ಜಗತ್ತಿನ 20 ಸುರಕ್ಷಿತ ವಿಮಾನಯಾನ ಸಂಸ್ಥೆಗಳು

Written By:

ನೀವು ವಿದೇಶದಲ್ಲಿ ನೆಲೆಸಿರುವೀರಾ ಅಥವಾ ಉದ್ಯೋಗ ಹರಸಿಕೊಂಡಿರುವೀರಾ? ನಿರಂತರ ಅಂತರಾಳಗಳಲ್ಲಿ ವಿಮಾನದಲ್ಲಿ ಪಯಣಿಸುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ ನಮ್ಮ ಇಂದಿನ ಲೇಖನ ಕಡ್ಡಾಯವಾಗಿ ಓದಿ ನೋಡಲೇಬೇಕು.

Also Read: ಹಕ್ಕಿ ಢಿಕ್ಕಿಯಾದರೆ ವಿಮಾನ ಪತನವಾಗುವುದು ಹೇಗೆ ?

ತಾಜಾ ಅಧ್ಯಯನ ವರದಿ ಪ್ರಕಾರ ಜಗತ್ತಿನೆಲ್ಲೆಡೆ ನಡೆಯುತ್ತಿರುವ ವಿಮಾನ ಅಪಘಾತಗಳ ಸಂಖ್ಯೆ ಗಣನೀಯವಾಗಿ ವರ್ಧಿಸತೊಡಗಿದೆ. ವಿಮಾನ ಸಂಚಾರದ ಬೇಡಿಕೆ ಹೆಚ್ಚಾಗುವುದರೊಂದಿಗೆ ಅವಘಡ ಪ್ರಸಂಗಗಳು ಸಾಮಾನ್ಯವಾಗಿಬಿಟ್ಟಿದೆ. ಹಾಗಿದ್ದರೂ ಪ್ರಯಾಣಿಕರ ಸುರಕ್ಷಿತ ಯಾತ್ರೆಯಾಗಿ ಬಹುತೇಕ ಸಂಸ್ಥೆಗಳು ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸುತ್ತಿವೆ. ಹೀಗೆ ವಿಶ್ವದ ಅತಿ ಹೆಚ್ಚು ಸುರಕ್ಷಿತ 20 ವಿಮಾನಯಾನಗಳ ಸಂಸ್ಥೆಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ.

ಜಗತ್ತಿನ 20 ಸುರಕ್ಷಿತ ವಿಮಾನಯಾನ ಸಂಸ್ಥೆಗಳು

ವಿಶ್ವದ ಏಕಮಾತ್ರ ವಿಮಾನಯಾನ ಸುರಕ್ಷತೆ ಮತ್ತು ಉತ್ಪನ್ನ ರೇಟಿಂಗ್ ವೆಬ್ ಸೈಟ್ ಆಗಿರುವ ಏರ್ ಲೈನ್ ರೇಟಿಂಗ್ ಡಾಟ್ ಕಾಮ್ ಮಾಡಿರುವ ಅಧ್ಯಯನ ವರದಿಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಇದರಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳು ನಡೆಸಿರುವ ಅಧ್ಯಯನ ಹಾಗೂ ವಿಮಾನಯಾನ ಸಂಸ್ಥೆಗಳ ಅಪಘಾತ ಇತಿಹಾಸ ದಾಖಲೆಯ ಪರಿಶೋಧನೆಯನ್ನು ಮಾಡಲಾಗಿದ್ದು, ಅಂತರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಯಿಂದ (ಐಎಟಿಎ) ಮಾನ್ಯತೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಪಟ್ಟಿಯನ್ನು ಇಂಗ್ಲಿಂಷ್ ವರ್ಣಮಾಲೆಯ ಅಕ್ಷರಗಳಿಗೆ ಅನುಸಾರವಾಗಿ ಕೊಡಲಾಗಿದೆ.

ಏರ್ ನ್ಯೂಜಿಲೆಂಡ್

ಏರ್ ನ್ಯೂಜಿಲೆಂಡ್

ಏರ್ ನ್ಯೂಜಿಲೆಂಡ್ ಆಕ್ಲೆಂಡ್ ತಳಹದಿಯ ವಿಮಾನಯಾನ ಸಂಸ್ಥೆಯಾಗಿದೆ. ಇದು 16 ದೇಶಗಳಲ್ಲಾಗಿ 22 ದೇಶೀಯ ಹಾಗೂ 29 ಅಂತರಾಷ್ಟ್ರೀಯ ತಾಣಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ. ಅಂದ ಹಾಗೆ ಏರ್ ನ್ಯೂಜಿಲೆಂಡ್ 1940ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಅಲಸ್ಕಾ ಏರ್ ಲೈನ್ಸ್

ಅಲಸ್ಕಾ ಏರ್ ಲೈನ್ಸ್

ಅಮೆರಿಕಕ್ಕೆ ಹೆಚ್ಚಿನ ಗೌರವವನ್ನು ತಂದು ಕೊಟ್ಟಿರುವ ವಾಷಿಂಗ್ಟನ್ ತಳಹದಿಯ ಅಲಸ್ಕಾ ಏರ್ ಲೈನ್ಸ್ ಸಂಸ್ಥೆಯನ್ನು 1932ನೇ ಇಸವಿಯಲ್ಲಿ ಸ್ಥಾಪಿಸಲಾಯಿತು. ಸಮಕಾಲೀನ ಕಾಲಘಟ್ಟದಲ್ಲಿ ಅಲಸ್ಕಾ 100ಕ್ಕೂ ಹೆಚ್ಚು ತಾಣಗಳಿಗೆ ತನ್ನ ವಿಮಾನಯಾನ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೆ ಈಗಲೂ ಗರಿಷ್ಠ ಗ್ರಾಹಕ ಸಂತೃಪ್ತಿ ರೇಟಿಂಗ್ ಸಹ ಕಾಯ್ದುಕೊಂಡು ಬಂದಿದೆ.

ಆಲ್ ನಿಪ್ಪಾನ್ ಏರ್ ಲೈನ್ಸ್

ಆಲ್ ನಿಪ್ಪಾನ್ ಏರ್ ಲೈನ್ಸ್

ಆಲ್ ನಿಪ್ಪಾನ್ ಏರ್ ಲೈನ್ಸ್ ಜಪಾನ್‌ನ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ. ಇದು ದೇಶೀಯ ಜೊತೆಗೆ ಅಂತರಾಷ್ಟ್ರೀಯ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೆ 2015 ಮಾರ್ಚ್ ಲೆಕ್ಕಾಚಾರದ ಪ್ರಕಾರ 12,360 ಕೆಲಸಗಾರರು ಇದರಲ್ಲಿ ದುಡಿಯುತ್ತಿದ್ದಾರೆ. ಆಲ್ ನಿಪ್ಪಾನ್ ಏರ್ ಲೈನ್ಸ್ ಸಂಸ್ಥೆಯನ್ನು 1952ನೇ ಇಸವಿಯಲ್ಲಿ ಸ್ಥಾಪಿಸಲಾಯಿತು.

ಅಮೆರಿಕನ್ ಏರ್ ಲೈನ್ಸ್

ಅಮೆರಿಕನ್ ಏರ್ ಲೈನ್ಸ್

ಟೆಕ್ಸಸ್ ಫೋರ್ಟ್ ವರ್ತ್‌ನಲ್ಲಿ ಕೇಂದ್ರ ಕಚೇರಿಯಿರುವ ಅಮೆರಿಕನ್ ಏರ್ ಲೈನ್ಸ್, ವಿಮಾನ ಗಾತ್ರ ಹಾಗೂ ಆದಾಯದ ವಿಚಾರದಲ್ಲಿ ವಿಶ್ವದ ಬಹುದೊಡ್ಡ ವಿಮಾನಯಾನ ಸಂಸ್ಥೆಯಾಗಿ ಮಾರ್ಪಟ್ಟಿದೆ. ಅಲ್ಲದೆ ಅತಿ ಹೆಚ್ಚು ತಾಣಗಳಿಗೆ ಸೇವೆ ಒದಗಿಸುತ್ತಿರುವ ಪೈಕಿ ಎರಡನೇ ಸ್ಥಾನದಲ್ಲಿದೆ. ಅಂತೆಯೇ 1936ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಕ್ಯಾಥೆ ಫೆಸಿಫಿಕ್ ಏರ್ ವೇಸ್

ಕ್ಯಾಥೆ ಫೆಸಿಫಿಕ್ ಏರ್ ವೇಸ್

ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೇಂದ್ರಿಕರಿಸಿ ಕಾರ್ಯಾಚರಿಸುತ್ತಿರುವ ಕ್ಯಾಥೆ ಫೆಸಿಫಿಕ್ ಏರ್ ವೇಸ್ 52 ರಾಷ್ಟ್ರಗಳಲ್ಲಾಗಿ 200ರಷ್ಟು ದೂರ ತಾಣಗಳಿಗೆ ಸೇವೆಯನ್ನು ಒದಗಿಸುತ್ತಿದೆ. ಬೋಯಿಂಗ್ ಹಾಗೂ ಏರ್ ಬಸ್ ಗಳಂತಹ ವಿಶ್ವ ವಿಖ್ಯಾತ ವಿಮಾನಗಳನ್ನು ಹೊಂದಿರುವ ಪ್ರಸ್ತುತ ಸಂಸ್ಥೆಯು 1946ರಲ್ಲಿ ಸ್ಥಾಪಿತಗೊಂಡಿತ್ತು.

ಎಮಿರೇಟ್ಸ್

ಎಮಿರೇಟ್ಸ್

ದುಬೈ ತಳಹದಿಯ ಎಮಿರೇಟ್ಸ್ ಸಂಸ್ಥೆಯು ಭಾರತೀಯರಿಗೆ ಹೆಚ್ಚು ಚಿರಪರಿಚಿತವಾಗಿದ್ದು, 1985ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದು ಮಧ್ಯ ಪೂರ್ವದಲ್ಲಿರುವ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ವಾರವೊಂದರಲ್ಲಿ 3,300ಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ನಡೆಸುತ್ತಿದೆ. ಅಲ್ಲದೆ ಆರು ಖಂಡಗಳ 78 ರಾಷ್ಟ್ರಗಳಲ್ಲಾಗಿ 148ಕ್ಕೂ ಹೆಚ್ಚು ನಗರಗಳಿಗೆ ಸಂಪರ್ಕವನ್ನು ಕಲ್ಪಿಸಿಕೊಂಡಿದೆ.

ಎತಿಹಾಡ್ ಏರ್ ವೇಸ್

ಎತಿಹಾಡ್ ಏರ್ ವೇಸ್

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಎತಿಹಾಡ್ ಏರ್ ವೇಸ್ ಕೇಂದ್ರ ಕಚೇರಿ ಅಬುದಾಬಿಯ ಖಲಿಫಾ ಸಿಟಿಯಲ್ಲಿದೆ. ಸರಿ ಸುಮಾರು ಒಂದು ದಶಕದ ಹಿಂದೆ ಅಂದರೆ 2003ನೇ ಇಸವಿಯಲ್ಲಿ ಎತಿಹಾಡ್ ಏರ್ ವೇಸ್ ಸ್ಥಾಪನೆಗೊಂಡಿತ್ತು. ಅಂತೆಯೇ ವಾರದಲ್ಲಿ 1,000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ನಡೆಸುತ್ತಿದೆ.

ಇವಾ ಏರ್

ಇವಾ ಏರ್

ತೈವಾನ್ ತಳಹದಿಯ ಇವಾ ಏರ್ ವೇಸ್ ಕಾರ್ಪೋರೇಷನ್ 1989ನೇ ಇಸವಿಯಲ್ಲಿ ಸ್ಥಾಪನೆಗೊಂಡಿತ್ತು. ಅಲ್ಲದೆ ಪ್ರಸ್ತುತ ಏಷ್ಯಾ, ಆಸ್ಟ್ರೇಲಿಯಾ, ಯುರೋಪ್ ಹಾಗೂ ಉತ್ತರ ಅಮೆರಿಕಗಳಲ್ಲಾಗಿ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಸೇವೆ ನಡೆಸುತ್ತಿದೆ.

ಫಿನ್ನೈರ್

ಫಿನ್ನೈರ್

ಫಿನ್‌ಲ್ಯಾಂಡ್‌ನ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಫಿನ್ನೈರ್, ಯುರೋಪ್‌ನ 60ಕ್ಕೂ ಹಾಗೂ ಏಷ್ಯಾದ 13 ತಾಣಗಳಿಗೆ ಸೇವೆಯನ್ನು ಸಲ್ಲಿಸುತ್ತದೆ. 1923ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಫಿನ್ನೈರ್ ವಿಶ್ವದ ವಿಶ್ವದ ಐದನೇ ಅತಿ ಪುರಾತನ ವಿಮಾನಯಾನ ಸಂಸ್ಥೆಯಾಗಿದೆ.

ಹವಾಯಿಯನ್ ಏರ್ ಲೈನ್ಸ್

ಹವಾಯಿಯನ್ ಏರ್ ಲೈನ್ಸ್

ಹವಾಯಿಯ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಹವಾಯಿಯನ್ ಏರ್ ಲೈನ್ಸ್ 1929ನೇ ಇಸವಿಯಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಇದು ಅಮೆರಿಕದ ಎಂಟನೇ ಅತಿ ದೊಡ್ಡ ವಾಣಿಜ್ಯ ವಿಮಾನಯಾನ ಸಂಸ್ಥೆಯಾಗಿದೆ.

ಜಪಾನ್ ಏರ್ ಲೈನ್ಸ್

ಜಪಾನ್ ಏರ್ ಲೈನ್ಸ್

ಆಲ್ ನಿಪ್ಪಾನ್ ಏರ್ ವೇಸ್ ಬಳಿಕ ಜಪಾನ್‌ನ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಎನಿಸಿಕೊಂಡಿರುವ ಜಪಾನ್ ಏರ್ ಲೈನ್ಸ್, 35 ರಾಷ್ಟ್ರಗಳಲ್ಲಾಗಿ 220 ಕೇಂದ್ರಗಳಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಪ್ರಸ್ತುತ ಸಂಸ್ಥೆಯು 1951ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಕೆಎಲ್‌ಎಂ

ಕೆಎಲ್‌ಎಂ

ಕೆಎಲ್‌ಎಂ ಅಥವಾ ರಾಯಲ್ ಡಚ್ ಏರ್ ಲೈನ್ಸ್ ಎಂದರಿಯಲ್ಪಡುವ ಹಾಲೆಂಡ್ ಕೇಂದ್ರಿತ ಈ ವಿಮಾನಯಾನ ಸಂಸ್ಥೆಯು 1919ನೇ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಇದು ಏರ್ ಫ್ರಾನ್ಸ್-ಕೆಎಲ್‌ಎಂ ಸಂಸ್ಥೆಯ ಭಾಗವಾಗಿದ್ದು, ವಿಶ್ವದ ಅತಿ ಹಳೆಯ ವಿಮಾನಯಾನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2013ರ ಲೆಕ್ಕಾಚಾರದ ಪ್ರಕಾರ ಈ ಸಂಸ್ಥೆಯಲ್ಲಿ 32,505 ಉದ್ಯೋಗಿಗಳು ದುಡಿಯುತ್ತಿದ್ದಾರೆ.

ಲುಫ್ತಾನ್ಸಾ

ಲುಫ್ತಾನ್ಸಾ

ಭಾರತೀಯರಿಗೆ ಹೆಚ್ಚು ಪರಿಚಿತವಾದ ಮಗದೊಂದು ವಿಮಾನಯಾನ ಸಂಸ್ಥೆ ಇದಾಗಿದ್ದು, 1953ನೇ ಇಸವಿಯಲ್ಲಿ ಸ್ಥಾಪನಗೊಂಡಿತ್ತು. ಯುರೋಪ್ ಹಾಗೂ ಜರ್ಮನಿಯ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಲುಫ್ತಾನ್ಸಾ 78 ರಾಷ್ಟ್ರಗಳಲ್ಲಾಗಿ 18 ದೇಶೀಯ ಹಾಗೂ 197 ಅಂತರಾಷ್ಟ್ರೀಯ ತಾಣಗಳಿಗೆ ತನ್ನ ಸೇವೆಯನ್ನು ಒದಗಿಸುತ್ತಿದೆ.

ಸ್ಕ್ಯಾಂಡಿನೇವಿಯನ್ ಏರ್ ಲೈನ್ಸ್

ಸ್ಕ್ಯಾಂಡಿನೇವಿಯನ್ ಏರ್ ಲೈನ್ಸ್

ಡೆನ್ಮಾರ್ಕ್, ನಾರ್ವೇ ಹಾಗೂ ಸ್ವೀಡನ್ ವಿಮಾನಯಾನ ಸಂಸ್ಥೆಯಾಗಿರುವ ಸ್ಕ್ಯಾಂಡಿನೇವಿಯನ್, 90 ಗುರಿ ಮುಟ್ಟುವ ಪ್ರದೇಶಗಳಿಗೆ 182ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ನಡೆಸುತ್ತಿದೆ. ಅಲ್ಲದೆ ಯುರೋಪ್ ನ 50ಕ್ಕೂ ಹೆಚ್ಚು ನಗರಗಳಿಗೆ ಬಂಧಿಸಲ್ಪಟ್ಟಿದೆ.

ಸಿಂಗಾಪುರ ಏರ್ ಲೈನ್ಸ್

ಸಿಂಗಾಪುರ ಏರ್ ಲೈನ್ಸ್

ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಏರ್ ಬಸ್ ಎ380 ಮುಂತಾದ ವಿಮಾನಗಳ ಸೇವೆಯನ್ನು ಹೊಂದಿರುವ ಸಿಂಗಾಪುರ ಏರ್ ಲೈನ್ಸ್ 1947ನೇ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಪ್ರಸ್ತುತ ಸಂಸ್ಥೆಯು 64 ಗಮ್ಯಸ್ಥಾನಗಳಿಗೆ ತನ್ನ ಸೇವೆಯನ್ನು ಹೊಂದಿದೆ.

ಸ್ವಿಸ್

ಸ್ವಿಸ್

ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಿಗೆ ತನ್ನ ಸೇವೆಯನ್ನು ನಡೆಯುತ್ತಿರುವ ಸ್ವಿಸ್ ಅಂತರಾಷ್ಟ್ರೀಯ ಏರ್ ಲೈನ್ಸ್ 2002ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದು ಜರ್ಮನಿಯ ಲುಫ್ತಾನ್ಸಾ ಗ್ರೂಪ್‌ನ ಅಂಗ ಸಂಸ್ಥೆಯಾಗಿದೆ.

ಯುನೈಟೆಡ್ ಏರ್ ಲೈನ್ಸ್

ಯುನೈಟೆಡ್ ಏರ್ ಲೈನ್ಸ್

ಚಿಗಾಕೊ ಕೇಂದ್ರಿತ ಅಮೆರಿಕದ ಅತಿ ದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ. 1926ನೇ ಇಸವಿಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಯುನೈಟೆಡ್ ಏರ್ ಲೈನ್ಸ್ 375ಕ್ಕೂ ಹೆಚ್ಚು ತಲಪುದಾಣಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಈ ಮೂಲಕ ಅತಿ ಹೆಚ್ಚು ನಗರಗಳಿಗೆ ಬಂಧಿಸಲ್ಪಟ್ಟ ವಿಮಾನಯಾನ ಸಂಸ್ಥೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವರ್ಜಿನ್ ಅಂಟ್ಲಾಟಿಕ್

ವರ್ಜಿನ್ ಅಂಟ್ಲಾಟಿಕ್

ಬ್ರಿಟನ್ ವಿಮಾನಯಾನ ಸಂಸ್ಥೆ ವರ್ಜಿನ್ ಅಂಟ್ಲಾಟಿಕ್, ಇಂಗ್ಲೆಂಡ್‌ನ ಕ್ರಾವ್ಲೆ ಕೇಂದಿತ್ರವಾಗಿ ಕಾರ್ಯಾಚರಿಸುತ್ತಿದೆ. ಇದು 1984ರಲ್ಲಿ ಸ್ಥಾಪನೆಗೊಂಡಿದ್ದು, 31 ತಪುಲುದಾಣಗಳಿಗೆ ವಿಮಾನ ಸೇವೆಯನ್ನು ನಡೆಸುತ್ತಿದೆ.

ವರ್ಜಿನ್ ಆಸ್ಟ್ರೇಲಿಯಾ

ವರ್ಜಿನ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ವರ್ಜಿನ್ ಆಸ್ಟ್ರೇಲಿಯಾ, ಬ್ರಿಸ್ಬೇನ್ ತಳಹದಿಯಲ್ಲಿ ಕಾರ್ಯಾಚರಿಸುತ್ತಿದೆ. 2000ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಪ್ರಸ್ತುತ ವಿಮಾನ ಕಂಪನಿಯು 50ಕ್ಕೂ ಹೆಚ್ಚು ತಲುಪುದಾಣಗಳಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

ಕ್ವಾಂಟಾಸ್

ಕ್ವಾಂಟಾಸ್

ಆಸ್ಟ್ರೇಲಿಯಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಕ್ವಾಂಟಾಸ್ ವಿಶ್ವದ ಅತ್ಯಂತ ಸುರಕ್ಷಿತ ವಿಮಾನಯಾನ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ಸಂಸ್ಥೆ 1921ನೇ ಇಸವಿಯಿಂದಲೇ ಅಸ್ತಿತ್ವದಲ್ಲಿದೆ. ಕ್ವಾಂಟಾಸ್ ವಿಶ್ವದ ಮೂರನೇ ಅತಿ ಪುರಾತನ ವಿಮಾನಯಾನ ಸಂಸ್ಥೆಯಾಗಿದ್ದು 1935ರಿಂದ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಸಿಡ್ನಿ ತಳಹದಿಯ ಈ ವಿಮಾನಯಾನ ಸಂಸ್ಥೆಯನ್ನು ಅಕ್ಕರೆಯಿಂದ 'ಫ್ಲೈಯಿಂಗ್ ಕಾಂಗರೂ' ಎಂದು ಕರೆಯಲಾಗುತ್ತಿದೆ.

 

Read more on ವಿಮಾನ plane
English summary
world's 20 safest airlines

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark