ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಜಗತ್ತಿನಲ್ಲಿ ಎಲ್ಲರಿಗೂ ಸೂಪರ್ ಕಾರ್ ಖರೀದಿಸಬೇಕೆಂಬ ಕನಸಿರುತ್ತದೆ. ಅದರಲ್ಲೂ ಕೆಲವರಿಗೆ ಲ್ಯಾಂಬೊರ್ಗಿನಿ ಸೂಪರ್ ಕಾರು ಖರೀದಿಸಬೇಕೆಂಬ ಹೆಬ್ಬಯಕೆ ಇರುತ್ತದೆ. ಕೆಲವರು ತಮ್ಮ ಕನಸನ್ನು ನನಸು ಮಾಡಿಕೊಂಡರೆ, ಇನ್ನೂ ಕೆಲವರಿಗೆ ಅವರ ಕನಸು ನನಸಾಗುವುದೇ ಇಲ್ಲ.

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಕೆಲವರು ಸೂಪರ್ ಕಾರ್ ಖರೀದಿಸಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಈ ಮಾರ್ಗಗಳನ್ನು ಅನುಸರಿಸುವಾಗ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡುತ್ತಾರೆ. ವ್ಯಕ್ತಿಯೊಬ್ಬ ತನ್ನ ಗೆಳತಿಗಾಗಿ ಲ್ಯಾಂಬೊರ್ಗಿನಿ ಸೂಪರ್ ಕಾರ್ ಅನ್ನು ಗಿಫ್ಟ್ ನೀಡಲು ಬಯಸಿದ್ದಾನೆ. ಆದರೆ ನಿರುದ್ಯೋಗಿಯಾಗಿದ್ದ ಆತನಿಗೆ ಸೂಪರ್ ಕಾರು ಖರೀದಿಸುವುದು ಕನಸಿನ ಮಾತಾಗಿತ್ತು.

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

40 ದಿನಗಳ ಕಾಲ ಉಪವಾಸ ಮಾಡಿದರೆ ದೇವರು ತನಗೆ ಲ್ಯಾಂಬೊರ್ಗಿನಿ ಕಾರು ನೀಡುತ್ತಾನೆ ಎಂಬ ಮೂಢ ನಂಬಿಕೆಯಿಂದ ಉಪವಾಸ ಕುಳಿತಿದ್ದ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಸೆಂಟ್ರಲ್ ಜಿಂಬಾಬ್ವೆಯ ಮಾರ್ಕ್ ಮುರಾಡಿರಾ ಎಂಬಾತನೇ ಈ ರೀತಿಯ ಹುಚ್ಚಾಟಕ್ಕೆ ಇಳಿದಿರುವವನು. ಆತ ತನ್ನ ಗೆಳತಿಗಾಗಿ ಬಹು ಕೋಟಿ ಮೌಲ್ಯದ ಲ್ಯಾಂಬೊರ್ಗಿನಿ ಸೂಪರ್ ಕಾರ್ ಗಿಫ್ಟ್ ನೀಡಲು ಬಯಸಿದ್ದ.

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಕೋಟ್ಯಂತರ ರೂಪಾಯಿ ಮೌಲ್ಯದ ಕಾರು ಖರೀದಿಸಲು ಬಯಸಿದ್ದ ಆತ ತನ್ನ ಬಳಿ ಹಣವಿಲ್ಲದ ಕಾರಣ ಉಪವಾಸ ಮಾಡಿದರೆ ದೇವರು ಕಾರು ನೀಡುತ್ತಾನೆ ಎಂಬ ಮೂಢ ನಂಬಿಕೆಯಿಂದ ಅಲ್ಲಿನ ಬೆಟ್ಟದಲ್ಲಿ ಉಪವಾಸ ಮಾಡುತ್ತಿದ್ದ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಆದರೆ ಆತನ ಉಪವಾಸ ಸತ್ಯಾಗ್ರಹ ಫಲಿಸಲಿಲ್ಲ. ಬದಲಿಗೆ ಕೆಲವು ದಿನಗಳ ಉಪವಾಸದ ನಂತರ ಪ್ರಜ್ಞಾ ಹೀನಾ ಸ್ಥಿತಿ ತಲುಪಿದ. ವಿಷಯ ತಿಳಿದ ಆತನ ಸ್ನೇಹಿತರೊಬ್ಬರು ಆತನನ್ನು ತಕ್ಷಣವೇ ಬಿಂದುರಾ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಈ ಬಗ್ಗೆ ಮಾತನಾಡಿರುವ ಚರ್ಚ್ ಬಿಷಪ್ ಮ್ವುರು ಎಂಬುವವರು ಮಾರ್ಕ್ ನಿರುದ್ಯೋಗಿಯಾಗಿರುವುದರಿಂದ ಕನಿಷ್ಟ ಉದ್ಯೋಗ ಪಡೆಯಲಾದರೂ ಆತ ಉಪವಾಸ ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಈ ರೀತಿಯ ಮೂಢ ನಂಬಿಕೆಯಿಂದ ಮಾರ್ಕ್ ಏನನ್ನೂ ಗಳಿಸಲಿಲ್ಲ. ಬದಲಿಗೆ ಆಸ್ಪತ್ರೆ ಸೇರುವಂತಾಗಿದೆ. ಆತನ ಕನಸು ನನಸಾಗಿಸಲು ಪ್ರಯತ್ನಿಸುತ್ತಿರುವ ಆತನ ಸ್ನೇಹಿತರು ಹಣ ಸಂಗ್ರಹಿಸಲು ಮುಂದಾಗಿದ್ದಾರೆ.

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಆದರೆ ಇದುವರೆಗೂ ಕೇವಲ ರೂ.3000ಗಳನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಈಗ ಈ ಹಣವನ್ನು ಆಸ್ಪತ್ರೆಯಲ್ಲಿ ಮಾರ್ಕ್ ಚಿಕಿತ್ಸೆಗಾಗಿ ಖರ್ಚು ಮಾಡಲು ಬಳಸಲಾಗುತ್ತದೆ. ಮಾರ್ಕ್ ಎಷ್ಟು ದಿನ ಉಪವಾಸ ಮಾಡಿದ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮೂಢನಂಬಿಕೆ ಮೂಲಕ ಸೂಪರ್ ಕಾರು ಪಡೆಯಲು ಪ್ರಯತ್ನಿಸಿ ಆಸ್ಪತ್ರೆ ಸೇರಿದ ಭೂಪ

ಮಾರ್ಕ್‌ನ ಸ್ಥಿತಿ ಈಗ ಸುಧಾರಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ. ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡಿನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ನಿರುದ್ಯೋಗಿ ಯುವಕನೊಬ್ಬ ಕಾರು ಸ್ಪರ್ಧೆಯಲ್ಲಿ ಬಹು ಕೋಟಿ ಮೌಲ್ಯದ ಲ್ಯಾಂಬೊರ್ಗಿನಿ ಉರುಸ್ ಕಾರ್ ಅನ್ನು ಗೆದ್ದಿದ್ದ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Zimbabwe man tries to get Lamborghini supercar through fasting. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X