ಡ್ಯೂರೊ ಟೆಸ್ಟ್ ರೈಡ್ ಮಾಡಿ, 500 ರುಪಾಯಿ ಪುಕ್ಕಟೆ ಪಡೆಯಿರಿ

Posted By:
To Follow DriveSpark On Facebook, Click The Like Button
ಮಹೀಂದ್ರ ಕಂಪನಿಯ ಡ್ಯೂರೊ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡಿ ಮತ್ತು 500 ರುಪಾಯಿ ನಗದು ಬಹುಮಾನ ಗೆಲ್ಲಿರಿ. ಅಚ್ಚರಿಗೊಳ್ಳಬೇಡಿ. ನಿಮಗೆ ಆ ಸ್ಕೂಟರ್ "ರೊಂಬಾ" ಇಷ್ಟವಾಗದೆ ಇದ್ರೂ, ಟೆಸ್ಟ್ ಡ್ರೈವ್ ಮಾಡಿದ್ಮೇಲೆ ನೀವು ಬೇರೆ ಕಂಪನಿಯ ಸ್ಕೂಟರನ್ನು ಆಯ್ಕೆ ಮಾಡಲು ಇಚ್ಚಿಸಿದರೂ ಮಹೀಂದ್ರ ನಿಮಗೆ ಐನೂರು ರುಪಾಯಿ ಪುಕ್ಕಟೆಯಾಗಿ ನೀಡಲಿದೆ.

ಹೀರೋ ಮೊಟೊಕಾರ್ಪ್, ಹೋಂಡಾ ಮೋಟರ್ ಮತ್ತು ಬಜಾಜ್ ಆಟೋ ಪಾರುಪತ್ಯವಿರುವ ಸ್ಕೂಟರ್ ಮಾರುಕಟ್ಟೆಯಲ್ಲಿ ಈ ಮೂಲಕ ಮಹೀಂದ್ರ ಹೊಸ ಹೆಜ್ಜೆ ಇಟ್ಟಿದೆ. ಅಂದಹಾಗೆ ಈ ಆಫರ್ ಏಪ್ರಿಲ್ 30ರವರೆಗೆ ಇರಲಿದೆ. ಅಂದರೆ ಇನ್ನೊಂದು ವಾರ ಉಳಿದಿದೆ ಅಷ್ಟೇ! 500 ರುಪಾಯಿ ಬಹುಮಾನ ಪಡೆಯಲು ಕಂಪನಿಯ ಕಡೆಯಿಂದ ಸಣ್ಣಮಟ್ಟಿಗಿನ ಟರ್ಮ್ಸ್ ಆಂಡ್ ಕಂಡಿಷನ್ ಇರಬಹುದು.

ಕರ್ನಾಟಕದಲ್ಲಿ ನೂತನ ಮಹೀಂದ್ರ ಡ್ಯೊರೊ ಸ್ಕೂಟರ್ ಎಕ್ಸ್ ಶೋರೂಂ ದರ 44,760 ರುಪಾಯಿ. ಈ ಸ್ಕೂಟರ್ ಪ್ರತಿಲೀಟರ್ ಪೆಟ್ರೋಲಿಗೆ 40-45 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ.

"ನೂತನ ಮಹೀಮದ್ರ ಡ್ಯೂರೊ ಡಿಝಡ್ ಸ್ಕೂಟರನ್ನು ದೇಶದ ರಸ್ತೆಗೆ ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ. ಪವರ್, ಗ್ರೇಟ್ ಮೈಲೇಜ್ ಮತ್ತು ದೃಢತೆಯನ್ನು ನೀಡುವ ಬೈಕ್ ನಿಮ್ಮ ಕುಟುಂಬಕ್ಕೆ ಸಮರ್ಥ ಮತ್ತು ಸುರಕ್ಷಿತ ರೈಡಿಗೆ ನೆರವಾಗುತ್ತದೆ" ಎಂದು ಸ್ಕೂಟರ್ ಬಗ್ಗೆ ಮಹೀಂದ್ರ ಕಂಪನಿಯು ಹೇಳಿಕೊಂಡಿದೆ.

English summary
Test ride Mahindra Duro DZ scooter and get Rs 500 cash, this offer made by Mahindra hoping that interested buyers will stick to its scooter once they try it. Interestingly, the auto maker says that they will give the cash price even if the buyers go for any other scooter after trying the Duro DZ.
Story first published: Tuesday, April 24, 2012, 14:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark