ಶೀಘ್ರದಲ್ಲೇ ಹೋಂಡಾ ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್

ದೇಶದ ದ್ವಿಚಕ್ರ ಪ್ರಯಾಣಿಕ ವಿಭಾಗದಲ್ಲಿ ಹೆಚ್ಚು ಹೆಸರು ಗಿಟ್ಟಿಸಿಕೊಂಡಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ, ಸದ್ಯದಲ್ಲೇ ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಹೋಂಡಾ ಸ್ಕೂಟರ್ ಇದೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಈ ನೂತನ 110 ಸಿಸಿ ಸ್ಕೂಟರ್ 'K24A' ಕೋಡ್ ಪಡೆದುಕೊಂಡಿದ್ದು, ಹೋಂಡಾದ ಜನಪ್ರಿಯ ಮಾನೇಸರ್ ಘಟಕದಲ್ಲಿ ಉತ್ಪನ್ನಗೊಳ್ಳಲಿದೆ. ಪ್ರಸ್ತುತ ಪ್ರತಿ ತಿಂಗಳಿಗೂ 700 ಯುನಿಟ್ ಉತ್ಪಾದಿಸುವ ಗುರಿ ಹೊಂದಿರುವ ಹೋಂಡಾ ನಿಧಾನವಾಗಿ ತನ್ನ ಆಟೋಮ್ಯಾಟಿಕ್ ಸ್ಕೂಟರ್ ಉತ್ಪನ್ನಗಳ ಸಾಮರ್ಥ್ಯವನ್ನು 10,000 ಯುನಿಟ್‌ಗಳಿಗೆ ಹೆಚ್ಚಿಸಲಿದೆ.


ನೂತನ ಘಟಕ ಆರಂಭ....
ಇದೇ ಸಂದರ್ಭದಲ್ಲಿ ಮುಂದಿನ ವರ್ಷ ನೂತನ ಘಟಕವೊಂದನ್ನು ಹೋಂಡಾ ಆರಂಭಿಸಲಿದೆ. ಗುಜರಾತ್‌ನಲ್ಲಿ ಆರಂಭವಾಗಲಿರುವ ಹೋಂಡಾದ ನಾಲ್ಕನೇ ಘಟಕವು 2014 ಜನವರಿಯಲ್ಲಿ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಗಳಿವೆ.

ಆಕ್ಟಿವಾ ಸ್ಕೂಟರ್...
ಈ ನಡುವೆ ಗುಜರಾತ್‌ನ ನೂತನ ಘಟಕದಲ್ಲಿ 'KWPH' ಕೋಡ್ ಪಡೆದುಕೊಂಡಿರುವ ನೂತನ 109ಸಿಸಿ ಆಕ್ಟಿವಾ ಸ್ಕೂಟರ್ ತಯಾರಾಗಲಿದೆ. ಇಲ್ಲಿ ವಾರ್ಷಿಕವಾಗಿ 450,000 ಲಕ್ಷ ಯುನಿಟ್ ಉತ್ಪಾದಿಸುವ ಇರಾದೆಯನ್ನು ಹೋಂಡಾ ಹೊಂದಿದೆ.

ಕರ್ನಾಟಕದಲ್ಲಿ ಡ್ರೀಮ್ ನಿಯೊ...
ಅದೇ ಹೊತ್ತಿಗೆ ಹೋಂಡಾದ ಮೂರನೇ ಘಟಕವಿರುವ ನರ್ಸಾಪುರದಲ್ಲಿ ಸದ್ಯ ತಯಾರಾಗುತ್ತಿರುವ ಡ್ರೀಮ್ ಯುಗಾ ಹಾಗೂ ಆಕ್ಟಿವಾ ಸ್ಕೂಟರ್ ಸೇರಿದಂತೆ ಡ್ರೀಮ್ ನಿಯೊ ಕೂಡಾ ಉತ್ಪಾದನೆಯಾಗಲಿದೆ. ಪ್ರಸ್ತುತ ಘಟಕದಲ್ಲಿ ವರ್ಷಾಂತ್ಯದಲ್ಲಿ 125ಸಿಸಿ ಸಿಬಿ ಶೈನ್ ಪೇಸ್‌ಲಿಫ್ಟ್ ವರ್ಷನ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಏತನ್ಮಧ್ಯೆ ಹೋಂಡಾ ಮಾನೇಸರ್ ಘಟಕದ ತಾಂತ್ರಿಕ ವಿಭಾಗವು ನೂತನ ಸಬ್-100ಸಿಸಿ ಬೈಕ್ ತಯಾರಿಸುವುದರಲ್ಲಿ ಕಾರ್ಯಮಗ್ನವಾಗಿದ್ದು, 2015ರ ವೇಳೆಗೆ ಮಾರುಕಟ್ಟೆ ಪರಿಚಯಿಸುವ ಯೋಜನೆ ಹೊಂದಿದೆ. ಹಾಗೆಯೇ 2016ರ ವೇಳೆಗೆ ಸಂಪೂರ್ಣ ನೂತನ ಸರಪಣಿಯ 110ಸಿಸಿ ಬೈಕ್ ಬಿಡುಗಡೆ ಮಾಡುವ ಮೂಲಕ ವೆಚ್ಚ ಕಡಿತಗೊಳಿಸುವ ಯೋಜನೆಯನ್ನು ಸಹ ಕಂಪನಿ ಹೊಂದಿದೆ.

Most Read Articles

Kannada
English summary
Honda Motorcycle & Scooter India has been pretty active in the commuter motorcycle segment lately. That does not mean the company is not concentrating on the lucrative automatic scooter market. In fact, a new model is likely to join its already abundant scooter lineup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X