ಓವರ್‌ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ..!

ವಾಹನವನ್ನು ಓವರ್‌ಲೋಡ್ ಮಾಡುವುದು ಭಾರತದಲ್ಲಿ ತುಂಬಾ ಸಾಮಾನ್ಯವಾಗಿ ಹೋಗಿದೆ ಮತ್ತು ಇದರಿಂದ ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ಅಪಘಾತ ಉಂಟಾಗುತ್ತಿವೆ. ರಾಷ್ಟ್ರದಲ್ಲಿನ ಹಲವಾರು ಟೌನ್‍ಗಳು ಹಾಗು ಹಳ್ಳಿಗಳಲ್ಲಿ ಸಾರಿಗೆಗೆ ವಾಹನಗಳ ಕೊರತೆ ಇದ್ದು ಇದರಿಂದ ಇರುವ ವಾಹನಗಳಲ್ಲಿಯೇ ಅದರ ಹೊರಗೆ ತೂಗಾಡುವ ಜನರನ್ನು ನೀವು ಕಾಣಬಹುದು.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ಇದು ಅತ್ಯಂತ ಅಪಾಯಕಾರಿಯಾದ ಪ್ರಯಾಣವೆಂದು ತಿಳಿದಿದ್ದರೂ ಸಹ ಕೆಲವರು ಈ ಮಾರ್ಗದಲ್ಲಿಯೆ ಪ್ರಯಾಣಿಸಬೇಕಾದ ಪರಿಸ್ಥಿತಿಗಳು ಕೂಡ ಹೆಚ್ಚಿದೆ. ಏಕೆಂದರೆ ಅವರಿಗೆ ಸರಿಯಾದ ಸಾರಿಗೆ ವ್ಯವಸ್ಥೆಗಳು ಇರುವುದಿಲ್ಲ. ಇಂತಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ಓವರ್‌ಲೋಡ್ ಆದ ವಾಹನವನ್ನು ಆ ಚಾಲಕ ಹೇಗೆ ಡ್ರೈವ್ ಮಾಡುತ್ತಿದ್ದಾನೆಂದು ನೀವೇ ನೋಡಿ.

ಈ ಘಟನೆ ತಮಿಳುನಾಡಿನಲ್ಲಿ ಆಗಿರುವುದು ಎಂದು ಹೇಳಲಾಗಿದ್ದು, ಇದನ್ನು ಹಿಂದೆ ಬರುತ್ತಿರುವ ವಾಹನದಲ್ಲಿರುವ ಪ್ರಯಾಣಿಕರು ಈ ದೃಶ್ಯವನ್ನು ಸೆರೆಹಿಡಿದ್ದಾರೆ. ವೀಡಿಯೋನಲ್ಲಿ ಕಾಣಿಸುವ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಲೆಕ್ಕಕ್ಕಿಲ್ಲದಷ್ಟು ಮಂದಿ ಒಳಗೆ ಕೂತಿರುವುದಾಗಿ ಮತ್ತು ಇನ್ನಷ್ಟು ಮಂದಿ ಯಾವುದೇ ಭಯವಿಲ್ಲದೇ ಕಾರಿನ ಹೊರಗಡೆ ನೇತಾಡುತ್ತಿದ್ದಾರೆ.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ಅದೂ ಕೂಡಾ ಇದನ್ನು ಅವಿಭಜಿತ ರಸ್ತೆಯಲ್ಲಿ ಈ ರೀತಿ ಮಾಡಲಾಗಿದ್ದು, ಸುತ್ತ ಮುತ್ತ ವೇಗದಲ್ಲಿ ವಾಹನಗಳು ಬರುತ್ತಿರುವುದನ್ನು ಲೆಕ್ಕಿಸದೆ ಆ ಕಾರು ಚಾಲಕನು ಅತಿ ವೇಗದಲ್ಲಿ ಡ್ರೈವ್ ಮಾಡುತ್ತಿರುವುದಲ್ಲದೇ ವಾಹನವನ್ನು ಎಡಕ್ಕೆ ಬಲಕ್ಕೆ ವಾಲಿಸುತ್ತಿರುವ ದೃಶ್ಯವನ್ನು ನೀವು ಕಾಣಬಹುದಾಗಿದೆ.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ವಿಡಿಯೋ ಮೊದಲಿಗೆ ಬಲಭಾಗದಲ್ಲಿ ಒಬ್ಬ ಪೊಲೀಸ್ ಪೇದೆ ನಿಂತಿರುವುದನ್ನು ಸಹ ನೀವು ಗಮನಿಸಬಹುದು. ಅವರ ಮುಂದೆಯೇ ರಾಜಾರೋಷವಾಗಿ ಅಷ್ಟು ಓವರ್ ಲೋಡಿಂಗ್ ಹಾಗು ಅತಿ ವೇಗದಲ್ಲಿ ಡ್ರೈವ್ ಮಾಡುತ್ತಿರುವ ಆ ಚಾಲಕನ ಧೈರ್ಯವನ್ನು ಮೆಚ್ಚಲೇಬೇಕು.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ಕಾರಿನಲ್ಲಿ ನೇತಾಡುತ್ತಿರುವವರಲ್ಲಿ ಯಾರೊಬ್ಬರು ನಿಯಂತ್ರಣ ತಪ್ಪಿ ಬಿದ್ದರೂ ಅವರಿಗೆ ಅಪಾಯ ತಪ್ಪಿದ್ದಲ್ಲ. ಅಷ್ಟೆ ಅಲ್ಲದೇ ವಾಹನವು ನಿಯಂತ್ರಣ ತಪ್ಪಿದ್ದೆ ಆದಲ್ಲಿ ಚಾಲಕನಿಗೂ ಮತ್ತು ಪ್ರಯಾಣಿಕರಿಗೂ ತೊಂದರೆ ಕಟ್ಟಿಟ್ಟ ಬುತ್ತಿ. ಸ್ಕಾರ್ಪಿಯೊ ಕಾರಿನ ಹಿಂಭಾಗದ ಬಾಗಿಲವು ಸಹ ತೆರೆದಿದ್ದು, ಕಾರಿನ ಒಳಭಾಗದಲ್ಲಿಯೂ ಸಹ ಜನರು ತುಂಬಿರುವುದನ್ನು ಕಾಣಬಹುದಾಗಿದೆ.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ವಿಡಿಯೋ ನೋಡಿದರೆ ವಾಹನದ ನಿಯಂತ್ರಣವನ್ನು ಕಳೆದುಕೊಳ್ಳುತ್ತಿಲ್ಲ. ಆದರೆ ಅದು ಅತ್ಯಂತ ಅಪಾಯಕಾರಿಯಾಗಿದೆ. ಯಾರಾದ್ರು ಒಬ್ಬರು ವಾಹನದಿಂದ ಕೆಳಕ್ಕೆ ಉರುಳಿದರೂ ಸಹ ಪ್ರಾಣಕ್ಕೆ ಆಪತ್ತು ತಪ್ಪಿದ್ದಲ್ಲ. ಹೀಗಾಗಿ ವಾಹನಗಳು ಓವರ್ ಲೋಡ್ ಮಾಡುವುದು ಭಾರತದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ ಎನ್ನಬಹುದು.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ಓವರ್ ಲೋಡ್‌ನಿಂದ ಎಂಜಿನ್ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಎಂಜಿನ್ ಬಾಳಿಕೆ ಕೂಡಾ ಕಡಿಮೆ ಮಾಡುತ್ತದೆ. ಅಲ್ಲದೇ ಓವರ್ ಲೋಡ್ ಮಾಡಲಾದ ವಾಹನವು ರಸ್ತೆಯ ಮೇಲೆ ಹೆಚ್ಚು ಬಾರಿ ನಿಯಂತ್ರಣ ತಪ್ಪುವ ಹಾಗೆ ಮಾಡುತ್ತದೆ ಮತ್ತು ಟೈರ್ ಬರ್ಸ್ಟ್ ಗೆ ಮೂಲ ಕಾರಣವಾಗುತ್ತದೆ.

ಓವರ್‍‍ಲೋಡಿಂಗ್ ಆಗಿರುವ ಸ್ಕಾರ್ಪಿಯೋ ಕಾರನ್ನ ಈ ಚಾಲಕ ಹೇಗೆ ಓಡಿಸುತ್ತಿದ್ದಾನೆ ನೋಡಿ

ಹಳ್ಳಿ ಮತ್ತು ಇನ್ನಿತರೆ ಟೌನ್ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುವವರೆಗೆ ಅಥವಾ ಸಾಗಣೆಗೆ ಹೊಸ ವಿಧಾನಗಳನ್ನು ಪರಿಚಯಿಸುವವರೆಗೆ ಅಂತಹ ಸಮಸ್ಯೆಗಳನ್ನು ಪರಿಹರಿಸಲಾಗುವುದಿಲ್ಲ. ಅಲ್ಲದೆ, ಇದು ರಸ್ತೆಗಳಲ್ಲಿ ಎಷ್ಟು ಅಪಾಯಕಾರಿ ಎಂದು ಜನರು ಅರ್ಥಮಾಡಿಕೊಳ್ಳಬೇಕು ಮತ್ತು ಆಕಸ್ಮಿಕವಾಗಿ ಅಪಘಾತವು ಸಂಭವಿಸಿದರೆ ಅದರ ಪರಿಣಾಮಗಳ ಬಗ್ಗೆ ಕೂಡಾ ತಿಳಿದಿರಬೇಕು.

Most Read Articles

Kannada
English summary
Watch people in overloaded Mahindra Scorpio going batshit CRAZY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X