ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

Written By:

ಹಳಿಗಳ ಮೇಲೆ ಲಗತ್ತಿಸಿರುವ ಎಲೆಕ್ಟ್ರಿಕ್ ತಂತಿಗಳಲ್ಲಿ ಹಾದು ಹೋಗುತ್ತಿರುವ ರೈಲುಗಳನ್ನು ನೀವು ನೋಡಿರುವೀರಾ, ಹಾಗಿದ್ದರೆ ಇಂತಹದೊಂದು ವ್ಯವಸ್ಥೆಯೂ ಹೆದ್ದಾರಿಗೂ ಪ್ರವೇಶಿಸಿದರೆ ಹೇಗಿರಬಹುದು? ಹೌದು, ಇಂತಹದೊಂದು ವಿನೂತನ ಯೋಜನೆ ಸ್ವಿಡನ್ ನಲ್ಲಿ ನನಸಾಗಿದೆ.

ಎಲೆಕ್ಟ್ರಿಕ್ ತಂತಿಗಳಿಂದ ಬಂಧಿಸಲ್ಪಟ್ಟಿರುವ ವಿಶ್ವದ ಮೊತ್ತ ಮೊದಲ ಇ-ಹೈವೇನಲ್ಲಿ ಸ್ಕಾನಿಯಾ ಟ್ರಕ್ ಗಳು ಪ್ರಾಯೋಗಿಕ ಓಡಾಟವನ್ನು ಆರಂಭಿಸಿದೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಉತ್ತರ ಸ್ಟಾಕ್ಹೋಮ್ ನ ಇ16 ಹೆದ್ದಾರಿಯಲ್ಲಿ ಹರಡಿರುವ ಎರಡು ಕೀ.ಮೀ. ಉದ್ದದ ಸೀಮೆನ್ ಕ್ಯಾಟನರಿ ಸಿಸ್ಟಂನಲ್ಲಿ ಟ್ರಕ್ ಗಳು ಮುಂದಿನ ಎರಡು ವರ್ಷಗಳಷ್ಟು ಕಾಲ ಪ್ರಾಯೋಗಿಕ ಸಂಚಾರವನ್ನು ನಡೆಸಲಿದೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆ ಸ್ಕಾನಿಯಾದಿಂದ ನಿರ್ಮಿತ ಎರಡು ಡೀಸೆಲ್ ಹೈಬ್ರಿಡ್ ವಾಹನಗಳು ಸಂಚಾರವನ್ನು ನಡೆಸಲಿದೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಭವಿಷ್ಯದ ವಾಣಿಜ್ಯ ವಾಹನಗಳ ಬಗ್ಗೆ ಸ್ವಿಡನ್ ಸಾರಿಗೆ ಅಧಿಕಾರಿಗಳು ಅರಿವನ್ನು ಮೂಡಿಸಲಿದ್ದಾರೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಇವೆಲ್ಲವೂ ಹವಾಮಾನ ರಕ್ಷಣೆಯ ತಂತ್ರಗಾರಿಕೆಯ ಭಾಗವಾಗಿದ್ದು, ಇ ಹೈವೇ 2030ರಲ್ಲಿ ತನ್ನದೇ ಆದ ಸ್ವತಂತ್ರ ಸಂಚಾರ ಜಾಲವನ್ನು ಪಡೆಯಲಿದೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಸ್ಕಾನಿಯಾ ಜೊತೆಗಾರಿಕೆಯಲ್ಲಿ ಸಿಮೆನ್ ಕ್ಯಾನಟರಿ ವ್ಯವಸ್ಥೆಯನ್ನು ತೆರೆದುಕೊಳ್ಳಲಾಗಿದೆ. ಈ ಮೂಲಕ ಮೂಲ ಸೌಕರ್ಯ ವೃದ್ಧಿಗೆ ಆದ್ಯತೆ ಕೊಡಲಾಗಿದೆ.

ಸ್ವಿಡನ್‌ನಲ್ಲಿ ತಲೆಯೆತ್ತಿದ ವಿಶ್ವದ ಮೊತ್ತ ಮೊದಲ ಇ-ಹೆದ್ದಾರಿ

ಇ ಹೆದ್ದಾರಿಯ ಚಾಲನೆಯೊಂದಿಗೆ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲಿದೆ. ತನ್ಮೂಲಕ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ.

Read more on ಟ್ರಕ್ truck
English summary
Worlds first e-highway opens in Sweden

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark