Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Sports
ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್ಗೆ ವೈಟ್ವಾಶ್ ಮುಖಭಂಗ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಜಗತ್ತಿನ ಅತಿ ವೇಗದ ಹೈಸ್ಪೀಡ್ ರೈಲಿನ ವಿಶೇಷತೆಗಳ ಬಗೆಗೆ ತಿಳಿಯಿರಿ..
ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳು ಸಾರಿಗೆ ವ್ಯವಸ್ಥೆಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸುತ್ತಿದ್ದು, ಹೈಸ್ಪೀಡ್ ರೈಲ್ವೆ ಸೇವೆಗಳು ಸದ್ಯ ಹೊಸ ಭರವಸೆ ಹುಟ್ಟುಹಾಕಿವೆ. ಸಾವಿರಾರು ಕಿ.ಮೀ ಪ್ರಯಾಣ ಅವಧಿಯನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದಾದ ಸಾಧ್ಯತೆಗಳನ್ನು ಯಶಸ್ವಿಯಾಗಿಸಿರುವ ಹೈಸ್ಪೀಡ್ ರೈಲ್ವೆ ಸೇವೆಗಳಲ್ಲಿ ಮತ್ತಷ್ಟು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ವಿಶ್ವಾದ್ಯಂತ ಈಗಾಗಲೇ ಹಲವಾರು ರಾಷ್ಟ್ರಗಳು ಅಳವಡಿಸಿಕೊಂಡಿದ್ದು, 1964ರಲ್ಲಿ ಮೊಟ್ಟ ಮೊದಲ ಬಾರಿಗೆ ಜಪಾನ್ ದೇಶವು ಹೈಸ್ಪೀಡ್ ರೈಲ್ವೆ ಯೋಜನೆ ಜಾರಿಗೆ ತಂದ ನಂತರ ಹಲವು ರಾಷ್ಟ್ರಗಳು ಹೈಸ್ಪೀಡ್ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದವು. ಹೈಸ್ಪೀಡ್ ರೈಲ್ವೆ ಯೋಜನೆಗಳು ಸಾಂಪ್ರಾದಾಯಿಕ ರೈಲ್ವೆ ಯೋಜನೆಗಳಿಂತಲೂ ತುಸು ದುಬಾರಿಯಾಗಿದ್ದರೂ ಭವಿಷ್ಯದಲ್ಲಿನ ಸಾರಿಗೆ ಸೌಲಭ್ಯಗಳ ವಿಸ್ತರಣೆಗಾಗಿ ಜಾರಿಗೆ ತರುತ್ತಿವೆ.

ಹೊಸ ಬುಲೆಟ್ ರೈಲುಗಳನ್ನು ನಿರ್ಮಾಣ ಮಾಡುವಲ್ಲಿ ಸದ್ಯ ಜಪಾನ್ ದೇಶವು ಮುಂಚೂಣಿಯಲ್ಲಿದ್ದರೂ ಹೈಸ್ಪೀಡ್ ರೈಲುಗಳನ್ನು ಅಳವಡಿಸಿಕೊಳ್ಳುವಲ್ಲಿ ಚೀನಾ ಸರ್ಕಾರವು ಮುಂಚೂಣಿಯಲ್ಲಿದೆ.

ಸದ್ಯ ಬುಲೆಟ್ ಟ್ರೈನ್ ವಿಷಯದಲ್ಲಿ ಚೀನಾ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೆಚ್ಚಿನ ವೇಗದ ರೈಲ್ವೆಗಳನ್ನು ಅಳಡಿಸಿಕೊಳ್ಳಲು ವಿವಿಧ ಹಂತದ ಟ್ರ್ಯಾಕ್ ಪರೀಕ್ಷೆಗಳನ್ನು ಕೈಗೊಳ್ಳುತ್ತಿದೆ.

ವಿಶ್ವಾದ್ಯಂತ ಪ್ರಮುಖ ರಾಷ್ಟ್ರಗಳಲ್ಲಿ ಹೈ-ಸ್ಪೀಡ್ ರೈಲು ಯೋಜನೆಗಳಲ್ಲಿ ಸದ್ಯ ಪ್ರತಿ ಗಂಟೆಗೆ 300 ಕಿ.ಮೀ ನಿಂದ 350 ಕಿ.ಮೀ ವೇಗದ ರೈಲ್ವೆ ಮಾದರಿಗಳನ್ನು ಅಳವಡಿಸಿಕೊಂಡಿದ್ದು, ಒಂದು ಹೆಜ್ಜೆ ಮುಂದೆ ಹೋಗಿರುವ ಚೀನಾ ಇದೀಗ ಪ್ರತಿ ಗಂಟೆಗೆ 600 ಕಿ.ಮೀ ವೇಗದ ಹೈಸ್ಪೀಡ್ ರೈಲು ಮಾದರಿಯ ಪರೀಕ್ಷಾರ್ಥ ಓಡಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೇವೆಗೆ ಸಿದ್ದಗೊಳಿಸುತ್ತಿದೆ.

ಚೀನಾದ ರಾಜಧಾನಿ ಬೀಜಿಂಗ್‌ನಿಂದ ಪ್ರಮುಖ ವಾಣಿಜ್ಯ ನಗರಿಯಾಗಿರುವ ಶಾಂಘೈ ನಗರಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಹೊಸ ರೈಲ್ವೆ ಯೋಜನೆಗಾಗಿ ಚೀನಾ ಸರ್ಕಾರವು ಈಗಾಗಲೇ 2,000 ಕಿ.ಮೀ ನಷ್ಟು ವಿಶೇಷ ಟ್ರ್ಯಾಕ್ ಕೂಡ ನಿರ್ಮಾಣ ಮಾಡಿದೆ.

ಸಾಂಪ್ರದಾಯಿಕ ರೈಲು ಯೋಜನೆಗಳಿಂತಲೂ ಹೈಸ್ಪೀಡ್ ರೈಲು ಮಾದರಿಗಳು ಹೆಚ್ಚು ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಹೊಂದಿರಲಿದ್ದು, ಹೊಸ ಹೈಸ್ಪೀಡ್ ರೈಲ್ವೆ ಯೋಜನೆಯನ್ನು ಚೀನಾ ಸರ್ಕಾರವು ಮ್ಯಾಗ್ಲೆವ್ ರೈಲುಗಳ ತಂತ್ರಜ್ಞಾನದೊಂದಿಗೆ ಹಳಿಗಿಳಿಸುತ್ತಿದೆ.

ಮ್ಯಾಗ್ಲೆವ್ (ಮ್ಯಾಗ್ನೆಟಿಕ್ ಲೆವಿಟೇಶನ್) ಎಂಬುದು ಹೈಸ್ಪೀಡ್ ರೈಲುಗಳನ್ನು ಓಡಿಸಲು ಕಾಂತೀಯ ಬಲವನ್ನು ಬಳಸುವ ಒಂದು ತಂತ್ರವಾಗಿದ್ದು, ಇದರಲ್ಲಿ ರೈಲುಗಳನ್ನು ಚಕ್ರಗಳ ಬದಲಾಗಿ ವಿದ್ಯುಚ್ಛಕ್ತಿಯಿಂದ ರಚಿಸಲ್ಪಟ್ಟ ಕಾಂತೀಯ ಬಲದ ಮೇಲೆ ಓಡಿಸಲಾಗುತ್ತದೆ.

ಕಾಂತೀಯ ಬಲದ ಸಹಾಯದಿಂದ ರೈಲು ಹಳಿಗಳ ಮೇಲೆ ತೇಲುತ್ತಾ ಚಲಿಸಲಿದ್ದು, ಇದರಿಂದಾಗಿ ಅತಿ ವೇಗದಲ್ಲೂ ಯಾವುದೇ ಘರ್ಷಣೆ ಇಲ್ಲದೆ ನೂರಾರು ಕಿಲೋಮೀಟರ್ ವೇಗದಲ್ಲಿ ಚಲಿಸಲು ಸಹಕಾರಿಯಾಗಿದೆ.

ರೈಲು ಮತ್ತು ಹಳಿಗಳ ನಡುವಿನ ಘರ್ಷಣೆಯು ತಗ್ಗುವುದರಿಂದ ಇದು ಅತಿ ಹೆಚ್ಚಿನ ವೇಗವನ್ನು ಪಡೆಯಲು ಸಹಕಾರಿಯಾಗಲಿದ್ದು, ಇವು ಸಾಂಪ್ರಾದಾಯಿಕ ರೈಲ್ವೆ ಯೋಜನೆಗಳಿಂತಲೂ ತುಸು ದುಬಾರಿಯಾಗಿದ್ದರೂ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿವೆ.

ಭವಿಷ್ಯ ಸಾರಿಗೆ ವ್ಯವಸ್ಥೆಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರವು ಸುಮಾರು ಎರಡು ದಶಕಗಳಿಂದ ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ನಿಯಮಿತವಾಗಿ ಹೆಚ್ಚಿಸುತ್ತಿದ್ದು, ಚೀನಾ ನಂತರ ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಸ್ಪೇನ್ ಸೇರಿದಂತೆ ಹಲವು ರಾಷ್ಟ್ರಗಳು ಹೈಸ್ಪೀಡ್ ರೈಲ್ವೆ ಯೋಜನೆಗಳಲ್ಲಿ ಮುಂಚೂಣಿ ಸಾಧಿಸುತ್ತಿವೆ.

ಹೈಸ್ಪೀಡ್ ಮಾರ್ಗಗಳಿಗೆ ಚೀನಾ ಸರ್ಕಾರವು ಹೆಚ್ಚಿನ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದ್ದು, ಮ್ಯಾಗ್ಲೆವ್ ರೈಲುಗಳಿಗೆ ವಿಶೇಷ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡುತ್ತಿದೆ. ದೇಶಾದ್ಯಂತ ಪ್ರಮುಖ ನಗರಗಳನ್ನು ಹೈಸ್ಪೀಡ್ ರೈಲ್ವೆ ಯೋಜನೆಗಳನ್ನು ಮೂಲಕ ಸಂಪರ್ಕ ಕಲ್ಪಿಸುವ ಯೋಜನೆ ಹೊಂದಿದ್ದು, ಭವಿಷ್ಯದಲ್ಲಿ ಇನ್ನು ಹಲವಾರು ಹಲವಾರು ರೈಲ್ವೆ ಯೋಜನೆಗಳನ್ನು ಜಾರಿ ತರುವ ಸಿದ್ದತೆಯಲ್ಲಿಯಲ್ಲಿದೆ.

ಚೀನಾದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಈಗಾಗಲೇ ಪ್ರತಿ ಗಂಟೆಗೆ 350 ಕಿ.ಮೀ ವೇಗದ ಹಲವು ಬುಲೆಟ್ ಟ್ರೈನ್ ಮಾರ್ಗಗಳು ಸೇವೆಯಲ್ಲಿದ್ದು, ಇದೀಗ ಪ್ರತಿ ಗಂಟೆ 600 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಹೊಸ ಹೈಸ್ಪೀಡ್ ರೈಲ್ವೆ ಯೋಜನೆಯನ್ನು ಆರಂಭಿಸುತ್ತಿದೆ. ಜೊತೆಗೆ ಹೊಸ ಹೈಸ್ಪೀಡ್ ರೈಲು ಒಂದು ಬಾರಿಗೆ 1,200 ಪ್ರಯಾಣಿಕರನ್ನು ಹೊತ್ತು ಸಾಗಲಿದ್ದು, ವಿಮಾನಯಾನ ಸೇವೆಗಗಳಿಂತಲೂ ಇದೀಗ ಅಗ್ಗವಾಗಿರಲಿದೆ ಎನ್ನಲಾಗಿದೆ.