ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಕಾರಿಗೆ ಎಂಜಿನ್‌ ಎಷ್ಟು ಮುಖ್ಯವೋ ಏರ್‌ ಫಿಲ್ಟರ್‌ ಕೂಡ ಅಷ್ಟೇ ಮುಖ್ಯ. ಇದು ಕಾರುಗಳ ಉತ್ತಮ ನಿರ್ವಹಣೆಗೆ ಬಹಳ ಉಪಯುಕ್ತ ಸಾಧನವೆಂದೇ ಹೇಳಬಹುದು. ಇದರಲ್ಲೂ ಹಲವು ವಿಧಗಳಿದ್ದು ಬಹುತೇಕ ಏರ್ ಫಿಲ್ಟರ್‌ಗಳನ್ನು ಕಾಗದ ಮತ್ತು ಸಂಶ್ಲೇಷಿತ ನಾರುಗಳಿಂದ ತಯಾರಿಸಲಾಗುತ್ತದೆ. ಇವು ಹಾನಿಕಾರಕ ಕಣಗಳು ಎಂಜಿನ್‌ ಒಳಗೆ ಹೋಗದಂತೆ ತಡೆಯುತ್ತವೆ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಏರ್ ಫಿಲ್ಟರ್‌ಗಳು ಟರ್ಬೋಚಾರ್ಜ್ಡ್‌ ಎಂಜಿನ್‌ಗಳಿಗೆ ಬಹಳ ಮುಖ್ಯವಾದ ಸಾಧನವಾಗಿವೆ. ನಮ್ಮಲ್ಲಿ ಹೆಚ್ಚಿನವರು ಕಾರಿನ ಏರ್ ಫಿಲ್ಟರ್‌ಗಳ ಬಗ್ಗೆ ಗಮನಹರಿಸುವುದೇ ಇಲ್ಲ. ಬದಲಾವಣೆಯ ಅಗತ್ಯವಿದ್ದರೆ, ಅದನ್ನು ತಕ್ಷಣವೇ ಬದಲಾಯಿಸಬೇಕು. ಅವುಗಳನ್ನು ನಿರ್ಲಕ್ಷಿಸುವುದರಿಂದ ಕಾರಿನ ಕಾರ್ಯಾಚರಣೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಉದಾಹರಣೆಗೆ ಮೈಲೇಜ್‌ ಕಡಿಮೆಯಾಗುವುದು, ಕಾರ್ಯಕ್ಷಮತೆ ಕುಂದುವುದು, ಪಿಕಪ್ ಕಡಿಮೆಯಾಗುವಂತಹ ಲಕ್ಷಣಗಳಿಂದ ವಾಹನ ದುರ್ಬಲಗೊಳ್ಳುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಏರ್‌ ಫಿಲ್ಟರ್ ಅನ್ನು ಬದಲಿಸದರೆ ವಾಹನವನ್ನು ಧೀರ್ಘ ಕಾಲದವರೆಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ಏರ್‌ ಫಿಲ್ಟರ್ ಬದಲಾಯಿಸಿದರೆ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಯೋಣ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಎಂಜಿನ್ ಬಾಳಿಕೆ ಹೆಚ್ಚಿಸಬಹುದು

ಹಾನಿಗೊಳಗಾದ ಏರ್ ಫಿಲ್ಟರ್‌ಗಳ ಮೂಲಕ ಧೂಳಿನ ಕಣಗಳು ಇಂಜಿನ್‌ ಒಳಗೆ ಪ್ರವೇಶಿಸುವ ಅವಕಾಶವಿರುತ್ತದೆ. ಒಂದು ವೇಳೆ ಈ ಕಣಗಳು ಒಳಗೆ ಪ್ರವೇಶಿಸಿದರೆ ಸಿಲಿಂಡರ್‌ಗಳು ಮತ್ತು ಪಿಸ್ಟನ್‌ಗಳು ಎಂಜಿನ್‌ ಆಂತರಿಕ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯುಂಟುಮಾಡುತ್ತವೆ. ಈ ಹಾನಿಯನ್ನು ಸರಿ ಮಾಡಲು ಹೆಚ್ಚಿನ ವೆಚ್ಚವಾಗುತ್ತದೆ. ಹಾಗಾಗಿ ಸೂಕ್ತ ಸಮಯಕ್ಕೆ ಬದಲಾಯಿಸಿದರೆ ಈ ಅನಾವಶ್ಯಕ ವೆಚ್ಚವನ್ನು ತಡಿಯಬಹುದು.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಏರ್ ಫಿಲ್ಟರ್‌ಗಳನ್ನು ಸರಿಯಾದ ಸಮಯದಲ್ಲಿ ಬದಲಾಯಿಸಬೇಕು ಎಂಬುದಕ್ಕೆ ಇದು ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಏರ್ ಫಿಲ್ಟರ್‌ಗಳನ್ನು ನೀವು ಸರಿಯಾದ ಸಮಯದಲ್ಲಿ ಬದಲಾಯಿಸಿದರೆ, ಈ ಸಮಸ್ಯೆಯೇ ಬರುವುದಿಲ್ಲ. ಇಂಜಿನ್ ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತದೆ. ಒಂದು ಶುದ್ಧ ಏರ್ ಫಿಲ್ಟರ್, ಬಾಹ್ಯ ಗಾಳಿಯಲ್ಲಿ ಧೂಳಿನ ಕಣಗಳನ್ನು ನಿಯಂತ್ರಿಸುತ್ತದೆ. ತೊಂದರೆಗಳನ್ನು ಉಂಟುಮಾಡುವ ಸಣ್ಣ ಕಣಗಳನ್ನು, ಇಂಜಿನ್ ಕಂಪಷನ್ ಚೇಂಬರ್ (ದಹನ ಕೊಠಡಿ)ಗೆ ಹೋಗದಂತೆ ಏರ್ ಫಿಲ್ಟರ್‌ಗಳು ತಡೆಯುತ್ತವೆ. ಹಾಗಾಗಿ ಏರ್ ಫಿಲ್ಟರ್ ನಿಯಮಿತ ಬದಲಾವಣೆ ಉತ್ತಮ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಹೆಚ್ಚಿನ ಮೈಲೇಜ್

ಸಮಯಕ್ಕೆ ಸರಿಯಾಗಿ ಏರ್ ಫಿಲ್ಟರ್‌ಗಳನ್ನು ಬದಲಾಯಿಸಿದರೆ, ನಿಮ್ಮ ಕಾರಿನ ಮೈಲೇಜ್ ಹೆಚ್ಚಾಗಿರುತ್ತದೆ. ಹಾಗೆಯೇ ವೇಗವರ್ಧಕವನ್ನು ಸುಧಾರಿಸುತ್ತದೆ. ಕಾರಿನ ಮೈಲೇಜ್‌ನಲ್ಲಿ ಏರ್ ಫಿಲ್ಟರ್‌ಗಳು ಹೇಗೆ ದೊಡ್ಡ ವ್ಯತ್ಯಾಸವನ್ನು ಮಾಡುತ್ತವೆ? ಎಂಬ ಅನುಮಾನ ನಿಮಗಿರಬಹುದು. ಕೊಳಕು ಅಥವಾ ಹಾನಿಗೊಳಗಾದ ಏರ್ ಫಿಲ್ಟರ್ ನಿಮ್ಮ ಕಾರಿನ ಎಂಜಿನ್‌ಗೆ ಪ್ರವೇಶಿಸುವ ಗಾಳಿಯ ಪ್ರಮಾಣವನ್ನು ನಿಯಂತ್ರಿಸಲು ಹೆಣಗಾಡುತ್ತದೆ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಇದು ಎಂಜಿನ್ ಕೆಲಸ ಮಾಡಲು ಕಷ್ಟವಾಗುತ್ತದೆ. ಜೊತೆಗೆ ಹೆಚ್ಚು ಇಂಧನವನ್ನು ಬರ್ನ್‌ ಮಾಡುತ್ತದೆ. ಹಾಗಾಗಿ ಸಮಯಕ್ಕೆ ಏರ್ ಫಿಲ್ಟರ್ ಅನ್ನು ಬದಲಾಯಿಸಿದರೆ, ಈ ಸಮಸ್ಯೆಯಿಂದ ದೂರವಿರಬಹುದು. ಅಲ್ಲದೇ ಕಾರು ಉತ್ತಮ ಮೈಲೇಜ್ ನೀಡುವುದರಿಂದ ಪೆಟ್ರೋಲ್ ಬಂಕ್‌ಗೆ ಆಗಾಗ್ಗೆ ಹೋಗುವ ಅಗತ್ಯವಿಲ್ಲ. ಇಂಧನ ಬೆಲೆ ಹೆಚ್ಚಿರುವ ಈ ಸಮಯದಲ್ಲಿ ಪ್ರತಿ ಪೆಟ್ರೋಲ್ ಹನಿಯೂ ಮುಖ್ಯ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ವಾಯುಮಾಲಿನ್ಯ ಕಡಿಮೆ

ಈಗಾಗಲೇ ಹೇಳಿದಂತೆ ಹಾನಿಗೊಳಗಾದ ಏರ್ ಫಿಲ್ಟರ್‌ಗಳು ಎಂಜಿನ್‌ಗೆ ಪ್ರವೇಶಿಸುವ ಗಾಳಿಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಗಾಳಿ/ಇಂಧನವನ್ನು ಬದಲಾಯಿಸುತ್ತದೆ, ಅಂದರೆ ಕಾರಿನ ಗಾಳಿ /ಇಂಧನ ಸಮತೋಲನದಲ್ಲಿ ವ್ಯತ್ಯಯವಾಗುತ್ತದೆ. ಗಾಳಿ/ಇಂಧನ ಮಿಶ್ರಣದಲ್ಲಿನ ಈ ಅಸಮತೋಲನವು ನಿಮ್ಮ ಕಾರಿನ ನಿಷ್ಕಾಸ ಹೊರಸೂಸುವಿಕೆಯ ಮೇಲೆ ನೇರ ಪರಿಣಾಮ ಬೀರಬಹುದು.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಇದರಿಂದ ಹೆಚ್ಚು ವಾಯುಮಾಲಿನ್ಯವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕಾರಿನ ಏರ್ ಫಿಲ್ಟರ್‌ಗಳನ್ನು ಸರಿಯಾದ ಸಮಯಕ್ಕೆ ಬದಲಾಯಿಸಿದರೆ ಈ ಸಮಸ್ಯೆ ಬರುವುದಿಲ್ಲ. ಭಾರತದಲ್ಲಿ ವಾಹನಗಳಿಂದ ಪರಿಸರವು ತೀವ್ರವಾಗಿ ಕಲುಷಿತಗೊಳ್ಳುತ್ತಿರುವ ಕಾರಣದಿಂದ ಕೇಂದ್ರ ಸರ್ಕಾರ ಕೂಡ ಹಳೆಯ ವಾಹನಗಲನ್ನು ಬ್ಯಾನ್ ಮಾಡಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜ ನೀಡುತ್ತಿದೆ. ಏರ್ ಫಿಲ್ಟರ್‌ಗಳನ್ನು ಬದಲಾಯಿಸುವ ಮೂಲಕ ವಾಯು ಮಾಲಿನ್ಯವನ್ನು ತಪ್ಪಿಸಬಹುದು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಏರ್ ಫಿಲ್ಟರ್ ಯಾವಾಗ ಬದಲಾಯಿಸಬೇಕು?

ಸಾಮಾನ್ಯವಾಗಿ ನಿಮ್ಮ ಕಾರಿನ ಏರ್ ಫಿಲ್ಟರ್ ಹಾನಿಯಾಗಿದ್ದರೆ ಅದನ್ನು ಬದಲಾಯಿಸಬೇಕಾಗುತ್ತದೆ. ನಿಮ್ಮ ಕಾರು ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲು ಬಯಸಿದರೆ ಕನಿಷ್ಠ ಪ್ರತಿ 12 ಸಾವಿರದಿಂದ 15 ಸಾವಿರ ಮೈಲುಗಳವರೆಗೆ ಏರ್ ಫಿಲ್ಟರ್‌ಗಳನ್ನು ಬದಲಾಯಿಸಲು ಶಿಫಾರಸು ಮಾಡಲಾಗಿದೆ. ಅಂದರೆ ಪ್ರತಿ 19 ಸಾವಿರದಿಂದ 24 ಸಾವಿರ ಕಿಲೋಮೀಟರ್‌ ಸಂಚಾರದ ಬಳಿಕ ಒಮ್ಮೆ ಏರ್ ಫಿಲ್ಟರ್‌ಗಳನ್ನು ಬದಲಾಯಿಸುವುದು ಉತ್ತಮ.

ನಿಯಮಿತ ಏರ್‌ ಫಿಲ್ಟರ್ ಬದಲಾವಣೆಯಿಂದ ಪಡೆಯಬಹುದಾದ ಪ್ರಯೋಜನಗಳಿವು

ಕಡಿಮೆ ವೆಚ್ಚ, ತ್ವರಿತವಾಗಿ ಬದಲಾಯಿಸಬಹುದು!

ಏರ್ ಫಿಲ್ಟರ್‌ಗಳನ್ನು ಬದಲಾಯಿಸುವುದು ತುಂಬಾ ಸರಳವಾದ ಕೆಲಸ. ಆದ್ದರಿಂದ ಅದನ್ನು ತ್ವರಿತವಾಗಿ ಬದಲಾಯಿಸಬಹುದು. ಇದರ ವೆಚ್ಚ ಕೂಡ ಕಡಿಮೆ. ಆದರೆ ಗುಣಮಟ್ಟದ ಏರ್ ಫಿಲ್ಟರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಮಾರುಕಟ್ಟೆಯಲ್ಲಿ ಸಾಕಷ್ಟು ಏರ್ ಫಿಲ್ಟರ್‌ಗಳು ಲಭ್ಯವಿದೆ. ಒಮ್ಮೆ ಪರಿಶೀಲಿಸಿ ಕಾರಿಗೆ ಸೂಕ್ತವಾದ ಏರ್ ಫಿಲ್ಟರ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.

Most Read Articles

Kannada
English summary
What are the benefits of replacing a car air filter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X