ಬಜೆಟ್ ಭಯ: ದ್ವಿಚಕ್ರ ವಾಹನ ಮಾರುಕಟ್ಟೆ ಗಡಗಡ

Posted By:
To Follow DriveSpark On Facebook, Click The Like Button
ಬಜೆಟ್ ಭೀತಿ ಕೇವಲ ಕಾರು ಮಾರುಕಟ್ಟೆಗೆ ಮಾತ್ರವಲ್ಲ. ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಕೂಡ ತೆರಿಗೆ ಭೀತಿಯಲ್ಲಿದೆ. ಪರಿಣಾಮವಾಗಿ ಬಜೆಟಿಗೆ ಮುನ್ನ ಬೈಕು ಸ್ಕೂಟರ್ ಖರೀದಿಸುವ ಸಂಖ್ಯೆಯೂ ಹೆಚ್ಚಾಗಿದೆ. ಭಾರತದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಸ್ಯಾಮ್) ಬಹಿರಂಗ ಪಡಿಸಿದ ಫೆಬ್ರವರಿ ವಾಹನ ಮಾರಾಟ ಅಂಕಿಸಂಖ್ಯೆಗಳೂ ಇದನ್ನೇ ಹೇಳುತ್ತಿವೆ.

ಕಳೆದ ತಿಂಗಳು ಒಟ್ಟು 11,44,500 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಕಳೆದ ವರ್ಷದ ಫೆಬ್ರವರಿ ತಿಂಗಳ 10,22,226 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 12ರಷ್ಟು ಏರಿಕೆ ಕಂಡಿದೆ. ಇದರಲ್ಲಿ ಬೈಕುಗಳ ಮಾರಾಟ 8,38,193 ಯುನಿಟಿಗೆ ತಲುಪಿ ಶೇಕಡ 8.01ರಷ್ಟು ಹೆಚ್ಚಳವಾಗಿದೆ.

ಫೆಬ್ರವರಿ 2012ರಲ್ಲಿ ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿನ ಅಗ್ರಜ ಹೀರೋ ಮೊಟೊಕಾರ್ಪ್ ಸುಮಾರು 4,70,994 ಯುನಿಟ್ ಬೈಕ್ ಮಾರಾಟ ಮಾಡಿದ್ದು, ಶೇಕಡ 9.55ರಷ್ಟು ಏರಿಕೆ ದಾಖಲಿಸಿದೆ. ಬಜಾಜ್ ಆಟೋ ಕಂಪನಿಯ ದ್ವಿಚಕ್ರ ವಾಹನ ಮಾಆಟ 2,03,919 ಯುನಿಟಿಗೆ ತಲುಪಿದ್ದು, ಶೇಕಡ 0.59ರಷ್ಟು ಹೆಚ್ಚಳ ಕಂಡಿದೆ.

ಹೋಂಡಾ ಮೋಟರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ಕಳೆದ ತಿಂಗಳು 75,110 ಯುನಿಟ್ ಮಾರಾಟ ಮಾಡಿದ್ದು, ಭರ್ಜರಿ ಅಂದರೆ ಶೇಕಡ 39.05ರಷ್ಟು ಪ್ರಗತಿ ದಾಖಲಿಸಿದೆ. ಆದರೆ ಈ ಸಮಯದಲ್ಲಿ ಟಿವಿಎಸ್ ಮಾರಾಟ ಮಾತ್ರ 49,067 ಯುನಿಟ್ ತಲುಪಿ, ನಿರಾಶದಾಯಕವಾಗಿ ಶೇಕಡ 6.8ರಷ್ಟು ಇಳಿಕೆ ಕಂಡಿದೆ.

ಬೈಕ್ ಮಾರುಕಟ್ಟೆಗೆ ಹೋಲಿಸಿದರೆ ಸ್ಕೂಟರ್ ಮಾರಾಟ ಗಮನಾರ್ಹವಾಗಿ ಏರಿಕೆ ದಾಖಲಿಸಿದೆ. ಫೆಬ್ರವರಿಯಲ್ಲಿ ದೇಶದ ಒಟ್ಟಾರೆ ಸ್ಕೂಟರ್ ಮಾರಾಟ 2,37,374 ಯುನಿಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಯ 1,85,460 ಯುನಿಟಿಗೆ ಹೋಲಿಸಿದರೆ ಶೇಕಡ 27.99 ಯುನಿಟಿಗೆ ತಲುಪಿದೆ.

ಕಳೆದ ತಿಂಗಳು ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ಸ್ ಕಂಪನಿಯ ಸ್ಕೂಟರ್ ಮಾರಾಟ 1,22,386 ಯುನಿಟಿಗೆ ತಲುಪಿ ಶೇಕಡ 55.41ರಷ್ಟು ಏರಿಕೆ ದಾಖಲಿಸಿದೆ. ಟಿವಿಎಸ್ ಸ್ಕೂಟರ್ ಮಾರಾಟ ಶೇಕಡ 8.7ರಷ್ಟು ಇಳಿಕೆ ಕಂಡಿದೆ. ಹೀರೊ ಮೋಟೊಕಾರ್ಪ್ ಸ್ಕೂಟರ್ ಮಾರಾಟ 39,464 ಯುನಿಟಿಗೆ ತಲುಪಿ ಶೇಕಡ 19.49ರಷ್ಟು ಏರಿಕೆ ದಾಖಲಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )

ಕಾರು ಮಾರಾಟ ಹೇಗಿತ್ತು? ಇಲ್ನೋಡಿ..

English summary
It is not only the car market that has received a positive push in sales due to fears of higher prices after the union budget of 2012. The Society of Indian Automobile Manufacturers has revealed figures that indicate a 11.96 per cent increase in sales when compared to sales recorded in the same month last year.
Story first published: Tuesday, March 13, 2012, 9:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark