ಬೆಂಗಳೂರಿನಲ್ಲಿ ಜಾರಿಗೆ ತರಲಾಗಿರುವ ಈ ಹೊಸ 'ಹಳದಿ ಚೌಕ' ನಿಯಮದ ಬಗ್ಗೆ ತಿಳಿದುಕೊಳ್ಳಿ

Written By:

ಕೆಲವು ದಿನಗಳಿಂದ ಬೆಂಗಳೂರಿನ ಪ್ರತಿಯೊಬ್ಬ ವಾಹನ ಸಾವರನಿಗೆ ಹಳದಿ ಬಣ್ಣದ ಬಾಕ್ಸ್ ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾಣ ಸಿಗುತ್ತಿರುವುದು ಖಂಡಿತವಾಗಿಯೂ ಆಶ್ಚರ್ಯ ಉಂಟು ಮಾಡಿರುವುದಂತೂ ನಿಜ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಏನಪ್ಪಾ ಇಷ್ಟೊಂದು ಹಳದಿ ಬಣ್ಣದ ಚೌಕಗಳನ್ನು ಟ್ರಾಫಿಕ್ ಸಿಗ್ನಲ್‌ನಲ್ಲಿ ಹಾಕಿದ್ದಾರೆ ಎಂದು ನಿಮಗೆ ಕೊಂಚ ಮಟ್ಟಿನ ಗೊಂದಲ ಉಂಟು ಮಾಡುವುದಂತೂ ಸತ್ಯ, ಅದಕ್ಕೆ ಕಾರಣ ತಿಳಿದುಕೊಳ್ಳಬೇಕೆಂದರೆ ಮುಂದೆ ಓದಿ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಏನಿದು ಹಳದಿ ಬಣ್ಣದ ಬಾಕ್ಸ್ ?

'ಕ್ರಿಸ್ ಕ್ರಾಸ್' ಪಟ್ಟಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹಳದಿ ಬಣ್ಣದ ಚೌಕವನ್ನು 1964ರಲ್ಲಿ ಮೊದಲ ಬಾರಿಗೆ ಲಂಡನ್‌ ಸಿಟಿಯಲ್ಲಿ ಪರಿಚಯಿಸಲಾಯಿತು.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಸ್ಥಳಗಳಲ್ಲಿ ಈ ಕ್ರಿಸ್ ಕ್ರಾಸ್ ಪಟ್ಟಿಯನ್ನು ಬಳಸಬಹುದಾಗಿದ್ದು, ಇದರಿಂದಾಗಿ ವಾಹನ ದಟ್ಟಣೆ ಕಡಿಮೆಯಾಗಲಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಟ್ರಾಫಿಕ್ ಹೆಚ್ಚಿಗೆ ಇರುವ ಜುಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದೇ ಈ ಕ್ರಿಸ್ ಕ್ರಾಸ್ ಪಟ್ಟಿಯ ಮೂಲ ಉದ್ದೇಶವಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಈ ರೀತಿಯ ಹಳದಿ ಬಣ್ಣದ ಕ್ರಿಸ್ ಕ್ರಾಸ್ ಪಟ್ಟಿಗಳನ್ನು ಬಳಿಯಲಾಗುತ್ತಿದ್ದು, ಇದರಿಂದಾಗಿ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಆಗುವಂತಹ ಟ್ರಾಫಿಕ್ ಕಿರಿ ಕಿರಿಯನ್ನು ತಪ್ಪಿಸಲಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಹೇಗೆ ಕಾರ್ಯ ನಿರ್ವಹಿಸಲಿದೆ ಈ ಕ್ರಿಸ್ ಕ್ರಾಸ್ ಹಳದಿ ಬಣ್ಣದ ಬಾಕ್ಸ್ ?

ಈ ಹಳದಿ ಬಣ್ಣದ ಪ್ರತಿಯೊಂದು ನಿಯಮದ ಬಗ್ಗೆ ಈ ಕೆಳಗೆ ಸವಿವರವಾಗಿ ವಿವರಿಸಲಾಗಿದ್ದು, ಸೂಕ್ಷ್ಮವಾದ ವಿಚಾರವಾದ್ದರಿಂದ ಏಕಾಗ್ರತೆಯಿಂದ ಓದಿ ತಿಳಿಯಿರಿ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಬಲ ತಿರುವು ತೆಗೆದುಕೊಳ್ಳುವುದು ಹೇಗೆ ?

ಮೇಲಿನ ಚಿತ್ರದಲ್ಲಿ ಒಮ್ಮೆ ಗಮನಿಸಿ, ಹೊಸ ನಿಯಮದ ಪ್ರಕಾರ ಟ್ರಾಫಿಕ್ ಸಿಗ್ನಲ್‌ನಲ್ಲಿ ಹಸಿರು ಬಣ್ಣ ಬೆಳಗಿದ ನಂತರವೂ ಸಹ C ರಸ್ತೆಯಲ್ಲಿ ಯಾವುದೇ ವಾಹನಗಳು ಇಲ್ಲ ಎಂಬುವುದು ಖಾತ್ರಿಯಾದ ನಂತರವೇ A ಕಾರು ಚಲಿಸತಕ್ಕದು.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

C ಸ್ಥಳದಲ್ಲಿ ವಾಹನ ಇರುವುದು ತಿಳಿದ ಮೇಲೆ ಹಸಿರು ಬಣ್ಣ ಬೆಳಗಿದರೂ ಸಹ ಚಲಿಸದೆ ಹಳದಿ ಬಣ್ಣದ ಚೌಕದ ಹಿಂದೆ ಉಳಿಯಬೇಕು. C ಸ್ಥಳದಲ್ಲಿ ವಾಹನ ನಿಂತಿದ್ದರು ಸಹ ಹಳದಿ ಚೌಕವನ್ನು ಪ್ರವೇಶಿಸಿದರೆ ಬೇರೆ ರಸ್ತೆಯಿಂದ ಚಲಿಸುವ ವಾಹನಗಳಿಗೆ ತೊಂದರೆ ಮಾಡುವುದನ್ನು ತಪ್ಪಿಸಲು ಈ ರೀತಿಯ ನಿಯಮ ರೂಪಿಸಲಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ನೇರ ರಸ್ತೆ ಪ್ರವೇಶ ಪಡೆಯುವುದು ಹೇಗೆ ?

ಚಿತ್ರದಲ್ಲಿ ಗಮನಿಸಿದಂತೆ, B ಕಾರು ನೇರವಾಗಿ ಚಲಿಸುತ್ತಿದ್ದರೆ ಮಾತ್ರ A ಕಾರು ನೇರವಾಗಿ ಮುಂದೆ ಚಲಿಸಬಹುದಾಗಿದ್ದು, B ಕಾರು ನೇರವಾಗಿರುವ ರಸ್ತೆಯಲ್ಲಿ ಚಲಿಸಿ ಹಳದಿ ಬಣ್ಣದ ಚೌಕ ಹಾದು ಹೋಗಿ ನಿಂತರೆ, B ಕಾರಿನ ಹಿಂದೆ ಬರುತ್ತಿರುವ A ಕಾರು ಚೌಕವನ್ನು ಪ್ರವೇಶಿಸದೆ ನಿಲ್ಲಬೇಕು.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಹಸಿರು ದೀಪ ಬೆಳಗಿದರೂ ಸಹ ಹಾದು ಹೋಗಬೇಕಾಗಿರುವ ರಸ್ತೆಯಲ್ಲಿ ಯಾವುದೇ ನಿರ್ಬಂಧ ಇಲ್ಲದೆ ಇದ್ದರೆ ಮಾತ್ರ ಚೌಕ ಪ್ರವೇಶಿಸಬೇಕು ಎಂಬುದು ಮುಖ್ಯ ನಿಯಮವಾಗಿದ್ದು, ಇದರಿಂದಾಗಿ ಹಳದಿ ಬಣ್ಣದ ಚೌಕದಲ್ಲಿ ಹೆಚ್ಚು ತೊಂದರೆ ಇಲ್ಲದೆ ಸರಾಗವಾಗಿ ವಾಹನಗಳು ಸಂಚರಿಸಲಿವೆ.

ಕ್ರಿಸ್ ಕ್ರಾಸ್ ಚೌಕಾಕಾರದ ಪಟ್ಟಿಯೊಂದಿಗೆ ಜಿಗ್ ಜಾಗ್ ಪಟ್ಟಿಗಳನ್ನೂ ಸಹ ರಸ್ತೆ ಮೇಲೆ ಬಳಿಯಲು ಬೆಂಗಳೂರಿನ ಪೊಲೀಸರು ಮುಂದಾಗಿದ್ದು, ಈ ಪಟ್ಟಿ ಜಂಕ್ಷನ್‌ ಶುರುವಾಗುವ 25 ಮೀಟರ್ ಹಿಂದಿನಿಂದ ಶುರುವಾಗಲಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಸದ್ಯ ಬಿಬಿಎಂಪಿಯ ಟೆಂಡರ್‌ಶ್ಯೂರ್ ಜಂಕ್ಷನ್‌ಗಳಲ್ಲಿ ಮಾತ್ರ ಈ ಪಟ್ಟಿಗಳನ್ನೂ ಅಳವಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ಜಂಕ್ಷನ್‌ಗಳಲ್ಲಿ ಈ ಹಳದಿ ಪಟ್ಟಿ ಬಳೆಯಲಾಗುತ್ತದೆ ಎನ್ನಲಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಸದ್ಯ ಈ ಪಟ್ಟಿ ಬಳೆಯುವ ಕಾರ್ಯಕ್ಕೆ ಅಂದಾಜು 3 ಲಕ್ಷ ಖರ್ಚು ಆಗಲಿದ್ದು, ಇದನ್ನು ಹಣವನ್ನು ಸಂಬಂಧ ಪಟ್ಟ ಇಲಾಖೆ ಈಗಾಗಲೇ ಬಿಡುಗಡೆಗೊಳಿಸಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಇನ್ನು ಕೆಲವೇ ತಿಂಗಳುಗಳಲ್ಲಿ ಕನಿಷ್ಠ 100 ಜಂಕ್ಷನ್‌ಗಳಲ್ಲಿ ಈ ಹಳದಿ ಪಟ್ಟಿ ನಿಯಮ ಜಾರಿಗೆ ಬರಲಿದ್ದು, ಆದರೆ ಈ ಹಳದಿ ಮತ್ತು ಬಿಳಿ ಬಣ್ಣದ ಪಟ್ಟಿಗಳು ಸಾಕಷ್ಟು ವಾಹನ ದಟ್ಟಣೆ ಇರುವ ಬೆಂಗಳೂರಿನಲ್ಲಿ ಎಷ್ಟು ದಿನ ಬಾಳಿಕೆ ಬರುತ್ತವೆ ಎನ್ನುವುದು ಸಂಚಾರಿ ಪೊಲೀಸ್ ವಿಭಾಗದ ಮುಂದಿರುವ ದೊಡ್ಡ ಪ್ರೆಶ್ನೆಯಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಈ ಹಳದಿ ಬಣ್ಣದ ಚೌಕದ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲದ ಕಾರಣ ಈಗಾಗಲೇ ಸಂಚಾರಿ ಪೊಲೀಸ್ ವಿಭಾಗ ಕಾರ್ಯಪ್ರವೃತವಾಗಿದ್ದು, ಜನತೆಗೆ ಈ ವಿಚಾರವಾಗಿ ಹೆಚ್ಚಿನ ಮಟ್ಟದ ಶಿಕ್ಷಣ ಒದಗಿಸಲು ಮುಂದಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ದೊಡ್ಡ ಮೊತ್ತದ ದಂಡ ಬೀಳುತ್ತೆ ಹುಷಾರ್!!

ಹೌದು, ಈ ನಿಯಮ ಸರಿಯಾದ ಕ್ರಮದಲ್ಲಿ ಎಲ್ಲಾ ಕಡೆ ಜಾರಿಗೆ ಬಂದ ದಿನದಿಂದ ಸಂಚಾರಿ ಪೊಲೀಸ್ ವಿಭಾಗ ಹೆಚ್ಚು ಜಾಗೃತವಾಗಲಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಹೆಚ್ಚಿನ ಮೊತ್ತದ ದಂಡ ಹಾಕಲಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಇನ್ನು,

ನೋ ಪಾರ್ಕಿಂಗ್ ದಂಡ - ರೂ. 100

ಸಿಂಗಲ್ ಜಂಪ್ - ರೂ. 100

ಅಜಾಗರೂಕತೆಯ ಚಾಲನೆ(ದ್ವಿಚಕ್ರ) - 300

ಅಜಾಗರೂಕತೆಯ ಚಾಲನೆ(ನಾಲ್ಕು ಚಕ್ರ) - 300

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಸದ್ಯ ಕೆ.ಆರ್.ರಸ್ತೆ, ಕಬ್ಬನ್ ರಸ್ತೆ, ಇಂದಿರಾನಗರದಲ್ಲಿ ಇರುವ 100 ಫೀಟ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಕಾವೇರಿ ಆರ್ಟ್ಸ್ ಮತ್ತು ಕ್ರಾಫ್ಟ್ ಎಂಪೋರಿಯಂ, ಟ್ರಿನಿಟಿ ಸರ್ಕಲ್, ಆಡುಗೋಡಿಯಲ್ಲಿರುವ ಸೋನಿ ವರ್ಲ್ಡ್ ಜಂಕ್ಷನ್, ಊರ್ವಶಿ ಚಿತ್ರಮಂದಿರ, ಸದಾಶಿವನಗರ ಪೊಲೀಸ್ ಠಾಣೆಯ ಜಂಕ್ಷನ್‌ಗಳಲ್ಲಿ ಈ ಹಳದಿ ಬಣ್ಣದ ಚೌಕಗಳನ್ನು ಬಳಿಯಲಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ವಾರದ ಒಳಗಾಗಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಆಗುವಂತಹ ಸ್ಥಳಗಳಾದ ಚಾಲುಕ್ಯ ಸರ್ಕಲ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ಗಳಲ್ಲಿ ಈ ಹಳದಿ ಬಣ್ಣದ ಚೌಕಾಕಾರದ ಪಟ್ಟಿಗಳನ್ನು ಕಾಣಬಹುದಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಅದೇನೇ ಇರಲಿ ಅತಿ ಹೆಚ್ಚು ಕ್ಲಿಷ್ಟತೆ ಇಂದ ಕೂಡಿರುವ ಈ ನಿಯಮವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಂಯಮ ಬೇಕಾಗಿದ್ದು, ಇದನ್ನು ಎಷ್ಟು ಜನ ಪಾಲನೆ ಮಾಡುತ್ತಾರೆ? ಎಂಬುದೇ ಈಗಿರುವ ಪ್ರೆಶ್ನೆಯಾಗಿದೆ.

'ಹೆಲ್ಮೆಟ್' ರಾದ್ಧಾಂತ ಮುಗಿತು, ಇದೀಗ 'ಹಳದಿ ಬಾಕ್ಸ್' ಕಾಟ ಶುರು...

ಬಹಳಷ್ಟು ಜನ ಉಲ್ಲಂಘನೆ ಮಾಡುವ ಈ ನಿಯಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ ಬರುವುದಂತೂ ಖಂಡಿತ. ಬೆಂಗಳೂರಿಗರು ಆದಷ್ಟು ಈ ನಿಯಮವನ್ನು ಮನೆಯಲ್ಲಿ ಕುಳಿತು ಅಧ್ಯಯನ ಮಾಡಿ ರಸ್ತೆಗಿಳಿಯುವುದು ಒಳಿತು.

English summary
The yellow boxes are the latest attempt by the cops to cure the Garden city's slow and jam-packed streets.The boxes could prove to be the solution for the traffic jam crisis on Indian roads.
Please Wait while comments are loading...

Latest Photos