ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

Posted By:

ಹೊಸ ಹೊಸ ದಾಖಲೆಗಳನ್ನು ನಿರ್ಮಿಸಲು ವಾಹನ ಉತ್ಸಾಹಿಗಳು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಅಂಜುವುದಿಲ್ಲ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಇಂತಹದೊಂದು ಪ್ರಯತ್ನ ಸದ್ಭಾವನಾ ಕೆಲಸಕ್ಕೆ ಎಂಬುದು ತಿಳಿದಾಗ ಸಾಹಸಿಗಳ ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಅಲ್ಲದೆ ನೆರವಿಗೆ ಬರುವ ಬೆಂಬಲಿಗರ ಸಂಖ್ಯೆಯಲ್ಲೂ ವರ್ಧನೆಯಾಗುತ್ತದೆ.

ಇಂತಹದೊಂದು ವಿನೂತನ ಉದ್ದೇಶದೊಂದಿಗೆ 51 ಮಂದಿಗಳ ಉತ್ಸಾಹಿ ತಂಡವೊಂದು 1974ರ ಕ್ಲಾಸಿಕ್ ಫೋಕ್ಸ್ ವ್ಯಾಗನ್ ಕ್ಯಾಂಪರ್ ವ್ಯಾನ್ ನಲ್ಲಿ (Campervan) ಉಸಿರುಗಟ್ಟಿಸಿ ಕುಳಿತುಕೊಳ್ಳುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದ್ದಾರೆ.

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಉಸಿರುಗಟ್ಟಿಸಿ ತಮ್ಮ ಜೀವವನ್ನೇ ಮುಡಿಪಾಗಿಟ್ಟುಕೊಂಡು ಸ್ಥಾಪಿಸಿರುವ ಈ ದಾಖಲೆಯ ಹಿಂದಿರುವ ಏಕೈಕ ಉದ್ದೇಶವೇನೆಂದರೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ವರ್ಸೆಸ್ಟರ್ಷೈರ್‌ನ ಮಾಲ್ವೆರ್ನ್‌ನಲ್ಲಿ ನಡೆಯುತ್ತಿರುವ (Worcestershire, Malvern) ಬಸ್‌ಫೆಸ್ಟ್ ವ್ಯಾನ್ ಫೇಸ್ಟಿವಲ್‌ನಲ್ಲಿ (Busfest van festival) ಇಂತಹದೊಂದು ವಿನೂತನ ದಾಖಲೆ ಬರೆಯಲಾಗಿದೆ.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಸದ್ಯ ಗಿನ್ನೆಸ್ ಅಧಿಕೃತ ದಾಖಲೆಗಾಗಿ ಕಾಯುತ್ತಿರುವ ಈ ತಂಡವು ವಿಶೇಷವಾಗಿ 1974 ಫೋಕ್ಸ್‌ವ್ಯಾಗನ್ ಕ್ಯಾಂಪರ್ ವ್ಯಾನ್ ಅನ್ನು ಆಯ್ಕೆ ಮಾಡಿಕೊಂಡಿತ್ತು.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವು ನೀಡುತ್ತಿರುವ ಮೇಕ್-ಎ-ವಿಶ್ ( Make-A-Wish Foundation) ಸಹಾಯಾರ್ಥ ಸಂಸ್ಥೆಗೆ ನಿಧಿ ಸಂಗ್ರಹಿಸುವ ನಿಟ್ಟಿನಲ್ಲಿ ಈ ದಾಖಲೆಯನ್ನು ಬರೆಯಲಾಗಿದೆ.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಚಿತ್ರದಲ್ಲಿ ನೀವೇ ನೋಡುತ್ತಿರುವಂತೆಯೇ ಎಲ್ಲ ವಿಭಾಗದ ಪ್ರಾಯ ವರ್ಗದವರೂ ಸೇರಿಕೊಂಡು ಉಸಿರುಗಟ್ಟಿಸುವ ರೀತಿಯಲ್ಲಿ ಫೋಕ್ಸ್‌ವ್ಯಾಗನ್ ಮಿನಿ ವ್ಯಾನ್‌ನಲ್ಲಿ ತಮ್ಮನ್ನು ತಾವೇ ತುರುಕಿಸಿಕೊಂಡಿದ್ದರು.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಕಂಫರ್ಟ್ ವಿಮೆ (Comfort Insurance) ಎಂಬ ಸಂಸ್ಥೆಯ ಸಹಯೋಗದಲ್ಲಿ ಈ ದಾಖಲೆ ಪ್ರಯತ್ನವನ್ನು ಆಯೋಜಿಸಲಾಗಿತ್ತು.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪರ್ಧಿಯೊಬ್ಬರು, "ನೀವೆಲ್ಲ ಅಂದುಕೊಂಡಂತೆ 51 ಮಂದಿಯನ್ನು ಫೋಕ್ಸ್ ವ್ಯಾಗನ್ ಕ್ಲಾಸಿಕ್ ಗಾಡಿಯಲ್ಲಿ ತುರುಕಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೊನೆಯ ಮಂದಿ ಪ್ರವೇಶದ ವರೆಗೂ ಜೀವವನ್ನೇ ಮುಡಿಪಾಗಿಡಲಾಗಿತ್ತು" ಎಂದು ವಿವರಿಸುತ್ತಾರೆ.

ಚಿತ್ರ ಕೃಪೆ: ಡೈಲಿಮೇಲ್

ವಿಶ್ವ ದಾಖಲೆ: ಮಿನಿ ವ್ಯಾನ್‌ನಲ್ಲಿ 51 ಮಂದಿ ಜಾಮ್ ಪ್ಯಾಕ್!

ಇನ್ನು ಬಸ್ ಫೆಸ್ಟ್ ಹಬ್ಬದ ಬಗ್ಗೆ ಮಾತಾನಾಡುವುದಾದ್ದಲ್ಲಿ ಪ್ರಸ್ತುತ ಹಬ್ಬದಲ್ಲಿ 25,000ದಷ್ಟು ಕ್ಯಾಂಪರ್ ವ್ಯಾನ್ ಉತ್ಸಾಹಿಗಳು ಹಾಗೂ 5,000ದಷ್ಟು ವಾಹನಗಳು ಭಾಗವಹಿಸಿತ್ತು.

English summary
World Record: 51 people crammed into a VW Campervan
Story first published: Tuesday, September 8, 2015, 11:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark