ಬಜಾಜ್ ಡಿಸ್ಕವರ್ 100ಟಿ ಲಾಂಚ್; ದರ, ಮೈಲೇಜ್ ಎಷ್ಟು?

Written By:

ದೇಶದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಹೊಸ ವರ್ಷದಲ್ಲಿ ಅತಿ ನೂತನ 100 ಸಿಸಿ ಬೈಕ್ ಆದ ಡಿಸ್ಕವರ್ 100ಟಿ ಲಾಂಚ್ ಮಾಡಿದೆ.

ಎಲ್ಲ ಹಂತದಲ್ಲಿಯೂ ಸ್ಪರ್ಧಾತ್ಮಕ ದರದಲ್ಲಿ ಆಗಮಿಸಿರುವ ಬಜಾಜ್ ಡಿಸ್ಕವರ್ 100ಟಿ ದೆಹಲಿ ಎಕ್ಸ್ ಶೋ ರೂಂ ದರ 50,500 ರು.ಗಳಾಗಿವೆ.

ಖಂಡಿತವಾಗಿಯೂ ದೇಶದ ಪ್ರಮಾಣಿಕ ಬೈಕ್‌ಗಳ ಸಾಲಿಗೆ ಸೇರ್ಪಡೆಯಾಗಿರುವ ಬಜಾಜ್ ಡಿಸ್ಕವರ್ 100ಟಿ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ಭರವಸೆಯನ್ನು ಬಜಾಜ್ ಆಟೋ ಹೊಂದಿದೆ.

100ಸಿಸಿ ಬೈಕ್ ಆಗಿರುವ ಬಜಾಜ್ ಡಿಸ್ಕವರ್ ಉತ್ತಮ ನಿರ್ವಹಣೆ, ವಿನ್ಯಾಸ ಹಾಗೂ ಮೈಲೇಜ್ ನೀಡಲಿದೆ. ಪ್ರಸ್ತುತ ಬೈಕ್ ಫೋರ್ ವಾಲ್ವೆ ಡಿಟಿಎಸ್-ಐ ತಂತ್ರಗಾರಿಕೆಯ ಎಂಜಿನ್ ಹೊಂದಿದ್ದು, 10.2 ಪಿಎಸ್ ಪವರ್ ಉತ್ಪಾದಿಸಲಿದೆ.

ಮೈಲೇಜ್ ಎಷ್ಟು?

ಅಂದ ಹಾಗೆ ಗರಿಷ್ಠ ಇಂಧನ ಕ್ಷಮತೆಯನ್ನು ಬಜಾಜ್ ಡಿಸ್ಕವರ್ ನೀಡಲಿದೆ. ಕಂಪನಿಯ ಪ್ರಕಾರ ನೂತನ ಡಿಸ್ಕವರ್ ಪ್ರತಿ ಲೀಟರ್‌ಗೆ ಗರಿಷ್ಠ 87 ಕೀ.ಮೀ ಮೈಲೇಜ್ ನೀಡಲಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 100 ವೇಗತೆಯನ್ನು ನೀಡುವ ಸಾಮರ್ಥ್ಯ ಹೊಂದಿದೆ.

ನೂತನ ಬಜಾಜ್ ಡಿಸ್ಕವರ್ 100ಟಿ

ನೂತನ ಬಜಾಜ್ ಡಿಸ್ಕವರ್ 100ಟಿ

ಇನ್ನು ವಿನ್ಯಾಸದ ಬಗ್ಗೆ ಗಮನ ಹರಿಸಿದರೆ ನೂತನ ಡಿಸ್ಕವರ್ ಈ ಹಿಂದಿನ ಆವೃತ್ತಿಗೆ ಸಾಮ್ಯತೆಯನ್ನು ಹೊಂದಿದೆ. ಕ್ರಿಪ್ಸ್ ಜತೆ ಸ್ಪೋರ್ಟಿ ಲುಕ್ ಹೊಂದಿರುವ ಈ ಬೈಕ್ ಹೆಚ್ಚು ಆಕ್ರಮಶೀಲತೆಯನ್ನು ಹೊಂದಿದೆ.

ನೂತನ ಬಜಾಜ್ ಡಿಸ್ಕವರ್ 100ಟಿ

ನೂತನ ಬಜಾಜ್ ಡಿಸ್ಕವರ್ 100ಟಿ

ಇದರ ಜತೆ ಫೈವ್ ಸ್ಪೀಡ್ ಗೇರ್ ಬಾಕ್ಸ್, ಆಟೋ ಚೋಕ್ ಹಾಗೂ ಎಲ್ಲ ಹವಾಮಾನಕ್ಕೂ ಹೊಂದಿಕೆಯಾಗುವ ರೀತಿಯಲ್ಲಿ ಸುಲಭ ಸ್ಟಾರ್ಟ್ ಸೌಲಭ್ಯವನ್ನು ಹೊಂದಿದೆ.

ನೂತನ ಬಜಾಜ್ ಡಿಸ್ಕವರ್ 100ಟಿ

ನೂತನ ಬಜಾಜ್ ಡಿಸ್ಕವರ್ 100ಟಿ

2013 ಬಜಾಜ್ ಡಿಸ್ಕವರ್ 100ಟಿ ಉತ್ತಮ ಹ್ಯಾಂಡ್ಲಿಂಗ್ ಜತೆಗೆ ರೈಡಿಂಗ್ ಗುಣಮಟ್ಟವನ್ನು ಹೊಂದಿದೆ.

ನೂತನ ಬಜಾಜ್ ಡಿಸ್ಕವರ್ 100ಟಿ

ನೂತನ ಬಜಾಜ್ ಡಿಸ್ಕವರ್ 100ಟಿ

ಒಟ್ಟು ನಾಲ್ಕು ಕಲರ್ ವೆರಿಯಂಟ್‌ಗಳಲ್ಲಿ ಬಜಾಜ್ ಡಿಸ್ಕವರ್ 100ಟಿ ಗ್ರಾಹಕರ ಕೈಸೇರಲಿದೆ. ಅವುಗಳೆಂದರೆ ಪ್ಲೇಮ್ ರೆಡ್, ಬ್ರಿಲಿಯಂಟ್ ಬ್ಲ್ಯೂ, ಬ್ಲ್ಯಾಕ್ ರೆಡ್ ಮತ್ತು ಬ್ಲ್ಯಾಕ್ ಬ್ಲ್ಯೂ.

English summary
Bajaj Auto has launched the new Discover 100T commuter motorcycle today, priced at INR 50,550. Bajaj claims that the Discover 100T will deliver a fuel efficiency of 87kmpl and will hit a top speed of 100kmph
Story first published: Tuesday, January 8, 2013, 9:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark