ಜಗತ್ತಿನ ಅತ್ಯುತ್ತಮ ಖಾಸಗಿ ವಿಮಾನಗಳು

Written By:

ಆಧುನಿಕ ಕಾಲಘಟ್ಟದಲ್ಲಿ ಅತ್ಯಂತ ದೂರದ ಪ್ರದೇಶಗಳನ್ನು ಕಡಿಮೆ ಸಮಯದಲ್ಲಿ ತಲುಪಲು ವಿಮಾನಗಳ ಪಾತ್ರ ನಿರ್ಣಾಯಕವೆನಿಸುತ್ತದೆ. ಇದು ತಮ್ಮ ವ್ಯವಹಾರ ಕುದುರಿಸಿಕೊಳ್ಳುವ ಇರಾದೆಯಲ್ಲಿರುವ ದೊಡ್ಡ ದೊಡ್ಡ ಸಂಸ್ಥೆಯ ಉದ್ಯಮಿಗಳಿಗೆ ವಿದೇಶ ಪ್ರಯಾಣಕ್ಕೆ ಹೆಚ್ಚು ಅನುಕೂಲವೆನಿಸಲಿದೆ.

ಪ್ರಸ್ತುತ ಲೇಖನದಲ್ಲಿ ಜಗತ್ತಿನ ಅತ್ಯುತ್ತಮ ಖಾಸಗಿ ವಿಮಾನಗಳ ವಿಭಾಗದಲ್ಲಿ ಕಾಣಿಸಿಕೊಂಡಿರುವ ಕೆಲವು ಗಮನಾರ್ಹ ವಿಮಾನಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ರೊಬ್ ರಿಪೋರ್ಟ್ ಪ್ರೈವೇಟ್ ಎವಿಯೇಷನ್ ಅಡ್ವೈಸರಿ ಬೋರ್ಡ್ ವರದಿಯ ಆಧಾರದಲ್ಲಿ ಇದನ್ನು ತಯಾರಿಸಲಾಗಿದೆ.

ಲಾರ್ಜ್ ಕ್ಯಾಬಿನ್ ಅಲ್ಟ್ರಾಲಾಂಗ್ ರೇಂಜ್

ಲಾರ್ಜ್ ಕ್ಯಾಬಿನ್ ಅಲ್ಟ್ರಾಲಾಂಗ್ ರೇಂಜ್

ಭೂಗೋಲದ ಅರ್ಧದಷ್ಟು ಪ್ರದೇಶವನ್ನು ನಿಶ್ಚಿಂತತೆಯಿಂದ ಪಯಣಿಸಲು ಸಾಧ್ಯವಿರುವ ಲಾರ್ಜ್ ಕ್ಯಾಬಿನ್ ಅಲ್ಟ್ರಾಲಾಂಗ್ ರೇಂಜ್ ವಿಭಾಗಕ್ಕೆ ಸೇರಿದ ವಿಮಾನಗಳು ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತದೆ. ಇಲ್ಲಿ 12 ತಾಸಿಗೂ ಹೆಚ್ಚು ದೂರದ ಪ್ರಯಾಣದ ವೇಳೆ ವಿಶ್ರಾಂತಿಗಾಗಿ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಸಂಚರಿಸುವಾಗಲೇ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬಹುದು.

ಗಲ್ಪ್ ಸ್ಟ್ರೀಮ್ ಜಿ650ಇಆರ್

ಗಲ್ಪ್ ಸ್ಟ್ರೀಮ್ ಜಿ650ಇಆರ್

ಗಲ್ಪ್ ಸ್ಟ್ರೀಮ್ ಜಿ650ಇಆರ್ ಲಾರ್ಜ್ ಕ್ಯಾಬಿನ್ ಅಲ್ಟ್ರಾಲಾಂಗ್ ರೇಂಜ್ ಗೆ ಸೇರಿದ ವಿಮಾನವಾಗಿದ್ದು, 8630 ಮೈಲು ದೂರವನ್ನು ಕ್ರಮಿಸಬಹುದಾಗಿದೆ. ಅಲ್ಲದೆ ಗಂಟೆಗೆ 561 ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಅಲ್ಟ್ರಾಲಾಂಗ್ ರೇಂಜ್

ಅಲ್ಟ್ರಾಲಾಂಗ್ ರೇಂಜ್

ಈ ವಿಭಾಗದ ಖಾಸಗಿ ಜೆಟ್ ಮುಖಾಂತರ 6,000ಕ್ಕೂ ಹೆಚ್ಚು ಮೈಲು ದೂರವನ್ನು ಕ್ರಮಿಸಬಹುದಾಗಿದೆ. ಲಾರ್ಜ್ ಕ್ಯಾಬಿನ್ ಅಲ್ಟ್ರಾಲಾಂಗ್ ರೇಂಜ್ ತರಹನೇ ಇಲ್ಲೂ ಪ್ರಯಾಣಿಕರ ಆರಾಮಕ್ಕಾಗಿ ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ.

ಅಲ್ಟ್ರಾಲಾಂಗ್ ರೇಂಜ್

ಅಲ್ಟ್ರಾಲಾಂಗ್ ರೇಂಜ್

ಬಂಬಾರ್ಡಿಯರ್ ಗ್ಲೋಬಲ್ 6000, ದಸ್ಸಾಲ್ಟ್ ಫಾಲ್ಕನ್ 7ಎಕ್ಸ್, ಗಲ್ಪ್ ಸ್ಟ್ರೀಮ್ ಜಿ550 ವಿಮಾನಗಳು ಅಲ್ಟ್ರಾಲಾಂಗ್ ರೇಂಜ್‌ಗೆ ಸೇರಿದ ವಿಮಾನಗಳಾಗಿವೆ. ಇವೆಲ್ಲವೂ ಅನುಕ್ರಮವಾಗಿ 6,904, 6847 ಹಾಗೂ 7767 ಮೈಲು ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಲಾರ್ಜ್

ಲಾರ್ಜ್

ದೊಡ್ಡ ವ್ಯಾಪ್ತಿಗೆ ಸೇರಿದ ಈ ಖಾಸಗಿ ವಿಮಾನಗಳು 5,000 ಮೈಲು ದೂರವನ್ನು ಕ್ರಮಿಸುತ್ತದೆ. ಇದರಲ್ಲಿ ಅತ್ಯುನ್ನತ ಮಟ್ಟದ ಕ್ಯಾಬಿನ್ ಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಒದಗಿಸಲಾಗಿದೆ.

ಲಾರ್ಜ್

ಲಾರ್ಜ್

ಬಂಬಾರ್ಡಿಯರ್ ಗ್ಲೋಬಲ್ 5000 ಖಾಸಗಿ ವಿಮಾನವು ದೊಡ್ಡ ವ್ಯಾಪ್ತಿಗೆ ಸೇರಿದ ವಿಮಾನವಾಗಿದ್ದು, ಲಂಡನ್ ನಿಂದ ಸಿಯೋಲ್ ವರೆಗೆ ಬಂಧಿಸುತ್ತದೆ. ಇದು 561 ಮೈಲು ವೇಗದಲ್ಲಿ 5984 ಮೈಲು ವ್ಯಾಪ್ತಿಯನ್ನು ತಲುಪುವಷ್ಟು ಶಕ್ತವಾಗಿದೆ. ದಸ್ಸಾಲ್ಟ್ ಫಾಲ್ಕನ್ 990ಎಲ್‌ಎಕ್ಸ್, ಗಲ್ಪ್ ಸ್ಟ್ರೀಮ್ ಜಿ450 ಮತ್ತು ದಸ್ಸಾಲ್ ಫಾಲ್ಕನ್ 900ಎಲ್‌ಎಕ್ಸ್ ಸಹ ಇದೇ ವಿಭಾಗಕ್ಕೆ ಸೇರಿದ ವಿಮಾನವಾಗಿದೆ.

ಸೂಪರ್ ಮಿಡ್ ಸೈಜ್

ಸೂಪರ್ ಮಿಡ್ ಸೈಜ್

ಹೆಸರಲ್ಲೇ ಸೂಚಿಸಿರುವಂತೆಯೇ ಆರು ತಾಸುಗಳಷ್ಟು ಗಂಟೆಗಳ ಸಂಚರಿಸುವ ಪ್ರಯಾಣಿಕರಿಗೆ ಈ ಮಧ್ಯಮ ಗಾತ್ರದ ಸೂಪರ್ ವಿಭಾಗಕ್ಕೆ ಸೇರಿದ ವಿಮಾನಗಳು ಆರಾಮದಾಯಕ ಪ್ರಯಾಣವನ್ನು ಒದಗಿಸಲಿದೆ.

ಸೂಪರ್ ಮಿಡ್ ಸೈಜ್

ಸೂಪರ್ ಮಿಡ್ ಸೈಜ್

ಬಂಬಾರ್ಡಿಯರ್ ಚಾಲೆಂಜರ್ 350, ದಸ್ಸಾಲ್ಟ್ ಫಾಲ್ಕನ್ 2000 ಎಲ್‌ಎಕ್ಸ್‌ಎಸ್ ಮತ್ತು ಗಲ್ಪ್ ಸ್ಟ್ರೀಮ್ ಜಿ280 ಸೂಪರ್ ಮಿಡ್ ಸೈಜ್ ವಿಭಾಗಕ್ಕೆ ಸೇರಿದ ಖಾಸಗಿ ವಿಮಾನಗಳಾಗಿದೆ. ಅಲ್ಲದೆ 10 ಮಂದಿ ಪ್ರಯಾಣಿಕರಿಗೆ ಸಂಚರಿಸಬಹುದಾಗಿದೆ.

ಮಿಡ್ ಸೈಜ್

ಮಿಡ್ ಸೈಜ್

ಸೂಪರ್ ಮಿಡ್ ಸೈಜ್ ಕೆಳಗಡೆ ಗುರುತಿಸಿಕೊಂಡಿರುವ ಮಧ್ಯಮ ಗಾತ್ರದ ವಿಭಾಗಕ್ಕೆ ಸೇರಿದ ಖಾಸಗಿ ವಿಮಾನಗಳು ಕಡಿಮೆ ದೂರದ ಪ್ರದೇಶವನ್ನು ಬಂಧಿಸುತ್ತದೆ.

ಮಿಡ್ ಸೈಜ್

ಮಿಡ್ ಸೈಜ್

ಎಂಬ್ರೇಯರ್ ಲೆಗಸಿ 500, ಗಲ್ಪ್ ಸ್ಟ್ರೀಮ್ ಜಿ150 ಈ ವಿಭಾಗಕ್ಕೆ ಸೇರಿದ ಖಾಸಗಿ ವಿಮಾನಗಳಾಗಿದ್ದು, ಎಂಟು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

ಲೈಟ್ ಮಿಡ್ ಸೈಜ್

ಲೈಟ್ ಮಿಡ್ ಸೈಜ್

'ಸೂಪರ್ ಲೈಟ್' ಎಂಬ ಹೆಸರಿನಿಂದಲೂ ಕರೆಯಲ್ಪಡುವ ಲೈಟ್ ಸೂಪರ್ ಲೈಟ್ ಖಾಸಗಿ ವಿಮಾನಗಳು ಕಡಿಮೆ ದೂರದ ಪ್ರದೇಶದಲ್ಲಿ ಶಿಪ್ರ ಗತಿಯಲ್ಲಿ ತಲುಪಲು ನೆರವಾಗುತ್ತದೆ.

ಲೈಟ್ ಮಿಡ್ ಸೈಜ್

ಲೈಟ್ ಮಿಡ್ ಸೈಜ್

ಬಂಬಾರ್ಡಿಯರ್ ಲೆಯರ್ ಜೆಟ್ 75 ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿದ್ದು, ಮುಂಬೈನಿಂದ ಬ್ಯಾಂಕಾಕ್ ವರೆಗಿನ 2500 ಮೈಲುಗಳಷ್ಟು ದೂರವನ್ನು ಬಂಧಿಸುತ್ತದೆ.

ಲೈಟ್

ಲೈಟ್

ಮಧ್ಯಮ ಉದ್ದದ ದೇಶೀಯ ವಿಮಾನಗಳು ಈ ವಿಭಾಗಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ. ಅಲ್ಲದೆ ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಹಾರಾಡುವ ರಚನಾ ವಿನ್ಯಾಸವನ್ನು ಮೈಗೂಡಿಸಿದೆ.

ಲೈಟ್

ಲೈಟ್

ಲಂಡನ್ ನಿಂದ ಮೊಸ್ಕೋ ವರೆಗೆ ತೆರಳುವ ಸೆಸ್ನಾ ಸೈಟಕ್ಷನ್ ಸಿಜೆ3+ ಈ ವಿಭಾಗಕ್ಕೆ ಸೇರಿದ ವಿಮಾನವಾಗಿದ್ದು, ಏಳು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯಬಹುದಾಗಿದೆ.

ಎಂಟ್ರಿ ಲೆವೆಲ್

ಎಂಟ್ರಿ ಲೆವೆಲ್

ಇದು ಹಗುರ ಭಾರದ ಖಾಸಗಿ ವಿಭಾಗಕ್ಕೆ ಸೇರಿದ ವಿಮಾನವಾಗಿದೆ. ಅಲ್ಲದೆ 1700 ಮೈಲು ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಂಟ್ರಿ ಲೆವೆಲ್

ಎಂಟ್ರಿ ಲೆವೆಲ್

ಈ ವಿಭಾಗಕ್ಕೆ ಸೇರಿದ ಎಂಬ್ರೇಯರ್ ಫೆನಮ್ 100ಇ ಹಾಗೂ ಸೆಸ್ನಾ ಸೈಟಕ್ಷನ್ ಎಂ2 ವಿಮಾಗಳು ಗರಿಷ್ಠ ನಾಲ್ಕು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

ಬ್ಯುಸಿನೆಸ್ ಟರ್ಬೊಪ್ರಾಪ್

ಬ್ಯುಸಿನೆಸ್ ಟರ್ಬೊಪ್ರಾಪ್

ಅದ್ಭುತ ನಿರ್ವಹಣಾ ಸಾಮರ್ಥ್ಯವನ್ನು ಕಾಪಾಡಿಕೊಂಡಿರುವ ಬ್ಯುಸಿನೆಸ್ ಟರ್ಬೊಪ್ರಾಪ್ ಪೈಲಟ್ ಗಳ ನೆಚ್ಚಿನ ಆಯ್ಕೆಯಾಗಿರಲಿದೆ.

ಬ್ಯುಸಿನೆಸ್ ಟರ್ಬೊಪ್ರಾಪ್

ಬ್ಯುಸಿನೆಸ್ ಟರ್ಬೊಪ್ರಾಪ್

ಬೀಚ್ ಕ್ರಾಫ್ಟ್ ಕಿಂಗ್ ಏರ್ 250 ಹಾಗೂ ಪೈಲಟಸ್ ಪಿಸಿ 12 ಎನ್‌ಜಿ ಈ ವಿಭಾಗಕ್ಕೆ ಸೇರಿದ ವಿಮಾನಗಳಾಗಿದ್ದು, ಎಂಟು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.

Read more on ವಿಮಾನ plane
English summary
World’s Best Private Aircraft
Story first published: Saturday, January 2, 2016, 11:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark