ವ್ಯಾಲಿ ರನ್; ಇದು 2013ನೇ ಸಾಲಿನ ಸ್ಪೀಡ್ ಹಬ್ಬ

Posted By:

2013ನೇ ಸಾಲಿನ ಸ್ಪೀಡ್ ಉತ್ಸವ ಎಂದೇ ಪರಿಗಣಿಸಲ್ಪಟ್ಟಿರುವ ವ್ಯಾಲಿ ರನ್ ಆಯೋಜಿಸುವುದಾಗಿ ಫೆಡರೇಷನ್ ಆಫ್ ಮೋಟಾರ್ ಕ್ಲಬ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಪ್ರಕಟಿಸಿದೆ. ಪುಣೆಯ ಆಂಬಿ ವ್ಯಾಲಿ ಸಿಟಿ ಏರ್ ಸ್ಟ್ರಿಪ್‌ನಲ್ಲಿ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಈ ರೇಸಿಂಗ್ ಕೂಟ ಆಯೋಜನೆಯಾಗಲಿದೆ.

ವ್ಯಾಲಿ ರನ್ 2013 ದೇಶದ ಮೊದಲ ಅಂತರಾಷ್ಟ್ರೀಯ ದರ್ಜೆಯ ಡ್ರಾಗ್ ರೇಸಿಂಗ್ ಈವೆಂಟ್ ಆಗಿರಲಿದೆ. ಮಾರ್ಚ್ 9ರಿಂದ ಆರಂಭವಾಗಲಿರುವ ರೇಸಿಂಗ್ ಎರಡು ದಿನಗಳ ಕಾಲ ಮುಂದಿಯಲಿದೆ. ವಿಶ್ವ ಡ್ರಾಗ್ ರೇಸಿಂಗ್ ಚಾಂಪಿಯನ್ ರಿಕಿ ಗಾಡ್ಸನ್ ಸಾನಿಧ್ಯ ಇನ್ನಷ್ಟು ಮೆರಗು ನೀಡಲಿದ್ದು, ಉದ್ಘಾಟನಾ ಸಮಾರಂಭ ನೆರವೇರಿಸಲಿದ್ದಾರೆ.

To Follow DriveSpark On Facebook, Click The Like Button

ಇದೇ ಸಂದರ್ಭದಲ್ಲಿ ಝಡ್‌ಝಡ್‌ಆರ್1400 ಮೊನಸ್ಟರ್ ಎನರ್ಜಿ ರೇಸ್ ಬೈಕ್ ಚಾಂಪಿಯನ್‌ಶಿಪ್‌ನಲ್ಲೂ ರಿಕಿ ಗಾಡ್ಸನ್ ಭಾಗವಹಿಸಲಿದ್ದು, ಯುವ ಉತ್ಸಾಹಿ ರೇಸರ್‌ಗಳಿಗೆ ಮಹತ್ವದ ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ.

ವ್ಯಾಲಿ ರನ್ 2013 ಕೇವಲ ವೃತಿನಿರತ ರೇಸಿಂಗ್ ಡ್ರೈವರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಉತ್ಸಾಹಿ ರೇಸರುಗಳು ಕೂಡಾ ಭಾಗವಹಿಸಬಹುದಾಗಿದೆ. ಒಟ್ಟು 300ಕ್ಕೂ ಹೆಚ್ಚು ಸೂಪರ್ ಕಾರು ಹಾಗೂ ಸೂಪರ್ ಬೈಕ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

English summary
The Federation of Motor Sports Clubs of India (FMSCI) has announced that it will hold The Valley Run - Festival of Speed 2013 drag racing event during the second week of March. The organizers have chosen the Aamby Valley City Air Strip, Ambavne, Pune as the venue for the racing event.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark