ಭೂಮಿ, ನೀರು, ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲ ಹೈಬ್ರಿಡ್ ಏರೋಬೋಟ್ ನಿರ್ಮಾಣ..!!

Written By:

ಅಡ್ವಾನ್ಸ್ಡ್ ಏರೋಸ್ಪೇಸ್ ತಂತ್ರಜ್ಞಾನದ ಮೂಲಕ ಮೊಟ್ಟ ಮೊದಲ ಬಾರಿಗೆ ಹೈಬ್ರಿಡ್ ಏರೋಬೋಟ್ ಒಂದನ್ನು ನಿರ್ಮಾಣ ಮಾಡಲಾಗಿದೆ.

ರಷ್ಯಾದಲ್ಲಿ ನಡೆದ ಸ್ಪಾರ್ಟ್ ಅಪ್ಸ್ ಸಮಾರಂಭ ಒಂದರಲ್ಲಿ ಭೂಮಿ, ನೀರು, ಹಿಮ ಮತ್ತು ಮರಳಿನಲ್ಲಿ ಪ್ರಯಾಣಿಸ ಬಲ್ಲ ವಿಶ್ವದ ಮೊದಲ ಹೈಬ್ರಿಡ್ "ಏರೋಬೋಟ್" ಪರಿಕಲ್ಪನೆ ಒಂದನ್ನು ಅನಾವರಣಗೊಳಿಸಲಾಗಿದ್ದು, ವಿಶ್ವ ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ರಷ್ಯಾದ ಸ್ಕೋಲ್ಕೊವೊ ಫೌಂಡೇಶನ್ ಆಯೋಜಿಸಿದ್ದ ಸ್ಪಾರ್ಟ್ ಅಪ್ಸ್ ಸಮಾರಂಭದಲ್ಲಿ ಈ ವಿಶೇಷ ಹ್ರೈಬ್ರಿಡ್ ಏರೋಬೋಟ್ ಪ್ರದರ್ಶನ ಮಾಡಲಾಗಿದ್ದು, ಇಂಡೋ-ರಷ್ಯಾ ಜಂಟಿ ಉದ್ಯಮಗಳು ಈ ಹೈಬ್ರಿಡ್ ಏರೋಬೋಟ್ ನಿರ್ಮಾಣ ಮಾಡಿವೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ಏರೋಬೋಟ್ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಏರೋಸ್ಪೇಸ್ ಟೆಕ್ನಾಲಜೀಸ್ ಮತ್ತು ಭಾರತೀಯ ಸಂಸ್ಥೆಯಾದ ಮಿಲೇನಿಯಮ್ ಏರೊಡೈನಾಮಿಕ್ಸ್ ಈ ವಿಶೇಷ ವಿನ್ಯಾಸವುಳ್ಳ ಹೈಬ್ರಿಡ್ ಬೋಟ್ ಸಿದ್ಧಗೊಳಿಸಿವೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ಏರೋಬೋಟ್ ಮೂಲಕ ಕಡಿದಾದ ಭೂಪ್ರದೇಶಗಳನ್ನು ಸುಲಭವಾಗಿ ತಲುಪುವ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದು, ಸಮುದ್ರ ಯಾನವನ್ನು ಇದು ಮತ್ತಷ್ಟು ಸುಖಕರವಾಗಿಸಲಿದೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ಸದ್ಯ ಹೈಬ್ರಿಡ್ ಏರೋಬೋಟ್ ನಿರ್ಮಾಣಕ್ಕೆ ಮಾನ್ಯತೆ ನೀಡಿರುವ ರಷ್ಯಾ, ಖಾಸಗಿ ಬಳಕೆಗೆ ಅವಕಾಶ ನೀಡದೇ ವಿಪತ್ತು ನಿರ್ವಹಣೆಗಾಗಿ ಮಾತ್ರ ಬಳಕೆ ಮಾಡುವಂತೆ ಮಹತ್ವದ ಸೂಚನೆ ನೀಡಿದೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ವಿಶೇಷವಾಗಿ ಒಳ ವಿನ್ಯಾಸಗಳ ಮೂಲಕ ಅಭಿವೃದ್ಧಿ ಹೊಂದಿರುವ ಹೈಬ್ರಿಡ್ ಏರೋಬೋಟ್, ಹೋವರ್ ಕ್ರಾಫ್ಟ್ ತಂತ್ರಜ್ಞಾನಕ್ಕಿಂತ ಉತ್ತಮ ನಿರ್ವಹಣಾ ಶಕ್ತಿ ಹೊಂದಿದೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ಪ್ರತಿ ಗಂಟೆಗೆ 150 ಕಿ.ಮಿ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಹೈಬ್ರಿಡ್ ಏರೋಬೋಟ್, ಪ್ರತಿ ವರ್ಷದ ನಿರ್ವಹಣಾ ವೆಚ್ಚ 25 ರಿಂದ 30 ಸಾವಿರ ರೂಪಾಯಿ ತಗುಲಬಹುದು ಎಂದು ಅಂದಾಜಿಸಲಾಗಿದೆ.

ಭೂಮಿ,ನೀರು,ಹಿಮ ಮತ್ತು ಮರಳಿನಲ್ಲಿ ಸಾಗಬಲ್ಲದು ಈ 'ಏರೋಬೋಟ್'

ಒಟ್ಟಿನಲ್ಲಿ ಹೈಬ್ರಿಡ್ ಏರೋಬೋಟ್ ಕಲ್ಪನೆಗೆ ಭಾರತದಲ್ಲೂ ಮಾನ್ಯತೆ ಸಿಕ್ಕಿದ್ದೆ ಆದಲ್ಲಿ, ವಿಪತ್ತು ನಿರ್ವಹಣಾಗಿ ಸಾಕಷ್ಟು ಸಹಕಾರಿಯಾಗುವ ನೀರಿಕ್ಷೆವೆ.

English summary
Read in Kannada about The world's first hybrid "aeroboat" capable of travelling on land, water, snow and sand has been unveiled.
Story first published: Friday, June 9, 2017, 14:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark