ಸುಲಭ ಪಯಣಕ್ಕೆ ಮೊಟೊಪೆಡ್ ಸೈಕಲ್

Written By:

ಸೈಕಲ್‌ಗೆ ಮೋಟಾರು ಆಳವಡಿಸುವುದು ಹೊಸ ವಿಚಾರವೇನು ಅಲ್ಲ. ಸಣ್ಣ ಎಂಜಿನ್ ಹೊಂದಿರುವ ಸೈಕಲುಗಳು ದೂರ ಪ್ರಯಾಣದ ವೇಳೆ ಸವಾರರ ಬಳಲಿಕೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಹಾಗೆಯೇ ಬೆಡ್ಡ ಗುಡ್ಡಗಾಡು ಪ್ರದೇಶಗಳಲ್ಲಿ ಸಾಹಸ ರೈಡಿಂಗ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿರಲಿದೆ.

ಇಂತಹದೊಂದು ವಿಶೇಷ ಬೈಸಿಕಲ್ ನಾವಿಂದು ಪರಿಚಯಿಸಲಿದ್ದೇವೆ. ಮೊಟೊಪೆಡ್ ಸೈಕಲ್ (Motoped Motorized Bicycle) ಆಫ ರೋಡ್‌ಗೆ ಹೇಳಿ ಮಾಡಿಸಿದಂತಿದೆ. ಹಾಗಿದ್ದರೆ ಬನ್ನಿ ಕೆಳಗಡೆ ಕೊಡಲಾಗಿರುವ ಸ್ಲೈಡರ್ ಮೂಲಕ ಹೆಚ್ಚು ಮಾಹಿತಿಗಳನ್ನು ಪಡೆದುಕೊಳ್ಳುವ ಪ್ರಯತ್ನ ಮಾಡೋಣವೇ...

ಮೊಟೊಪೆಡ್ ಸೈಕಲ್

ಮೊಟೊಪೆಡ್ ಸೈಕಲ್

ಮೊಟೊಪೆಡ್ ಸೈಕಲ್ ತಯಾರಿಕೆಗೆ ಬೃಹತ್ ಹೂಡಿಕೆಯ ಕೊರತೆಯ ಹಿನ್ನಲೆಯಲ್ಲಿ ಗ್ರಾಹಕರೇ ಸ್ವಯಂ ಕಿಟ್ ಖರೀದಿಸಬೇಕಾಗಿದ್ದು, ಹಾಗೆಯೇ ಕೊಡಲಾಗಿರುವ ಸೂಚನೆ ಪ್ರಕಾರ ತಾವಾಗಿಯೇ ಸಹಾಯದೊಂದಿಗೆ ಜೋಡಣೆ ಕಾರ್ಯ ಮಾಡಬೇಕಾಗಿದೆ.

ಮೌಂಟೆನ್ ಬೈಕ್

ಮೌಂಟೆನ್ ಬೈಕ್

ಇದು ಮೌಂಟೆನ್ ಬೈಕ್‌ನ ಭಾಗವಾಗಿದೆ. ಆಕಾರ ಸಣ್ಣವಾಗಿರುವುದರಿಂದ ಬಳಕೆ ಸುಲಭವಾಗಲಿದೆ. ಇನ್ನು ಇದರ ಭಾಗಗಳನ್ನು ಕಸ್ಟಮೈಸ್ಡ್ ಮಾಡಬಹುದಾಗಿದೆ.

ಎಂಜಿನ್

ಎಂಜಿನ್

ಅದೇ ರೀತಿ ಅಗತ್ಯಕ್ಕನುಸಾರವಾಗಿ ಎಂಜಿನ್ ಆಳವಡಿಸಬಹುದಾಗಿದೆ. ಅಂದರೆ ಸಿಟಿ ರೈಡಿಂಗ್‌ಗಾಗಿ ಕಡಿಮೆ ಸಾಮರ್ಥ್ಯದ ಹಾಗೆಯೇ ಆಫ್ ರೋಡ್ ರೈಡಿಂಗ್‌ಗಾಗಿ ಹೆಚ್ಚಿನ ಸಾಮರ್ಥ್ಯದ ಎಂಜಿನ್ ಆಳವಡಿಸಬಹುದಾಗಿದೆ.

ಮೊಟೊಪೆಡ್ ಸೈಕಲ್

ಮೊಟೊಪೆಡ್ ಸೈಕಲ್

ಫೋರ್ಕ್, ವೀಲ್, ಟೈರ್, ರಿಯರ್ ಶಾಕ್, ಬ್ರೇಕ್, ಕ್ರಾಂಕ್ಸ್, ಬ್ರೇಕ್ಸ್, ಪೆಡಲ್ಸ್, ಹೆಡ್ ಸೆಟ್, ಫ್ರಿವೀಲ್‌ಗಳಂತಹ ಭಾಗಗಳು ಇದರಲ್ಲಿ ಒಳಗೊಂಡಿದೆ.

ಪೆಡೆಲ್ ಡ್ರೈವ್ ಸಿಸ್ಟಂ

ಪೆಡೆಲ್ ಡ್ರೈವ್ ಸಿಸ್ಟಂ

ಪೆಡಲ್ ಡ್ರೈವ್ ಸಿಸ್ಟಂ ಕೂಡಾ ಲಗತ್ತಿಸಲಾಗಿದೆ. ಇದರ ಏಕಮಾತ್ರ ಚೈನ್ ಹಿಂದಿನ ಚಕ್ರಗಳಿಗೆ ಪವರ್ ಹಸ್ತಾಂತರಿಸಲಿದೆ.

ಹೋಂಡಾ

ಹೋಂಡಾ

ಇದರಲ್ಲಿ ಹೋಂಡಾದ ಸ್ಟಾಂಡರ್ಡ್ ಎಕ್ಸ್‌ಆರ್50 ಪಿಟ್ ಬೈಕ್ ಹಾಗೂ ಮೌಂಟೆನ್ ಬೈಕ್ ಭಾಗಗಳನ್ನು ಆಳವಡಿಸಲಾಗಿದೆ.

ಎಂಜಿನ್

ಎಂಜಿನ್

ಹಾಗೆಯೇ ಕಡಿಮೆ ಶಬ್ದ ಹೊರಹಾಕುವುದರ ಜತೆಗೆ ಇದರ 4 ಸ್ಟ್ರೋಕ್ ಎಂಜಿನ್ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿದೆ.

ಮೈಲೇಜ್

ಮೈಲೇಜ್

ಅಂತೆಯೇ ಪ್ರತಿ ಗ್ಯಾಲನ್‌ಗೆ 80ರಿಂದ 100 ಮೈಲ್ ಚಲಿಸುವ ಸಾಮರ್ಥ್ಯ ಹೊಂದಿದೆ.

English summary
Motorized bicycles are not a new concept. Bicycles with tiny engines offer ease of travel for short distances or provide extra horsepower when it becomes difficult to pedal uphill. Motoped is one such motorized bicycle, but with a difference.
Story first published: Thursday, August 1, 2013, 17:23 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more