ದೆಹಲಿ ಟ್ರಾಫಿಕ್ ಪೊಲೀಸ್ ಜತೆ ಕೈಜೋಡಿಸಿದ ಹೋಂಡಾ

Written By:

ದೆಹಲಿ ಟ್ರಾಫಿಕ್ ಪೊಲೀಸ್ ಜತೆ ಕೈಜೋಡಿಸಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 33ನೇ ಇಂಡಿಯಾ ಇಂಟರ್ ನ್ಯಾಷನಲ್ ಟ್ರೇಡ್ ಫೇರ್‌ನಲ್ಲಿ ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ...

33ನೇ ಭಾರತ ಅಂತರಾಷ್ಟ್ರೀಯ ವಾಣಿಜ್ಯ ಕೂಟ ನವೆಂಬರ್ 15ರಿಂದ 27ರ ವರೆಗೆ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಂತೆ ರಸ್ತೆ ಸುರಕ್ಷೆಯನ್ನು ಉತ್ತೇಜಿಸುವ ಸಲುವಾಗಿ ಹೋಂಡಾ ಎಲ್ಲ ವರ್ಗಜ ಜನರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

honda bike

5-6ರ ಹರೆಯದ ಮಕ್ಕಳಿಗಾಗಿ ಫನ್ ವೇ ಪರಸ್ಪರ ಆಟಗಳು ನಡೆಯಲಿದ್ದು, ಬಳಿಕ ಬಹುಮಾನ ವಿತರಣೆಯು ನಡೆಯಲಿದೆ. ಹಾಗೆಯೇ ವಿಶೇಷವಾಗಿ ಆಮದು ಮಾಡಲಾದ ಹೋಂಡಾ ಸಿಆರ್‌ಎಫ್ 50 ಪ್ರಮುಖ ಆಕರ್ಷಣೆಯಾಗಿರಲಿದೆ. 9-12ರ ವರೆಗಿನ ಪ್ರಾಯದವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಕ್‌ನಲ್ಲಿ ರಸ್ತೆ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಲಾಗುವುದು.

ಏತನ್ಮಧ್ಯೆ 16ವರ್ಷಕ್ಕಿಂತ ಮೇಲ್ಪಟ್ಟವರಿಗೆ ರಸ್ತೆಯಲ್ಲಿ ಎದುರಾಗಬಹುದಾದ 100ರಷ್ಟು ಅಪಾಯಗಳ ಬಗ್ಗೆ ಹೇಳಿಕೊಡಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ನಿರತವಾಗಿರುವ ಹೋಂಡಾ, 7200 ಯುವಕರು ಹಾಗೂ 3200 ಮಕ್ಕಳಿಗೆ ಸೇಫ್ ಡ್ರೈವಿಂಗ್ ಬಗ್ಗೆ ತಿಳುವಳಿಕೆ ನಡೆಸಿಕೊಟ್ಟಿದೆ.

English summary
Honda Motorcycles & Scooter India, in association with the Delhi Traffic Police is promoting road safety at the 33rd India International Trade fair, between 15th and 27th November at Pragati Maidan, New Delhi.
Story first published: Monday, November 18, 2013, 12:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark