ಜಗತ್ತಿನಲ್ಲಿ ಅತಿ ಹೆಚ್ಚಿನ ಸಂಚಾರ ದಟ್ಟಣೆಯ ನಗರ ಯಾವುದು?

Written By:

ನಗರಗಳಲ್ಲಿ ಜನರ ಓಡಾಟ ಅತ್ಯಧಿಕವಾಗಿರುವ ಸಮಯದಲ್ಲೇ ಅತ್ಯಧಿಕ ವಾಹನ ಸಂಚಾರವನ್ನು ಕಾಣುತ್ತೇವೆ. ಸಾಮಾನ್ಯವಾಗಿ ಅತ್ಯಧಿಕ ಸಂಚಾರದ ಕಾಲ ಬೆಳ್ಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಕಂಡುಬರುತ್ತದೆ.

ಬೆಳಗ್ಗೆ ಕಚೇರಿಗೆ ತೆರಳುವ ಜಂಜಾಟ ಹಾಗೂ ಸಾಯಂಕಾಲ ದಿನವಿಡೀ ಕಚೇರಿ ಕಲಾಪಗಳಿಂದ ಮುಕ್ತಿ ಪಡೆದು ಮನೆ ಸೇರುವ ತವಕ. ಹೀಗೆ ಪ್ರತಿಯೊಂದು ನಗರಗಳಲ್ಲೂ ಅತ್ಯಧಿಕ ವಾಹನ ಸಂಚಾರ ದಟ್ಟಣೆ ಕಂಡುಬರುತ್ತದೆ. ಈ ಬಗ್ಗೆ ಅಧ್ಯಯನ ಕೈಗೊಂಡಿರುವ ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂಕವು ಏನೆನ್ನುತ್ತದೆ? ಬನ್ನಿ ನೋಡೋಣ.

ಜಗತ್ತಿನಲ್ಲಿ ಅತಿ ಹೆಚ್ಚಿನ ಸಂಚಾರ ದಟ್ಟಣೆಯ ನಗರ ಯಾವುದು?

ಜಗತ್ತಿನ ಪ್ರಮುಖ ನಗರಗಳಿಗೆ ಭೇಟಿ ಕೊಟ್ಟಿರುವ ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂಕವು ಅಂತಹ ನಿರ್ದಿಷ್ಟ ನಗರಗಳಿಗೆ ಭೇಟಿ ಕೊಟ್ಟು ವಾಹನ ದಟ್ಟಣೆಯನ್ನು ಅವಲೋಕನ ಮಾಡಿ ಅಗ್ರ 10 ಪಟ್ಟಿಯನ್ನು ತಯಾರಿಸಿದೆ. ಇಲ್ಲಿ 2014ರಲ್ಲಿ ವಿಶ್ಯದಾದ್ಯಂತದ 218 ನಗರಗಳ ಅಧ್ಯಯನದ ಬಳಿಕ ಪಟ್ಟಿ ಬಿಡುಗಡೆ ಮಾಡಿದೆ. ಅಷ್ಟಕ್ಕೂ ಭಾರತ ಎಲ್ಲಿದೆ?

01. ಇಸ್ತಾಂಬುಲ್, ಟರ್ಕಿ

01. ಇಸ್ತಾಂಬುಲ್, ಟರ್ಕಿ

2014ರ ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂಕ ಪ್ರಕಾರ ಟರ್ಕಿ ನಗರವಾಗಿರುವ ಇಸ್ತಾಂಬುಲ್ ನಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ದಾಖಲಾಗಿದೆ. ಇಲ್ಲಿನ ಸಂಚಾರ ದಟ್ಟಣೆಯ ಮಟ್ಟ ಶೇಕಡಾ 58ರಷ್ಟಾಗಿದ್ದು, ಬೆಳಗ್ಗೆ ಹಾಗೂ ಸಾಯಂಕಾಲ ಅನುಕ್ರಮವಾಗಿ ಶೇಕಡಾ 76 ಹಾಗೂ 109ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಇನ್ನು ಹೆದ್ದಾರಿಗಳಲ್ಲಿ ಶೇಕಡಾ 79ರಷ್ಟು ಹಾಗೂ ಇತರ ರಸ್ತೆಗಳಲ್ಲಿ ಶೇಕಡಾ 50ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಅಲ್ಲದೆ ದೈನಂದಿನ 30 ನಿಮಿಷಗಳಷ್ಟು ಪಯಣಿಸಬೇಕಾದರೆ ಇನ್ನಷ್ಟು 29 ನಿಮಿಷಗಳು ವಿಳಂಬವಾಗಲಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ.

02. ಮೆಕ್ಸಿಕೋ ಸಿಟಿ, ಮೆಕ್ಸಿಕೋ

02. ಮೆಕ್ಸಿಕೋ ಸಿಟಿ, ಮೆಕ್ಸಿಕೋ

ಮೆಕ್ಸಿಕೋ ಸಿಟಿ ಸಹ ಬಹುತೇಕ ಇಸ್ತಾಂಬಲ್ ಗೆ ಸಮಾನವಾದ ವಾಹನ ದಟ್ಟಣೆಯನ್ನು ಪಡೆದುಕೊಂಡಿದೆ. ಇಲ್ಲಿನ ವಾಹನ ದಟ್ಟಣೆಯ ಮಟ್ಟ ಶೇಕಡಾ 55ರಷ್ಟಾಗಿದ್ದು ಬೆಳ್ಳಗೆ ಹಾಗೂ ಸಂಜೆಯ ಅತ್ಯಧಿಕ ಸಂಚಾರದ ಹೊತ್ತಿನಲ್ಲಿ ಅನುಕ್ರಮವಾಗಿ ಶೇಕಡಾ 93 ಹಾಗೂ 89ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಅಲ್ಲದೆ ಹೆದ್ದಾರಿಗಳಲ್ಲಿ ಶೇಕಡಾ 46ರಷ್ಟು ಹಾಗೂ ಇತರ ರಸ್ತೆಗಳಲ್ಲಿ ಶೇಕಡಾ 59ರಷ್ಟು ವಾಹನ ದಟ್ಟಣೆಯಿರುತ್ತದೆ.

03. ರಿಯೊ ಡಿ ಜನೈರೊ, ಬ್ರೆಜಿಲ್

03. ರಿಯೊ ಡಿ ಜನೈರೊ, ಬ್ರೆಜಿಲ್

ಕಾಲ್ಚೆಂಡಿನ ನಾಡು ಬ್ರೆಜಲ್ ನ ಜನಪ್ರಿಯ ರಿಯೊ ಡಿ ಜನೈರೊ ಸಹ ಟ್ರಾಫಿಕ್ ಉಪಟಳದಿಂದ ಪಾರಾಗಿಲ್ಲ ಎಂಬುದು ಅಷ್ಟೇ ಸತ್ಯ. ಇಲ್ಲಿನ ವಾಹನ ದಟ್ಟಣೆಯ ಮಟ್ಟ ಶೇಕಡಾ 51ರಷ್ಟಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಅನುಕ್ರಮವಾಗಿ ಶೇಕಡಾ 72 ಹಾಗೂ 81ರಷ್ಟು ವಾಹನ ದಟ್ಟಣೆಯಿರುತ್ತದೆ. ಅಂತೆಯೇ ಹೆದ್ದಾರಿಗಳಲ್ಲಿನ ಟ್ರಾಫಿಕ್ ಮಟ್ಟ ಶೇಕಡಾ 49 ಹಾಗೂ ಇತರ ರಸ್ತೆಗಳಲ್ಲಿ ಶೇಕಡಾ 52ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ.

04. ಮೋಸ್ಕೋ, ರಷ್ಯಾ

04. ಮೋಸ್ಕೋ, ರಷ್ಯಾ

ಶೇಕಡಾ 50ರಷ್ಟು ವಾಹನ ದಟ್ಟಣೆಯ ಮಟ್ಟವನ್ನು ಹೊಂದಿರುವ ಮೋಸ್ಕೋದಲ್ಲಿ ಬೆಳಗ್ಗೆ ಶೇಕಡಾ 77 ಹಾಗೂ ಸಂಜೆಯ ವೇಳೆ ಶೇಕಡಾ 103ರಷ್ಟು ವಾಹನ ದಟ್ಟಣೆಯನ್ನು ಹೊಂದಿರುತ್ತದೆ. ಹಾಗೆಯೇ ಹೆದ್ದಾರಿಗಳಲ್ಲಿ ಶೇಕಡಾ 67 ಹಾಗೂ ಇತರ ರಸ್ತೆಗಳಲ್ಲಿ ಶೇಕಡಾ 45ರಷ್ಟು ಟ್ರಾಫಿಕ್ ಜಾಮ್ ಆಗಿರುತ್ತದೆ.

05. ಸಾಲ್ವಡೋರ್, ಬ್ರೆಜಿಲ್

05. ಸಾಲ್ವಡೋರ್, ಬ್ರೆಜಿಲ್

ಬ್ರೆಜಿಲ್ ನ ಮಗದೊಂದು ನಗರ ಜಗತ್ತಿನ ಅತಿ ಹೆಚ್ಚಿನ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಹೌದು ಸಾಲ್ವಡೋರ್ ವಾಹನ ದಟ್ಟಣೆಯ ಮಟ್ಟ ಶೇಕಡಾ 46 ಆಗಿದ್ದು, ಬೆಳ್ಳಗೆ ಹಾಗೂ ಸಂಜೆಯ ವೇಳೆ ಅನುಕ್ರಮವಾಗಿ ಶೇಕಡಾ 62 ಹಾಗೂ 75ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಇನ್ನು ಹೈವೇಗಳಲ್ಲಿ ಶೇಕಡಾ 33 ಹಾಗೂ ಇತರ ರಸ್ತೆಗಳಳ್ಲಿ ಶೇಕಡಾ 50ರಷ್ಟು ವಾಹನ ದಟ್ಟಣೆಯಿರುತ್ತದೆ.

 06. ರೆಸಿಫೆ, ಬ್ರೆಜಿಲ್

06. ರೆಸಿಫೆ, ಬ್ರೆಜಿಲ್

ಇಲ್ಲಿಗೆ ಬ್ರೆಜಿಲ್ ಪಟ್ಟಿ ಮುಗಿಯುವುದಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ನಗರವೆಂಬ ಅಪಖ್ಯಾತಿಗೆ ಮಗದೊಂದು ಬ್ರೆಜಿಲ್ ನಗರ ಪಾತ್ರವಾಗಿದೆ. ಇಲ್ಲಿನ ವಾಹನ ದಟ್ಟಣೆಯ ಮಟ್ಟ ಶೇಕಡಾ 45ರಷ್ಟಾಗಿದ್ದು, ಬೆಳ್ಳಗೆ ಹಾಗೂ ಸಾಯಂಕಾಲ ಅನುಕ್ರಮವಾಗಿ ಶೇಕಡಾ ಶೇಕಡಾ 81 ಹಾಗೂ 82ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಇನ್ನು ಹೈವೇಗಳಲ್ಲಿ ಶೇಕಡಾ 37 ಹಾಗೂ ಇತರ ರಸ್ತೆಗಳಲ್ಲಿ ಶೇಕಡಾ 55ರಷ್ಟು ಟ್ರಾಫಿಕ್ ಕಂಡುಬರುತ್ತದೆ.

07. ಸೈಂಟ್ ಪೀಟರ್ಸ್ ಬರ್ಗ್, ರಷ್ಯಾ

07. ಸೈಂಟ್ ಪೀಟರ್ಸ್ ಬರ್ಗ್, ರಷ್ಯಾ

ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂಕಕ್ಕೆ ಜಗತ್ತಿನ ವಾಹನ ದಟ್ಟಣೆಯನ್ನು ಅಳೆಯುವುದು ಅಷ್ಟು ಸುಲಭವಾಗಿರಲಿಲ್ಲ. ಈ ನಡುವೆ ರಷ್ಯಾದ ಪೀಟರ್ಸ್ ಬರ್ಗ್ ನಗರವು ಏಳನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇಲ್ಲಿನ ಸಂಚಾರ ದಟ್ಟಣೆಯ ಮಟ್ಟ ಶೇಕಡಾ 44ರಷ್ಟಾಗಿದ್ದು, ಬೆಳಗ್ಗೆ ಹಾಗೂ ಸಾಯಂಕಾಲ ಅನುಕ್ರಮವಾಗಿ ಶೇಕಡಾ 67 ಹಾಗೂ 96ರಷ್ಟು ಕಂಡುಬರುತ್ತದೆ. ಇನ್ನು ಹೆದ್ದಾರಿ ಹಾಗೂ ಸಾಮಾನ್ಯ ರಸ್ತೆಗಳಲ್ಲೂ ಅನುಕ್ರಮವಾಗಿ ಶೇಕಡಾ 25 ಹಾಗೂ 46ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ.

08. ಬುಚಾರೆಸ್ಟ್, ರೊಮನಿಯಾ

08. ಬುಚಾರೆಸ್ಟ್, ರೊಮನಿಯಾ

ರೊಮನಿಯಾದ ಈ ನಗರದ ಬಗ್ಗೆ ನೀವು ಹೆಚ್ಚು ತಿಳಿದಿರಲಾರದು. ಆದರೆ ಸಂಚಾರ ದಟ್ಟಣೆಯ ವಿಚಾರಕ್ಕೆ ಬಂದಾಗ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹೌದು, ರೊಮಾನಿಯಾದ ಬುಚಾರೆಸ್ಟ್ ನಲ್ಲಿನ ವಾಹನ ದಟ್ಟಣೆಯ ಮಟ್ಟ ಶೇಕಡಾ 41ರಷ್ಟಾಗಿದೆ. ಇಲ್ಲಿ ಬೆಳಗ್ಗೆ ಹಾಗೂ ಸಂಜೆಯ ವೇಳೆ ಅನುಕ್ರಮವಾಗಿ ಶೇಕಡಾ 78 ಹಾಗೂ 82ರಷ್ಟು ವಾಹನ ದಟ್ಟಣೆ ಕಂಡುಬರುತ್ತದೆ. ಇನ್ನು ಹೈವೇ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ಅನುಕ್ರಮವಾಗಿ ಶೇಕಡಾ 28 ಹಾಗೂ 45ರಷ್ಟು ಸಂಚಾರ ದಟ್ಟಣೆಯಿರುತ್ತದೆ.

 09. ವಾರ್ಸಾ, ಪೊಲೆಂಡ್

09. ವಾರ್ಸಾ, ಪೊಲೆಂಡ್

ಪೊಲೆಂಡ್ ನ ರಾಜಧಾನಿ ಹಾಗೂ ಅತಿ ದೊಡ್ಡ ನರಗವಾಗಿರುವ ವಾರ್ಸಾ ವಾಹನ ದಟ್ಟಣೆಗಾಗಿ ಪದೇ ಪದೇ ಸುದ್ದಿಯಾಗುತ್ತದೆ. ಇಲ್ಲಿನ ಸಂಚಾರ ದಟ್ಟಣೆಯ ಮಟ್ಟ ಶೇಕಡಾ 40ರಷ್ಟಾಗಿದ್ದು, ಬೆಳ್ಳಗೆ ಹಾಗೂ ಸಂಜೆಯ ವೇಳೆ ಅನುಕ್ರಮವಾಗಿ ಶೇಕಡಾ 69 ಹಾಗೂ 75ರಷ್ಟು ಕಂಡುಬರುತ್ತದೆ. ಇನ್ನು ಹೆದ್ದಾರಿ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ಅನುಕ್ರಮವಾಗಿ ಶೇಕಡಾ 37 ಹಾಗೂ 42ರಷ್ಟು ವಾಹನ ದಟ್ಟಣೆಯಿರುತ್ತದೆ.

10. ಲಾಸ್ ಏಂಜಲೀಸ್, ಅಮೆರಿಕ

10. ಲಾಸ್ ಏಂಜಲೀಸ್, ಅಮೆರಿಕ

ಅಮೆರಿಕದ ಜನಪ್ರಿಯ ನಗರವಾಗಿರುವ ಲಾಸ್ ಏಂಜಲೀಸ್ ಎಲ್ಲರಿಗೂ ಚಿರಪರಿಚಿತ. ಅಂತೆಯೇ ಇಲ್ಲಿನ ಸಂಚಾರ ದಟ್ಟಣೆಯ ಮಟ್ಟ ಶೇಕಡಾ 39ರಷ್ಟಾಗಿದ್ದು, ಬೆಳಗ್ಗೆ ಹಾಗೂ ಸಾಯಂಕಾಲ ಅನುಕ್ರಮವಾಗಿ ಶೇಕಡಾ 60 ಹಾಗೂ 80ರಷ್ಟಿರುತ್ತದೆ. ಇನ್ನು ಹೈವೇ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ಅನುಕ್ರಮವಾಗಿ ಶೇಕಡಾ 36 ಹಾಗೂ 43ರಷ್ಟು ವಾಹನ ದಟ್ಟಣೆಯಿರುತ್ತದೆ.

ಭಾರತ

ಭಾರತ

ಪ್ರಸ್ತುತ ಅಧ್ಯಯನ ವರದಿಯಿಂದ ಭಾರತವನ್ನು ಹೊರತುಪಡಿಸಿರುವುದು ವಿಪರ್ಯಾಸವೇ ಸರಿ. ಆದರೆ 2015ರ ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂಕ ಪಟ್ಟಿಯಲ್ಲಿ ಭಾರತವನ್ನು ಸೇರಿಸುವ ಇರಾದೆ ಹೊಂದಿದೆ. ದೇಶದಲ್ಲಿ ಬೆಂಗಳೂರು, ಮುಂಬೈ, ದೆಹಲಿಗಳಂತಹ ಮಹಾನಗರಗಳಲ್ಲಿ ಅತಿ ಹೆಚ್ಚಿ ಸಂಚಾರ ದಟ್ಟಣೆ ಕಂಡುಬರುತ್ತದೆ.

English summary
TomTom Traffic Index Measuring congestion worldwide and created Worlds 10 worst cities in the Rush Hour Traffic.
Story first published: Tuesday, May 5, 2015, 10:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark