ಕವಾಸಕಿ ಝಡ್800: ಬೊಂಬಾಟ್ ಬೈಕ್ ನೋಡಿರಣ್ಣ..

Posted By:

2013ರ ಕವಾಸಕಿ ಝಡ್800 ಬೈಕಿನ ಕುರಿತು ಕೊಂಚ ಮಾಹಿತಿ ಬಯಲಾಗಿದೆ. ನೂತನ ಬೊಂಬಾಟ್ ಕವಾಸಕಿ ಬೈಕ್ ಹಳೆಯ ಕವಾಸಕಿ ಝಡ್750 ಬದಲಿ ಆವೃತ್ತಿಯಾಗಲಿದೆ. ಕಂಪನಿಯು ಎಂಜಿನ್ ಸೇರಿದಂತೆ ಕೆಲವು ಟೆಕ್ ಭಾಗ ಬದಲಾಯಿಸಿ ನೂತನ ಆವೃತ್ತಿ ಪರಿಚಯಿಸುವ ನಿರೀಕ್ಷೆಯಿದೆ.

ಕವಾಸಕಿ ಝಡ್800ದಲ್ಲಿ ಏನೆಲ್ಲ ಇರಲಿದೆ?

ಸದ್ಯ ಕಂಪನಿಯು ನೂತನ ಬೈಕಿನ ಯಾವುದೇ ಟೆಕ್ ಮಾಹಿತಿ ಬಹಿರಂಗಪಡಿಸಿಲ್ಲ. ಕಂಪನಿಯು ಈ ಬೈಕನ್ನು ಯುರೋಪ್ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆ ನಮ್ಮದು. ಈ ಬೈಕ್ ಹಳೆಯ ಝಡ್750ಕ್ಕಿಂತ ಕೊಂಚ ಹೆಚ್ಚು ಹಾರ್ಸ್ ಪವರ್ ಮತ್ತು ಟಾರ್ಕ್ ಪವರ್ ಹೊಂದಿರುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
2013 ಕವಾಸಕಿ ಝಡ್800

2013 ಕವಾಸಕಿ ಝಡ್800

ಸದ್ಯ ರಸ್ತೆಯಲ್ಲಿರುವ ಕವಾಸಕಿ ಝಡ್750 ಸ್ಥಾನಕ್ಕೆ ಝಡ್800 ಆಗಮಿಸಲಿದೆ. ಝಡ್750 ಬೈಕನ್ನು 2007ರ ನಂತರ ಮಾರ್ಪಾಡಿಸಿಲ್ಲ. ಅಂದಹಾಗೆ ನೂತನ ಝಡ್800 ಬೈಕ್ ಚಿತ್ರ ಬೊಂಬಾಟ್ ಆಗಿದೆಯಲ್ವ? ಮುಂದಿನ ಚಿತ್ರ ಇದಕ್ಕಿಂತಲೂ ಸೂಪರ್!

ವಾಹ್, ಕವಾಸಕಿ

ವಾಹ್, ಕವಾಸಕಿ

ಸದ್ಯ ರಸ್ತೆಯಲ್ಲಿರುವ ಕವಾಸಕಿ ಝಡ್750 ಸ್ಥಾನಕ್ಕೆ ಝಡ್800 ಆಗಮಿಸಲಿದೆ. ಝಡ್750 ಬೈಕನ್ನು 2007ರ ನಂತರ ಮಾರ್ಪಾಡಿಸಿಲ್ಲ. ಅಂದಹಾಗೆ ನೂತನ ಝಡ್800 ಬೈಕ್ ಚಿತ್ರ ಬೊಂಬಾಟ್ ಆಗಿದೆಯಲ್ವ? ಮುಂದಿನ ಚಿತ್ರ ಇದಕ್ಕಿಂತಲೂ ಸೂಪರ್!

ಯಾರಿಗೆ ಭಯ?

ಯಾರಿಗೆ ಭಯ?

ಅಕ್ಟೋಬರ್ 2ರಂದು ನೂತನ ಬೈಕ್ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ಸದ್ಯ ಈ ಬೈಕಿಗೆ ಟ್ರಯಂಪ್ ಸ್ಟ್ರೀಟ್ ಟ್ರಿಪಲ್, ಸುಜುಕಿ ಜಿಎಸ್ಆರ್750 ಮತ್ತು ಡುಕಾಟಿ ಮಾನಸ್ಟೆರ್ 796 ಬೈಕುಗಳು ಪ್ರತಿಸ್ಪರ್ಧಿಗಳು. ಮುಂದಿನ ಪುಟ ನೋಡಿ.

ಎಂಜಿನ್ ಪವರ್ ಸೂಪರ್!

ಎಂಜಿನ್ ಪವರ್ ಸೂಪರ್!

ನೂತನ ಕವಾಸಕಿ ಝಡ್800 ಬೈಕ್ 806 ಸಿಸಿಯ ಇನ್ ಲೈನ್, ಫೋರ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಇದು ಅತ್ಯುತ್ತಮ ದಕ್ಷತೆ ಮತ್ತು ಪವರ್ ನೀಡಲಿದೆ.

ಕವಾಸಕಿ ಸೂಪರ್ ಬೈಕ್

ಕವಾಸಕಿ ಸೂಪರ್ ಬೈಕ್

ಕವಾಸಿಕ ಝಡ್800 ಬೈಕಿನ ಕುರಿತು ಸದ್ಯ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಸದ್ಯ ಚಿತ್ರಗಳನ್ನು ನೋಡಿ ಖುಷಿ ಪಡೋಣ.

ನೂತನ ಕವಾಸಿಕಿ ಝಡ್800 ಬೈಕಿಗೆ 806 ಸಿಸಿಯ ಇನ್ ಲೈನ್ ಫೋರ್ ಡಿಲಿಂಡರ್ ಎಂಜಿನ್ ಅಳವಡಿಸುವ ನಿರೀಕ್ಷೆಯಿದೆ. ಸದ್ಯ ಲಭ್ಯವಿರುವ ಚಿತ್ರಗಳನ್ನು ನೋಡಿದಾಗ ಬೈಕಿನ ಗಾತ್ರ ದೊಡ್ಡದಾಗಿ ಸೌಂದರ್ಯ ಹೆಚ್ಚಾಗಿದೆ. ಇದು ಝಡ್1000 ಬೈಕಿನ ವಿನ್ಯಾಸವನ್ನು ಹೋಲುತ್ತದೆ.

ಝಡ್750 ಮಾಡೆಲ್ ಬೈಕನ್ನು ಕವಾಸಕಿ ಕಂಪನಿಯು 2007ರ ನಂತರ ಬದಲಾಯಿಸಿಲ್ಲ. ಹೀಗಾಗಿ ನೂತನ 806 ಸಿಸಿ ಎಂಜಿನ್ ಮೂಲಕ ಹೊಸ ಬೈಕ್ ಪರಿಚಯಿಸಲು ಕಂಪನಿ ನಿರ್ಧರಿಸಿರುವಂತಿದೆ.

ಕವಾಸಕಿ ಸವಾಲು?

ಕವಾಸಕಿ ನೂತನ ಬೈಕಿಗೆ ಟ್ರಯಂಪ್ ಸ್ಟ್ರೀಟ್ ಟ್ರಿಪಲ್, ಸುಜುಕಿ ಜಿಎಸ್ಆರ್750 ಮತ್ತು ಡುಕಾಟಿ ಮಾನಸ್ಟೆರ್ 796 ಬೈಕುಗಳು ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಅಕ್ಟೋಬರ್ 2ರಂದು ಕವಾಸಕಿ ಕಂಪನಿಯು ನೂತನ ಬೈಕಿನ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಿದೆ. ಅಲ್ಲಿವರೆಗೆ ಕಾಯೋಣ ಅಲ್ಲವೇ?

English summary
2013 Kawasaki Z800 has been revealed. This new kwacker would eventually replace the Kawasaki Z750. Seems like Kawasaki is opting to bump up displacements, rather than bring out a full fledged new variant.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark