ಒಂದೇ ದಿನದ ಅಂತರದಲ್ಲಿ ಮತ್ತೊಂದು ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಳೆದ ಗುರುವಾರ (ಸೆ.6) ಎಮ್ಮೆಗಳಿಗೆ ಡಿಕ್ಕಿ ಹೊಡೆದ ಒಂದು ದಿನದ ನಂತರ, ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ಶುಕ್ರವಾರ (ಸೆ.7) ಸಂಜೆ 4 ಗಂಟೆಗೆ ಗುಜರಾತ್‌ನ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಫಲಕಕ್ಕೆ ಸಣ್ಣ ಹಾನಿಯಾಗಿದೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಮುಂಬೈ ರೈಲು ತನ್ನ ಟ್ರಾಕ್‌ನಲ್ಲಿ ಅಡ್ಡ ಬಂದ ಹಸುವಿಗೆ ಡಿಕ್ಕಿ ಹೊಡೆದಿದೆ. ಮಧ್ಯಾಹ್ನ 3.45ರ ಸುಮಾರಿಗೆ ಈ ಘಟನೆ ನಡೆದಿದೆ. ಹೆಚ್ಚಿನ ಹಾನಿಯಾಗಿಲ್ಲ ಆದರೆ ರೈಲು ಸುಮಾರು 10 ನಿಮಿಷಗಳ ಕಾಲ ನಿಲ್ಲಬೇಕಾಯಿತು. ಆ ವೇಳೆ ರೈಲು ಮುಂಬೈಗೆ ತೆರಳುತಿತ್ತು ಎಂದು ವಡೋದರಾದ ಪಶ್ಚಿಮ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಜಾನುವಾರು V/s ವಂದೇ ಭಾರತ್

ವಂದೇ ಭಾರತ್ ರೈಲು ದನಗಳಿಗೆ ಡಿಕ್ಕಿ ಹೊಡಿದಿದ್ದು ಇದೇ ಮೊದಲಲ್ಲ. ಗುರುವಾರ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ರೈಲಿನ ಮುಂಭಾಗ ಹಾನಿಯಾಗಿದ್ದು, ತಕ್ಷಣ ಸರಿಪಡಿಸಲಾಗಿದೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಪಶ್ಚಿಮ ರೈಲ್ವೇ ವಕ್ತಾರ ಜಿತ್ನೇದ್ರ ಕುಮಾರ್ ಜಯನತ್ ಈ ಕುರಿತು ಮಾತನಾಡಿ, ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ಕ್ಯಾಪಿಟಲ್ ಸ್ಟೇಷನ್‌ಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಗುರುವಾರ ಬೆಳಗ್ಗೆ 11.15ರ ಸುಮಾರಿಗೆ ಹಳಿ ಮೇಲೆ ಬಂದ ಕೆಲವು ಎಮ್ಮೆಗಳಿಗೆ ಢಿಕ್ಕಿ ಹೊಡೆದಿದ್ದರಿಂದ ರೈಲಿನ ಇಂಜಿನ್‌ನ ಮುಂಭಾಗ ಹಾನಿಯಾಗಿದೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ಪ್ರದೇಶದ ನಡುವೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ಹಾನಿ ಸಂಭವಿಸಿರಲಿಲ್ಲ. ಡಿಕ್ಕಿಗೆ ಬಲಿಯಾದ ಎಮ್ಮೆಗಳನ್ನು ತೆರವುಗೊಳಿಸಿದ 8 ನಿಮಿಷಗಳಲ್ಲಿ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಈ ಮಾರ್ಗದಲ್ಲಿ ರೈಲಿಗೆ ಧ್ವಜಾರೋಹಣ ನೆರವೇರಿಸಿದ್ದರು. "ರೈಲನ್ನು ಶಕ್ತಿಯುತವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಎಷ್ಟು ಪ್ರಬಲವಾಗಿದೆ ಎಂದರೆ ಅಪಘಾತ ಸಂಭವಿಸಿದರೆ ರೈಲಿಗೆ ಏನೂ ಆಗುವುದಿಲ್ಲ. ರೈಲು ಮುಂಬೈ ತಲುಪಿದ ತಕ್ಷಣ (ಗುರುವಾರದ ಘಟನೆಯ ನಂತರ), ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು. ಅದರ ಮುಂಭಾಗವನ್ನು ಬದಲಾಯಿಸಲಾಯಿತು, ರೈಲನ್ನು "ಬಹಳ ಚಿಂತನಶೀಲವಾಗಿ" ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಆದರೆ ಇದೀಗ ಮತ್ತೊಂದು ಘಟನೆ ನಡೆದಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ಇಂತಹ ಸಂದರ್ಭಗಳನ್ನು ತಪ್ಪಿಸಲು ಗಾಂಧಿನಗರ-ಅಹಮದಾಬಾದ್ ಪ್ರದೇಶದಲ್ಲಿ ಫೆನ್ಸಿಂಗ್ ರಚಿಸುವುದಾಗಿ ರೈಲ್ವೇಸ್ ಠಾಕೂರ್ ಕೈಗೊಳ್ಳಬಹುದಾದ ಸಂಭಾವ್ಯ ಕ್ರಮಗಳ ಕುರಿತು ಹೇಳಿದರು. ಮಾರ್ಚ್, 2024 ರ ವೇಳೆಗೆ 160 ಕಿ.ಮೀ ವೇಗವನ್ನು ಖಾತರಿಪಡಿಸುವ ಬೇಲಿ ಕಾರ್ಯವನ್ನು ಮಾಡಲಾಗುತ್ತದೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಕುತೂಹಲಕಾರಿಯಾಗಿ, ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಪಶ್ಚಿಮ ರೈಲ್ವೆಯು ಎಫ್ಐಆರ್ ಅನ್ನು ಸಹ ದಾಖಲಿಸಿದೆ. ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ರೈಲು ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ಬಂದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್‌ಪಿಎಫ್ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ ಎಂದು ಪಶ್ಚಿಮ ರೈಲ್ವೇ ವಕ್ತಾರ ಜಿತೇಂದ್ರ ಜಯಂತ್ ಹೇಳಿದ್ದಾರೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ರೈಲ್ವೆ ಆವರಣದ ಯಾವುದೇ ಭಾಗಕ್ಕೆ ಅನಧಿಕೃತವಾಗಿ ಪ್ರವೇಶಿಸುವುದನ್ನು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಷೇಧಿಸುವ ರೈಲ್ವೇ ಕಾಯಿದೆ, 1987 ರ ಸೆಕ್ಷನ್ 147 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಮ್ಮೆಗಳ ಮಾಲೀಕರನ್ನು ಪೊಲೀಸರು ಇನ್ನೂ ಗುರುತಿಸಿಲ್ಲ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ವಂದೇ ಭಾರತ್ ರೈಲುಗಳಲ್ಲಿ ವಿಮಾನದಷ್ಟೇ ಸೌಕರ್ಯ

ಟಾಟಾ, ಸ್ಟೀಲ್ ಟು ಸಾಲ್ಟ್ ಸಮೂಹ ಸಂಸ್ಥೆಯು 2030 ರ ವೇಳೆಗೆ ಜಾಗತಿಕ ಉಕ್ಕು ಉದ್ಯಮದಲ್ಲಿ ಟಾಪ್ 5 ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗುವ ಗುರಿಯನ್ನು ಹೊಂದಿದೆ. ಇದಕ್ಕನುಗುಣವಾಗಿ ಇತ್ತೀಚೆಗೆ ಟಾಟಾ ಸ್ಟೀಲ್‌ನ ಕಾಂಪೋಸಿಟ್ಸ್ ವಿಭಾಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಸನ ವ್ಯವಸ್ಥೆಗಳಿಗಾಗಿ 145 ಕೋಟಿ ರೂ.ನ ಬೃಹತ್ ಆರ್ಡರ್ ಪಡೆದುಕೊಂಡಿತ್ತು.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಇನ್ನು ಹೊಸ ವಂದೇ ಭಾರತ್ ಪ್ರತಿ ರೈಲು ಸೆಟ್‌ನಲ್ಲಿ 16 ಕೋಚ್‌ಗಳಿರಲಿದ್ದು, ಇಂತಹ 22 ರೈಲು ಸೆಟ್‌ಗಳಿಗೆ ಟಾಟಾ ಸಂಪೂರ್ಣ ಆಸನ ವ್ಯವಸ್ಥೆಗಳ ಪೂರೈಕೆ ಮಾಡಲಿದೆ. "ಇವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಸನಗಳಾಗಿದ್ದು, ಇವುಗಳು 180 ಡಿಗ್ರಿ ತಿರುಗಬಲ್ಲವು ಮತ್ತು ವಿಮಾನ ಮಾದರಿಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರಲಿವೆ.

ಒಂದೇ ದಿನದ ಅಂತರದಲ್ಲಿ ಮತ್ತೊಮ್ಮೆ ಅಪಘಾತಕ್ಕೀಡಾದ ವಂದೇ ಭಾರತ್ ರೈಲು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

2019ರಲ್ಲಿ ಪರಿಚಯಿಸಲಾದ ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ಮೂಲತಃ ಟ್ರೈನ್ 18 ಎಂದು ಕರೆಯಲ್ಪಡುತ್ತವೆ. ಪ್ರಸ್ತುತ ದೆಹಲಿ-ವಾರಣಾಸಿ ಮತ್ತು ದೆಹಲಿ-ಕರ್ತಾ ಮಾರ್ಗಗಳಲ್ಲಿ ಈ ರೈಲುಗಳು ಓಡುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.

Most Read Articles

Kannada
Read more on ರೈಲು train
English summary
Vande Bharat train has another accident within a day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X