ಸದ್ಯದಲ್ಲೇ ಏಪ್ರಿಲಿಯಾ ಸ್ಟೈಲಿಷ್ ಬೈಕ್ ಭಾರತ ಎಂಟ್ರಿ

Written By:

ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಇಟಲಿಯ ಏಪ್ರಿಲಿಯಾ ಭಾರತಕ್ಕೆ ಸ್ಟೈಲಿಷ್ ಬೈಕ್‌ಗಳನ್ನು ಪರಿಚಯಿಸಲು ಯೋಜನೆ ರೂಪಿಸಿಕೊಳ್ಳುತ್ತಿದೆ.

ನಿಮ್ಮ ಮಾಹಿತಿಗಾಗಿ, ಕಳೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಏಪ್ರಿಲಿಯಾ ಬೈಕ್‌ಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಗರಿಷ್ಠ ನಿರ್ವಹಣೆ ಹಾಗೂ ಆಕರ್ಷಕ ವಿನ್ಯಾಸ ಹೊಂದಿರುವ ಏಪ್ರಿಲಿಯಾ, ಪ್ರಮುಖವಾಗಿಯೂ ದೇಶದ ಯುವಕರನ್ನು ಸೆಳೆಯುವ ಗುರಿಯಿರಿಸಿಕೊಂಡಿದೆ.

ಕಳೆದ ಕೆಲವು ಸಮಯಗಳಿಂದ ದೇಶದಲ್ಲಿ ಸ್ಪೋರ್ಟ್ಸ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, 200 ಹಾಗೂ 250ಸಿಸಿ ಬೈಕ್‌ಗಳು ಹೆಚ್ಚು ಗಮನಸೆಳೆಯುತ್ತಿದೆ.

ಇದನ್ನು ಗಮನದಲ್ಲಿಟ್ಟುಕೊಂಡಿರುವ ಏಪ್ರಿಲಿಯಾ ದೇಶಕ್ಕೆ 250 ಸಿಸಿ ಬೈಕ್‌ಗಳನ್ನು ಪರಿಚಯಿಸಲಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿನಲ್ಲೇ ಏಪ್ರಿಲಿಯಾ ಬೈಕ್‌ಗಳು ದೇಶಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಸದ್ಯ ಭಾರತದಲ್ಲಿ ಏಪ್ರಿಲಿಯಾ ಉತ್ಪಾದನಾ ಘಟಕಗಳಿಲ್ಲ. ಹಾಗಾಗಿ ಈ ಬೈಕ್‌ಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ದರ ಸ್ವಲ್ಪ ಹೆಚ್ಚು ಕಂಡುಬರಲಿದೆ.

English summary
Italian motorcycle company, Aprilia is planning to launch 250 cc bike in India.
Story first published: Friday, August 23, 2013, 11:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark