ್ಟ್ರಾ ಶ್ರೇಣಿಯ ಟ್ರ್ಯಾಕ್ಟರ್ ಗಳು ಇಂತಿದೆ

ವಾಲ್ಟ್ರಾ ಎಸ್ ಸಿರೀಸ್ (270-400 ಅಶ್ವಶಕ್ತಿ)

ವಾಲ್ಟ್ರಾ ಟಿ ಸಿರೀಸ್ (170-250 ಅಶ್ವಶಕ್ತಿ)

ವಾಲ್ಟ್ರಾ ಎನ್ ಸಿರೀಸ್ (88-160 ಅಶ್ವಶಕ್ತಿ)

ವಾಲ್ಟ್ರಾ ಎ ಸಿರೀಸ್ (74-98 ಅಶ್ವಶಕ್ತಿ)

ವಾಲ್ಟ್ರಾ 3000 ಸಿರೀಸ್ (52-76 ಅಶ್ವಶಕ್ತಿ)

Most Read Articles

Kannada
English summary
Every now and then, there is a vehicle that sets a speed record. Trying to make a mark in the book of records is not just limited to cars or motorcycles, but to other vehicles that have wheels and an engine to power them.
Story first published: Wednesday, April 22, 2015, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X