ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ದೇಶದಲ್ಲಿ ಸೆಮಿಕಂಡಕ್ಟರ್ ಕೊರತೆ ಎದುರಿಸುತ್ತಿರುವ ಆಟೋಮೊಬೈಲ್ ಕಂಪನಿಗಳಿಗೆ ನೆರವಾಗಲು ವೇದಾಂತ ಗ್ರೂಪ್ ಮುಂದಾಗಿದೆ. ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ವೇದಾಂತ ಗ್ರೂಪ್ ನಿರ್ಧರಿಸಿದೆ. ವೇದಾಂತ ಗ್ರೂಪ್ ಮುಖ್ಯಸ್ಥರಾದ ಅನಿಲ್ ಅಗರ್ವಾಲ್ ರವರು ದೇಶದಲ್ಲಿ ಸೆಮಿಕಂಡಕ್ಟರ್‌ಗಳ ಉತ್ಪಾದನೆಯನ್ನು ಆರಂಭಿಸಲು ರೂ. 60,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಮುಂದಿನ ಮೂರು ವರ್ಷಗಳಲ್ಲಿ ಈ ಹೂಡಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕೇಂದ್ರ ಸರ್ಕಾರವು ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಘೋಷಿಸಿದ ಕೆಲವೇ ದಿನಗಳ ನಂತರ ವೇದಾಂತ ಗ್ರೂಪ್ ಕಂಪನಿಯು ಈ ಘೋಷಣೆ ಮಾಡಿದೆ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ವೇದಾಂತ ಗ್ರೂಪ್ ಅವಾನ್‌ಸ್ಟ್ರಾಟ್ ಕಂಪನಿಯೊಂದಿಗೆ ಕೈಜೋಡಿಸಲಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಅವಾನ್‌ಸ್ಟ್ರಾಟ್ ಜಪಾನ್ ಮೂಲದ ಕಂಪನಿಯಾಗಿದೆ. ಈ ಕಂಪನಿಯನ್ನು ವೇದಾಂತ ಗ್ರೂಪ್ 2017ರಲ್ಲಿ ಕಾರ್ಲೈಲ್ ಗ್ರೂಪ್‌ನಿಂದ ಸ್ವಾಧೀನಪಡಿಸಿಕೊಂಡಿತು. ಕಂಪನಿಯು TSMC, United Microelectronics Corp, Foxconn, Korean LG ಹಾಗೂ ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ Samsung ಹಾಗೂ Sharp ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಈ ಮಾತುಕತೆಗಳು ತಂತ್ರಜ್ಞಾನ ಪಾಲುದಾರಿಕೆ ಅಥವಾ ಜಂಟಿ ಉದ್ಯಮಗಳ ಮೂಲಕ ಜಂಟಿ ಇಕ್ವಿಟಿ ಹೂಡಿಕೆಗಳಿಗೆ ಕಾರಣವಾಗಬಹುದು. ವೇದಾಂತ ಗ್ರೂಪ್ ಎಲ್‌ಸಿ‌ಡಿ ಮಾಡ್ಯೂಲ್ ಪ್ಲಾಂಟ್ ಜೊತೆಗೆ ಡಿಸ್ಪ್ಲೇ ಗ್ಲಾಸ್ ಹಾಗೂ ಫ್ಯಾಬ್ರಿಕೇಶನ್ ಚಿಪ್‌ಗಳಿಗಾಗಿ ದೊಡ್ಡ ಸೌಲಭ್ಯಗಳನ್ನು ಕಲ್ಪಿಸಲು ಈ ಹೂಡಿಕೆ ಮಾಡಲಿದೆ. ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಂಪನಿಗೆ 250 ರಿಂದ 400 ಎಕರೆ ಜಮೀನಿನ ಅಗತ್ಯವಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಸೆಮಿಕಂಡಕ್ಟರ್ ಉತ್ಪಾದನಾ ಘಟಕಕ್ಕೆ ರೂ. 45,000 ರಿಂದ ರೂ. 60,000 ಕೋಟಿಗಳವರೆಗೆ ಎರಡು ಹಂತಗಳಲ್ಲಿ ಹೂಡಿಕೆ ಮಾಡಲಾಗುವುದು. ನಂತರ ಮತ್ತಷ್ಟು ವಿಸ್ತರಣೆಯ ಬಗ್ಗೆ ಮಾರುಕಟ್ಟೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅವಾನ್‌ಸ್ಟ್ರಾಟ್ ತನ್ನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹಾಗೂ ಉತ್ತೇಜಿಸಲು ಹೂಡಿಕೆ ಯೋಜನೆಗಳ ಕುರಿತು ಕರ್ನಾಟಕ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಈ ಮಾತುಕತೆಯು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಹೊರತಾಗಿ ರಾಜ್ಯಗಳಿಂದ ಹೆಚ್ಚುವರಿಯಾಗಿ 10%ನಿಂದ 15%ವರೆಗೂ ಬಂಡವಾಳ ಹೂಡಿಕೆ ಬೆಂಬಲವನ್ನು ಪಡೆಯುವ ನಿರೀಕ್ಷೆಗಳಿವೆ ಎಂದು ವೇದಾಂತ ಗ್ರೂಪ್ ಹೇಳಿದೆ. ಈ ನಡುವೆ ಮುಂದಿನ 2 - 3 ವರ್ಷಗಳಲ್ಲಿ ಸುಮಾರು 10 - 12 ಕಂಪನಿಗಳು ಸೆಮಿಕಂಡಕ್ಟರ್‌ಗಳ ಉತ್ಪಾದನೆಯನ್ನು ಆರಂಭಿಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ವೈಷ್ಣವ್ ಜೈನ್ ಹೇಳಿದ್ದಾರೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಈ ಅವಧಿಯಲ್ಲಿ ಸುಮಾರು 50 - 60 ಡಿಸೈನಿಂಗ್ ಹಾಗೂ ಫ್ಯಾಬ್ರಿಕೇಶನ್ ಕಂಪನಿಗಳು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯನ್ನು ಆರಂಭಿಸಲು ಎಲೆಕ್ಟ್ರಾನಿಕ್ಸ್ ಘಟಕ ತಯಾರಕ ಕಂಪನಿಗಳು ಆಟೋಮೊಬೈಲ್ ಕಂಪನಿಗಳಿಗೆ ನೆರವಾಗುವ ನಿರೀಕ್ಷೆಗಳಿವೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಸೆಮಿಕಂಡಕ್ಟರ್‌ಗಳ ಬಗ್ಗೆ:

ಸೆಮಿಕಂಡಕ್ಟರ್‌ಗಳು ಸಿಲಿಕಾನ್‌ನಿಂದ ಮಾಡಿದ ಎಲೆಕ್ಟ್ರಾನಿಕ್ ಚಿಪ್‌ಗಳಾಗಿವೆ. ಕಾರುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಲ್ಲಿನ ಕರೆಂಟ್ ಅನ್ನು ನಿಯಂತ್ರಿಸಲು ಇವು ನೆರವಾಗುತ್ತವೆ. ಇಂದು ಸೆಮಿಕಂಡಕ್ಟರ್‌ಗಳಿಲ್ಲದ ಕಾರುಗಳನ್ನು ಊಹಿಸಿಕೊಳ್ಳುವುದು ಕಷ್ಟ. ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಕಾರುಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ. ಸೆಮಿಕಂಡಕ್ಟರ್‌ಗಳಿಲ್ಲದೇ ಕಾರುಗಳನ್ನು ಹೈಟೆಕ್ ಮಾಡಲು ಸಾಧ್ಯವಿಲ್ಲ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಡಿಸ್ಪ್ಲೇ ಪ್ಯಾನೆಲ್‌ಗಳು, ನ್ಯಾವಿಗೇಷನ್, ಲೈಟ್‌ಗಳು, ಪವರ್ ಸ್ಟೀಯರಿಂಗ್ ಹಾಗೂ ಬಹುತೇಕ ಎಲ್ಲಾ ಆಟೋಮ್ಯಾಟಿಕ್ ಫೀಚರ್ ಗಳಿಗಾಗಿ ಕಾರ್‌ಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಬಳಸಲಾಗುತ್ತದೆ. ಬೇಡಿಕೆಗೆ ತಕ್ಕಷ್ಟು ಸೆಮಿಕಂಡಕ್ಟರ್‌ಗಳು ಉತ್ಪಾದನೆಯಾಗದ ಕಾರಣ ಆಟೋಮೊಬೈಲ್ ಉದ್ಯಮದಲ್ಲಿ ಸೆಮಿಕಂಡಕ್ಟರ್‌ಗಳಿಗೆ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಕಾರುಗಳನ್ನು ನಿಗದಿತ ಸಂಖ್ಯೆಯಲ್ಲಿ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಕಳೆದ ವರ್ಷ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಗ್ರಾಹಕ ತಂತ್ರಜ್ಞಾನ ಉತ್ಪನ್ನ ತಯಾರಕರಿಂದ ಚಿಪ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಯಿತು. ಚಿಪ್ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಬೇಡಿಕೆಗೆ ತಕ್ಕಂತೆ ಬದಲಾಯಿಸಿದವು.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಆಟೋ ಉದ್ಯಮವು ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಮೈಕ್ರೋಚಿಪ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಯಿತು. ಈ ಸಂದರ್ಭದಲ್ಲಿ ಚಿಪ್ ತಯಾರಕ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಚಿಪ್ ಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಸಾಕಷ್ಟು ಸಮಸ್ಯೆ ಎದುರಾಯಿತು. ಚಿಪ್ ಬಿಕ್ಕಟ್ಟು ಆರಂಭವಾದ ನಂತರ ಸ್ಥಳೀಯವಾಗಿ ಚಿಪ್ ಉತ್ಪಾದನಾ ಘಟಕಗಳನ್ನು ತೆರೆಯುವ ಬಗ್ಗೆ ಚರ್ಚೆಗಳಾದವು.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಸೆಮಿಕಂಡಕ್ಟರ್ ಚಿಪ್ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರವು ಇತ್ತೀಚೆಗೆ ರೂ. 76 ಸಾವಿರ ಕೋಟಿಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್ಐ ಯೋಜನೆ) ಘೋಷಿಸಿದೆ. ಈಗ ಹೊಸದಾಗಿ ಅನುಮೋದಿಸಲಾದ ಪಿಎಲ್ಐ ಯೋಜನೆಯಿಂದಾಗಿ ಚಿಪ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಗಳಿವೆ. ಮುಂದಿನ 2 - 3 ವರ್ಷಗಳಲ್ಲಿ ದೇಶಿಯ ಅಗತ್ಯಕ್ಕಾಗಿ ಸೆಮಿಕಂಡಕ್ಟರ್'ಗಳ ಉತ್ಪಾದನೆಯನ್ನು ದೇಶದಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ.

ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ವೇದಾಂತ ಗ್ರೂಪ್

ಚಿಪ್ ಉತ್ಪಾದನಾ ಉದ್ಯಮದಲ್ಲಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮುಂದಿನ ವರ್ಷದ ಜನವರಿಯಿಂದ ಪಿ‌ಎಲ್‌ಐ ಯೋಜನೆಯಡಿ ಅರ್ಜಿಗಳನ್ನು ತೆಗೆದುಕೊಳ್ಳಲಿದೆ. ಅನುಮೋದಿತ ಪಿಎಲ್‌ಐ ಯೋಜನೆಯು ಮುಂದಿನ ಐದರಿಂದ ಆರು ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗಾಗಿ ರೂ. 76,000 ಕೋಟಿಗಳ ಹೂಡಿಕೆಯನ್ನು ಕಲ್ಪಿಸುತ್ತದೆ.

Most Read Articles

Kannada
English summary
Vedanta group to invest in semiconductor industry details
Story first published: Monday, December 27, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X