ಮುಂದಿನ ತಿಂಗಳು ಟಿವಿಎಸ್ 125 ಸಿಸಿಯ ಹೊಸ ಬೈಕ್

Posted By:
ದೇಶದ ನಾಲ್ಕನೇ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್ಸ್ ಶೀಘ್ರದಲ್ಲಿ 125 ಸಿಸಿಯ ನೂತನ ಬೈಕೊಂದನ್ನು ದೇಶದ ರಸ್ತೆಗೆ ಪರಿಚಯಿಸಲಿದೆ. ಪ್ರಸಕ್ತ ವರ್ಷ ದೇಶದಲ್ಲಿ ಬೈಕ್ ಮಾರಾಟವನ್ನು ಹೆಚ್ಚಿಸಿಕೊಳ್ಳಲು ನೂತನ 125 ಸಿಸಿ ಬೈಕ್ ಸಾಥ್ ನೀಡುವ ನಿರೀಕ್ಷೆಯೂ ಕಂಪನಿಗಿದೆ.

ಟಿವಿಎಸ್ ಮೋಟರ್ 125 ಸಿಸಿ ಬೈಕಿನ ಹೆಸರನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ವದಂತಿಗಳ ಪ್ರಕಾರ ನೂತನ ಬೈಕ್ ಹೆಸರು ರೇಡಿಯೊನ್ ಎಂದಿರಲಿದೆಯಂತೆ. ಈ ಬೈಕ್ ಮೂಲಕ ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಕಳೆದುಕೊಂಡ ಮಾರುಕಟ್ಟೆ ಪಾಲನ್ನು ಮತ್ತೆ ಪಡೆದುಕೊಳ್ಳಲು ಕಂಪನಿ ನಿರ್ಧರಿಸಿದೆ.

2011-12ನೇ ಆರ್ಥಿಕ ವರ್ಷದಲ್ಲಿ ಟಿವಿಎಸ್ ಮೋಟರ್ ಕಂಪನಿಯು ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿದಿತ್ತು. ಕಂಪನಿಯ ಮೂರನೇ ಸ್ಥಾನವನ್ನು ಹೋಂಡಾ ಮೋಟರ್ಸ್ ಆಂಡ್ ಸ್ಕೋಟರ್ಸ್ ಇಂಡಿಯಾ ಕಂಪನಿಯು ಆಕ್ರಮಿಸಿಕೊಂಡಿತ್ತು.

ಶೀಘ್ರದಲ್ಲಿ ನೂತನ ಬೈಕ್ ಪರಿಚಯಿಸುವ ಮಾಹಿತಿಯನ್ನು ಇತ್ತೀಚೆಗೆ ಸಿಎನ್‌ಬಿಸಿ ಟಿವಿ 18ಗೆ ನೀಡಿದ ಸಂದರ್ಶನದಲ್ಲಿ ಟಿವಿಎಸ್ ಮೋಟರ್ ಅಧ್ಯಕ್ಷರಾದ ಎಚ್ಎಸ್ ಗೊಯಿಂಡಿ ನೀಡಿದ್ದಾರೆ. 125 ಸಿಸಿ ಬೈಕ್ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಆಗಮಿಸುವ ಸೂಚನೆಯನ್ನು ಅವರು ನೀಡಿದ್ದಾರೆ.

ಟಿವಿಎಸ್ ಕಂಪನಿಯು ಜೀವ್ ಬೈಕ್ ನಿರೀಕ್ಷೆ ಪಟ್ಟಷ್ಟು ಮಾರಾಟ ಕಂಡಿಲ್ಲವೆಂಬ ಮಾತನ್ನು ಅವರು ಒಪ್ಪಿಕೊಂಡರು. ಕಂಪನಿಯು ಪರಿಚಯಿಸಲಿರುವ ನೂತನ ಬೈಕಿನ ಹೆಸರು ರೇಡಿಯೊನ್ 125ಡಿಎಕ್ಸ್ ಎಂದಿರುವ ನಿರೀಕ್ಷೆಯಿದೆ. ಇದೇ ಬೈಕನ್ನು ಕಂಪನಿಯು 2012ರ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ಟಿವಿಎಸ್ ಮೋಟರ್ಸ್ ಕಂಪನಿಯ ನೂತನ ಬೈಕ್ ಅತ್ಯಧಿಕ ಇಂಧನ ದಕ್ಷತೆ ಮತ್ತು ಇತರ ಪ್ರತಿಸ್ಪರ್ಧಿ ಬೈಕುಗಳು ಬೆಚ್ಚುವ ದರದೊಂದಿಗೆ ಆಗಮಿಸುವ ನಿರೀಕ್ಷೆಯಿದೆ.

ಇತ್ತೀಚೆಗೆ ಟಿವಿಎಸ್ ಕಂಪನಿಯು ಹೊಸ ಸ್ಟಾರ್ ಸಿಟಿ ಬೈಕನ್ನು ಪರಿಚಯಿಸಿತ್ತು. 110 ಸಿಸಿಯ ಈ ಬೈಕಿನ ದರ ಕೇವಲ 38 ಸಾವಿರ ರುಪಾಯಿ ಇತ್ತು. ಪರಿಷ್ಕೃತ ಟಿವಿಎಸ್ ಸಿಟಿ ಆವೃತ್ತಿಯು ಹೊಸ ಫೀಚರುಗಳು ಮತ್ತು ಹೊಸ ವಿನ್ಯಾಸಗಳೊಂದಿಗೆ ರಸ್ತೆಗಿಳಿದಿತ್ತು.

ಪರಿಷ್ಕೃತ ಸ್ಟಾರ್ ಸಿಟಿ ಆವೃತ್ತಿಯು ಸಿವಿಟಿಐ ಎಂಜಿನ್ ಹೊಂದಿದೆ. ಇದು ಪ್ರತಿಲೀಟರಿಗೆ ಸುಮಾರು 83.9 ಕಿ.ಮೀ. ಮೈಲೇಜ್ ನೀಡುತ್ತಿದೆ. ಸ್ಟಾರ್ ಸಿಟಿ ಬೇಸ್ ಆವೃತ್ತಿಯ ದೆಹಲಿ ಎಕ್ಸ್ ಶೋರೂಂ ದರ ಸುಮಾರು 38,650 ರುಪಾಯಿ ಇದೆ.

English summary
TVS Motors will launch 125cc New Bike in India. TVS New 125 cc bike expected to launch in India by next month or August 2012.
Story first published: Wednesday, May 30, 2012, 12:52 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark