Just In
- 1 hr ago
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ನವೀಕೃತ ಮಾರುತಿ ಆಲ್ಟೊ ಕೆ10 ಸಿಎನ್ಜಿ
- 1 hr ago
ಪೊಲೀಸರಿಗ್ಯಾಕೆ ಬುಲೆಟ್ ಪ್ರೂಫ್ ವಾಹನವಿಲ್ಲ: ಗಣ್ಯರಿಗಿರುವ ಭದ್ರತೆ ಆರಕ್ಷಕರಿಗಿಲ್ಲವೇ? ಕಾರಣ ಇಲ್ಲಿದೆ...
- 1 hr ago
ಕಡಿಮೆ ಮೊತ್ತಕ್ಕೆ ಲೀಸ್ಗೆ ಸಿಗಲಿದೆ ಫೋಕ್ಸ್ವ್ಯಾಗನ್ ವರ್ಟಸ್ ಕಾರು
- 4 hrs ago
ಬಿಡುಗಡೆಗಾಗಿ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ ಥಾರ್ 5 ಡೋರ್ ವರ್ಷನ್
Don't Miss!
- News
ಕೃಷ್ಣ ಜನ್ಮಾಷ್ಟಮಿ: ಮುಂಬೈನಲ್ಲಿ ವಿಶ್ವ ದಾಖಲೆ ಬರೆದ ಅತಿ ಎತ್ತರದ ಮಾನವ ಪಿರಮಿಡ್
- Sports
Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!
- Technology
ಲೆನೊವೊ ಲೀಜನ್ Y70 ಸ್ಮಾರ್ಟ್ಫೋನ್ ಬಿಡುಗಡೆ!..68W ವೇಗದ ಚಾರ್ಜಿಂಗ್!
- Education
Karnataka High Court Recruitment 2022 : 129 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ವಂಡರ್ಲಾ ಬೆಂಗಳೂರಿನಲ್ಲಿರುವ ವಿಶಿಷ್ಟ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ.
- Finance
ಫೋನ್ ಪೇ, ಗೂಗಲ್ ಪೇ, ಭೀಮ್ App ಬಳಕೆಗೆ ಪೇಮೆಂಟ್ ಶುಲ್ಕ?
- Movies
ಅಪ್ಪು- ದರ್ಶನ್ ಸ್ನೇಹದ ಬಗ್ಗೆ ಹೇಳಿದ ರಾಘಣ್ಣ!
- Lifestyle
ಕಾಲಿನಲ್ಲಿ ಈ 10 ಲಕ್ಷಣಗಳು ಕಂಡು ಬಂದರೆ ಹುಷಾರು! ಮಧುಮೇಹ ತುಂಬಾ ಹೆಚ್ಚಿದೆ ಎಂದು ಸೂಚಿಸುವ ಲಕ್ಷಣಗಳಿವು
ರೈಲು ಚಾಲನೆಗೆ ಇಬ್ಬರು ಲೋಕೋ ಪೈಲಟ್‌ಗಳನ್ನು ಏಕೆ ನೇಮಿಸುತ್ತಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಏಷ್ಯಾದಲ್ಲೇ ಅತಿದೊಡ್ಡ ರೈಲು ಮಾರ್ಗವನ್ನು ಹೊಂದಿರುವ ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಮಂದಿಯನ್ನು ಅತಿ ಕಡಿಮೆ ವೆಚ್ಚದಲ್ಲಿ ತಮ್ಮ ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ರೈಲ್ವೆ ಇಲಾಖೆಯಲ್ಲಿ ಎಲ್ಲಾ ಕಾರ್ಯಗಳು ಸವ್ಯವಾಗಿ ಜರುಗಲು ಲಕ್ಷಾಂತರ ಮಂದಿ ವ್ಯವಸ್ಥಿತವಾಗಿ ಕೆಲಸಮಾಡಬೇಕಾಗುತ್ತದೆ.

ಇನ್ನು ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗಾಗಿ ದೇಶದ ವಿವಿಧ ನಗರಗಳಲ್ಲಿ ಮೆಟ್ರೋ ರೈಲುಗಳು ಕೂಡ ಇದೀಗ ಜನಪ್ರಿಯವಾಗಿವೆ. ಈ ರೈಲುಗಳಲ್ಲಿ ನೀವು ಗಮನಿಸಿದರೆ ರೈಲನ್ನು ಒಬ್ಬರೇ ಓಡಿಸುತ್ತಾರೆ. ಅಲ್ಲದೇ ರೈಲು ಕ್ಯಾಬಿನ್ ಒಳಗೆ ಒಬ್ಬರೇ ಇರುತ್ತಾರೆ. ಆದರೆ ಭಾರತೀಯ ರೈಲ್ವೆಯ ದೂರದ ಪ್ರದೇಶಗಳಿಗೆ ಪ್ರಯಾಣಿಸುವ ರೈಲುಗಳಲ್ಲಿ ಎಂಜಿನ್ ಕ್ಯಾಬಿನ್ ಒಳಗೆ ಇಬ್ಬರು ಪೈಲೆಟ್‌ಗಳು ಇರುತ್ತಾರೆ.

ಈ ರೈಲುಗಳಲ್ಲಿ ಇಬ್ಬರೇ ಏಕೆ ಇರುತ್ತಾರೆ? ಎಲೆಕ್ಟ್ರಿಕ್ ಮತ್ತು ಮೆಟ್ರೊ ರೈಲುಗಳನ್ನು ಒಬ್ಬರೇ ಓಡಿಸುವಾಗ ಈ ರೈಲುಗಳನ್ನು ಒಬ್ಬರಿಂದ ಏಕೆ ನಿಯಂತ್ರಿಸಲಾಗುವುದಲ್ಲ. ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಭಾರತೀಯ ರೈಲ್ವೆಯಲ್ಲಿ ಲೊಕೊಮೊಟಿವ್ ರೈಲುಗಳನ್ನು ಇಬ್ಬರು ನಿರ್ವಹಿಸಬೇಕು ಎಂಬ ನಿಯಮವಿದೆ. ವೈಯಕ್ತಿಕ ಕಾರ್ಯಾಚರಣೆಯನ್ನು ಅನುಮತಿಸಲಾಗುವುದಿಲ್ಲ. ಮೊದಲ ವ್ಯಕ್ತಿಯನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಎರಡನೇ ವ್ಯಕ್ತಿಯನ್ನು ಸಹಾಯಕ ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ.

ಇಬ್ಬರು ಕೂಡ ಇಂಜಿನ್ ಅನ್ನು ನಿಯಂತ್ರಿಸುತ್ತಾರೆ. ಭಾರತೀಯ ರೈಲ್ವೆಯು ಲೋಕೋ ಪೈಲಟ್ ಅನ್ನು ನೇರವಾಗಿ ಆಯ್ಕೆ ಮಾಡುವುದಿಲ್ಲ. ಎಂಜಿನ್ ಓಡಿಸಲು ಒಬ್ಬರು ಆಯ್ಕೆಯಾದರೂ, ಅವರು ಮೊದಲು ಸಹಾಯಕ ಲೋಕೋ ಪೈಲಟ್ ಆಗಿ ಕೆಲಸ ಮಾಡಬೇಕಾಗಿರುತ್ತದೆ. ಅನುಭವದ ನಂತರ ಅವರಿಗೆ ಲೋಕೋ ಪೈಲಟ್ ಆಗಿ ಬಡ್ತಿ ನೀಡಲಾಗುತ್ತದೆ.

ಪ್ರಸ್ತುತ ಬಳಕೆಯಲ್ಲಿರುವ ಲೋಕೋಮೋಟಿವ್ ರೈಲುಗಳು ಎಲೆಕ್ಟ್ರಿಕ್ ಲೋಕೋಮೋಟಿವ್ ಮತ್ತು ಡೀಸೆಲ್ ಲೋಕೋಮೋಟಿವ್ ಎಂಬ ಎರಡು ವಿಧದ ಎಂಜಿನ್‌ಗಳನ್ನು ಒಳಗೊಂಡಿವೆ. ಮುಖ್ಯ ಪೈಲಟ್ ಎಂಜಿನ್‌ನ ಎಡಭಾಗದ ಬಳಿ ಇರುತ್ತಾರೆ. ಸಹಾಯಕ ಲೋಕೋ ಪೈಲಟ್ ಎಂಜಿನ್‌ನ ಬಲಭಾಗದಲ್ಲಿರುತ್ತಾರೆ.

ಇದಕ್ಕೂ ಕಾರಣವಿದೆ ಸಹಾಯಕ ಲೋಕೋ ಪೈಲಟ್‌ಗೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ನೀಡಲಾಗುತ್ತದೆ. ಜೊತೆಗೆ ರೈಲು ಹೊರಡುವ ಮೊದಲು ಎಲ್ಲಾ ವಿಷಯಗಳನ್ನು ಪರಿಶೀಲಿಸುವುದು ಇವರ ಮೊದಲ ಕಾರ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಪರಿಶೀಲನಾಪಟ್ಟಿ ಇದ್ದು, ಅದನ್ನು ಪರಿಶೀಲಿಸಿದ ನಂತರವೇ ರೈಲು ಹತ್ತಬೇಕು.

ಸಹಾಯಕ ಪೈಲಟ್ ರೈಲಿನಲ್ಲಿ ಪ್ರಯಾಣಿಸುವಾಗ ನೋಡಿಕೊಳ್ಳಬೇಕಾದ ಮುಂದಿನ ಪ್ರಮುಖ ಕೆಲಸವೆಂದರೆ ರೈಲು ಹೋಗುವ ಹಳಿಗಳನ್ನು ಎಚ್ಚರಿಕೆಯಿಂದ ಗಮನಿಸುವುದು. ದೂರದಲ್ಲಿ ಹಳಿಗಳಲ್ಲಿ ಸಮಸ್ಯೆ ಇದೆಯೇ ಎಂದು ಮೇಲ್ವಿಚಾರಣೆ ಮಾಡಬೇಕು. ನಂತರ ಸಿಗ್ನಲ್‌ಗಳನ್ನು ಮೇಲ್ವಿಚಾರಣೆ ಮಾಡಿ ಲೋಕೋ ಪೈಲಟ್‌ಗೆ ತಿಳಿಸಬೇಕು.

ಮುಂದಿನ ಪ್ರಮುಖ ಕೆಲಸವೆಂದರೆ ಪ್ರತಿ ನಿಲ್ದಾಣದಲ್ಲಿ ರೈಲಿನ ಹಾದುಹೋಗುವಿಕೆಯನ್ನು ತಿಳಿಸಿದುವುದು, ರೈಲು ಮುಂದಿನ ನಿಲ್ದಾಣದಲ್ಲಿ ಎಷ್ಟು ಸಮಯ ನಿಲ್ಲಬೇಕು ಹಾಗೂ ರೈಲಿನ ಬಲಭಾಗದಲ್ಲಿ ಸ್ಟೇಷನ್ ಮಾಸ್ಟರ್ ಪ್ರದೇಶವಿದ್ದರೆ ರೈಲು ನಿಲ್ದಾಣವನ್ನು ಹಾದುಹೋಗುವಾಗ ಹಸಿರು ಬಾವುಟವನ್ನು ತೋರಿಸುವುದರ ಜೊತೆಗೆ ಮುಂಬರುವ ರೈಲುಗಳೊಂದಿಗೆ ಸಂಪರ್ಕದಲ್ಲಿರುವುದಾಗಿದೆ.

ಪ್ರಯಾಣಿಕರು ರೈಲಿನಲ್ಲಿ ಚೈನ್ ಎಳೆದರೆ, ಸಹಾಯಕ ರೈಲು ಚಾಲಕ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಬೇಕು. ಹೋಗಿ ಸಮಸ್ಯೆ ಏನು ಎಂದು ನೋಡುವುದು ಕೂಡ ಸಹಾಕ ಪೈಲಟ್‌ದಾಗಿರುತ್ತದೆ. ಒಂದು ವೇಳೆ ಮುಖ್ಯ ಲೋಕೋಪೈಲೆಟ್ ರೈಲನ್ನು ಚಲಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅವರೇ ರೈಲನ್ನು ಮುಂದಿನ ನಿಲ್ದಾಣಕ್ಕೆ ಓಡಿಸಬೇಕಾಗುತ್ತದೆ.

ಇಂತಹ ಸಂದರ್ಭದಲ್ಲೂ ರೈಲಿನ ಒಟ್ಟಾರೆ ಕಾರ್ಯಾಚರಣೆಯ ಜವಾಬ್ದಾರಿ ಲೋಕೋ ಪೈಲಟ್ ಮೇಲಿರುತ್ತದೆ. ಅಲ್ಲದೇ ಸಹಾಯಕ ಲೋಕೋಪೈಲಟ್‌ಗೆ ಸೂಚನೆಗಳನ್ನು ನೀಡುತ್ತಾ ಮುಂದಿನ ಸ್ಟೇಷನ್‌ವರೆಗೆ ಜವಾಬ್ದಾರಿ ವಹಿಸಬೇಕಾಗಿರುತ್ತದೆ. ಈ ವೇಳೆ ಸಹಾಯಕ ಪೈಲಟ್ ತನ್ನ ಕಾರ್ಯ ಹಾಗೂ ಮುಖ್ಯ ಪೈಲಟ್‌ನ ಕಾರ್ಯ ಎರಡನ್ನು ನಿರ್ವಹಿಸಬೇಕು.

ರೈಲು ಅತಿ ಕಡಿಮೆ ಅಂತರದಲ್ಲಿ ಮಾತ್ರ ಓಡುವುದರಿಂದ ಮೆಟ್ರೋ ಮತ್ತು ಲೋಕಲ್ ಎಲೆಕ್ಟ್ರಿಕ್ ರೈಲುಗಳಲ್ಲಿ ಒಬ್ಬರೇ ಲೋಕೋ ಪೈಲಟ್ ಇರುತ್ತಾರೆ. ಆದರೆ ಭಾರತೀಯ ರೈಲ್ವೆಯಲ್ಲಿ ರೈಲನ್ನು ಓಡಿಸುವಾಗ ಯಾವುದೇ ಸಮಸ್ಯೆ ಉಂಟಾದಾಗ ತಕ್ಷಣವೇ ಇತರ ವ್ಯಕ್ತಿಯು ರೈಲನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ದೂರದ ಪ್ರಯಾಣ ಬೆಳಸುವ ರೈಲುಗಳು ವಾರಗಟ್ಟಲೇ ಪ್ರಯಾಣ ಮಾಡುತ್ತವೆ. ಈ ವೇಳೆ ಹಗಲು-ರಾತ್ರಿ ರೈಲು ಪ್ರಯಾಣದಲ್ಲೇ ಇರುತ್ತದೆ. ಹಾಗಾಗಿ ದಿನ ಪೂರ್ತಿ ಒಬ್ಬರೇ ಚಾಲನೆ ಮಾಡುವುದು ಕಷ್ಟವಾದ್ದರಿಂದ ಸಹಾಯಕ ಪೈಲಟ್ ಅವಶ್ಯಕತೆ ಇರುತ್ತದೆ ಎಂಬುದು ಪ್ರಮುಖ ಕಾರಣವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತೀಯ ರೈಲ್ವೆಯು ನಿತ್ಯ ಲಕ್ಷಾಂತರ ಮಂದಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಿದೆ. ಆದರೆ ಅದೆಷ್ಟೋ ಮಂದಿಗೆ ರೈಲಿನ ಬಗ್ಗೆ ಸಂಪೂರ್ಣವಾಗಿ ತಿಳಿದೇ ಇಲ್ಲ. ರೈಲ್ವೆ ಟಿಕೆಟ್‌ನಲ್ಲಿ ನೀಡುವ ಪಿಎನ್‌ಆರ್ ಸಂಖ್ಯೆಯ ಉಪಯೋಗವೇನು, ರೈಲಿನ ಹಾರ್ನ್ ಬಗ್ಗೆ ಹಾಗೂ ರೈಲ್ವೆ ಸ್ಟೇಷನ್‌ಗಳಲ್ಲಿ ಯೆಲ್ಲೋ ಬೋರ್ಡ್‌ಗಳನ್ನೇ ಏಕೆ ಬಳಸುತ್ತಾರೆ ಎಂಬ ಹಲವು ಆಸಕ್ತಿಕರ ವಿಷಯಗಳ ಕುರಿತು ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್‌ನಲ್ಲಿ ವಿಸೃತ ವರದಿಗಳಿವೆ. ಆಸಕ್ತರು ಭೇಟಿ ನೀಡಿ ತಿಳಿದುಕೊಳ್ಳಬಹುದು.